Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಹನುಮಾನ್ ಜಯಂತಿಯನ್ನು ಈ ಪರಿಹಾರ ಮಾಡಿದರೆ ದಾರಿದ್ರ್ಯ, ಕಷ್ಟಗಳು ದೂರಾಗುವುದು
ಹನುಮಂತನನ್ನು ಭಕ್ತಿಯಿಂದ ಸ್ಮರಿಸಿದರೆ ಬದುಕಿನಲ್ಲಿರುವ ಎಲ್ಲಾ ಕಷ್ಟಗಳು ದೂರಾಗುವುದು, ಆದ್ದರಿಂದಲೇ ಆಂಜನೇಯ ಎಂದರೆ ಭಕ್ತರು ಕಣ್ಮುಚ್ಚಿ ತಮ್ಮ ಇಷ್ಟದೇವನನ್ನು ನಂಬುತ್ತಾರೆ. ಪ್ರತಿ ಮಂಗಳವಾರ ಹಾಗೂ ಶನಿವಾರ ಹನುಮಂತನ ಪೂಜೆ ಮಾಡುವುದರಿಂದ ನಮ್ಮ ಜೀವನದಲ್ಲಿರುವ ಕಷ್ಟಗಳು ದೂರಾಗುವುದು. ಅದರಲ್ಲೂ ಶನಿ ಸಾಡೇಸಾತಿ, ಶನಿ ಧೈಯ್ಯ ನಡೆಯುತ್ತಿರುವವರು ಹನುಮಂತನ ಮೊರೆ ಹೋದರೆ ಹನುಮಂತನ ಕೃಪೆಯಿಂದ ತುಂಬಾ ಕಷ್ಟಗಳಿಂದ ಪಾರಾಗಬಹುದು.
ಅದರಲ್ಲೂ ಹನುಮಾನ್ ಜಯಂತಿಯಂದು ಕೆಲ ಪರಿಹಾರ ಮಾಡಿದರೆ ಹೆಚ್ಚಿನ ಫಲ ದೊರೆಯಲಿದೆ. ಈ ದಿನ ಏನು ಮಾಡಿದರೆ ನಮ್ಮ ಜೀವನದಲ್ಲಿರುವ ಕಷ್ಟಗಳು ದೂರಾಗುವುದು, ಶನಿ ದೋಷವಿದ್ದರೆ ಅದರಿಂದ ಪಾರಾಗಲು ಏನು ಮಾಡಬೇಕು ಎಂದು ನೋಡೋಣ:

* ಹನುಮಾನ್ ಜಯಂತಿಯಂದು ಸುಂದರಕಾಂಡ ಹಾಗೂ ಹನುಮಾನ್ ಚಾಲೀಸಾ ಪಠಿಸಿ. ಈ ದಿನ ಹನುಮಂತನ ಭಕ್ತಿಯಿಂದ ಪೂಜಿಸುವುದರಿಂದ ಶನಿಯ ಕೆಟ್ಟ ದೃಷ್ಟಿಯಿಂದ ಪಾರಾಗಬಹುದು.
* ಹನುಮಾನ್ ಜಯಂತಿಯಂದು ಹನುಮಂತನಿಗೆ ಪೂಜೆ ಸಲ್ಲಿಸಿ. ಈ ದಿನ ಹಸುವಿಗೆ ಮೇವು ದಾನ ಮಾಡಿ. ಕಪ್ಪು ದನವಿದ್ದರೆ ಅದಕ್ಕೆ ಆರತಿ ಮಾಡಿ.
* ಹನುಮಾನ್ ಜಯಂತಿಯಂದು ಸೂರ್ಯಾಸ್ತದ ನಂತರ ಶನಿದೇವನನ್ನು ಪೂಜಿಸಿ. ಸಂಜೆ ಆಲದ ಮರಕ್ಕೆ ಸುತ್ತು ಬಂದು ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ ಮತ್ತು ಹಾಲು ಮತ್ತು ಧೂಪವನ್ನು ಅರ್ಪಿಸಿ. ನಂತರ ಶನಿದೋಷ ಕಡಿಮೆ ಮಾಡುವಂತೆ ಪ್ರಾರ್ಥಿಸಿ.
