Latest Updates
-
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ!
ಉಪೇಂದ್ರ ಜೊತೆಗೂ ನಟಿಸಿದ್ದ ಬಾಲನಟಿ ಈಗ ಐಎಎಸ್ ಅಧಿಕಾರಿ: 32 ಸಿನಿಮಾದಲ್ಲಿ ಆಕೆ ನಟಿಸಿದ್ದರು!
ಭಾರತೀಯ ಚಿತ್ರರಂಗ ಹಲವು ನಟ, ನಟಿಯರು, ಕಲಾವಿದರು ನಟನೆಯ ಜೊತೆಗೆ ತಮ್ಮದೇ ವ್ಯವಹಾರಗಳು, ಉದ್ಯಮ ಕಟ್ಟಿಕೊಂಡಿರುವುದು ನೋಡಿದ್ದೇವೆ. ಹಾಗೆ ಹಲವರು ಖಾಸಗಿ ಉದ್ಯೋಗ, ಸರ್ಕಾರಿ ಉದ್ಯೋಗದಲ್ಲಿರುವುದು ಕೂಡ ಇದೆ. ಮತ್ತೆ ಹಲವರು ನಟನೆಗಾಗಿ ತಮ್ಮ ಕೆಲಸವನ್ನೇ ಬಿಟ್ಟು ಸಿನಿಮಾರಂಗವನ್ನೇ ವೃತ್ತಿಯಾಗಿಸಿಕೊಂಡವರ ಸಂಖ್ಯೆ ಬಹಳಷ್ಟಿದೆ. ಇನ್ನು ವಿಶೇಷ ಅಂದರೆ ಬಾಲ ನಟ-ನಟಿಯಾಗಿ ಸಿನಿಮಾಗಳಲ್ಲಿ ನಟಿಸಿ ಹೆಸರು ಮಾಡಿ ಸಿನಿಮಾದಿಂದ ದೂರಾಗಿ ದೊಡ್ಡ ಹುದ್ದೆ ಅಲಂಕರಿಸಿದ್ದವರು ಕೂಡ ನಮ್ಮ ನಡುವೆ ಇದ್ದಾರೆ.
ಈ ಸಾಲಿನಲ್ಲಿ ಕನ್ನಡ ಸಿನಿಮಾದಲ್ಲಿ ಹೆಸರು ಮಾಡಿದ್ದ ಬಾಲ ನಟಿ ಹೆಚ್ ಸಿ ಕೀರ್ತನಾ ಕೂಡ ಒಬ್ಬರು. ನೀವು ಈ ಹೆಸರು ಕೇಳಿರದೆ ಇರಬಹುದು. ಆದ್ರೆ ಅವರ ಮುಖ ಪರಿಚಯ ಇದ್ದೇ ಇರುತ್ತೆ. ಕನ್ನಡ ಸಿನಿಮಾದಲ್ಲಿ ಅವರು ಬಾಲನಟಿಯಾಗಿ ಕಾಣಿಸಿಕೊಂಡು, ಲೀಡ್ ರೋಲ್ ಸಹ ಮಾಡಿ ಸೈ ಎನಿಸಿಕೊಂಡವರು. ಆದ್ರೆ ಅವರು ದೇಶ ಸೇವೆಯ ಮಾರ್ಗ ಆಯ್ಕೆ ಮಾಡಿಕೊಂಡು ಐಎಎಸ್ ಪೂರ್ಣಗೊಳಿಸಿ ಕರ್ತವ್ಯಕ್ಕೆ ತಮ್ಮನ್ನು ತೊಡಗಿಸಿಕೊಂಡರು.

ಕೀರ್ತನಾ 32ಕ್ಕೂ ಹೆಚ್ಚು ಸಿನಿಮಾಗಳು ಹಾಗೆ 48 ಟಿವಿ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡರು. ಸಿನಿಮಾಗಳ ಸಾಲಿನಲ್ಲಿ ಕರ್ಪೂರದ ಗೊಂಬೆ, ಗಂಗಾ-ಯಮುನಾ, ಮುದ್ದಿನ ಅಳಿಯಾ, A, ಕಾನೂರ್ ಹೆಗ್ಗಡತಿ, ಸರ್ಕಲ್ ಇನ್ಸ್‌ಪೆಕ್ಟರ್, ಓ ಮಲ್ಲಿಗೆ, ಲೇಡಿ ಕಮಿಷನರ್, ಹಬ್ಬ, ದೊರೆ, ಸಿಂಹಾದ್ರಿ, ಜನನಿ, ಚಿಗುರು ಮತ್ತು ಪುಟಾನಿ ಏಜೆಂಟ್ ಸಿನಿಮಾಗಳು ಅವರ ನಟನೆಗೆ ಹಿಡಿದ ಕೈಗನ್ನಡಿಯಾಯಿತು.
