Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರಕ್ಷಾ ಬಂಧನದ ದಿನ ಆಂಜನೇಯನಿಗೆ ಮತ್ತು ಗಣೇಶನಿಗೆ ರಾಕಿ ಕಟ್ಟೋದ್ಯಾಕೆ?
ರಕ್ಷಾಬಂಧನ ನಮಗೆಲ್ಲಾ ತುಂಬಾನೇ ವಿಶೇಷವಾದ ಹಬ್ಬ. ಈ ಹಬ್ಬ ಅಣ್ಣಾ-ತಂಗಿಯ ಬಂಧವನ್ನು ಮತ್ತಷ್ಟು ಬಿಗಿಯಾಗಿಸುತ್ತದೆ. ಇನ್ನೇನು ರಕ್ಷಾ ಬಂಧನಕ್ಕೆ ಕೆಲವೇ ದಿನಗಳು ಬಾಕಿಯಿದ್ದು, ಜನ ಈಗಿನಿಂದಾನೇ ಸೆಲೆಬ್ರೇಷನ್ ಮಾಡೋದಕ್ಕೆ ಶುರು ಮಾಡಿದ್ದಾರೆ. ಅನೇಕರಿಗೆ ಈ ಹಬ್ಬವನ್ನು ಸೆಲೆಬ್ರೇಟ್ ಮಾಡೋ ಖುಷಿ ಇದ್ರೆ, ಇನ್ನೂ ಕೆಲವರಿಗೆ ಅಣ್ಣಾ-ತಮ್ಮ ಯಾರು ಇಲ್ಲ ಅನ್ನೋ ನೋವು ಇರುತ್ತೆ.

ಹೌದು, ಅಣ್ಣಾ-ತಮ್ಮ ಇಲ್ಲ ಅಂತ ನೀವು ಬೇಸರ ಪಟ್ಟುಕೊಳ್ಳುವ ಅಗತ್ಯವಿಲ್ಲ. ಬದಲಾಗಿ ನೀವು ಗಣೇಶ ಹಾಗೂ ಆಂಜನೇಯನನ್ನು ನಿಮ್ಮ ಸಹೋದರರು ಎಂದು ಭಾವಿಸಿ ಅವರಿಗೆ ರಾಕಿಯನ್ನು ಕಟ್ಟಬಹುದು. ಅಷ್ಟಕ್ಕೂ ದೇವರಿಗೆ ರಾಕಿ ಕಟ್ಟುವ ಪದ್ಧತಿ ಶುರುವಾಗಿದ್ದು ಯಾವಾಗ? ಗಣೇಶ ಹಾಗೂ ಆಂಜನೇಯನಿಗೆ ರಾಕಿ ಕಟ್ಟೋದ್ರಿಂದ ನಿಮ್ಮ ಬದುಕಿನಲ್ಲಿ ಏನೆಲ್ಲಾ ಬದಲಾವಣೆಗಳು ಆಗಲಿದೆ ಅನ್ನೋದನ್ನು ತಿಳಿಯೋಣ.
ಸರ್ವರನ್ನೂ ರಕ್ಷಿಸುವವನು ಆಂಜನೇಯ!
ವಿಶ್ವದಲ್ಲೇ ಅತೀ ದೊಡ್ಡ ರಕ್ಷಕ ಯಾರೆಂದರೆ ಅದು ಆಂಜನೇಯ. ಇನ್ನೂ ಅಡೆತಡೆಗಳನ್ನು ಮತ್ತು ವಿಘ್ನಗಳನ್ನು ನಿವಾರಿಸುವವನು ವಿಘ್ನೇಶ್ವರ ಅಥವಾ ವಿನಾಯಕ. ಹೀಗಾಗಿ ನೀವು ಇವರಿಬ್ಬರಿಗೆ ರಾಕಿ ಕಟ್ಟೋದ್ರಿಂದ ವಿನಾಯಕ ನಿಮ್ಮ ಸಕಲ ಸಂಕಷ್ಟಗಳು ದೂರ ಮಾಡುತ್ತಾನೆ. ಜೊತೆಗೆ ನಿಮ್ಮನ್ನು ಸದಾ ಆಂಜನೇಯ ರಕ್ಷಣೆ ಮಾಡುತ್ತಿರುತ್ತಾನೆ ಎಂದು ನಂಬಲಾಗಿದೆ. ಹೀಗಾಗಿ ದೇವರಿಗೆ ರಾಕಿ ಕಟ್ಟೋದ್ರಿಂದ ಹತ್ತು ಪಟ್ಟು ಹೆಚ್ಚಿನ ಆಶೀರ್ವಾದವನ್ನು ನಾವು ಪಡೆಯಬಹುದಂತೆ.
