Latest Updates
-
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 08 ರಿಂದ ಮಾರ್ಚ್ 15ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಹೊಸ ರೀತಿಯ ಟೊಮೆಟೊ ಚಕ್ಕುಲಿ ಸುಲಭವಾಗಿ ಮಾಡಿ: ಇಲ್ಲಿದೆ ಮಾಡುವ ವಿಧಾನ -
ಶನಿ ಸಂಚಾರ 2026: ಮಾರ್ಚ್ನಿಂದ ಈ 5 ರಾಶಿ ಜನರು ಎಚ್ಚರವಹಿಸಿ, ವೈಯಕ್ತಿಕ ಹಾನಿ ಸಂಭವ! -
ಮಸಾಲೆ ಲೆಸ್ ವೈಟ್ ಪಲಾವ್; ವಿಭಿನ್ನ ರುಚಿ ವಿಶೇಷ ಖಾದ್ಯ ಸಿದ್ದಮಾಡಿ ನೋಡಿ! -
ಅಂತಾರಾಷ್ಟ್ರೀಯ ಮಹಿಳಾ ದಿನ: ದಕ್ಷಿಣ ಏಷ್ಯಾದಲ್ಲಿ ಹೆಚ್ಚಾಗುತ್ತಿದೆ ರಕ್ತಹೀನತೆ, ಮಹಿಳೆಯರೇ ಬಲಿಪಶು ಏಕೆ? -
March 08 Horoscope: ಯಾರ ಬಳಿಯಾದರು ಸಾಲ ಪಡೆಯುವ ಆಲೋಚನೆ ಮುಂದೂಡಿ! -
ನೀನೇ ನನ್ನ ಶಕ್ತಿ.. ನಿಮ್ಮ ಪ್ರಿಯತಮೆಗೆ ಕಳಿಸಿ ಈ ರೊಮ್ಯಾಂಟಿಕ್ ಶುಭಾಶಯಗಳು! ಆಕೆಯ ಮುಖದಲ್ಲಿ ನಗು ತರಿಸಿ -
ಕೊನೆಗೂ ಬಂತು ರಾಜಯೋಗ: ಈ ರಾಶಿಗಳಿಗೆ ನಸೀಬಲ್ಲೇ ಇಲ್ಲದ ಸುಖ-ಸಂಪತ್ತು ಪ್ರಾಪ್ತಿ! ಪ್ರೀತಿಯಲ್ಲಿ ದೊಡ್ಡ ಯಶಸ್ಸು -
ಎಂದಾದರೂ ಮೊಸರು ಪರೋಟ ತಿಂದಿದ್ದೀರಾ? ಒಮ್ಮೆ ಇದರ ರುಚಿ ನೋಡಿ.. ಹಿಟ್ಟು ಕಲಸುವಾಗ ಈ ಟ್ರಿಕ್ ಬಳಸಿ
Grahan 2026: ವರ್ಷದ ಮೊದಲ ಸೂರ್ಯ-ಚಂದ್ರ ಗ್ರಹಣ ಯಾವಾಗ? ಎಲ್ಲಿ ಗೋಚರಿಸುತ್ತವೆ, ಭಾರತದಲ್ಲಿ ನೋಡಬಹುದೇ?
2026ರ ಹೊಸ ವರ್ಷದ ಆಗಮನಕ್ಕೆ ಕೆಲವೇ ದಿನಗಳು ಬಾಕಿ ಇದೆ. 2026ರಲ್ಲಿ ಸಂಭವಿಸಲಿರುವ ಪ್ರಮುಖ ಖಗೋಳ ಘಟನೆಗಳ ಕುರಿತು ಕುತೂಹಲ ಹೆಚ್ಚಿದೆ. ಹೌದು, ಮುಂಬರುವ ವರ್ಷದಲ್ಲಿ ಯಾವ ಹಬ್ಬಗಳು ಬರುತ್ತವೆ ಮತ್ತು ಪ್ರಮುಖ ಘಟನೆಗಳ ಬಗ್ಗೆ ಜನರಲ್ಲಿ ನಿರೀಕ್ಷೆ ಹೆಚ್ಚಿದೆ. ಮುಖ್ಯವಾಗಿ, 2026ರ ಸೂರ್ಯಗ್ರಹಣ (Surya Grahan 2026) ಮತ್ತು ಚಂದ್ರಗ್ರಹಣಗಳು (Chandra Grahan 2026) ಯಾವಾಗ ಸಂಭವಿಸುತ್ತವೆ ಎಂಬ ಕುರಿತು ಜನರು ಆಸಕ್ತಿ ಹೊಂದಿದ್ದಾರೆ.
