Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವರ್ಷದ ಮೊದಲ ಚಂದ್ರಗ್ರಹಣ ಯಾವಾಗ? ಭಾರತ ಕಾಲಮಾನ ಪ್ರಕಾರ ಯಾವಾಗ ಸಂಭವಿಸಲಿದೆ?
ವೈದಿಕ ದೃಷ್ಟಿಯಿಂದ ಗ್ರಹಣಕ್ಕೆ ತುಂಬಾನೇ ಮಹತ್ವವಿದೆ, ವರ್ಷದಲ್ಲಿ ಒಟ್ಟು ನಾಲ್ಕು ಗ್ರಹಣ, ಎರಡು ಸೂರ್ಯ ಗ್ರಹಣ, ಎರಡು ಚಂದ್ರಗ್ರಹಣ. ವೈದಿಕ ದೃಷ್ಟಿಯಿಂದ ಯಾವುದೇ ಗ್ರಹಣವಾಗಲಿ ಅದನ್ನು ಶುಭ ಎಂದು ಪರಿಗಣಿಸಲಾಗುವುದಿಲ್ಲ. ಈ ವರ್ಷ ವರ್ಷದ ಮೊದಲ ಚಂದ್ರಗ್ರಹಣ ಯಾವಾಗ? ಈ ಗ್ರಹಣದ ಪ್ರಭಾವ ಭಾರತದಲ್ಲಿ ಇದೆಯೇ ಎಂಬುವುದು ನೋಡೋಣ ಬನ್ನಿ:

ಚಂದ್ರಗ್ರಹಣ ಹೇಗೆ ಉಂಟಾಗುತ್ತೆ?
ಸೂರ್ಯ ಮತ್ತು ಚಂದ್ರನ ನಡುವೆ ಭೂಮಿ ಬಂದಾಗ ಸೂರ್ಯನ ಬೆಳಕು ಚಂದ್ರನ ಮೇಲೆ ಬೀಳುವುದಿಲ್ಲ, ಗ್ರಹಣ ಸಂಭವಿಸುತ್ತದೆ, ಕೆಲವೊಮ್ಮೆ ಚಂದ್ರನ ಮೇಲ್ಮೈ ಬಣ್ಣ ಕೆಂಪಾಗಿ ಕೂಡ ಗೋಚರಿಸುವುದು. ಚಂದ್ರಗ್ರಹಣದಲ್ಲಿಯೂ ಪೂರ್ಣ ಚಂದ್ರಗಣ, ರಕ್ತ ಚಂದ್ರಗ್ರಹಣ ಅಂತೆಲ್ಲಾ ಇವೆ.
ಸಿಂಹ ರಾಶಿ, ಉತ್ತರ ಫಲ್ಗುಣಿ ನಕ್ಷತ್ರದಲ್ಲಿ ಚಂದ್ರಗ್ರಹಣ
ಈ ವರ್ಷದ ಮೊದಲ ಚಂದ್ರಗ್ರಹಣ ಸಿಂಹ ರಾಶಿ, ಉತ್ತರ ಫ್ಲಗುಣಿ ನಕ್ಷತ್ರದಲ್ಲಿ ಸಂಭವಿಸಲಿದೆ. ಈ ಚಂದ್ರಗ್ರಹಣ ಮಾರ್ಚ್ 14ರಂದು ನಡೆಯಲಿದೆ.
ಗ್ರಹಣದ ಸಮಯ: ಬೆಳಗ್ಗೆ 10:41ರಿಂದ ಪ್ರಾರಂಭವಾಗಿ ಮಧ್ಯಾಹ್ನ 2:18ಕ್ಕೆ ಅಂತ್ಯವಾಗುತ್ತೆ
ಗ್ರಹಣದ ಒಟ್ಟು ಅವಧಿ 3 ಗಂಟೆ 37 ನಿಮಿಷ
ಭಾರತಕ್ಕಿಲ್ಲ ಸೂತಕ
ಗ್ರಹಣವು ಭಾರತದ ಕಾಲಮಾನ ಪ್ರಕಾರ ಹಗಲಿನಲ್ಲಿ ಇರಲಿದೆ, ಹೀಗಾಗಿ ಭಾರತದಲ್ಲಿ ಗ್ರಹಣದ ಸೂತಕ ಇರಲ್ಲ, ಅಲ್ಲದೆ ಭಾರತದಲ್ಲಿ ವರ್ಷದ ಮೊದಲ ಚಂದ್ರಗ್ರಹಣ ಗೋಚರಿಸುವುದೂ ಇಲ್ಲ.
