Latest Updates
-
ಸಂಜೆ ಹೊರಗೆ ಹೋಗುವ ಹೆಣ್ಣುಮಕ್ಕಳ ಸುರಕ್ಷತೆ: ಪೋಷಕರಿಗೆ ಇಲ್ಲಿದೆ 7 ಪ್ರಮುಖ ವಾಟ್ಸಾಪ್ ಸಂದೇಶಗಳು -
ನವರಾತ್ರಿ ಸಂಭ್ರಮ: ಕೇವಲ 30 ನಿಮಿಷದಲ್ಲಿ ಪರಿಸರಸ್ನೇಹಿ ಪೂಜಾ ಮಂಟಪ ಅಲಂಕರಿಸುವ ಸುಲಭ ಟಿಪ್ಸ್! -
ನವರಾತ್ರಿ ಉಪವಾಸ: ಗಾರ್ಬಾ ಆಡಲು ಬೇಕಾದ ಶಕ್ತಿ ಮತ್ತು ಆರೋಗ್ಯಕರ ಡಯಟ್ ಪ್ಲಾನ್ ಇಲ್ಲಿದೆ -
ನವರಾತ್ರಿ ಗರ್ಬಾ ಡ್ರೆಸ್ ರೆಡಿ ಇಲ್ಲವೇ? ಬೆಂಗಳೂರು, ಮುಂಬೈ, ಅಹಮದಾಬಾದ್ನಲ್ಲಿ ಬಾಡಿಗೆಗೆ ಪಡೆಯಲು ಬೆಸ್ಟ್ ಸ್ಥಳಗಳು ಮತ್ತು ಟಿಪ್ಸ್ ಇಲ್ಲಿದೆ! -
ನವರಾತ್ರಿ ಉಪವಾಸದ ಆಯಾಸ, ಕಾಲು ನೋವು ಕಾಡ್ತಿದೆಯಾ? ಗರ್ಬಾ ಡ್ಯಾನ್ಸ್ಗೆ ಸಿದ್ಧರಾಗಲು ಇಲ್ಲಿದೆ 8 ನಿಮಿಷಗಳ ಮ್ಯಾಜಿಕ್ ವರ್ಕೌಟ್ -
ನವರಾತ್ರಿ ಗರ್ಬಾ ಸಂಭ್ರಮ: ನಕಲಿ ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆಡಿ! -
ದೆಹಲಿ AQI ಏರಿಕೆ: ಮನೆಯೊಳಗೆ 'ಏರ್ ಶೀಲ್ಡ್' ಸಿದ್ಧಪಡಿಸಿ, ಕೇವಲ 20 ನಿಮಿಷದಲ್ಲಿ ಧೂಳಿನಿಂದ ಬಚಾವಾಗಿ! -
ನವರಾತ್ರಿ ಹಬ್ಬದ ಸಂಭ್ರಮ: ಕುತ್ತು ಹಿಟ್ಟು, ಸಿಹಿ ತಿಂಡಿ ಕೊಳ್ಳುವಾಗ ಈ ತಪ್ಪು ಮಾಡಬೇಡಿ! -
ಶಾರ್ದೀಯ ನವರಾತ್ರಿ 2026: ಘಟಸ್ಥಾಪನೆ ಮುಹೂರ್ತ, ಬಣ್ಣಗಳ ಪಟ್ಟಿ ಮತ್ತು ಹಬ್ಬದ ಫ್ಯಾಷನ್ ಟಿಪ್ಸ್ ಇಲ್ಲಿದೆ! -
ಮಂಡಿ ನೋವಿನ ಚಿಂತೆಯೇ ಬೇಡ: ಗರ್ಬಾ ಆಡುವ ಮುನ್ನ ಈ 7 ನಿಮಿಷದ ಸಿಂಪಲ್ ವರ್ಕೌಟ್ ಟ್ರೈ ಮಾಡಿ!
