Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ದುಬಾರಿಯಾಗುತ್ತಿದೆ ಚಿನ್ನದ ಬೆಲೆ: ಹಳದಿ ಲೋಹದ ಬೆಲೆ ಹೆಚ್ಚಾಗಲು 5 ಪ್ರಮುಖ ಕಾರಣಗಳು
ಭಾರತದಲ್ಲಿ ಹಳದಿ ಲೋಹದ ಬೆಲೆ ತುಂಬಾನೇ ದುಬಾರಿಯಾಗಿದೆ. ಜನರು ಇಷ್ಟು ದುಬಾರಿಯಾದರೆ ಮಕ್ಕಳ ಮದುವೆ ಚಿನ್ನ ಖರೀದಿಸುವುದು ಹೇಗೆ? ಎಂದು ಯೋಚಿಸುತ್ತಿದ್ದಾರೆ. 1 ಗ್ರಾಂ ಚಿನ್ನಕ್ಕೆ 7 ಸಾವಿರ ದಾಟಿದೆ. ಹೀಗಿರುವಾಗ 10 ಗ್ರಾಂ ಚಿನ್ನ ಖರೀದಿಸಲು 70 ಸಾವಿರಕ್ಕೂ + ಮೇಕಿಂಗ್ ಚಾರ್ಜ್ ಎಲ್ಲಾ ಸೇರಿದಾಗ ಚಿನ್ನ ತುಂಬಾನೇ ದುಬಾರಿಯಾಗಿದೆ.

ಚಿನ್ನದ ಮೇಲೆ ಈ ರೀತಿ ದುಬಾರಿಯಾಗಲು 5 ಪ್ರಮುಖ ಕಾರಣಗಳೆಂದರೆ
ಹಣದುಬ್ಬರ: ಕರೆನ್ಸಿಗೆ ನೋಡಿದರೆ ಚಿನ್ನದ ಬೆಲೆ ಹೆಚ್ಚಾಗುವುದು ಅಥವಾ ಸ್ವಲ್ಪವಷ್ಟೇ ಕಡಿಮೆಯಾಗುವುದು, ಅದೇ ಕರೆನ್ಸಿ ಹೂಡಿಕೆಯಾದರೆ (ಷೇರು ಮಾರುಕಟ್ಟೆ ಮುಂತಾದವು) ಕೆಲವೊಮ್ಮೆ ಬಯಸಿದಷ್ಟು ಲಾಭ ಗಳಿಸಲು ಸಾಧ್ಯವಾಗಲ್ಲ, ಹೀಗಾಗಿ ಜನರು ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುತ್ತಾರೆ. ಹೀಗಾಗಿ ಚಿನ್ನಕ್ಕೆ ಬೇಡಿಕೆ ಹೆಚ್ಚಾಗಿದೆ, ಇದರಿಂದಾಗಿ ಚಿನ್ನದ ಬೆಲೆ ದುಬಾರಿಯಾಗಿದೆ.
ಚಿನ್ನ ಹಣದುಬ್ಬರಕ್ಕೆ ತಡೆ ಎಂದು ಪರಿಗಣಿಸಲಾಗಿದೆ. ಹಣದುಬ್ಬರವಾದಾಗ ಶೇ.1ರಷ್ಟು ಹೆಚ್ಚಳಕ್ಕೆ ಚಿನ್ನದ ಬೆಲೆ ಶೇ. 2.6ರಷ್ಟು ಅಧಿಕವಾಗುವುದು, ಹೀಗಾಗಿ ಹಣದುಬ್ಬರ ಸಮಯದಲ್ಲಿ ಚಿನ್ನದ ಸುರಕ್ಷಿತ ಎಂದು ಚಿನ್ನದ ಮೇಲೆ ಹೂಡಿಕೆ ಮಾಡಲಾಗುವುದು, ಇದು ಚಿನ್ನದ ಬೆಲೆ ಹೆಚ್ಚಾಗಲು ಪ್ರಮುಖ ಕಾರಣವಾಗಿದೆ.
ಸರ್ಕಾರದ ಚಿನ್ನದ ನಿಕ್ಷೇಪಗಳು: ಎಲ್ಲಾ ಪ್ರಮುಖ ದೇಶಗಳ ಸರ್ಕಾರವು ಹಣಕಾಸು ಹಾಗೂ ಚಿನ್ನದ ನಿಕ್ಷೇಪಗಳ ಮೇಲೆ ಹಿಡಿತವನ್ನು ಹೊಂದಿದೆ. ಯು ಎಸ್‌ನ US Federal Reserve ಹಾಗೂ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇದಕ್ಕೆ ಪ್ರಮುಖ ಉದಾಹರಣೆ. ರಿಸರ್ವ್ ಬ್ಯಾಂಕ್ ಇಂಡಿಯಾ ಹೆಚ್ಚು ಚಿನ್ನವನ್ನು ಸಂಗ್ರಹಿಸಿದಾಗ ಚಿನ್ನದ ಬೆಲೆ ಕೂಡ ಹೆಚ್ಚಾಗುವುದು, ಏಕೆಂದರೆ ಹೀಗಾದಾಗ ಚಿನ್ನದ ಸಪ್ಲೈ ಕಡಿಮೆಯಾಗುವುದು.
