Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಮಗಳಿಗೆ ಹೆಸರಿಡಲು ಆಕರ್ಷಕ ಹೆಸರುಗಳನ್ನು ಹುಡುಕಿತ್ತಿದ್ದೀರಾ? ಇಲ್ಲಿದೆ ದುರ್ಗಾ ದೇವಿ ಹೆಸರುಗಳು!
ಮಗು ಹುಟ್ಟಿದ ತಕ್ಷಣ ಆ ಮಗುವಿಗೆ ಯಾವ ಹೆಸರಿಡಬೇಕು ಅಂತ ಪೋಷಕರು ಹುಡುಕಾಡುತ್ತಾರೆ. ಅದ್ರಲ್ಲೂ ಹೆಣ್ಣು ಮಕ್ಕಳಾದರೆ ಅರ್ಥಪೂರ್ಣ ಹೆಸರನ್ನು ಇಡಬೇಕು ಅಂತ ಅಂದುಕೊಳ್ಳುತ್ತಾರೆ. ಹಿಂದೂ ಧರ್ಮದಲ್ಲಿ ದೇವತೆಯ ಹೆಸರನ್ನು ಮಕ್ಕಳಿಗೆ ಇಡೋದ್ರಿಂದ ಶುಭವಾಗುತ್ತೆ, ಜೊತೆಗೆ ದೇವಿಯ ಆಶೀರ್ವಾದ ಸದಾ ಅವರ ಮೇಲಿರುತ್ತೆ ಎಂದು ನಂಬಲಾಗಿದೆ. ನೀವೇನಾದರೂ ದುರ್ಗಾ ದೇವಿಯ ಭಕ್ತರಾಗಿದ್ದು, ಮಗಳಿಗಾಗಿ ಹೆಸರನ್ನು ಹುಡುಕುತ್ತಿದ್ದರೆ ಇಲ್ಲಿದೆ ದುರ್ಗಾ ದೇವಿಯ ಹೆಸರುಗಳು.
ದುರ್ಗಾ ದೇವಿಯೂ ಪಾರ್ವತಿಯ ಮತ್ತೊಂದು ರೂಪ. ದುರ್ಗಾ ದೇವಿಯು ಸಕಾರಾತ್ಮಕ ಶಕ್ತಿಯ ಶುದ್ಧ ರೂಪವೆಂದು ತಿಳಿದುಬಂದಿದೆ. ಸಂಸ್ಕೃತದಲ್ಲಿ ದುರ್ಗೆ ಎಂದರೆ "ಅಜೇಯ" ಎಂದರ್ಥ. ಆಕೆ ದುಷ್ಟರನ್ನು ಸಂಹರಿಸಲೆಂದೇ ನೆಲೆಯಾದವಳು. ದುರ್ಗಾ ದೇವಿಯನ್ನು ಸಕಾರಾತ್ಮಕ ಶಕ್ತಿಯ ರೂಪ ಅಂತಲೂ ಕರೆಯಲಾಗುತ್ತದೆ. ಹೆಣ್ಣು ಮಕ್ಕಳಿಗೆ ದುರ್ಗಾ ದೇವಿಯ ಹೆಸರಿಟ್ಟರೆ ಮಂಗಳಕರ ಎಂದು ನಂಬಲಾಗಿದೆ.

