ಆಧುನಿಕ ಭಾರತದ ಹರಿಕಾರ ಮನಮೋಹನ್ ಸಿಂಗ್ ಕುರಿತ ಅಚ್ಚರಿಯ ಸಂಗತಿ ಇಲ್ಲಿದೆ..!

ತೀವ್ರ ಅನಾರೋಗ್ಯ ಹಿನ್ನೆಲೆಯಲ್ಲಿ ಗುರುವಾರ ದೆಹಲಿಯ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದ ಮನಮೋಹನ್‌ ಸಿಂಗ್‌ (92 ವರ್ಷ) ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು, ಈ ಹಿಂದೆಯು ಕೂಡ ಏಮ್ಸ್‌ಗೆ ದಾಖಲಾಗಿ ಚಿಕಿತ್ಸೆ ಪಡೆದು ಹೊರಬಂದಿದ್ದರು. ಆದರೆ ಗುರುವಾಗ ಸಂಜೆ ಅವರ ಆರೋಗ್ಯದಲ್ಲಿ ತೀವ್ರ ಏರುಪೇರು ಕಂಡುಬಂದಿತ್ತು.

ಅನಾರೋಗ್ಯ ಹಿನ್ನೆಲೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಅವರು ರಾಜಕೀಯದಿಂದ ದೂರವೇ ಉಳಿದಿದ್ದರು. ರಾಜ್ಯಸಭೆಗೆ ವೀಲ್ ಚೇರ್‌ನಲ್ಲಿ ಅವರು ಆಗಮಿಸಿ ಕಲಾಪದಲ್ಲಿ ಭಾಗಿಯಾಗಿದ್ದರು. ಹಾಗೆ ಈ ವರ್ಷ ಜನವರಿಯಲ್ಲಿ ಕೊನೆಯ ಬಾರಿಗೆ ಸಾರ್ವಜನಿಕವಾಗಿ ಅವರು ಕಾಣಿಸಿಕೊಂಡಿದ್ದರು. ಇದಾದ ಬಳಿಕ ಅವರ ಆರೋಗ್ಯ ಸ್ಥಿತಿ ಕುಸಿಯುತ್ತಾ ಸಾಗಿತ್ತು.

Here Are Some Surprising Facts About Manmohan Singh A Pioneer Of Modern India

ಈಗ ಡಾ. ಮನಮೋಹನ್‌ ಸಿಂಗ್ ಅವರು ಪತ್ನಿ ಗುರುಶರಣ್ ಕೌರ್ ಮತ್ತು ಮೂವರು ಪುತ್ರಿಯರ ಅಗಲಿದ್ದಾರೆ. ಆಧುನಿಕ ಭಾರತದ ಆರ್ಥಿಕತೆಯ ರೂವಾರಿ ಎಂಬ ಕೀರ್ತಿ ಅವರಿಗೆ ಸಲ್ಲಬೇಕಿದೆ. ಹಾಗೆ 1991ರಲ್ಲಿ ಮೊದಲ ಬಾರಿಗೆ ಅವರು ರಾಜ್ಯ ಸಭೆ ಪ್ರವೇಶಿಸಿದ್ದರು. ಹಾಗೆ ಎರಡು ಬಾರಿ ಪ್ರಧಾನಿಯಾಗುವ ಯೋಗವು ಅವರಿಗೆ ಒಲಿದಿತ್ತು. ಅಧಿಕಾರವದಿಯಲ್ಲಿ ಭಾರತವನ್ನು ಸದೃಢ ದೇಶವನ್ನಾಗಿಸಿದರು. ಹಲವು ಯೋಜನೆಗಳು ಪರಿಹಾರ ನೀತಿಗಳು ಎಲ್ಲರ ಗಮನ ಸೆಳೆದವು.

ಮನಮೋಹನ್ ಸಿಂಗ್ ಶ್ರೇಷ್ಠ ಅರ್ಥ ಶಾಸ್ತ್ರಜ್ಞ ಎಂಬುದು ಇಡೀ ವಿಶ್ವಕ್ಕೆ ತಿಳಿದಿದೆ. ಅವರ ಹಲವು ನೀತಿಗಳು ಭಾರತ ಸೇರಿ ವಿದೇಶಿ ವಿಶ್ವ ವಿದ್ಯಾಲಯ, ಕಾಲೇಜುಗಳಲ್ಲಿ ಪಠ್ಯವಾಗಿವೆ. ಆದ್ರೆ ನಿಮಗೆ ಮನ್ ಮೋಹನ್ ಸಿಂಗ್ ಅವರ ಕುರಿತು ತಿಳಿದಿರದ ಕೆಲವೊಂದು ವಿಚಾರಗಳನ್ನು ನಾವಿಂದು ಹೇಳುತ್ತೇವೆ ನೋಡಿ.

ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್‌ಗಳಾಗಿದ್ದವರು ಬಳಿಕ ಹಣಕಾಸು ಮಂತ್ರಿಯಾಗಿ ಸೇವೆ ಸಲ್ಲಿಸಿದವರಲ್ಲಿ ಮನ್ ಮೋಹನ್ ಸಿಂಗ್ ಕೂಡ ಒಬ್ಬರಾಗಿದ್ದಾರೆ. ಈ ಮೊದಲು ಸಿ.ಡಿ ದೇಶ್‌ಮುಖ್ ಗವರ್ನರ್ ಆಗಿ ಕಾಂಗ್ರೆಸ್ ಸರ್ಕಾರದಲ್ಲಿ ಹಣಕಾಸು ಮಂತ್ರಿಯೂ ಆಗಿದ್ದರು.

ಹಣಕಾಸು ಮಂತ್ರಿಯಾಗಿದ್ದ ನಾಲ್ವರು ಸಿಂಗ್ ಪ್ರಧಾನಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಮೊರಾರ್ಜಿ ದೇಸಾಯಿ, ಚರಣ್ ಸಿಂಗ್, ಮತ್ತು ವಿ.ಪಿ. ಸಿಂಗ್ ಹಾಗೂ ಮನ್‌ ಮೋಹನ್ ಸಿಂಗ್.

ಮನ್‌ ಮೋಹನ್ ಸಿಂಗ್ ಹಿಂದಿಯನ್ನು ಅರಳು ಹುರಿದಂತೆ ಮಾತನಾಡುತ್ತಿದ್ದರು. ಆದ್ರೆ ಅವರ ಭಾಷಣಗಳು ಉರ್ದುವಿನಲ್ಲಿ ಬರೆದುಕೊಳ್ಳುತ್ತಿದ್ದರು.

ಸಿಂಗ್ ಅವರು ಪಂಜಾಬ್‌ನ ಸಣ್ಣ ಹಳ್ಳಿಯಲ್ಲಿ ಜನಿಸಿದ್ದರು. ಆಗ ಅವರ ಮನೆಯಲ್ಲಿ ವಿದ್ಯುತ್ ಕೂಡ ಇರಲಿಲ್ಲವಂತೆ, ಅವರು ಸೀಮೆ ಎಣ್ಣೆ ದೀಪ ಬಳಸಿ ಓದಿಕೊಳ್ಳುತ್ತಿದ್ದರು. ಹಾಗೆ ಇಡೀ ಗ್ರಾಮದಲ್ಲಿ ಕೆಲವೆ ಕೊಳಾಯಿ ಇತ್ತು. ಹಾಗೆ ಸೌಕರ್ಯಗಳಲ್ಲಿದ ಶಾಲೆಯೊಂದಿತ್ತಂತೆ.

1947 ರಲ್ಲಿ ಭಾರತದ ವಿಭಜನೆಯಾದಾಗ ಅವರ ಕುಟುಂಬವು ಅಮೃತಸರಕ್ಕೆ ವಲಸೆ ಹೋದರು. ಅಲ್ಲಿ ಅವರು ತಮ್ಮ ಜೀವನವನ್ನು ಹೊಸದಾಗಿ ಪ್ರಾರಂಭಿಸಿದರು. ಆಗ ಸಿಂಗ್‌ಗೆ ಕೇವಲ 14 ವರ್ಷವಾಗಿತ್ತು. ಹಾಗೆ ಅಮೃತಸರದಲ್ಲಿಯೇ ಅವರು ಶಿಕ್ಷಕ ವೃತ್ತಿ ಆರಂಭಿಸಿದ್ದರು.

1993 ರಲ್ಲಿ ಯುರೋಮನಿ ಮತ್ತು ಏಷ್ಯಾಮನಿ ಎರಡರಿಂದಲೂ "ವರ್ಷದ ಹಣಕಾಸು ಮಂತ್ರಿ" ಎಂಬ ಕೀರ್ತಿ ಗಳಿಸಿದರು. ಇದು ಅವರ ಆರ್ಥಿಕ ನೀತಿಗಳು, ಹಾಗೂ ಆರ್ಥಿಕತೆ ಕುರಿತು ಅವರಿಗಿದ್ದ ಜ್ಞಾನಕ್ಕೆ ಹಿಡಿದ ಕೈಗನ್ನಡಿಯಾಗಿತ್ತು.

ಸಿಂಗ್ ಅವರು 2004 ರಲ್ಲಿ ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಮೊದಲ ಹಿಂದೂಯೇತ ವ್ಯಕ್ತಿಯಾಗಿಯೂ ಇತಿಹಾಸ ನಿರ್ಮಿಸಿದರು. 1962 ರಲ್ಲಿ, ಜವಾಹರಲಾಲ್ ನೆಹರು ಅವರು ವೈಯಕ್ತಿಕವಾಗಿ ಸಿಂಗ್ ಅವರಿಗೆ ಸರ್ಕಾರಿ ಹುದ್ದೆ ನೀಡಲು ಮುಂದಾಗಿದ್ದರು. ಆದ್ರೆ ಸಿಂಗ್ ಇದನ್ನು ತಿರಸ್ಕರಿಸಿದ್ದರು.

English summary

Here Are Some Surprising Facts About Manmohan Singh A Pioneer Of Modern India

Dr. Manmohan Singh is survived by his wife Gursharan Kaur and three daughters. He is credited with being the architect of modern Indian economy. He was first elected to the Rajya Sabha in 1991.
Story first published: Friday, December 27, 2024, 8:45 [IST]
X
Desktop Bottom Promotion