Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಮಳೆ ನಿರೀಕ್ಷೆಯಲ್ಲಿದ್ದವರಿಗೆ ಶಾಕ್ ಕೊಟ್ಟ ಹವಾಮಾನ ಇಲಾಖೆ..!
ರಾಜ್ಯದಲ್ಲಿ ಮುಂಗಾರು ಪೂರ್ವ ಮಳೆ ಕೈ ಕೊಟ್ಟಿದೆ. ಕೆಲವು ಭಾಗದಲ್ಲಿ ಮಳೆ ಬಂದಿದ್ದರೂ ರಾಜ್ಯದ ಬಹುತೇಕ ಭಾಗದಲ್ಲಿ ಸರಿಯಾದ ಪ್ರಮಾನದ ಮಳೆಯಾಗಿಲ್ಲ. ಆದ್ರೆ ಒಂದು ವಾರದ ನಂತರ ಮಳೆ ಬರುವ ನಿರೀಕ್ಷೆ ಇತ್ತಾದರೂ ಈಗ ಮಳೆಯ ನಿರೀಕ್ಷೆಯಲ್ಲಿದ್ದ ರಾಜ್ಯದ ಮಂದಿಗೆ ಹವಾಮಾನ ಇಲಾಖೆ ಶಾಕ್ ನೀಡಿದೆ.
ಲೋಕಸಭೆ ಚುನಾವಣೆ ಹೊಸ್ತಿಲಲ್ಲಿರುವ ಮಂದಿಗೆ ಮಧ್ಯಾಹ್ನದ ಬಿಸಿಲು ಮತ್ತಷ್ಟು ಕಾಡುವ ಮುನ್ನೆಚ್ಚರಿಕೆ ನೀಡಲಾಗಿದೆ. ಪೂರ್ವ ಮತ್ತು ರಕ್ಷಿಣ ಭಾರತದತ್ತ ಬಿಸಿಗಾಳಿ ಅಪ್ಪಳಿಸಲಿದ್ದು, ತಾಪಮಾನ ಸಾಮಾನ್ಯಕ್ಕಿಂತ 2 ಅಥವಾ 3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಂಭವವಿದೆ ಎಂದು ಎಚ್ಚರಿಕೆ ನೀಡಿದೆ.

ಪಶ್ಚಿಮ ಬಂಗಾಳಕ್ಕೆ ರೆಡ್ ಅಲರ್ಟ್ ಸಹ ಘೋಷಣೆಯಾಗಿದೆ. ಏಪ್ರಿಲ್ 28ರ ವರೆಗೆ ಪಶ್ಚಿಮ ಬಂಗಾಳದ ಬಹುತೇಕ ಭಾಗದಲ್ಲಿ ಬಿಸಿಗಾಳಿ ಆರ್ಭಟಿಸಲಿದ್ದು, ತಾಪಮಾಣ 45 ಡಿಗ್ರಿ ಸೆಲ್ಸಿಯಸ್ ದಾಟಲಿದೆ ಎಂದು ಸೂಚನೆ ನೀಡಿದೆ. ಇನ್ನು ಈ ಬಿಸಿಗಾಳಿ ಒಡಿಶಾ ತೆಲಂಗಾಣ, ಆಂಧ್ರಪ್ರದೇಶ ಹಾಗೂ ಕರ್ನಾಟಕ ಸೇರಿ ಕೇರಳದವರೆಗೂ ಬೀಸಲಿದೆ.
ಹೀಗಾಗಿ ರಾಜ್ಯದ ಬಹುತೇಕ ಕಡೆಗಳಲ್ಲಿ ಏಪ್ರಿಲ್ 28ರ ವರೆಗೆ ಬಿಸಿಗಾಳಿ ಅಬ್ಬರಿಸಲಿದ್ದು, ಮಧ್ಯಾಹ್ನ 12ಗಂಟೆಯಿಂದ 3 ಗಂಟೆ ವರೆಗೆ ಮನೆಯಿಂದ ಹೊರಬರದಿರುವುದೇ ಉತ್ತಮ.
ಭಾರತೀಯ ಹವಾಮಾನ ಇಲಾಖೆಯ ಮಳೆ ಮುನ್ಸೂಚನೆ ವರದಿ ಪ್ರಕಾರ, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಈ ಮೂರು ಕರಾವಳಿ ಜಿಲ್ಲೆಗಳಲ್ಲಿ ಏಪ್ರಿಲ್ 28ರ ತನಕ ಗರಿಷ್ಠ ಉಷ್ಣಾಂಶ 2 ರಿಂದ 2 ಡಿಗ್ರಿ ಹೆಚ್ಚಳವಾಗಲಿದೆ. ಏಪ್ರಿಲ್ 24 ರಿಂದ ಏಪ್ರಿಲ್ 28ರ ರವರೆಗೆ ಸಾಮಾನ್ಯ ತಾಪಮಾನಕ್ಕಿಂತ ಎರಡು ಮೂರು ಡಿಗ್ರಿ ತಾಪಮಾನ ಏರಿಕೆ ಕಾಣಲಿದೆ.
