Latest Updates
-
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಈ ಸೂಚನಾ ಫಲಕ ನಿಮ್ಮ ಜೀವ ಉಳಿಸಬಹುದು..! ಇದರ ಅರ್ಥವೇನು ಗೊತ್ತಾ?
ನೀವು ರಸ್ತೆಯಲ್ಲಿ ಚಲಿಸುವಾಗ ಅಥವಾ ವಾಹನ ಚಲಾಯಿಸುವಾಗ ರಸ್ತೆ ಬದಿಯಲ್ಲಿ ಹಲವರು ರೀತಿಯ ಬೋರ್ಡ್‌ಗಳು, ಚಿಹ್ನೆಗಳ ನೋಡುತ್ತಿರುತ್ತೀರಿ. ಒಂದೊಂದಕ್ಕೂ ಬೇರೆ ಬೇರೆ ರೀತಿಯಾದ ಕಾರಣ ಇರುತ್ತದೆ. ಹಾಗೆ ನೀವು ವಾಹನ ಓಡಿಸುವ ಮೊದಲು ಈ ಎಲ್ಲಾ ಸೂಚನಾ ಫಲಕಗಳ ಕುರಿತು ಅರಿವಿರಬೇಕಾಗುತ್ತದೆ. ನಿಮಗೆ ಚಾಲನಾ ಪರವಾನಗಿ ನೀಡುವಾಗಲು ಈ ಸೂಚನೆಗಳ ಕುರಿತಂತೆ ಪ್ರಶ್ನೆ ಕೇಳುವುದನ್ನು ನಾವು ನೋಡಬಹುದು.
ಹಾಗೆ ಈ ಸೂಚನಾ ಫಲಕಗಳು ಹಲವು ರೀತಿಯಲ್ಲಿ ನಿಮ್ಮ ಜೀವ ಉಳಿಸುವ ಕಾರ್ಯ ಮಾಡುತ್ತವೆ. ನಮ್ಮ ಪ್ರವಾಸದಲ್ಲಿ ಇಲ್ಲವೆ ನಮ್ಮ ಪ್ರಯಾಣದಲ್ಲಿ ಈ ರೀತಿಯ ಹಲವು ಸೂಚನಾ ಫಲಕ ನೋಡುವುದು ಸಾಮಾನ್ಯ. ಹಲವು ಫಲಕಗಳ ಅರ್ಥವೇನು ಎಂಬುದನ್ನು ನಮಗೂ ಗೊತ್ತಿರುತ್ತೆ. ಮತ್ತೆ ಕೆಲವೊಂದರ ಅರ್ಥವನ್ನು ನಾವು ತಪ್ಪಾಗಿ ತಿಳಿದಿರುತ್ತೇವೆ. ಹಾಗೆ ಮತ್ತೆ ಕೆಲವೊಂದರ ಅರ್ಥವೇ ನಮಗೆ ತಿಳಿದಿರುವುದಿಲ್ಲ.

ಹಾಗೆ ಕೆಲವೊಂದು ನಮ್ಮ ಜೀವ ಉಳಿಸುವಂತಹ ಫಲಕಗಳ ಕಡೆಗೆ ಎಂದಿಗೂ ನಾವು ಗಮನವನ್ನೇ ಕೊಡುವುದಿಲ್ಲ, ಹಲವು ಕಡೆಗಳಲ್ಲಿ ಅಪಘಾತಗಳು ಸಂಭವಿಸುವುದು ಈ ಸೂಚನಾ ಫಲಕಗಳಿಲ್ಲದೆಯೇ. ಹಾಗೆ ಕೆಲವರು ಈ ಸೂಚನಾ ಫಲಕ ನೋಡದೆ ಮುಂದೆ ಸಾಗುವುದು ಕೂಡ ಅಪಘಾತಗಳಿಗೆ ಕಾರಣವಾಗುವುದು ನೋಡಬಹುದು.
ಹಾಗೆ ಈ ಮೇಲಿನ ಫೋಟೋದಲ್ಲಿರುವ ಸೂಚನಾ ಫಲಕ ಕೂಡ ನೀವು ಎಲ್ಲಾದರು ನೋಡಿರಬಹುದು. ಆದ್ರೆ ಬಹುತೇಕರಿಗೆ ಈ ಫಲಕದ ಹಿಂದಿರುವ ಅರ್ಥವೇನು? ಇದರಿಂದ ಏನು ಪ್ರಯೋಜನವಿದೆ ಎಂಬುದು ತಿಳಿದಿರುವುದಿಲ್ಲ. ಈ ಸೂಚನಾ ಫಲಕವು ನಿಮ್ಮ ಜೀವ ಉಳಿಸಬಹುದಾಗಿದೆ. ಹಾಗಾದ್ರೆ ಈ ಸೂಚನಾ ಫಲಕದ ಹಿಂದಿನ ಅರ್ಥವೇನು ನೋಡೋಣ.