ಆಂಜನೇಯನಿಗೆ ರಾಕಿ ಕಟ್ಟುವ ವಿಧಾನ ಹೇಗೆ?
ರಕ್ಷಾ ಬಂಧನದ ದಿನ ಬೆಳಗ್ಗೆ ಬೇಗ ಎದ್ದು ಸ್ನಾನ ಮಾಡಿದ ನಂತರ ಹತ್ತಿರದ ಆಂಜನೇಯನ ದೇವಸ್ಥಾನಕ್ಕೆ ತೆರಳಿ. ಕೆಂಪು ಚಂದನ ಅಥವಾ ಶ್ರೀಗಂಧ, ಕೆಂಪು ಹೂವುಗಳು ಮತ್ತು ಅಕ್ಕಿಯನ್ನು ಅರ್ಪಿಸಿ.
ಇದರ ನಂತರ ಆಂಜನೇಯನಿಗೆ ಸಂಬಂಧಿಸಿದ ಮಂತ್ರವನ್ನು ಪಠಿಸಿ. ನಂತರ ಹನುಮಂತನಿಗೆ ರಕ್ಷಾ ಸೂತ್ರವನ್ನು ಅರ್ಪಿಸಿ. ಇದಾದ ಬಳಿಕ ಹಣ್ಣುಗಳನ್ನು ಇಟ್ಟು, ತುಪ್ಪದ ದೀಪವನ್ನು ಬೆಳಗಿರಿ.
ಆ ದಿನ ಕೊಂಚ ಹೊತ್ತು ದೇವಸ್ಥಾನದಲ್ಲೇ ಕುಳಿತು ಹನುಮಾನ್ ಚಾಲೀಸ್ ಹಾಗೂ ಆಂಜನೇಯನಿಗೆ ಸಂಬಂಧಪಟ್ಟ ಮಂತ್ರಗಳನ್ನು ಪಠಿಸಿ. ಈ ರೀತಿ ಮಾಡೋದ್ರಿಂದ ನಿಮ್ಮ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ. ಮತ್ತು ತೊಂದರೆಗಳು ಸಹ ಕೊನೆಗೊಳ್ಳುತ್ತವೆ.
ಸಹೋದರ-ಸಹೋದರಿಯರ ನಡುವಿನ ಕೋಪ ಶಮನವಾಗುತ್ತೆ!
ರಕ್ಷಾ ಬಂಧನದ ದಿನದಂದು ಆಂಜನೇಯನಿಗೆ ರಾಖಿ ಕಟ್ಟುವ ಮೂಲಕ ಸಹೋದರ ಸಹೋದರಿಯರ ಕೋಪವನ್ನು ಶಮನಗೊಳಿಸುತ್ತಾನೆ. ಮತ್ತು ಅವರ ನಡುವೆ ಪರಸ್ಪರ ಪ್ರೀತಿಯನ್ನು ಹೆಚ್ಚಿಸುತ್ತಾನೆ ಎಂದು ನಂಬಲಾಗಿದೆ. ಇದಲ್ಲದೆ ಈ ದಿನದಂದು ಗಣೇಶನ ಆರಾಧನೆಯಿಂದ ಸಹೋದರ ಮತ್ತು ಸಹೋದರಿಯರ ನಡುವಿನ ಸಂಬಂಧದಲ್ಲಿ ಪ್ರೀತಿ ಹೆಚ್ಚಾಗುತ್ತಂತೆ. ಈ ದಿನದಂದು ತಂಗಿಯನ್ನು ಸಂತೋಷವಾಗಿಡುವುದರ ಜೊತೆಗೆ ಆಕೆಗೆ ಇಷ್ಟವಾದ ಉಡುಗೊರೆಯನ್ನು ನೀಡುವುದರಿಂದ ಸಹೋದರನ ಜೀವನದಲ್ಲಿ ಸಂತೋಷ ಹೆಚ್ಚಾಗುತ್ತೆ ಎಂದು ನಂಬಲಾಗಿದೆ.