ಇದನ್ನು ಹೊರತುಪಡಿಸಿ, ಬಾಲಕೋಟೆ, ಗದಗ, ಕಲಬುರಗಿ, ಕೊಪ್ಪಳ, ರಾಯಚೂರು, ಬೆಳಗಾವಿ, ವಿಜಯಪುರ, ಯಾದಗಿರಿಗಳಲ್ಲಿ ಬಿಸಿಗಾಳಿ ಮತ್ತಷ್ಟು ಕಾಡಲಿದ್ದು, ಏಪ್ರಿಲ್ 28ರ ವರೆಗೂ ಬಿಸಿಲಿನ ತಾಪ ಏರಿಕೆಯಾಗಲಿದೆ.
ಇತ್ತ, ದಾವಣಗೆರೆ, ಚಿತ್ರದುರ್ಗ, ಕೋಲಾರ ಬಳ್ಳಾರಿ, ಚಿತ್ರದುರ್ಗ, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳಲ್ಲಿ ಬಿಸಿಗಾಳಿ ಹೆಚ್ಚಾಗುತ್ತದೆ. ಬೆಂಗಳೂರು ನಗರ, ಶಿವಮೊಗ್ಗ, ಚಿಕ್ಕಬಳ್ಳಾಪುರ, ರಾಮನಗರದಲ್ಲಿ ಒಣಹವೆ ಮುಂದುವರೆಯಲಿದ್ದು, ತಾಪಮಾನದಲ್ಲಿ ಏರಿಕೆ ಕಾಣಬಹುದು ಎಂದು ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರಿನಲ್ಲಿ ತಾಪಮಾನ ಏರಿಕೆ
ಸದ್ಯ ಮಳೆಗಾಗಿ ಕಾದು ಕುಳಿತ್ತಿರುವ ಬೆಂಗಳೂರು ಮಂದಿಗೆ ಮತ್ತಷ್ಟು ಬೇಸಿಗೆಯ ಬಿಸಿ ಅನುಭವವಾಗಲಿದೆ. ಸಾಮಾನ್ಯವಾಗಿ 35, 36 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗುತ್ತಿದ್ದ ಕಡೆಗಳಲ್ಲಿ ಈ ತಾಪಮಾನ 2ರಿಂದ 3 ಡಿಗ್ರಿ ಹೆಚ್ಚಳವಾಗುವ ಸಂಭವವಿದೆ. ಹೀಗಾದರೆ ಬೆಂಗಳೂರು ಮಂದಿ ಮತ್ತಷ್ಟು ಸೆಖೆಯ ಅನುಭವ ಪಡೆಯಲಿದ್ದಾರೆ. ಏಪ್ರಿಲ್ 28ರ ವರೆಗೂ ಇದೇ ಹವಾಮಾನ ಮುಂದುವರೆಯಲಿದ್ದು, ಈ ತಿಂಗಳ ಅಂತ್ಯದ ಬಳಿಕವಷ್ಟೇ ವರುಣನ ದರ್ಶನವಾಗಬಹುದು ಎನ್ನಲಾಗಿದೆ.
ಹಲವು ಭಾಗಗಳಲ್ಲಿ ಗುಡುಗು ಸಹಿತ ಮಳೆ
ಇತ್ತ ಬಿರು ಬಿಸಿಲಿನಿಂದ ಜನ ಹೈರಾಣಾಗಿದ್ದರೆ ಇನ್ನೊಂದೆಡೆ ಕೆಲವು ಭಾಗದಲ್ಲಿ ಉತ್ತಮ ಮಳೆ ಬೀಳುವ ಸಂಭವವೂ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಭಾರತದ ಕೆಲವು ಭಾಗಗಳು, ಉತ್ತರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಗುಜರಾತ್, ರಾಜಸ್ಥಾನ ದೆಹಲಿಯ ಕೆಲವು ಭಾಗ, ಹರಿಯಾಣದ ಬಹುತೇಕ ಭಾಗಗಳಲ್ಲಿ ಲಘು ಮಳೆ ಅಥವಾ ತುಂತುರು ಮಳೆಯಾಗಬಹುದು. ಕೆಲವು ಭಾಗಗಳಲ್ಲಿ ಚಂಡಮಾರುತ ಅಥವಾ ಗುಡುಗು ಸಹಿತ ಮಳೆ ಮತ್ತು 40-70 ಕಿಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.



Click it and Unblock the Notifications