ಸೊನ್ನೆ ಮುಖಬೆಲೆಯ ನೋಟು ನೋಡಿದ್ದೀರಾ..? ಈ ಬಗ್ಗೆ ಕೇಳಿದ್ರೆ ಅಚ್ಚರಿ ಪಡ್ತೀರಾ..!
ನೀವು ಭಾರತದಲ್ಲಿ ಎಷ್ಟು ರೀತಿ ನೋಟುಗಳಿದ್ದವು ಅಂತ ನೋಡಿರುತ್ತೀರಿ. ನೋಟು ಅಮಾನ್ಯೀಕರಣಕ್ಕೂ ಮುನ್ನ ಇದ್ದ 500 ರೂಪಾಯಿ ಹಾಗೂ 1,000 ರೂಪಾಯಿ ನೋಟುಗಳು ಇಂದಿಗೂ ಜನಮನದಲ್ಲಿ ಉಳಿದಿವೆ. ಇದಾದ ಬಳಿಕ 2,000 ರೂಪಾಯಿ ನೋಟು ಹೊರಬಂದರು ಬಳಿಕ ಮರೆಯಾಗಿದೆ. ಇದಾದ ಬಳಿಕ ಹೊಸ ಹೊಸ ಬಗೆಯ ನೋಟುಗಳು ಚಲಾವಣೆಗೆ ಬಂದಿವೆ.
ಎಲ್ಲಾ ನೋಟುಗಳು ಹೊಸ ವಿನ್ಯಾಸದಲ್ಲಿ ಹೊಸ ಹೊಸ ಕಲರ್‌ನಲ್ಲಿ ಹೊರಬಂದಿವೆ. ಇನ್ನೂ ಹೊಸ ನೋಟುಗಳು ಬರುವ ಸಾಧ್ಯತೆಯೂ ಇದೆ ಎಂಬ ಮಾತುಗಳಿವೆ. ಆದ್ರೆ ನೀವೆಂದಾದ್ರು ಸೊನ್ನೆ ಮುಖಬೆಲೆಯ ನೋಟು ನೋಡಿದ್ದೀರಾ? ಹೌದು ನಿಮಗೆ ಇದು ಅಚ್ಚರಿ ಎನಿಸಬಹುದು.

ಭಾರತದಲ್ಲಿ, ಸೊನ್ನೆ ರೂಪಾಯಿ ನೋಟು ಜನರು ಲಂಚ ನೀಡುವುದನ್ನು ತಡೆಯಲು ಮತ್ತು ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಹೋರಾಡಲು ರಚಿಸಲಾದ ನಕಲಿ ನೋಟಿನಂತಿದೆ. ಈ ನೋಟುಗಳು ಭಾರತದಲ್ಲಿನ ಸಾಮಾನ್ಯ ರೂ 50 ನೋಟುಗಳಂತೆ ಕಾಣುತ್ತವೆ, ಆದರೆ ಅವುಗಳನ್ನು 5 ನೇ ಪಿಲ್ಲರ್ ಎಂಬ ಗುಂಪಿನಿಂದ ಮಾಡಲ್ಪಟ್ಟಿದೆ, ಆದರೆ ಭಾರತೀಯ ರಿಸರ್ವ್ ಬ್ಯಾಂಕ್ (RBI)ನಿಂದ ಅಧಿಕೃತವಾಗಿ ಹೊರಬಂದಿದ್ದಲ್ಲ.
ಈ ನೋಟು ಹೊರಬಂದಿದ್ದು ಏಕೆ.?
