Latest Updates
-
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ!
ತುಳಸಿ ಅರ್ಪಿಸಬೇಡಿ ಎಂದ ಗುರುವಾಯುರ್ ದೇವಾಲಯ: ತುಳಸಿ ಇಲ್ಲದೆ ಶ್ರೀ ಕೃಷ್ಣನ ಪೂಜೆಯೇ ಎಂದು ಕೇಳುತ್ತಿರುವ ಭಕ್ತರು
ಗುರುವಾಯುರ್ ಕೇರಳದ ಪ್ರಸಿದ್ಧ ದೇವಾಲಯಗಳಲ್ಲೊಂದು. ಗುರುವಾಯುರ್ ದೇವಾಲಯಕ್ಕೆ ಪ್ರತಿದಿನ ಲಕ್ಷಾಂತರ ಭಕ್ತರು ಭೇಟಿ ನೀಡಿ ಶ್ರೀಕೃಷ್ಣನ ದರ್ಶನ ಪಡೆಯುತ್ತಾರೆ, ಶ್ರೀ ಕೃಷ್ಣನ ದೇವಾಲಯಕ್ಕೆ ಹೋಗುವಾಗ ಶ್ರೀ ಕೃಷ್ಣನಿಗೆ ಚಿನ್ನ, ಆಭರಣ, ಹೂ, ಹಣ್ಣುಗಳನ್ನು ಅರ್ಪಿಸುವುದರಷ್ಟೇ ಶ್ರೇಷ್ಠ ತುಳಸಿ ಅರ್ಪಿಸುವುದು, ಹೀಗಾಗಿಯೇ ಭಕ್ತರು ದೇವಾಲಯಕ್ಕೆ ಬರುವಾಗ ತುಳಸಿಯನ್ನು ಅರ್ಪಿಸುತ್ತಾರೆ. ಆದರೆ ಇದೀಗ ಗುರುವಾಯುರ್ ದೇವಾಸ್ಥಾನ ಆಡಳಿತ ಮಂಡಳಿ ತುಳಸಿಯನ್ನು ತರಬೇಡಿ, ಅದರಲ್ಲಿ ರಾಸಾಯನಿಕವಿರುತ್ತದೆ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.

ತುಳಸಿ ಬದಲಿಗೆ ಕಮಲದ ಹೂವು ತರುವಂತೆ ಹೇಳಿದೆ. ತುಳಸಿ ಸಿಕ್ಕಿದ್ದಷ್ಟು ಸುಲಭವಾಗಿ ಕಮಲದ ಹೂವು ಸಿಗುವುದೇ? ಅಲ್ಲದೆ ಶ್ರೀ ವಿಷ್ಣುವಿನ ಪೂಜೆಗೆ ತುಳಸಿ ಅರ್ಪಿಸಿದರಷ್ಟೇ ಭಕ್ತರಿಗೆ ತೃಪ್ತಿ, ಆದರೆ ಈಗ ಇಂಥದ್ದೊಂದು ಕಾರಣ ನೀಡಿರುವುದು ಮಾತ್ರ ಅಚ್ಚರಿಗೆ ಕಾರಣವಾಗಿದೆ.
ತುಳಸಿಯಲ್ಲಿ ರಾಸಾಯನಿಕವೇ?
