Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ಈ ಬಾರಿ ನವರಾತ್ರಿಗೆ ಪಲ್ಲಕ್ಕಿಯಲ್ಲಿ ಬರ್ತಾ ಇದ್ದಾಳೆ ದುರ್ಗೆ: ಈ ವಾಹನ ಏನನ್ನು ಸೂಚಿಸುತ್ತದೆ?
2024ರಲ್ಲಿ ನವರಾತ್ರಿ ಸಂಭ್ರಮ ಅಕ್ಟೋಬರ್ 3ರಿಂದ ಶುರುವಾಗಲಿದೆ. ವರ್ಷದಲ್ಲಿ ನಾಲ್ಕು ನವರಾತ್ರಿ ಬರುತ್ತದೆ, ಅದರಲ್ಲಿ ನಾವು ಶಾರದೀಯ ನವರಾತ್ರಿಯನ್ನು ವಿಜೃಂಭಣೆಯಿಂದ ಆಚರಿಸಲಾಗುವುದು, ಅದರಲ್ಲಿಯೂ ನಮ್ಮ ಕರ್ನಾಟಕದಲ್ಲಿ ನವರಾತ್ರಿಯ ಬಳಿಕ ನಾಡಹಬ್ಬ ದಸರಾ ಸಂಭ್ರಮ.
ನವರಾತ್ರಿಯಲ್ಲಿ ನವ ದುರ್ಗೆಯರನ್ನು ಆರಾಧಿಸಲಾಗುವುದು. ಈ ನವರಾತ್ರಿ ಹಬ್ಬವನ್ನು ದೇಶದೆಲ್ಲಡೆ ಆಚರಿಸಲಾಗುವುದು. ನವರಾತ್ರಿ ಹಬ್ಬವನ್ನು ಅಕ್ಟೋಬರ್ 3ರಿಂದ ಅಕ್ಟೋಬರ್ 11ರವರೆಗೆ ನಡೆಯಲಿದೆ, ಅಕ್ಟೋಬರ್ 12ಕ್ಕೆ ದಸರಾ.

ಪ್ರತಿವರ್ಷ ನವರಾತ್ರಿಯ ಸಮಯದಲ್ಲಿ ದುರ್ಗೆ ಯಾವ ವಾಹನದಲ್ಲಿ ಬರುತ್ತಾಳೆ ಎಂದು ನೋಡುತ್ತಾರೆ. ದೇವಿ ಬರುವ ವಾಹನಕ್ಕೆ ತುಂಬಾನೇ ಮಹತ್ವವಿದೆ, ಏಕೆಂದರೆ ದೇವಿ ಯಾವ ವಾಹನದಲ್ಲಿ ಬರ್ತಾಳೆ ಅದರಂತೆ ವರ್ಷಫಲ ಇರುತ್ತದೆ ಎಂದು ನಂಬಲಾಗುವುದು, ಪ್ರತಿ ನವರಾತ್ರಿಗೂ ದೇವಿ ಬೇರೆ-ಬೇರೆ ವಾಹನದಲ್ಲಿ ಬರ್ತಾಳೆ, ಯಾವ ವಾಹನದಲ್ಲಿ ಬಂದರೆ ಏನರ್ಥ, ಈ ಬಾರಿ ದೇವಿ ಯಾವ ವಾಹನದಲ್ಲಿ ಬರ್ತಾ ಇದ್ದಾಳೆ ಎಂದು ನೋಡೋಣ ಬನ್ನಿ:
ಈ ವರ್ಷ ಪಲ್ಲಕ್ಕಿಯಲ್ಲಿ ಬರ್ತಾ ಇದ್ದಾಳೆ ದೇವಿ
ಈ ಬಾರಿ ದುರ್ಗೆ ಪಲ್ಲಕ್ಕಿಯಲ್ಲಿ ಬರ್ತಾ ಇದ್ದಾಳೆ ದೇವಿ. ದೇವಿ ಪಲ್ಲಕ್ಕಿಯಲ್ಲಿ ಬಂದರೆ ಅದು ಸಾಂಕ್ರಾಮಿಕ ರೋಗ ಬರಲಿದೆ ಎಂಬುವುದನ್ನು ಸೂಚಿಸುತ್ತದೆ ಎಂದು ಹೇಳಲಾಗುವುದು. ದೇವಿ ಪಲ್ಲಕ್ಕಿಯಲ್ಲಿ ಬಂದರೆ ನೈಸರ್ಗಿಕ ವಿಪತ್ತು ಹೆಚ್ಚಾಗುವುದು, ದೇಶದಲ್ಲಿ ಹಿಂಸಾಚಾರ ಉಂಟಾಗಬಹುದು, ರೋಗ ರುಜಿನಗಳಿಂದ ಮನುಷ್ಯರು ನರಳುತ್ತಾರೆ ಎಂದು ಹೇಳಲಾಗುವುದು.