ಭಾರತದಲ್ಲಿ ಅಂದಿನಿಂದ ಇಂದಿನವರೆಗೂ ಕಾಡುತ್ತಿರುವ ಸಮಸ್ಯೆಯಾದ ಭ್ರಷ್ಟಾಚಾರ ನಿರ್ಮೂಲನೆಯ ಅಂಗವಾಗಿ ಸೊನ್ನೆ ರೂಪಾಯಿ ನೋಟು ಜಾರಿಗೆ ಬಂದಿತ್ತು. ಆದ್ರೆ ಆರ್‌ಬಿಐನಿಂದ ಈ ನೋಟು ಹೊರಬಂದಿದ್ದಲ್ಲ ಬದಲಿಗೆ ಸರ್ಕಾರೇತರ ಸಂಸ್ಥೆಯೊಂದು ಈ ನೋಟನ್ನು ಮುದ್ರಿಸಲು ಮುಂದಾಗಿತ್ತು.
ಈ ನೋಟಿನ ಮೇಲೆ ಇದು ಅಸಲಿ ನೋಟಲ್ಲ ನಕಲಿ ಎಂದು ಬರೆಯಲಾಗಿತ್ತು. ಜೊತೆಗೆ ಭಾರತೀಯ ರಿಸರ್ವ್ ಬ್ಯಾಂಕ್ ಇರುವ ಜಾಗದಲ್ಲಿ 'ಎಲ್ಲಾ ಹಂತಗಳಲ್ಲಿ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಿ' ಎಂದು ಬರೆಯಲಾಗಿತ್ತು. ಅಂದರೆ ಈ ನೋಟನ್ನು ಭ್ರಷ್ಟಾಚಾರದ ವಿರುದ್ಧ ಗಾಜರತಿ ಮೂಡಿಸಲೆಂದು ಹೊರತರಲಾಗಿತ್ತು. ಅಚ್ಚರಿ ಎಂದರೆ ಈ ನೋಟಿಗೆ ಇನ್ನಿಲ್ಲದ ಬೇಡಿಕೆ ಬಂದಿತ್ತು. ಅದನ್ನು ಮುದ್ರಿಸಲಾಗದೆ, ಎನ್‌ಜಿಓ ಈ ಸೊನ್ನೆ ಸೋಟನ್ನು ಇನ್ನು ಮುಂದೆ ಮುದ್ರಿಸುವುದಿಲ್ಲ ಎಂದು ಘೋಷಿಸಿತು.
ಮೊದಲು ಆರಂಭಗೊಂಡಿದ್ದು ಎಲ್ಲಿ?
2007 ರಲ್ಲಿ, ಚೆನ್ನೈನ ಸರ್ಕಾರೇತರ ಸಂಸ್ಥೆ (ಎನ್‌ಜಿಒ) ಶೂನ್ಯ ರೂಪಾಯಿಯ ನೋಟನ್ನು ಮುದ್ರಿಸಿತ್ತು. ಈ ನೋಟಿನ ಮೇಲೆ ಸರ್ಕಾರ ಅಥವಾ ರಿಸರ್ವ್ ಬ್ಯಾಂಕ್‌ನ ಯಾವುದೇ ಮುದ್ರ ಇರಲಿಲ್ಲ.ಅಂದರೆ ಅದನ್ನು ವಹಿವಾಟಿನಿಂದ ಹೊರಗಿಡಲಾಗಿದೆ. ಈ ಟಿಪ್ಪಣಿಯ ಮೂಲಕ ವಿಶೇಷ ಸಂದೇಶವನ್ನು ನೀಡಲಾಗಿದೆ. ಇದು ಹಿಂದಿ, ತಮಿಳು, ಕನ್ನಡ, ಮಲಯಾಳಂ ಮತ್ತು ತೆಲುಗು ಭಾಷೆಗಳಲ್ಲಿ ಪ್ರಕಟವಾಯಿತು.