ಅದರಲ್ಲೂ ಭಾರತದಲ್ಲಿ ಗ್ರಹಣಗಳು ಗೋಚರಿಸಲಿವೆಯೇ ಎಂಬ ಪ್ರಶ್ನೆ ವ್ಯಾಪಕವಾಗಿದೆ. ಈ ಲೇಖನದಲ್ಲಿ 2026ರಲ್ಲಿ (New Year 2026) ಮೊದಲ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಗಳು (First Solar Lunar Eclipse) ಯಾವಾಗ ಸಂಭವಿಸುತ್ತವೆ ಮತ್ತು ಅವುಗಳನ್ನು ಎಲ್ಲಿ ವೀಕ್ಷಿಸಬಹುದು ಎಂಬ ಬಗ್ಗೆ ತಿಳಿಸಲಾಗಿದೆ. ಇದರ ಬಗ್ಗೆ ತಿಳಿದುಕೊಳ್ಳಲು ಜನರು ಕೂಡ ಕಾತರರಾಗಿದ್ದಾರೆ. 2026ರ ಹೊಸ ವರ್ಷದಲ್ಲಿನ ಈ ಖಗೋಳ ವಿದ್ಯಮಾನಗಳ (Surya Grahan and Chandra Grahan 2026) ಬಗ್ಗೆ ಇಲ್ಲಿದೆ ಮಾಹಿತಿ.

2026ರ ಮೊದಲ ಸೂರ್ಯಗ್ರಹಣ
ದ್ರಿಕ್ ಪಂಚಾಂಗದ ಪ್ರಕಾರ, 2026ರ ಮೊದಲ ಸೂರ್ಯಗ್ರಹಣವು 2026ರ ಫೆಬ್ರವರಿ 17ರ ಮಂಗಳವಾರದಂದು (February 17, 2026) ಸಂಭವಿಸಲಿದೆ. ಇದು ಉಂಗುರಾಕಾರದ ಸೂರ್ಯಗ್ರಹಣವಾಗಿದೆ. ಇದು ಫಾಲ್ಗುಣ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆಯಂದು ಸಂಭವಿಸಲಿದೆ. ಈ ಗ್ರಹಣದ ವಿಶೇಷತೆ ಏನೆಂದರೆ, ಆಕಾಶದಲ್ಲಿ ಪ್ರಕಾಶಮಾನವಾದ ಉಂಗುರದಂತಹ ಸುಂದರ ದೃಶ್ಯವು ಗೋಚರಿಸಲಿದೆ.
ಸೂರ್ಯಗ್ರಹಣ ಎಲ್ಲಿ ಗೋಚರಿಸಲಿದೆ?
ಫೆಬ್ರವರಿ 17, 2026ರಂದು ಸಂಭವಿಸುವ ಈ ಉಂಗುರಾಕಾರದ ಸೂರ್ಯಗ್ರಹಣವು ಪ್ರಪಂಚದ ಕೆಲವು ಆಯ್ದ ಪ್ರದೇಶಗಳಲ್ಲಿ ಮಾತ್ರ ಗೋಚರಿಸಲಿದೆ. ಇದು ಭಾರತದಲ್ಲಿ ಕಾಣಿಸುವುದಿಲ್ಲ. ಬದಲಾಗಿ, ಈ ಕೆಳಗಿನ ಪ್ರದೇಶಗಳಲ್ಲಿ ಗೋಚರಿಸಲಿದೆ.
• ಅಂಟಾರ್ಕ್ಟಿಕಾ
• ಆಗ್ನೇಯ ಆಫ್ರಿಕಾ
• ದಕ್ಷಿಣ ಅಮೆರಿಕದ ಕೆಲವು ಭಾಗಗಳು
• ಪೆಸಿಫಿಕ್
• ಹಿಂದೂ ಮಹಾಸಾಗರ
• ಅಟ್ಲಾಂಟಿಕ್ ಮಹಾಸಾಗರಗಳ ಕೆಲವು ಪ್ರದೇಶಗಳು
2026ರ ಮೊದಲ ಚಂದ್ರಗ್ರಹಣ
ಹೊಸ ವರ್ಷದ ಮೊದಲ ಚಂದ್ರಗ್ರಹಣವು 2026ರ ಮಾರ್ಚ್ 3ರಂದು (March 3, 2026) ಫಾಲ್ಗುಣ ಮಾಸದ ಹುಣ್ಣಿಮೆಯಂದು ಸಂಭವಿಸಲಿದೆ. ಈ ದಿನ ಹೋಳಿ ಹಬ್ಬವನ್ನೂ ಆಚರಿಸಲಾಗುತ್ತದೆ. ಇದು ಭಾಗಶಃ ಚಂದ್ರಗ್ರಹಣವಾಗಿದ್ದು, ಭಾರತದಿಂದಲೂ ಗೋಚರಿಸಲಿದೆ. ಆದರೆ, ಈ ಗ್ರಹಣದ ಅವಧಿ ಕೇವಲ 20 ನಿಮಿಷ ಮಾತ್ರ. ಇದು ಸಂಜೆ 6:26ಕ್ಕೆ ಪ್ರಾರಂಭವಾಗಿ ಸಂಜೆ 6:46ಕ್ಕೆ ಕೊನೆಗೊಳ್ಳುತ್ತದೆ.