ಆದ್ಯ : ಮೊದಲು, ಭೂಮಿ
ಆರ್ಯ : ಇದು ಪಾರ್ವತಿ ದೇವಿಯ ಕರುಣಾಮಯಿ ರೂಪವನ್ನು ಸೂಚಿಸುತ್ತದೆ
ಅದ್ರಿಜಾ : ಪರ್ವತ ದೇವತೆ ಎಂದರ್ಥ
ಅದ್ಯಾ : ಪಾರ್ವತಿ, ಕಾಳಿ ಮತ್ತು ದುರ್ಗಾ ದೇವಿಗೆ ಸಂಬಂಧಿಸಿದ್ದಾಗಿದೆ
ಐಶಾನಿ : ಶಕ್ತಿಯ ಸಂಕೇತ. ಐಶಾನಿಯು ದುರ್ಗಾ ದೇವಿಗೆ ಸಮಾನಾರ್ಥಕವಾಗಿದೆ
ಅನಿಕಾ : ದುರ್ಗಾ ದೇವಿಯ ಇನ್ನೊಂದು ಹೆಸರು. ದುರ್ಗಾ ದೇವಿಯ ತೇಜಸ್ಸು ಮತ್ತು ಸುಂದರ ಮುಖವನ್ನು ನಿರೂಪಿಸುತ್ತದೆ
ಬೈರವಿ : ದುರ್ಗಾ ದೇವಿಯ ಮತ್ತೊಂದು ಹೆಸರು
ಬರುನಿ : ಬರುನಿಯು ದುರ್ಗಾ ದೇವಿಯ ಸ್ತ್ರೀಲಿಂಗ ಚಿತ್ರಣವಾಗಿದೆ
ಭಬ್ರವಿ : ಇದು ದುರ್ಗಾ ದೇವಿಗೆ ಸಂಬಂಧಿಸಿದ ಹೆಸರು.
ಭಾರ್ಗವಿ : ಇದು ದುರ್ಗಾ ದೇವಿಯ ಅತ್ಯಂತ ಸುಂದರ ಮತ್ತು ಆಕರ್ಷಕ ರೂಪವನ್ನು ಸೂಚಿಸುತ್ತದೆ
ಭವಾನಿ ದೇವಿ : ಭವಾನಿ ಎಂದರೆ ಪಾರ್ವತಿ. ಭವ ಅಥವಾ ಶಿವನ ಪತ್ನಿ ಎಂದರ್ಥ
ಭವ್ಯ : ಪಾರ್ವತಿ ದೇವಿಯಂತೆಯೇ ಸುಂದರ ಮತ್ತು ಸದ್ಗುಣವುಳ್ಳವಳು ಎಂದರ್ಥ
ಚಂಡಿ : 'ಉಗ್ರ' ಎಂಬ ಅರ್ಥವೂ ಇದೆ
ಚಂಡಿಕಾ : ಚಂದ್ರ ಎಂದರ್ಥ
ಛಾಯಾ : ಇದು ದುರ್ಗಾ ದೇವಿಗೆ ಸಂಬಂಧಿಸಿದ ಇನ್ನೊಂದು ಹೆಸರು
ಚೀಟಿ : ದೇವರ ಉಡುಗೊರೆ, ಪ್ರೀತಿ, ಚಿಟ್ಟೆ, ಚಿಕ್ಕದು ಎಂದರ್ಥ
ಚಿತ್ತರೂಪ : ಪಾರ್ವತಿ ದೇವಿಯಂತೆಯೇ ಸದಾ ಚಿಂತನ-ಮಂಥನದಲ್ಲಿ ಇರುವವಳು ಎಂದರ್ಥ
ದಕ್ಷಜ : ದುರ್ಗಾ ದೇವಿಯ ಇನ್ನೊಂದು ಹೆಸರು
ದಾಕ್ಷಾಯಣಿ : ರಾಜ ದಕ್ಷನ ಮಗಳು. ಹೀಗಾಗಿ ಆಕೆಯನ್ನು ದಾಕ್ಷಾಣಿ ಎಂದೂ ಕರೆಯುತ್ತಾರೆ
ದೇವೇಶಿ : ದೇವಾನು ದೇವತೆಗಳ ಮುಖ್ಯಸ್ಥ
ಈಶಾ : ಪಾರ್ವತಿ ದೇವಿಯ ಶುದ್ಧ ರೂಪದಲ್ಲಿ ಪ್ರತಿನಿಧಿಸುತ್ತದೆ
