Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಗಣೇಶ ಚತುರ್ಥಿ 2023: ಗಣೇಶ ಪ್ರತಿಸ್ಥಾಪನೆ ಯಾವಾಗ ಮಾಡಬೇಕು? ಯಾವ ದಿನ ವಿಸರ್ಜನೆ ಮಾಡಬೇಕು?
ಗಣೇಶ ಚತುರ್ಥಿಯೆಂದರೆ ಸಡಗರ-ಸಂಭ್ರಮ, ಈ ಸಂಭ್ರಮ ಬರೀ ಮನೆಗಷ್ಟೇ ಸೀಮಿತವಲ್ಲ, ಊರಿಗೆ ಊರೇ ಸಂಭ್ರಮಿಸುತ್ತದೆ. ಗಣಪನನ್ನು ಬೀದಿ-ಬೀದಿಗಳಲ್ಲಿ ಕೂರಿಸಿ ತುಂಬಾನೇ ಅದ್ಧೂರಿಯಿಂದ ಗಣೇಶ ಚತುರ್ಥಿ ಆಚರಿಸಲಾಗುವುದು. ಗಣೇಶನನ್ನು 3 ದಿನ 7 ದಿನ 10 ದಿನ ಕೂರಿಸಿ ನಂತರ ವಿರ್ಸಜನೆ ಮಾಡುತ್ತಾರೆ. ಈ ವರ್ಷ ಗೌರಿ ಗಣೇಶ ಹಬ್ಬವನ್ನು ಆಚರಿಸಲಾಗುವುದು.
ಈ ವರ್ಷ ಗಣೇಶ ಪ್ರತಿಷ್ಠಾಪನೆ ಯಾವಾಗ ಮಾಡಲಾಗುವುದು? ಶುಭ ಮುಹೂರ್ತ ಯಾವಾಗ, ಗಣೇಶ ಪ್ರತಿಷ್ಠಾಪನೆ ಮಾಡುವಾಗ ಪಾಲಿಸಬೇಕಾದ ನಿಯಮಗಳೇನು ಎಂದು ನೋಡೋಣ ಬನ್ನಿ:

ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 19 ಮಂಗಳವಾರದಂದು ಆಚರಿಸಲಾಗುವುದು.
ಈ ವರ್ಷ ಗಣೇಶನ ಪ್ರತಿಷ್ಠಾಪನೆಗೆ ಶುಭ ಮುಹೂರ್ತ, ಗಣೇಶ ವಿಸರ್ಜನೆಗೆ ಶುಭ ಮುಹೂರ್ತ ಯಾವಾಗ?
ಗಣೇಶನ ಪ್ರತಿಷ್ಠಾಪನೆಗೆ ಶುಭ ಮುಹೂರ್ತ: ಸೆಪ್ಟೆಂಬರ್ 19 ಬೆಳಗ್ಗೆ 11:01ರಿಂದ ಮಧ್ಯಾಹ್ನ 01:28ರವರೆಗೆ.
ಗಣೇಶ ಪ್ರತಿಷ್ಠಾಪನೆಗೆ 2 ಗಂಟೆ 27 ನಿಮಿಷ ಸಮಯವಿದೆ.
ಗಣೇಶ ಪ್ರತಿಷ್ಠಾಪನೆಗೆ ಪಾಲಿಸಬೇಕಾದ ಪೂಜಾ ನಿಯಮಗಳು
* ಗಣೇಶನನ್ನು ತರುವ ಮುನ್ನವೇ ಗಣೇಶನನ್ನು ಕೂರಿಸುವ ಸ್ಥಳವನ್ನು ಸ್ವಚ್ಛ ಮಾಡಿ ಹೂಗಳಿಂದ ಅಲಂಕರಿಸಿ.
* ಪರಿಸರ ಸ್ನೇಹಿ ಗಣೇಶನನ್ನು ತನ್ನಿ
* ಪೂಜಾರಿ ಮಂತ್ರಗಳನ್ನು ಹೇಳುತ್ತಾ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡಿ.
* ಗಣೇಶನಿಗೆ ಹೂವುಗಳು, ಹಣ್ಣುಗಳು, ಶ್ರೀ ಗಣೇಶನಿಗೆ ಪ್ರಿಯವಾದ ಲಡ್ಡು, ಮೋದಕಗಳನ್ನು ಅರ್ಪಿಸಿ.
* ಗಣೇಶನ ಹಾಡುಗಳನ್ನು ಹೇಳುತ್ತಾ ಆರತಿ ಮಾಡಿ.
* ಗಣೇಶನ ಪ್ರತಿಷ್ಠಾಪನೆ ಮಾಡಿದ ಮೇಲೆ 10 ದಿನಗಳವರೆಗೆ ಶ್ರೀ ಗಣೇಶನನ್ನು ಆರಾಧಿಸಿ. 10ನೇ ದಿನ ಗಣೇಶನ ಮೂರ್ತಿಯನ್ನು ವಿಸರ್ಜನೆ ಮಾಡಿ.
ಗಣೇಶ ವಿಸರ್ಜನೆಗೆ ಸಮಯ
ಗಣೇಶನ ಮೂರ್ತಿಯನ್ನು ಸೆಪ್ಟೆಂಬರ್ 28ಕ್ಕೆ ವಿಸರ್ಜನೆ ಮಾಡಿ
ಸೆಪ್ಟೆಂಬರ್ 18ಕ್ಕೆ ಚಂದ್ರನನ್ನು ನೋಡಬಾರದು
ಗಣೇಶ ಚತುರ್ಥಿ ತಿಥಿ ಸೆಪ್ಟೆಂಬರ್ 18 ಮಧ್ಯಾಹ್ನ 12:39ರಿಂದ ಪ್ರಾರಂಭವಾಗಿ ಸೆಪ್ಟೆಂಬರ್ 19 ಮಧ್ಯಾಹ್ನ 01:43ಕ್ಕೆ ಮುಕ್ತಾಯ.
ಗಣೇಶ ಕೂರಿಸುವ ಹಿಂದಿನ ದಿನ ಚಂದ್ರನನ್ನು ನೋಡಬಾರದು ಎಂಬ ನಂಬಿಕೆಯಿದೆ. ಆದ್ದರಿಂದ ಸೆಪ್ಟೆಂಬರ್ 18ಕ್ಕೆ ಚಂದ್ರನನ್ನು ನೋಡಬಾರದು, ನೋಡಿದರೆ ಕಷ್ಟಗಳು ಹೆಚ್ಚಾಗುವುದು ಎಂಬ ಧಾರ್ಮಿಕ ನಂಬಿಕೆಯಿದೆ.



Click it and Unblock the Notifications