ತುಳಸಿಗೆ ಸಾಮಾನ್ಯವಾಗಿ ಯಾವುದೇ ರಾಸಾಯನಿಕ ಹಾಕುವುದಿಲ್ಲ, ತುಳಸಿಯಲ್ಲಿಯೇ ಅನೇಕ ಔಷಧೀಯ ಗುಣಗಳಿರುವುದರಿಂದ ಇದನ್ನು ಮನೆಮದ್ದಾಗಿ ಬಳಸುತ್ತೇವೆ. ಅಲ್ಲದೆ ಶ್ರೀವಿಷ್ಣು ಹಾಗೂ ಶ್ರೀಕೃಷ್ಣ ಆರಾಧನೆ ಮಾಡುವಾಗ ನೈವೇದ್ಯ ಅರ್ಪಿಸುವಾಗ ತುಳಸಿಯನ್ನು ಬಳಸುತ್ತೇವೆ. ತುಳಸಿ ಹಾಕದ ನೈವೇದ್ಯ ಅದು ನೈವೇದ್ಯವಲ್ಲ ಹಾಗಿರುವಾಗ ಈ ತುಳಸಿಯನ್ನು ತರಬೇಡಿ ಎಂದಿರುವುದು ಭಕ್ತರ ಭಾವನೆಗಳಿಗೆ ಧಕ್ಕೆ ತಂದಿದೆ ಎಂಬುವುದು ಭಕ್ತರ ಬೇಸರಕ್ಕೆ ಕಾರಣವಾಗಿದೆ.
ಧಾರ್ಮಿಕ ನಂಬಿಕೆಯೇನು?
ಶ್ರೀ ಕೃಷ್ಣನು ಶ್ರೀ ವಿಷ್ಣುವಿನ ಅವತಾರ. ಶ್ರೀ ವಿಷ್ಣುವಿಗೆ ಏನೇ ಅರ್ಪಿಸಿ ತುಳಸಿ ಅರ್ಪಿಸದಿದ್ದರೆ ಆ ಪೂಜೆ ಪರಿಪೂರ್ಣವಾಗುವುದಿಲ್ಲ, ಹಾಗಾಗಿ ಶ್ರೀ ವಿಷ್ಣು ಹಾಗೂ ಶ್ರೀ ಕೃಷ್ಣ ಆರಾಧನೆಯಲ್ಲಿ ತುಳಸಿ ಇರಲೇಬೇಕು. ಶ್ರೀ ಗಣೇಶನಿಗೆ ಗರಿಗೆ, ಶಿವನಿಗೆ ಬಿಲ್ವೆಪತ್ರೆ ಹಾಗೂ ಶ್ರೀ ವಿಷ್ಣುವಿನ ಪೂಜೆಯಲ್ಲಿ ತುಳಸಿ ಇರಲೇಬೇಕಾದ ವಸ್ತುಗಳಾಗಿವೆ.
ಪೌರಾಣಿಕ ಕತೆ
ತುಲಾಭಾರ ಮಾಡುವಾಗ ಒಂದು ತಕ್ಕಡಿಯಲ್ಲಿ ಶ್ರೀಕೃಷ್ಣ ಕೂತಿರುತ್ತಾನೆ, ಮತ್ತೊಂದು ತಕ್ಕಡಿಗೆ ಚಿನ್ನ, ಬೆಳ್ಳಿ, ಧಾನ್ಯಗಳು, ನಾಣ್ಯಗಳು ಹೀಗೆ ಬೆಲೆ ಬಾಳುವ ವಸ್ತಗಳನ್ನು ಹಾಕಲಾಗುವುದು, ಆದರೂ ತಕ್ಕಡಿ ಕೆಳಕ್ಕ ಬರುವುದೇ ಇಲ್ಲ, ಆವಾಗ ರುಕ್ಮಣಿ ತುಳಿಸ ಎಲೆ ತಂದು ಆ ಧಾನ್ಯಗಳ ಮೇಲೆ ಇಟ್ಟಾಗ ತಕ್ಕಡಿ ಕೆಳಕ್ಕೆ ಬರುತ್ತದೆ, ಹೀಗಾಗಿ ಶ್ರೀಕೃಷ್ಣನ ಪೂಜೆಯಲ್ಲಿ ತುಳಸಿ ಇರಲೇಬೇಕು ಎಂಬುವುದು ಧಾರ್ಮಿಕ ನಂಬಿಕೆಯಾಗಿದೆ.