* ಈ ದಿನ ನೀವು ಕೈಯಲ್ಲಿ ರುದ್ರಾಕ್ಷ ಹಿಡಿದು ಶನಿಯ ಯಾವುದೇ ಒಂದು ಮಂತ್ರವನ್ನು ಕನಿಷ್ಠ ಐದು ಸುತ್ತು ಜಪಿಸಿ. ಶನಿದೇವನು ಇದರಿಂದ ಸಂತುಷ್ಟನಾಗುತ್ತಾನೆ, ನಿಮ್ಮ ಕಷ್ಟಗಳು ದೂರಾಗುವುದು.
* ಈ ದಿನ ಕಪ್ಪು ಬಟ್ಟೆ, ಕಪ್ಪು ಎಳ್ಳು ಹಾಗೂ ಆಹಾರ ವಸ್ತುಗಳನ್ನು ದಾನ ಮಾಡಿ.
* ಹನುಮಾನ್ ಜಯಂತಿಯಂದು ಮಂಗಗಳಿಗೆ ಬಾಳೆಹಣ್ಣು ನೀಡಿ, ಕಪ್ಪು ನಾಯಿಗೆ ಆಹಾರ ಹಾಕಿ.
* ತುಂಬಾನೇ ಕಷ್ಟ, ಏನೇ ಮಾಡಿದರೂ ಕಷ್ಟದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ , ಏಕೋ ನನ್ನ ಸುತ್ತು ಋಣಾತ್ಮಕ ಶಕ್ತಿಯಿದೆ ಎಂದು ಭಾವಿಸುವವರು ಈ ದಿನ ಮನೆಮುಂದೆ ಕೆಂಪು ಭಾವುಟ ಕಟ್ಟಿ, ಇದರಿಂದ ಶ್ರೀ ಹನುಮಾನ್ ರಕ್ಷಣೆ ಮನೆಗೆ ಇರಲಿದೆ. ಕೆಂಪು ಬಾವುಟವನ್ನು ಮೊದಲು ಹನುಮಂತನ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿ ಬಂದ ಮೇಲೆ ಕಟ್ಟಿ.
* ಆರ್ಥಿಕ ತೊಂದರೆ ಅನುಭವಿಸುತ್ತಿರುವವರು ಈ ದಿನ ಬಡವರಿಗೆ ಆಹಾರವನ್ನು ದಾನ ಮಾಡಿ.
* ಪಿತೃದೋಷವಿದ್ದು ಇದರಿಂದಾಗಿ ತುಂಬಾ ತೊಂದರೆ ಅನುಭವಿಸಿದ್ದರೆ ಈ ದಿನ ಶ್ರೀ ರಾಮ ಹಾಗೂ ಹನುಮಂತನನ್ನು ಆರಾಧಿಸಿ, ಇದರಿಂದ ಪಿತೃಗಳಿಗೆ ಮೋಕ್ಷ ಸಿಗುವುದು ನಿಮ್ಮ ತೊಂದರೆ ದೂರಾಗುವುದು.
* ಏನಾದರೂ ಆರೋಗ್ಯ ಸಂಬಂಧಿತ ಸಮಸ್ಯೆಯಿದ್ದರೆ ಹನುಮಾನ್ ಜಯಂತಿಯಂದು 108 ಬಾರಿ ಹನುಮಾನ್ ಚಾಲೀಸಾ ಪಠಿಸಿ.