ಈ ಚಂದ್ರಗ್ರಹಣವು ಆಸ್ಟ್ರೇಲಿಯಾ, ಯುರೋಪ್, ಆಫ್ರಿಕಾ,ಪೆಸೆಪಿಕ್,ಅಟ್ಲಾಂಟಿಕ್, ಆರ್ಕ್ಟಿಕ್ ಮಹಾಸಾಗರ, ಅಮೆರಿಕಾ, ಪೂರ್ವ ಏಷ್ಯಾ ಈ ಭಾಗಗಳಲ್ಲಿ ಕಂಡು ಬರಲಿದೆ.
ಜ್ಯೋತಿಷ್ಯ ಪ್ರಕಾರ ಈ ಗ್ರಹಣ ಹೇಗೆ ಪ್ರಭಾವ ಬೀರಲಿದೆ?
ಈ ಗ್ರಹಣ ಸಂಭವಿಸುವಾಗ ಚಮದ್ರನು ಸಿಂಹ ರಾಶಿಯಲ್ಲಿರುತ್ತಾನೆ, ಕೇತು ಚಂದ್ರನ 2ನೇ ಮನೆಯಲ್ಲಿ ಇರಲಿದೆ. ರಾಹು, ಬುಧ, ಶುಕ್ರ ಚಂದ್ರನ 8ನೇ ಮನೆಯಲ್ಲಿಇರಲಿದೆ, ಗುರು 10ನೇ ಮನೆಯಲಗಲಿ ಇರಲಿದೆ, ಹೀಗಾಗಿ ಈ ಗ್ರಹಣ ಹೆಚ್ಚಿನ ಮಾನಸಿಕ ಒತ್ತಡ ಉಂಟು ಮಾಡಲಿದೆ.
ಗ್ರಹಣದ ವೇಳೆ ಏನು ಮಾಡಬೇಕು, ಏನು ಮಾಡಬಾರದು?
- ಗ್ರಹಣದ ವೇಳೆಯಲ್ಲಿ ಗರ್ಭಿಣಿಯರು, ಮಕ್ಕಳು, ರೋಗಿಗಳನ್ನು ಬಿಟ್ಟು ಉಳಿದವರು ಆಹಾರ ಸೇವಿಸಬಾರದು ಎಂಬ ನಂಬಿಕೆ ಇದೆ
- ಈ ಅವಧಿಯಲ್ಲಿ ದೂರ ಪ್ರಯಾಣ ಮಾಡಬೇಡಿ, ಗಾಡಿ ಚಲಾಯಿಸುವಾಗ ಜಾಗ್ರತೆವಹಿಸಿ
- ಗ್ರಹಣದ ವೇಳೆಯಲ್ಲಿ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ
- ಗರ್ಭಿಣಿಯರು ಹೆಚ್ಚಿನ ಜಾಗ್ರತೆವಹಿಸಬೇಕು
- ಗ್ರಹಣದ ಸಮಯದಲ್ಲಿ ನಿದ್ರಿಸಬಾರದು
- ಗ್ರಹಣದ ನಂತರ ಸ್ನಾನ ಮಾಡಿ ದಾನ ಧರ್ಮ ಮಾಡಿದರೆ ಒಳ್ಳೆಯದು.
Disclaimer: ಈ ಲೇಖನದಲ್ಲಿ ಉಲ್ಲೇಖಿಸಲಾದ ಹರಳುಗಳ ಪ್ರಯೋಜನಗಳು ಸಾಂಪ್ರದಾಯಿಕ ನಂಬಿಕೆಗಳು ಮತ್ತು ಜ್ಯೋತಿಷ್ಯ ಪದ್ಧತಿಗಳನ್ನು ಆಧರಿಸಿವೆ. ಇದರ ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಜ್ಯೋತಿಷ್ಯ ಉದ್ದೇಶಗಳಿಗಾಗಿ ಯಾವುದೇ ರತ್ನವನ್ನು ಧರಿಸುವ ಮೊದಲು ಪ್ರಮಾಣೀಕೃತ ಜ್ಯೋತಿಷಿ ಅಥವಾ ಹರಳು ತಜ್ಞರನ್ನು ಸಂಪರ್ಕಿಸಲು ನಾವು ಶಿಫಾರಸು ಮಾಡುತ್ತೇವೆ. ಈ ವಿಷಯವು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಕಟಿಸಲಾಗಿದೆ ವೃತ್ತಿಪರ ಸಲಹೆಗೆ ಪರ್ಯಾಯವಾಗಿ ಪರಿಗಣಿಸಬಾರದು.



Click it and Unblock the Notifications