ಈ ರೀತಿಯ ಸಿಡಿಲಿನ ರೀತಿಯ ಅಥವಾ ಶಾಕ್ ರೀತಿಯಲ್ಲಿರುವ ಚಿಹ್ನೆ ಇರುವುದು ನೋಡಿದರೆ ನೀವು ಬಹಳ ಎಚ್ಚರಿಕೆಯಿಂದ ಆ ದಾರಿಯಲ್ಲಿ ಸಾಗುವುದು ಬಹಳ ಮುಖ್ಯ. ಏಕೆಂದರೆ ಈ ರೀತಿ ವಿದ್ಯುತ್ ಸಂಕೇತವಿರುವ ಸೂಚನಾ ಫಲಕಗಳು ಕಂಡರೆ ಆ ರಸ್ತೆಯಲ್ಲಿ ಹೈ ಟೆನ್ಷನ್ ವೈರ್ ಇವೆ ಎಂದರ್ಥವಾಗುತ್ತದೆ. ಹಾಗೆ ಅವು ರಸ್ತೆಯ ಅಡ್ಡಲಾಗಿ ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಿವೆ ಎಂದರ್ಥವಾಗಿದೆ.
ಏಕೆಂದರೆ ಈ ಹೈ ಟೆನ್ಷನ್ ವೈರ್‌ಗಳು ತುಂಡಾಗಿ ಅಥವಾ ಜೋತು ಬೀಳುವ ಸಾಧ್ಯತೆಗಳು ಹೆಚ್ಚಾಗಿರುತ್ತದೆ, ಹೆಚ್ಚು ಎತ್ತರವಿರುವ ವಾಹನಗಳು ಈ ಸಮಯದಲ್ಲಿ ಎಚ್ಚರಿಕೆಯಿಂದ ಚಸಲಿಸಬೇಕಾಗುತ್ತದೆ. ಹಾಗೆ ಒಂದು ವೇಳೆ ಈ ತಂತಿಗಳು ತುಂಡಾಗಿ ಬಿದ್ದಿರುವ ಸಾಧ್ಯತ ಇರುತ್ತದೆ. ಹೀಗಾಗಿ ಈ ಸೂಚನಾ ಫಲಕ ನೋಡಿದರೆ ಆದಷ್ಟು ಎಚ್ಚರಿಕೆಯಿಂದ ವಾಹನ ಚಲಾಯಿಸುವುದು ಮುಖ್ಯ. ಇದು ನಿಮ್ಮ ಜೀವ ಕಪಾಡಬಹುದು.
ಒಂದು ಈ ವೇಳೆ ಈ ಹೈ ಟೆನ್ಷನ್ ವೈರ್ ವಾಹನಗಳಿಗೆ ತಾಕಿದರೆ ಇಡೀ ವಾಹನಕ್ಕೆ ವಿದ್ಯುತ್ ಪ್ರವಹಿಸಲಿದೆ. ಇದು ಜೀವನವನ್ನೆ ತೆಗೆಯಬಹುದು. ಹೀಗಾಗಿ ಈ ಸೂಚನಾ ಫಲಕಗಳ ಕಡೆಗೆ ಯಾವಾಗಲು ಗಮನವಿಡಿ.
ಆದ್ರೆ ಈಗ ಈ ಸೂಚನಾ ಫಲಕದ ಕುರಿತಾಗಿ ವಿಡಿಯೋವೊಂದನ್ನು ಪೊಲೀಸ್ ಅಧಿಕಾರಿಯೊಬ್ಬರು ಹಂಚಿಕೊಂಡಿದ್ದಾರೆ. ರಸ್ತೆಯ ಸುರಕ್ಷತೆಯ ದೃಷ್ಟಿಯಿಂದ ಈ ವಿಡಿಯೋ ಬಹಳ ಮುಖ್ಯ ಎನಿಸಿದೆ. ಟ್ರಾಫಿಕ್ ಸಬ್-ಇನ್ಸ್‌ಪೆಕ್ಟರ್ ಈ ಸೂಚನಾ ಫಲಕದ ಪ್ರಾಮುಖ್ಯತೆ ಕುರಿತು ಹಂಚಿಕೊಂಡಿದ್ದಾರೆ. ಈ ವಿಡಿಯೋ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಇಂತಹ ಸೂಚನಾ ಫಲಕ ಇರುವ ಕಡೆಗಳಲ್ಲಿ ವಾಹನ ಸವಾರರು ಬಹಳ ಎಚ್ಚರಿಕೆಯಿಂದ ಪ್ರಯಾಣಿಸುವಂತೆ ಅವರು ತಿಳಿಸಿದ್ದಾರೆ. ಸದ್ಯ ಈ ವಿಡಿಯೋ 1 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಕಂಡಿದೆ.



Click it and Unblock the Notifications