ಚಿನ್ನದ ಮಾರುಕಟ್ಟೆ: ಭಾರತೀಯರಿಗೆ ಚಿನ್ನವೆಂದರೆ ತುಂಬಾನೇ ಪ್ರೀತಿ, ಹುಟ್ಟುಹಬ್ಬ, ಸೀಮಂತ, ಮದುವೆ ಹೀಗೆ ಎಲ್ಲಾ ಸಂದರ್ಭಗಳಲ್ಲಿ ಚಿನ್ನವನ್ನು ಖರೀದಿಸಲಾಗುವುದು. ಬಡವರಿಂದ ಹಿಡಿದು ಶ್ರೀಮಂತರವರೆಗೆ ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಬಡವರು ಅಲ್ಪ-ಸ್ವಲ್ಪ ಹಣವನ್ನು ಕೂಡಿಟ್ಟು ಕಿವಯೋಲೆ, ಮೂಗುತಿ ಹೀಗೆ ಚಿನ್ನದ ಆಭರಣ ಖರೀದಿಸುತ್ತಾರೆ. ಚಿನ್ನ ಮಹಿಳೆಯರಿಗೆ ಮಾತ್ರವಲ್ಲ ಪುರುಷರಿಗೂ ಪ್ರಿಯವಾದ ಆಭರಣ. ಆದ್ದರಿಂದ ಚಿನ್ನಕ್ಕೆ ಬೇಡಿಕೆ ಕುಗ್ಗುವುದೇ ಇಲ್ಲ, ಹೀಗಾಗಿ ಚಿನ್ನದ ಬೆಲೆ ಹೆಚ್ಚಾಗುವುದು.
ಆಮದು ದುಬಾರಿಯಾಗಿರುವುದು
ಭಾರತವು ಚಿನ್ನವನ್ನು ಹೊರಗಡೆಯಿಂದಲೂ ತರಿಸುತ್ತದೆ, ಅಲ್ಲದೆ ತುಂಬಾ ಜನ ಚಿನ್ನದ ಮೇಲೆ ಹೂಡಿಕೆ ಮಾಡುತ್ತಾರೆ. ಚಿನ್ನದ ಮೇಲೆ ಹೂಡಿಕೆ ಮಾಡಿದರೆ ತುಂಬಾ ಸುರಕ್ಷಿತ ಹಾಗಾಗಿ ಇದನ್ನು ಖರೀದಿಸಲು ಹೆಚ್ಚಿನವರು ಆಸಕ್ತಿ ತೋರಿಸುತ್ತಾರೆ. ಈ ಕಾರಣದಿಂದಲೂ ಚಿನ್ನದ ಬೆಲೆ ಹೆಚ್ಚಾಗುವುದು.
ರೇಟ್ ಆಫ್ ಇಂಟೆರೆಸ್ಟ್( ಬಡ್ಡಿ)
ಪಡೆದ ಹಣಕ್ಕೆ ಬಡ್ಡಿ ಹೆಚ್ಚಾದರೆ ಜನರು ಚಿನ್ನವನ್ನು ಮಾರಲು ಬಯಸುತ್ತಾರೆ. ಅದೇ ಇಂಟರೆಸ್ಟ್ ಕಡಿಮೆಯಾದರೆ ಜನರ ಕೈಯಲ್ಲಿ ಹಣ ಉಳಿತಾಯವಾಗುವುದು, ಆವಾಗ ಚಿನ್ನದ ಮೇಲೆ ಹೂಡಿಕೆ ಮಾಡಲು ಬಯಸುತ್ತಾರೆ. ಇದರಿಂದ ಕೂಡ ಚಿನ್ನದ ಬೆಲೆ ಅಧಿಕವಾಗುವುದು.
ಚಿನ್ನದ ಹೂಡಿಕೆ
ಕೆಲವರು ಆಭರಣದ ರೂಪದಲ್ಲಿ ಚಿನ್ನದಲ್ಲಿ ಹೂಡಿಕೆ ಮಾಡಿದರೆ ಇನ್ನು ಕೆಲವರು ಚಿನ್ನದ ಬಾರ್ ಅಥವಾ ನಾಣ್ಯಗಳನ್ನು ಖರೀದಿಸಿ ಹೂಡಿಕೆ ಮಾಡುತ್ತಾರೆ. ಆಭರಣಗಳನ್ನು ಮಾಡಿದರೆ ಮೇಕಿಂಗ್ ಚಾರ್ಜ್ ಬೀಳುವುದು ಅಲ್ಲದೆ ಹಿಂತಿರುಗಿಸುವಾಗ ಅದರ ಬೆಲೆ ಕಳೆಯಲಾಗುದು. ಹೂಡಿಕೆಗೆ ನಾಣ್ಯ ಅಥವಾ ಬಾರ್ ತುಂಬಾ ಒಳ್ಳೆಯದು, ಧರಿಸಲು ಅವಶ್ಯಕ ಆಭರಣಗಳನ್ನು ನಂಯತರ ನಾಣ್ಯಗಳನ್ನು ಮಾಡುವುದು ಹೂಡಿಕೆಯ ದೃಷ್ಟಿಯಿಂದ ಒಳ್ಳೆಯದು.



Click it and Unblock the Notifications