ಏಕಾಂಶ : 'ಅವಿಭಜಿತ' ಎಂದರ್ಥ
ಏಕಪರ್ಣಿಕಾ : ದುರ್ಗಾದೇವಿ ಎಂದರ್ಥ
ಗಣನಾಯಕಿ : ಈ ಹೆಸರು ಹಿಂದೂ-ಸಂಸ್ಕೃತ ಮೂಲದ್ದಾಗಿದ್ದು, ಮತ್ತು ಇದರ ಅರ್ಥ ದುರ್ಗಾ ದೇವಿ
ಗೌರಿ : ದುರ್ಗಾ ದೇವಿಯ ಮತ್ತೊಂದು ಹೆಸರು
ಗಾಯತ್ರಿ : ಇದು ಪಾರ್ವತಿ ದೇವಿಯ ಮತ್ತೊಂದು ಹೆಸರು. ಮತ್ತು ಭಾರತದಾದ್ಯಂತ ಜನಪ್ರಿಯವಾಗಿದೆ. ಇದು ಎಲ್ಲಾ ವೇದಗಳ ತಾಯಿ ಮತ್ತು ಮೋಕ್ಷದ ಪಠಣವನ್ನು ಸೂಚಿಸುತ್ತದೆ
ಹಿಮಾ : ಮಂಜು, ಚಳಿಗಾಲ ಎಂದರ್ಥ
ಹಿಮಾನಿ : ಹಿಮಾಲಯದ ಹಿಮನದಿಗಳಂತೆ ಸುಂದರವಾದ ಹಿಮಾನಿ. ಇದು ಪಾರ್ವತಿ ದೇವಿಯ ಹೆಸರನ್ನು ಸೂಚಿಸುತ್ತದೆ
ಇಡಾ : ಪವಿತ್ರ ಮಾತು ಎಂದರ್ಥ
ಇಳಾ : ಭೂಮಿ ಎಂದರ್ಥ
ಈಶ : ಎಂದರೆ ಎಲ್ಲರನ್ನೂ ರಕ್ಷಿಸುವವಳು ಎಂದರ್ಥ.
ಇಶಿ : ದುರ್ಗಾ ದೇವಿಯ ಮತ್ತೊಂದು ಹೆಸರು
ಜಯ : ದುರ್ಗಾ ದೇವಿಯ ಇನ್ನೊಂದು ಹೆಸರು ಎಂದರೆ ವಿಜಯ ಎಂದರ್ಥ
ಜಯಲಲಿತಾ : ಜಯಶಾಲಿಯಾಗಲು ಜನಿಸಿದವರು
ಕಾಮಕ್ಯ : ಶುಭಾಶಯಗಳನ್ನು ನೀಡುವವರು, ಆಸೆಗಳನ್ನು ಕೊಡುವವರು
ಕೈಶೋರಿ : ಕಿಶೋರನ ಪತ್ನಿ
ಕಲಕ : ದುರ್ಗಾ ದೇವಿಯ ಸಮಾನಾರ್ಥಕ ಹೆಸರು. ಇದು ಕಣ್ಣಿನ ಅಕ್ಷಿಯನ್ನು ಸೂಚಿಸುತ್ತದೆ
ಕಲಾವತಿ : ಕಲಾವತಿ ಎಂದರೆ ಕಲಾತ್ಮಕರು ಎಂದರ್ಥ
ಕಲ್ಯಾಣಿ : ಮಂಗಳಕರ ಎಂದರ್ಥ
ಕಾಮಾಕ್ಷಿ : ಸುಂದರ ಮಹಿಳೆ ಎಂದರ್ಥ
ಕನ್ಯಕಾ : ಕಿರಿಯ ಮತ್ತು ಕನ್ಯೆ ಎಂಬ ಅರ್ಥವೂ ಇದೆ
ಕರಾಲಿಕಾ : ಕಣ್ಣೀರು ಎಂದರ್ಥ
ಕಾತ್ಯಾಯನಿ : ಕೆಂಪು ವಸ್ತ್ರವನ್ನು ಧರಿಸಿರುವವಳು.
ಕೌಶಿಕಿ : ಇದು ದುರ್ಗಾ ದೇವಿಗೆ ಸಮಾನಾರ್ಥಕವಾಗಿದೆ. ಜೊತೆಗೆ ರೇಷ್ಮೆಯನ್ನು ಹೊದಿಸಿದವನು ಎಂಬ ಅರ್ಥವೂ ಇದೆ.