* ಮನೆಯಲ್ಲಿ ನಡೆಯಬೇಕಾದ ಶುಭ ಕಾರ್ಯಗಳಿಗೆ ವಿಘ್ನ ಉಂಟಾಗುತ್ತಿದೆ ಎಂದಾದರೆ ಆ ವಿಘ್ನ ನಿವಾರಣೆಗೆ ಹನುಮಂತನಿಗೆ ಕುಂಕುಮ ಅರ್ಪಿಸಿ ಆರಾಧನೆ ಮಾಡಿ.
* ಕೋರ್ಟ್ ಸಂಬಂಧಿತ ಸಮಸ್ಯೆಯಿದ್ದರೆ ಕೋರ್ಟ್ ಸಮಸ್ಯೆಯಿಂದ ಹೊರಬರಲು ದೇವಾಲಯಕ್ಕೆ ಕೆಂಪು ಬಾವುಟ ಅರ್ಪಿಸಿ.
* ವೀಳ್ಯೆದೆಲೆ ಅರ್ಪಿಸಿ: ತುಂಬಾ ಸವಾಲುಗಳು ಎದುರಾಗಿದೆ, ಪರಿಸ್ಥಿತಿ ನಿಮ್ಮ ಕೈ ಮೀರಿದೆ, ಈ ಸಮಸ್ಯೆಯಿಂದ ಹೊರಬರುವುದು ಹೇಗೆ ತಿಳಿಯದಿದ್ದರೆ ನೀವು ಹನುಮಂತನ ಮೊರೆ ಹೋದರೆ ಖಂಡಿತ ಪರಿಹಾರ ಸಿಗುತ್ತದೆ. ಹನುಮಾನ್ ಜಯಂತಿಯಂದು ಹನುಮಂತನಿಗೆ ವಿಶೇಷ ಪೂಜೆ ಸಲ್ಲಿಸಿ. ಮಂಗಳವಾರ ಮತ್ತು ಶನಿವಾರ ಹನುಮಂತನ ದೇವಾಲಯಕ್ಕೆ ಹೋಗಿ ವೀಳ್ಯೆದೆಲೆ ಅರ್ಪಿಸಿ.
2023ರಲ್ಲಿ ಶನಿ ಸಾಡೇಸಾತಿ ಇರುವ ರಾಶಿಗಳು
ಶನಿ ಸಾಡೇಸಾತಿ ಇದ್ದರೆ ತುಂಬಾನೇ ಸಮಸ್ಯೆ ಎದುರಾಗುವುದು. ನಮ್ಮ ಕೆಲಸಗಳಲ್ಲಿ ಅನೇಕ ವಿಘ್ನ ಉಂಟಾಗುವುದು, ವ್ಯವಹಾರದಲ್ಲಿ ನಷ್ಟ ಉಂಟಾಗುವುದು. ಮನೆಯಲ್ಲಿ ಮಾನಸಿಕ ನೆಮ್ಮದಿ ಇರಲ್ಲ, ಆರೋಗ್ಯ ಸಮಸ್ಯೆಗಳು ಕಾಡುವುದು, ಆರ್ಥಿಕ ಸಂಕಷ್ಟ ಎದುರಾಗುವುದು ಹೀಗೆ ಅನೇಕ ಸಮಸ್ಯೆಗಳು ಎದುರಾಗುವುದು.
ಇದೀಗ ಮಕರ, ಕುಂಭ , ಮೀನ ರಾಶಿಯವರ ಮೇಲೆ ಶನಿ ಸಾಡೇಸಾತಿ ನಡೆಯುತ್ತಿದೆ. ತುಲಾ, ವಶ್ಚಿಕ ರಾಶಿಯವರು ಶನಿ ಧೈಯ್ಯ ಎದುರಿಸುತ್ತಿದ್ದಾರೆ.
ಹನುಮಾನ್ ಜಯಂತಿಯಂದು ಪರಿಹಾರ ಮಾಡಿದರೆ ಹನುಮಂತನ ಕೃಪೆಯಿಂದಾಗಿ ಶನಿದೋಷ ಕಡಿಮೆ ಮಾಡಬಹುದು.



Click it and Unblock the Notifications
