Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಗಳಿಗೆ ಹೆಸರಿಡಲು ಶ್ರೀಕೃಷ್ಣನಿಗೆ ಸಂಬಂಧಿಸಿದ ಮುದ್ದಾದ ಹೆಸರುಗಳಿವು
ನೀವು ಶ್ರೀಕೃಷ್ಣನ ಪರಮ ಭಕ್ತೆಯಾಗಿದ್ದು ನಿಮಗೆ ಜನಿಸಿರುವ ಮುದ್ದಾದ ಹೆಣ್ಣು ಮಗುವಿಗೆ ಕೃಷ್ಣನಿಗೆ ಸಂಬಂಧಿಸಿದ ಹೆಸರನ್ನಿಡಬೇಕೆಂದು ನೀವು ಯೋಚಿಸುತ್ತಿದ್ದರೆ ನಿಮ್ಮ ಮಗುವಿಗೆ ಈ ಹೆಸರನ್ನು ಇಡಬಹುದು ನೋಡಿ:

ಅಚು
ಅರ್ಥ: ಬುದ್ಧಿವಂತಿಕೆ, ನಾಶ ಪಡಿಸಲು ಸಾಧ್ಯವಾಗದೇ ಇರುವಂಥದ್ದು
ಗೋಪಿ
ಹಸು-ಕರುವನ್ನು ಇಷ್ಟಪಡುವವಳು
ಕಾನು
ಕೃಷ್ಣನ ಹೆಸರು, ಗುಡುಗಿನ ದೇವರು
ಕೇಸು: ಕೃಷ್ಣನ ಹೆಸರು
ಮೀರಾ: ಕೃಷ್ಣ ಭಕ್ತೆ
ಮೋಹಿ: ಅತ್ಯಾಕರ್ಷಕ
ವೇಣು: ಸರಸ್ವತಿ, ಕೃಷ್ಣ ಮತ್ತೊಂದು ಹೆಸರು
ವ್ರಜ್: ಕೃಷ್ಣ ಜೀವಿಸಿದ ಸ್ಥಳ
ಅಮೋಹಾ: ರಾಧೆಯ ಮತ್ತೊಂದು ಹೆಸರು
ಬನ್ಸಿ: ಕೃಷ್ಣ ಕೊಳಲು
ಬನ್ಸೈ: ಕೊಳಲು
ದ್ವಿತಿ: ಎರಡು, ಶ್ರೀಕೃಷ್ಣನ ಮತ್ತೊಂದು ಹೆಸರು
ಕಾನ್ವಿ: ಕೃಷ್ಣನ ಕೊಳಲು ಹೆಸರು
ಕೇಶ್ವಿ: ಕೃಷ್ಣ, ಸುಂದರ ಕೂದಲಿನವಳು
ಕಿಸಾವ: ಶ್ರೀಕೃಷ್ಣನ ಮತ್ತೊಂದು ಹೆಸರು, ಪ್ರೀತಿ
ಕ್ರಿಶು: ಅತ್ಯಂತ ಪ್ರಿಯವಾದ, ಶ್ರೀಕೃಷ್ಣ
ಮೀರಾ: ಶ್ರೀಕೃಷ್ಣನ ಭಕ್ತೆ
ಮಿಶಾ: ನಗು
ಮೃದು: ಮೃದುವಾದ ಮನಸ್ಸಿನವಳು
ನಂದು: ವಿಶೇಷವಾದದ್ದು
ನಿಹಾರ್: ಶ್ರೀಕೃಷ್ಣ, ಮಂಜು
ರಾಧೆ, ರಾಧಾ: ಶ್ರೀಕೃಷ್ಣನ ಭಕ್ತೆ
ಸಾಕೇತ್: ಶ್ರೀಕೃಷ್ಣ, ಸ್ವರ್ಗ
ವಂಶಿ: ಶ್ರೀಕೃಷ್ಣ ಕೊಳಲು
ದರ್ಶಿ: ದೃಷ್ಟಿ
ದೆಮಿರಾ: ಕೃಷ್ಣನ ಭಕ್ತೆ
ದೇವಿಕಾ: ದೇವತೆ
ದ್ಯುತಿ: ಖುಷಿಯಾಗಿರುವವಳು, ಶ್ರೀಕೃಷ್ಣ
ದ್ವಿತಿ: ಕೃಷ್ಣನ ಮತ್ತೊಂದು ಹೆಸರು
ಕನ್ಶಿ: ಶ್ರೀಕೃಷ್ಣನಂತೆ, ನಿಧಿ
ಶ್ರೀ ಕೃಷ್ಣ ಏಕೆ ಆರಾಧಿಸಲಾಗುವುದು?