ಆಗಸ್ಟ್ 30 ರಂದು ರಕ್ಷಾ ಬಂಧನ ಆಚರಣೆ!
ಈ ಬಾರಿ ಆಗಸ್ಟ್ 30 ರಂದು ರಕ್ಷಾ ಬಂಧನ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಈ ದಿನ ರಾಖಿ ಕಟ್ಟುವುದರಿಂದ ಮನೆಯಿಂದ ಬಡತನವನ್ನು ತೊಲಗಿಸಲು ಮತ್ತು ಸಮಸ್ಯೆಗಳಿಂದ ಮುಕ್ತಿ ಪಡೆಯಲು ಸಹಾಯವಾಗುತ್ತಂತೆ. ಇನ್ನೂ ರಾಕಿ ಕಟ್ಟುವಾಗ ಅನುಸರಿಸಬೇಕಾದ ಸರಿಯಾದ ವಿಧಾನ ಯಾವುದು ಅಂತ ನೋಡೋದಾದ್ರೆ ಸಹೋದರನಿಗೆ ಆರತಿ ಎತ್ತಿ ಆತನಿಗೆ ರಾಕಿಯನ್ನು ಕಟ್ಟಬೇಕು. ಆ ನಂತರ ಆತನ ಆಶೀರ್ವಾದ ಪಡೆಯಿರಿ. ಇನ್ನರೂ ಸಿಹಿ-ತಿಂಡಿ ತಿಂದು ಸಂಭ್ರಮಿಸಿ.
ದೃಷ್ಟಿ ನಿವಾರಣೆ ಹೇಗೆ?
ಒಂದು ವೇಳೆ ನಿಮ್ಮ ಸಹೋದರನ ಮೇಲೆ ಯಾರದಾದರೂ ಕೆಟ್ಟ ದೃಷ್ಟಿ ಬಿದ್ದಿದ್ದರೆ ರಾಖಿಯ ದಿನದಂದು ಸೋದರನ ತಲೆಯ ಮೇಲೆ ಏಳು ಬಾರಿ ಹರಳೆಣ್ಣೆಯಿಂದ ಸುತ್ತಿ ಅದನ್ನು ಒಲೆಯಲ್ಲಿ ಸುಟ್ಟರೆ ದೃಷ್ಟಿ ಪರಿಹಾರವಾಗುತ್ತೆ ಎಂದು ನಂಬಲಾಗಿದೆ.
ಈ ವಿಶೇಷ ದಿನದಂದು ನಿಮ್ಮ ಪ್ರೀತಿಯ ಸಹೋದರರೊಂದಿಗೆ ವಿಶೇಷವಾಗಿ ಈ ಹಬ್ಬವನ್ನು ಆಚರಣೆ ಮಾಡಿ. ಜೊತೆಗೆ ಆಂಜನೇಯ ಹಾಗೂ ಗಣೇಶನಿಗೆ ರಾಕಿ ಕಟ್ಟೋದ್ರಿಂದ ಕೂಡ ಶುಭ ಫಲಗಳನ್ನು ಪಡೆಯಲು ಸಾಧ್ಯವಾಗುತ್ತದೆ.



Click it and Unblock the Notifications