ದೇವಿ ಯಾವ ವಾಹನದಲ್ಲಿ ಬರ್ತಾಳೆ ಎಂದು ಹೇಗೆ ನಿರ್ಧರಿಸಲಾಗುವುದು
ನವರಾತ್ರಿ ಯಾವ ದಿನ ಶುರುವಾಗಲಿದೆ ಅದರಂತೆ ದೇವಿಯ ವಾಹನವನ್ನು ಹೇಳಲಾಗುವುದು, ಈ ಬಾರಿ ನವರಾತ್ರಿ ಗುರುವಾರ ಶುರುವಾಗಲಿದೆ, ಶುಕ್ರವಾರ ಅಂತ್ಯವಾಗಲಿದೆ.
ಗುರುವಾರ ನವರಾತ್ರಿ ಶುರುವಾಗುವುದರಿಂದ ಈ ಬಾರಿ ದುರ್ಗೆ ಪಲ್ಲಕ್ಕಿಯಲ್ಲಿ ಬರ್ತಾಳೆ.
ಯಾವ ದಿನ ಶುರುವಾದರೆ ಯಾವ ವಾಹನ:
ಸೋಮವಾರ, ಭಾನುವಾರ ನವರಾತ್ರಿ ಶುರುವಾದರೆ ದೇವಿ ಆನೆ ಮೇಲೇರಿ ಬರ್ತಾಳೆ
ಶನಿವಾರ, ಮಂಗಳವಾರ ಶುರುವಾದರೆ ಕುದುರೆ ಮೇಲೇರಿ ಬರ್ತಾಳೆ
ಗುರುವಾರ ನವರಾತ್ರಿ ಶುರುವಾದರೆ ದೇವಿ ಪಲ್ಲಕ್ಕಿಯಲ್ಲಿ ಬರ್ತಾಳೆ
ಬುಧವಾರ ನವರಾತ್ರಿ ಶುರುವಾದರೆ ದೋಣಿಯಲ್ಲಿ ಬರ್ತಾಳೆ.
ಯಾವ ವಾಹನದಲ್ಲಿ ಬಂದರೆ ಶುಭ, ಯಾವ ವಾಹನ ಶುಭವಲ್ಲ
ದುರ್ಗೆ ಆನೆ ಮೇಲೇರಿ ಬಂದರೆ: ದೇವಿ ಆನೆಯ ಮೇಲೇರಿ ಬಂದರೆ ಮಳೆ-ಬೆಳೆ ಚೆನ್ನಾಗಿರುತ್ತದೆ, ದೇಶದಲ್ಲಿ ಸಂಪತ್ತು-ಸಮೃದ್ಧಿ ಹೆಚ್ಚಾಗಲಿದೆ, ಜನರು ನೆಮ್ಮದಿಯ ಬದುಕನ್ನು ನಡೆಸುತ್ತಾರೆ, ಜನರು ಪರಸ್ಪರ ಪ್ರೀತಿ- ವಿಶ್ವಾಸದಿಂದ ವರ್ತಿಸುತ್ತಾರೆ.
ದೋಣಿ ಮೇಲೇರಿ ಬಂದರೆ: ದುರ್ಗೆ ದೋಣಿಯಲ್ಲಿ ಬಂದರೆ ಕೂಡ ಶುಭ ಎಂದು ಪರಿಗಣಿಸಲಾಗುವುದು. ದೋಣಿಯಲ್ಲಿ ಬಂದರೆ ದೇಶದಲ್ಲಿ ಮಳೆಗೆ ಅಭಾವ ಇರಲ್ಲ, ಬೆಳೆಗಳು ಚೆನ್ನಾಗಿ ಬೆಳೆಯುತ್ತದೆ , ದೇಶದ ಸಂಪತ್ತು ವೃದ್ಧಿಸಲಿದೆ, ಈ ವರ್ಷ ತುಂಬಾ ಚೆನ್ನಾಗಿರುತ್ತದೆ ಎಂದು ಹೇಳಲಾಗುವುದು.
ಕುದುರೆ ಮತ್ತು ಪಲ್ಲಕ್ಕಿ ಶುಭವಲ್ಲ
ಅದೇ ದೇವಿ ಕುದುರೆ ಮತ್ತು ಪಲ್ಲಕ್ಕಿಯಲ್ಲಿ ಬಂದರೆ ಶುಭವಲ್ಲ ಎಂದು ಹೇಳಲಾಗುವುದು, ಈ ವಾಹನಗಳಲ್ಲಿ ದುರ್ಗೆ ಬಂದರೆ ಯುದ್ಧದ ಭೀತಿ ಇರುತ್ತದೆ, ಸಾಂಕ್ರಾಮಿಕ ರೋಗಗಳು ಕಾಡುವುದು, ದೇಶದಲ್ಲಿ ಗಲಭೆ ಹಲವು ಸವಾಲುಗಳು ಎದುರಾಗುವುದು ಎಂದು ಹೇಳಲಾಗುವುದು.
ಧ್ಯಾನ ಮಂತ್ರ
ಓಂ ಜಾತಾ ಜತ್ ಸಮ್ಯುಕ್ತಮರ್ಧೇಂದು ಕೃತಿ ಲಕ್ಷಣಮ್
ಈ ಮಂತ್ರ ಪಠಿಸಿ



Click it and Unblock the Notifications