ಶ್ರೀ ಕೃಷ್ಣನನ್ನು ವಿಷ್ಣುವಿನ 8ನೇ ಅವತಾರ ಎಂದು ಹೇಳಲಾಗುವುದು. ದುಷ್ಟರ ನಾಶ, ಶಿಷ್ಟರ ಸಂರಕ್ಷಣೆಗೆ ಶ್ರೀವಿಷ್ಣು ಕೃಷ್ಣ ಅವತಾರ ಎತ್ತಿ ಭೂಮಿಗೆ ಬಂದಿದ್ದಾನೆ ಎಂದು ಹೇಳಲಾಗುವುದು. ಶ್ರೀ ಕೃಷ್ಣನ ಆರಾಧನೆ ಮಾಡುವುದರಿಂದ ಮನಸ್ಸಿಗೆ ಚೈತನ್ಯ ದೊರೆಯಲಿದೆ. ನಮ್ಮಲ್ಲಿರುವ ಗೊಂದಲಗಳು ದೂರಾಗುವುದು, ಬದುಕನ್ನು ಒಳ್ಳೆಯ ರೀತಿ ನಡೆಸಿಕೊಂಡು ಹೋಗುವಂತಾಗುವುದು.
ಶ್ರೀ ಕೃಷ್ಣನನ್ನು ಹೇಗೆ ಆರಾಧಿಸಲಾಗುವುದು?
ಶ್ರೀಕೃಷ್ಣನ ಎರಡು ರೂಪವನ್ನು ಆರಾಧಿಸಲಾಗುವುದು. ಒಂದು ಶ್ರೀಕೃಷ್ಣನ ಮಗುವಿನ ರೂಪವನ್ನು ಆರಾಧಿಸಲಾಗುವುದು, ಮತ್ತೊಂದು ಗೀತೋಪದೇಶ ನೀಡಿರುವ ಶ್ರೀಕೃಷ್ಣ ಮೂರ್ತಿಯನ್ನು ಆರಾಧಿಸಲಾಗುವುದು.
ಶ್ರೀಕೃಷ್ಣ ನೀಡಿರುವ 18 ಗೀತೋಪದೇಶಗಳು
* ಧರ್ಮವೇ ದೊಡ್ಡದು
* ಸುಜ್ಞಾನದಿಂದಲೇ ಪರಿಹಾರ
* ನಿಸ್ವಾರ್ಥದಿಂದ ಬೆಳವಣಿಗೆ
* ಧರ್ಮಸಂಸ್ಥಾಪನೆಗೆ ಅವತಾರ
* ಫಲದಾಸೆ ಇಲ್ಲದೆ ಕರ್ಮ ಮಾಡು
* ಧ್ಯಾನದಿಂದ ಇಂದ್ರೀಯಗಳನ್ನು ಗೆಲ್ಲಬೇಕು
* ಪ್ರಯತ್ನ ನಿರಂತರವಾಗಿರಬೇಕು
* ವಿಶ್ವರೂಪದರ್ಶನ
* ಕರ್ಮಕ್ಕೆ ತಕ್ಕಫಲ
* ಭಗವಂತನಲ್ಲಿ ಪ್ರೀತಿ
* ನಿನ್ನ ದೃಷ್ಟಿಕೋನಕ್ಕೆ ಹೊಂದುವ ಜೀವನಶೈಲಿ ಅಳವಡಿಸಿಕೋ
* ದೈವಿಕತ್ವಕ್ಕೆ ಬೆಲೆ ಕೊಡು
* ಉತ್ತಮನಾಗಿರುವುದೇ ವರ
* ಮೇರು ಸತ್ಯ
* ಪರಮಾತ್ಮನೊಂದಿಗೆ ಐಕ್ಯ
* ಭಗವಂತನಲ್ಲಿ ಪ್ರೀತಿ
* ಮಾಯೆಯಿಂದ ಕಳಚಿಕೋ
ಇವುಗಳ ಅರ್ಥವನ್ನು ತಿಳಿದುಕೊಂಡು ನಡೆದರೆ ಬದುಕು ತುಂಬಾನೇ ಚೆನ್ನಾಗಿರುತ್ತದೆ.



Click it and Unblock the Notifications