ಕಿರಾತಿ : ಶಿವನ ಇನ್ನೊಂದು ಹೆಸರು ಕಿರಾತೇಶ್ವರ. ದುರ್ಗಾ ದೇವಿಯನ್ನು ಹೆಚ್ಚಾಗಿ ಕಿರಾತಿ, ಕಿರಾತೇಶ್ವರನ ಹೆಂಡತಿ ಎಂದು ಕರೆಯಲಾಗುತ್ತದೆ.
ಕ್ರಿಯಾ : ಪ್ರದರ್ಶನ, ಧಾರ್ಮಿಕ ಅಥವಾ ಶುದ್ಧೀಕರಿಸಿದ ಕ್ರಿಯೆ
ಕುಜ : ಭೂಮಿಯ ಮಗಳು, ದಿಗಂತ, ನಾಟಕ
ಲೀಲಾವತಿ : ಸುಂದರ ಮತ್ತು ಆಕರ್ಷಕ ಮಹಿಳೆ ಎಂದರ್ಥ
ಲೋಕೇಶ್ವರಿ : 'ವಿಶ್ವ ರಾಣಿ' ಎಂದರ್ಥ
ಮಾಧವಿ : ದುರ್ಗಾ ದೇವಿಗೆ ಸಂಬಂಧಿಸಿದೆ. ಮತ್ತು ಇದರ ಅರ್ಥ 'ಭೂಮಿ'.
ಮಹಾಗೌರಿ : ಮಹಾಗೌರಿಯು ದುರ್ಗಾ ದೇವಿಯ ಅತ್ಯುನ್ನತ ಗುಣವನ್ನು ಸೂಚಿಸುತ್ತದೆ.
ಮಹಾಮಾಯಾ : ಈ ಹೆಸರು ಹಿಂದೂ ಸಂಸ್ಕೃತಿಯಲ್ಲಿ ಧಾರ್ಮಿಕ ಪರಿಭಾಷೆಯ ಪ್ರಕಾರ, ನಮ್ಮ ಅಸ್ತಿತ್ವವನ್ನು ಭ್ರಮೆ ಎಂದು ಪರಿಗಣಿಸಲಾಗುತ್ತದೆ. ಈ ಹೆಸರು ಭ್ರಮೆಯನ್ನು ಸೂಚಿಸುತ್ತದೆ
ಮಹಾಮೇಧ : ಇದರ ಅರ್ಥ 'ಮಹಾನ್ ಬುದ್ಧಿವಂತ'.
ಮಹಾಶ್ವೇತಾ : ಇದು ದುರ್ಗಾ ದೇವಿಯ ಶಕ್ತಿಯನ್ನು ಸೂಚಿಸುತ್ತದೆ
ನಿರಂಜನ : ಇದರರ್ಥ ನದಿ ಮತ್ತು ಹುಣ್ಣಿಮೆಯ ರಾತ್ರಿ
ನಿತ್ಯ : ಶಾಶ್ವತ ಮತ್ತು ಸ್ಥಿರವಾಗಿರುವವಳು ಎಂದರ್ಥ
ನಿಯತಿ : ನಿಯತಿ ಹಣೆಬರಹವನ್ನು ಸೂಚಿಸುತ್ತದೆ
ಪದ್ಮಸ್ನುಷಾ : ಈ ಸುಂದರವಾದ ಹೆಸರು ದುರ್ಗಾ ದೇವಿಗೆ ಸಂಬಂಧಿಸಿದೆ
ಪರಮೇಶ್ವರಿ : ಸಈ ಹೆಸರಿನ ಅರ್ಥ 'ಪರಮ ದೇವತೆ'
ಮಗಳಿಗೆ ದುರ್ಗಾ ದೇವಿಯ ಹೆಸರನ್ನು ಇಡಬೇಕು ಎನ್ನುವವರು ಈ ಹೆಸರುಗಳಲ್ಲಿ ಯಾವುದಾದರೂ ಒಂದನ್ನು ಆಯ್ದುಕೊಳ್ಳಬಹುದು.



Click it and Unblock the Notifications