ದೇಶದ ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿತ್ತು. ಎಲ್ಲೆಲ್ಲಿ ಯಾವುದೇ ಕೆಲಸವಿದ್ದರೂ ಲಂಚ ನೈವೇದ್ಯವಿಲ್ಲದೆ ನಡೆಯುತ್ತಿರಲಿಲ್ಲ. ಇದರಿಂದ ಸಾರ್ವಜನಿಕರ ಸ್ಥಿತಿ ಶೋಚನೀಯವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಭ್ರಷ್ಟಾಚಾರವನ್ನು ಕಿತ್ತೊಗೆಯುವ ಉದ್ದೇಶದಿಂದ ಸೊನ್ನೆ ರೂಪಾಯಿ ನೋಟುಗಳನ್ನು ಮುದ್ರಿಸಲಾಗಿದೆ. ಬಳಿಕ ಎಲ್ಲಿ ಲಂಚ ಕೇಳಿದರು ಸೊನ್ನೆ ರೂಪಾಯಿ ನೋಟುಗಳ ಬಂಡಲ್‌ಗಳನ್ನೇ ಕೈಗಿಡುತ್ತಿದ್ದರು. ಹೀಗಾಗಿ ಈ ಸೊನ್ನೆ ರೂಪಾಯಿ ನೋಟುಗಳು ಸದ್ದು ಮಾಡಿದ್ದವು.
ನಾವು ಲಂಚವನ್ನು ತೆಗೆದುಕೊಳ್ಳುವುದಿಲ್ಲ ಅಥವಾ ಕೊಡುವುದಿಲ್ಲ
ಶೂನ್ಯ ರೂಪಾಯಿಯ ನೋಟು ಮುದ್ರಿಸಿ, ನಾವು ಲಂಚ ಕೊಡುವುದಿಲ್ಲ, ತೆಗೆದುಕೊಳ್ಳುವುದಿಲ್ಲ ಎಂದು ಪ್ರಮಾಣ ವಚನ ಸ್ವೀಕರಿಸಿದರು. ಅಭಿಯಾನದ ಮೂಲಕ, ಈ ನೋಟುಗಳನ್ನು ರೈಲ್ವೆ ನಿಲ್ದಾಣಗಳು, ಬಸ್ ನಿಲ್ದಾಣಗಳು ಮತ್ತು ಮಾರುಕಟ್ಟೆಗಳಲ್ಲಿ ವಿತರಿಸಲಾಯಿತು. ಎನ್‌ಜಿಒ ಮೂಲಕ ಭ್ರಷ್ಟಾಚಾರದ ವಿರುದ್ಧ ಜನರಿಗೆ ಅರಿವು ಮೂಡಿಸಲಾಯಿತು.
ಈ ಅಭಿಯಾನವು 5 ವರ್ಷಗಳ ಕಾಲ ಮುಂದುವರೆಯಿತು. ಈ ಸಂದರ್ಭದಲ್ಲಿ, ಶೂನ್ಯ ಭ್ರಷ್ಟಾಚಾರದ ವಿರುದ್ಧ ನಿಲ್ಲಲು 5 ಲಕ್ಷಕ್ಕೂ ಹೆಚ್ಚು ನಾಗರಿಕರಿಂದ ಸಹಿಗಳನ್ನು ಸಂಗ್ರಹಿಸಲಾಯಿತು. ಈ ಅಭಿಯಾನವನ್ನು 2014 ರವರೆಗೆ ನಡೆಸಲಾಯಿತು. ಸುಮಾರು 25 ಲಕ್ಷ ಶೂನ್ಯ ರೂಪಾಯಿ ನೋಟುಗಳನ್ನು ಮುದ್ರಿಸಲಾಗಿದೆ. ಶೂನ್ಯ ರೂಪಾಯಿ ನೋಟು ನಿಖರವಾಗಿ 50 ರೂಪಾಯಿಯಂತೆಯೇ ಇತ್ತು. ಇದರ ಮೇಲೆ, ನಾನು ಲಂಚವನ್ನು ತೆಗೆದುಕೊಳ್ಳುವುದಿಲ್ಲ ಅಥವಾ ನೀಡುವುದಿಲ್ಲ ಎಂದು ಕೆಳಭಾಗದಲ್ಲಿ ಪ್ರತಿಜ್ಞೆ ಬರೆಯಲಾಗಿತ್ತು.



Click it and Unblock the Notifications