ತುಳಸಿ ವಿವಾಹ ಕತೆ
ಪೌರಾಣಿಕ ಕತೆ ಪ್ರಕಾರ ತುಳಸಿ ಸುಂದರವಾದ ಮಹಿಳೆ, ಈಕೆಯನ್ನು ರಾಕ್ಷಸ ಜಲಾಂಧರ ಮದುವೆಯಾಗಿರುತ್ತಾನೆ, ಜಲಾಂಧರ ತುಂಬಾನೇ ಶಕ್ತಿಶಾಲಿ ಅಲ್ಲದೆ ಶಿವನಿಂದ ತನ್ನ ಪತ್ನಿ ಪತಿವ್ರತೆಯಾಗಿರುವವರೆಗೆ ನನ್ನನ್ನು ಯಾರೂ ಏನೂ ಮಾಡಲು ಸಾಧ್ಯವಾಗಬಾರದು ಎಂಬ ವರವನ್ನು ಪಡೆದಿರುತ್ತಾರೆ. ತುಳಸಿ ತನ್ನ ಪತಿಯನ್ನು ತುಂಬಾನೇ ಪ್ರೀತಿಸುತ್ತಾರೆ, ಪತಿವ್ರತೆಯಾಗಿರುತ್ತಾಳೆ. ಜಲಾಂಧರ ತಗೆ ವರ ಸಿಕ್ಕಿರುವ ಕಾರಣ ಅಹಂಕಾರದಿಂದ ದೇವತೆಗಳಿಗೆ ಕಷ್ಟಗಳನ್ನು ನೀಡುತ್ತಾ ಅಟ್ಟಹಾಸ ಮೆರೆಯುತ್ತಿರುತ್ತಾನೆ.
ಈತನ ಕಾಟ ಸಹಿಸಲಾರದೆ ದೇವತೆಗಳು ಶ್ರೀವಿಷ್ಣುವಿನ ಮೊರೆ ಹೋಗುತ್ತಾರೆ. ಆವಾಗ ಶ್ರೀವಿಷ್ಣು ಜಲಾಂಧರನ ರೂಪ ತಾಳಿ ತುಳಸಿಯ ಪಾವಿತ್ರ್ಯ ಹಾಳು ಮಾಡುತ್ತಾನೆ, ಇದರಿಂದ ಜಲಾಂಧರನ ಶಕ್ತಿ ಕುಗ್ಗುವುದು, ಅವನನ್ನು ಸಂಹರಿಸಲಾಗುವುದು. ತನಗಾದ ಮೋಸ ತಿಳಿದು ತುಳಸಿ ಶ್ರೀ ವಿಷ್ಣುವನ್ನು ಕಲ್ಲಾಗುವಂತೆ ಶಾಪ ನೀಡುತ್ತಾಳೆ, ಅದುವೇ ಸಾಲಿಗ್ರಾಮ, ಬಳಿಕ ಆಕೆಗೆ ಶ್ರೀ ವಿಷ್ಣುವನ್ನು ಕಲ್ಲು ಮಾಡಿದ್ದಕ್ಕೆ ಪಶ್ಚಾತಾಪವಾಗುತ್ತದೆ, ಶ್ರೀ ವಿಷ್ಣುವನ್ನು ಶಾಪ ಮುಕ್ತಳಾಗಿಸುತ್ತಾಳೆ, ಸಾಲಿಗ್ರಾಮ ರೂಪದಲ್ಲಿದ್ದ ಶ್ರೀ ವಿಷ್ಣು ತುಳಸಿಯನ್ನು ಮದುವೆಯಾಗುತ್ತಾನೆ, ಇಲ್ಲಿಂದ ಶ್ರೀ ವಿಷ್ಣುವಿಗೆ ತುಳಸಿ ತುಂಬಾನೇ ಪ್ರೀತಿ ಪಾತ್ರಳಾಗುತ್ತಾಳೆ. ಶ್ರೀ ವಿಷ್ಣುವಿನ ಪೂಜೆಯಲ್ಲಿ ತುಳಸಿಯನ್ನು ಕಡ್ಡಾಯಯವಾಗಿ ಬಳಸಲಾರಂಭಿಸುತ್ತಾರೆ.



Click it and Unblock the Notifications