ಚಂದ್ರಗ್ರಹಣ ಎಲ್ಲಿ ಗೋಚರಿಸಲಿದೆ?
ಈ ಭಾಗಶಃ ಚಂದ್ರಗ್ರಹಣವು ಭಾರತದ ಜೊತೆಗೆ ಕೆಲವು ಪ್ರದೇಶಗಳಲ್ಲಿ ಮಾತ್ರ ಗೋಚರಿಸಲಿದೆ. ಭಾರತದಲ್ಲಿ ಈ ಗ್ರಹಣವು ನೇರವಾಗಿ ಕಾಣಿಸುವುದರಿಂದ, ಅದರ ಸೂತಕ ಕಾಲವೂ ಅನ್ವಯವಾಗುತ್ತದೆ.
• ಏಷ್ಯಾ
• ಆಸ್ಟ್ರೇಲಿಯಾ
• ಉತ್ತರ ಅಮೆರಿಕ
• ದಕ್ಷಿಣ ಅಮೆರಿಕ
ಸಂಪೂರ್ಣ ಸೂರ್ಯಗ್ರಹಣ ಎಂದರೇನು?
ಸಂಪೂರ್ಣ ಸೂರ್ಯಗ್ರಹಣವು ಒಂದು ಅನನ್ಯ ಖಗೋಳ ಘಟನೆಯಾಗಿದ್ದು, ಇದರಲ್ಲಿ ಚಂದ್ರನು ಸೂರ್ಯನನ್ನು ಪೂರ್ಣವಾಗಿ ಮರೆಮಾಡುತ್ತದೆ. ಈ ಸಮಯದಲ್ಲಿ ಸೂರ್ಯ ಸಂಪೂರ್ಣವಾಗಿ ದೃಷ್ಟಿಯಿಂದ ಮರೆಯಾಗುತ್ತದೆ. ಇಂತಹ ಸಂದರ್ಭಗಳಲ್ಲಿ, ಸೂರ್ಯನ ಬೆಳಕು ಭೂಮಿಗೆ ತಲುಪದೆ ಹಗಲು ಹೊತ್ತಿನಲ್ಲೂ ಕತ್ತಲು ಆವರಿಸುತ್ತದೆ.
ಚಂದ್ರಗ್ರಹಣ ಹೇಗೆ ಉಂಟಾಗುತ್ತೆ?
ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳುವುದಿಲ್ಲ, ಗ್ರಹಣ ಸಂಭವಿಸುತ್ತದೆ, ಕೆಲವೊಮ್ಮೆ ಚಂದ್ರನ ಮೇಲ್ಮೈ ಬಣ್ಣ ಕೆಂಪಾಗಿ ಕೂಡ ಗೋಚರಿಸುವುದು. ಚಂದ್ರಗ್ರಹಣದಲ್ಲಿಯೂ ಪೂರ್ಣ ಚಂದ್ರಗಣ, ರಕ್ತ ಚಂದ್ರಗ್ರಹಣ ಅಂತೆಲ್ಲಾ ಇವೆ.
ಗ್ರಹಣದ ಸಮಯದಲ್ಲಿ ಏನು ಮಾಡಬೇಕು?
ಸೂರ್ಯಗ್ರಹಣದ ಸಮಯದಲ್ಲಿ ಮಂತ್ರ ಪಠಣ, ಪ್ರಾರ್ಥನೆ ಮತ್ತು ಧ್ಯಾನವು ಬಲವಾದ ಆಧ್ಯಾತ್ಮಿಕ ಫಲಿತಾಂಶಗಳನ್ನು ತರುತ್ತದೆ ಎಂದು ಹೇಳಲಾಗಿದೆ. ಗ್ರಹಣದ ನಂತರ ಅಗತ್ಯವಿರುವವರಿಗೆ ಆಹಾರ, ಬಟ್ಟೆ ಅಥವಾ ಇತರ ಅಗತ್ಯ ವಸ್ತುಗಳನ್ನು ದಾನ ಮಾಡುವುದು ಅತ್ಯಂತ ಶುಭವೆಂದು ಪರಿಗಣಿಸಲಾಗುತ್ತದೆ. ಗ್ರಹಣ ಮುಗಿದ ನಂತರ ಸ್ನಾನ ಮಾಡಿ ಮನೆಯನ್ನು ಸ್ವಚ್ಛಗೊಳಿಸುವುದರಿಂದ ಸಕಾರಾತ್ಮಕತೆ ಮತ್ತು ಅದೃಷ್ಟ ಬರುತ್ತದೆ ಎಂದು ನಂಬಿಕೆ ಇದೆ.



Click it and Unblock the Notifications