ಅವರು ತಮಿಳು ನಟ ವಿಜಯ್ ಅವರೊಂದಿಗೆ ನಲೈಯ ತೀರ್ಪು ಎಂಬ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡರು. ಆದ್ರೆ ಇದಾದ ಬಳಿಕ ಅವರು ಯುಪಿಎಸ್‌ಸಿ ತಯಾರಿಗೆ ಮುಂದಾಗುವ ಮೂಲಕ ಸಿನಿಮಾ ಲೋಕದಿಂದ ಹೊರನಡೆದರು. ಅವರ ತಂದೆಗೆ ಮಗಳು ದೇಶ ಸೇವೆಗೆ ಮುಂದಾಗಬೇಕು ಎಂಬ ಬಯಕೆ ಇತ್ತಂತೆ. ಅವರ ಆಸೆ ಈಡೇರಿಸಲು ಅವರು ಯುಪಿಎಸ್‌ಸಿ ತಯಾರಿಗೆ ಮುಂದಾದರು. ಇದರಿಂದ ಹಲವು ಕನಸುಗಳ ಬದಿಗೊತ್ತಿ ಒಂದೇ ಕನಸಿನ ಹಿಂದೆ ಬಿದ್ದರು.
ದೊರೆ ಸಿನಿಮಾದಲ್ಲಿ ಮೊದಲ ಬಾರಿಗೆ ನಟಿಸಿದ್ದ ಆಕೆ ಮುಂದೆ ಹಲವು ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದ್ದರು. ಎಲ್ಲಾ ದಿಗ್ಗಜ ನಟರ ಸಿನಿಮಾಗಳಾಗಿದ್ದವು, ಶಿವರಾಜ್‌ಕುಮಾರ್ ಹಾಗೂ ಉಪೇಂದ್ರ ನಟನೆಯ ಸಿನಿಮಾಗಳಲ್ಲೂ ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ಚಿತ್ರರಂಗದಲ್ಲಿ ಬಾಲನಟಿಯಾಗಿ ಮಾಡಿದ ಸಾಧನೆಗೆ ಕೇಂದ್ರ ಸರ್ಕಾರದಿಂದ ಮತ್ತು ಪ್ರಧಾನ ಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ ಮತ್ತು ರಾಜ್ಯ ಸರ್ಕಾರದ ಪ್ರಶಸ್ತಿ ಸೇರಿದಂತೆ ಹಲವು ಪ್ರಮುಖ ಪ್ರಶಸ್ತಿಗಳನ್ನು ಕೂಡ ಅವರು ಪಡೆದಿದ್ದಾರೆ.
ಇಡೀ ಭಾರತಕ್ಕೆ 167ನೇ ರ‍್ಯಾಂಕ್
ಸತತ ಪ್ರಯತ್ನದ ಬಳಿಕ ಅವರು ಭಾರತಕ್ಕೆ 167ನೇ ರ‍್ಯಾಂಕ್ ಪಡೆದು ಉತ್ತೀರ್ಣರಾದರು. ತಮ್ಮ 6ನೇ ಪ್ರಯತ್ನದಲ್ಲಿ ಅವರು ಉತ್ತೀರ್ಣರಾದರು. ಆರಂಭದಲ್ಲಿ ಜಿಲ್ಲೆಯ ಸಹಾಯಕ ಆಯುಕ್ತರಾಗಿ ಸೇವೆಗೆ ನಿಯೋಜನೆಗೊಂಡಿದ್ದರು. ಅವರು 2011 ರಲ್ಲಿ ಕರ್ನಾಟಕ ಆಡಳಿತ ಸೇವೆಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದರು ಮತ್ತು ಎರಡು ವರ್ಷಗಳ ಕಾಲ KAS ಅಧಿಕಾರಿಯಾಗಿಯೂ ಕೆಲಸ ಮಾಡಿದ್ದಾರೆ. ಕೆಎಎಸ್ ಆಗಿದ್ದಾಗಲೇ ಅವರು ಯುಪಿಎಸ್‌ಸಿಗೂ ತಯಾರಿ ನಡೆಸಿದ್ದರು.
KAS ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾಗ ಕೀರ್ತನಾ UPSC ಬಗ್ಗೆ ಉತ್ಸಾಹ ಬೆಳೆಸಿಕೊಂಡರು. ಅವರ ಈ ಸಾಧನೆ ಈಗ ಹಲವರಿಗೆ ಸ್ಫೂರ್ತಿಯೂ ಹೌದು. ಏಕೆಂದರೆ ಅವರು ದಿನದ 9 ಗಂಟೆಗಳ ಕಾಲ ಸತತವಾಗಿ ಓದುತ್ತಿದ್ದರು. ಹಾಗೆ ಎಲ್ಲಾ ಸಮಯದಲ್ಲೂ ಓದಿನತ್ತ ಗಮನ ಇಡುತ್ತಿದ್ದರು. 5 ಬಾರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗದೆ ಇರುವ ಕಾರಣ ಬಳಿಕ ಕೆಲಸಕ್ಕೆ ಸಂಪೂರ್ಣ ವಿದಾಯ ಹೇಳಿ ಸಂಪೂರ್ಣ ಸಮಯ ಓದಿನಲ್ಲಿ ಕಳೆದಿದ್ದರು.



Click it and Unblock the Notifications
