Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
4ನೇ ಶ್ರಾವಣ ಸೋಮವಾರದ ಪೂಜೆ ಹೇಗಿರಬೇಕು?
ಶ್ರಾವಣ ಮಾಸ ಹಿಂದೂಗಳ ಪವಿತ್ರ ಮಾಸಗಳಲ್ಲಿ ಒಂದಾಗಿದೆ. ಈ ಮಾಸದಲ್ಲಿ ಶಿವನು ಭೂಲೋಕದಲ್ಲಿ ಸಂಚಾರ ಮಾಡುತ್ತಿರುತ್ತಾನಂತೆ. ಇನ್ನೂ ಈ ವಿಶೇಷ ಮಾಸದಲ್ಲಿ ಶಿವನಿಗೆ ಜಲಾಭಿಷೇಕ ಮಾಡುವುದರಿಂದ ಪ್ರಸನ್ನನಾಗುತ್ತಾನೆ ಎಂದು ನಂಬಲಾಗಿದೆ. ಇನ್ನೂ ಸಮಯದ ಅಭವ ಇರೋದ್ರಿಂದ ಎಲ್ಲಾ ದಿನ ಎಲ್ಲರಿಗೂ ಶಿವನ ಪೂಜೆಯನ್ನು ನೆರವೇರಿಸೋದಕ್ಕೆ ಸಾಧ್ಯವಾಗೋದಿಲ್ಲ.
ಅಂತವರು ಸೋಮವಾರದ ದಿನ ಶಿವನಿಗೆ ವಿಶೇಷ ಪೂಜೆಯನ್ನು ಸಲ್ಲಿಕೆ ಮಾಡಬಹುದು. ಶ್ರಾವಣದಲ್ಲಿ ಅದ್ರಲ್ಲೂ ಸೋಮವಾರದ ದಿನ ಶಿವನಿಗೆ ಪೂಜೆ ಸಲ್ಲಿಸೋದ್ರಿಂದ ಆತ ಸಂತುಷ್ಟಗೊಳ್ಳುತ್ತಾನಂತೆ. ಅಷ್ಟಕ್ಕು ಈ 4ನೇ ಶ್ರಾವಣ ಸೋಮವಾರದ ಪೂಜೆ ಹೇಗಿರಬೇಕು? ಯಾವೆಲ್ಲಾ ವಿಧಿ-ವಿಧಾನಗಳನ್ನು ಅನುಸರಿಸಬೇಕು ಅನ್ನೋದನ್ನು ತಿಳಿಯೋಣ.

ಶ್ರಾವಣ ಸೋಮವಾರದ ಮಹತ್ವವೇನು?
ಸೋಮವಾರ ಶಿವನಿಗೆ ಅತ್ಯಂತ ಪ್ರಿಯವಾದದ್ದು ಮತ್ತು ಈ ದಿನ ಶಿವನನ್ನು ಪೂಜಿಸುವುದರಿಂದ ನಿಮ್ಮ ಇಷ್ಟಾರ್ಥಗಳೆಲ್ಲಾ ಸಿದ್ಧಿಸಲಿದೆ. ವಿಶೇಷ ಅಂದ್ರೆ ಶ್ರಾವಣ ಮಾಸದಲ್ಲಿ ಮಾಡುವ ಪೂಜೆ ಹಾಗೂ ವೃತಗಳೆಲ್ಲಾ ವಿಶೇಷ ಫಲ ಕೊಡಲಿದೆ ಎಂದು ನಂಬಲಾಗಿದೆ. ಈಗಾಗಲೇ ಮೂರು ಸೋಮವಾರಗಳು ಕಳೆದಿದ್ದು, ನಾಲ್ಕನೇ ಸೋಮವಾರ ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದರೆ ಒಳ್ಳೆಯದು.
ನಾಲ್ಕನೇ ಸೋಮವಾರದ ವಿಶೇಷ ಏಕೆ?
ಬರೋಬ್ಬರಿ 19 ವರ್ಷಗಳ ನಂತರ ಶ್ರಾವಣವು 59 ದಿನಗಳವರೆಗೆ ಇರಲಿದೆ. ಅಂದರೆ 8 ಶ್ರಾವಣ ಸೋಮವಾರ ಶಿವನ ಪೂಜೆಗೆ ಅವಕಾಶವಿದೆ. ಇನ್ನೂ ಈ ಸಮಯದಲ್ಲಿ ರುದ್ರಾಭಿಷೇಕಕ್ಕೆ ವಿಶೇಷ ಮಹತ್ವವನ್ನು ನೀಡಲಾಗಿದೆ.
ಶ್ರಾವಣ ಸೋಮವಾರದಂದು ಬೆಳಗ್ಗೆ ಸೂರ್ಯ ಯೋಗ ಅಂದರೆ ಬೆಳಗ್ಗೆ 05:42 ರಿಂದ ಸಂಜೆ 06:58 ರೊಳಗಾಗಿ ಏಳಬೇಕು. ಸೂರ್ಯ ಯೋಗದ ಸಮಯದಲ್ಲಿ ಪೂಜೆ ಸಲ್ಲಿಸಿದರೆ ಮಂಗಳಕರ ಅಂತಾನೂ ಹೇಳಲಾಗುತ್ತದೆ. ಈ ನಾಲ್ಕನೇ ಸೋಮವಾರ ಶಿವನನ್ನು ಮೆಚ್ಚಿಸಲು ನಿಮಗೆ ಉತ್ತಮ ಅವಕಾಶವಿದೆ. ಈ ದಿನ ಭಕ್ತಿಯಿಂದ ಪೂಜೆ ಸಲ್ಲಿಸಿದ್ರೆ ಇಷ್ಟು ದಿನ ನಿಮ್ಮ ಮನಸ್ಸಿನಲ್ಲಿ ನೆರವೇರದಿದ್ದ ಆಸೆಗಳೆಲ್ಲಾ ಪೂರ್ಣಗೊಳ್ಳುತ್ತದೆ. ನಾಲ್ಕನೇ ಸೋಮವಾರದಂದು ಬೆಳಿಗ್ಗೆ 07:26 ರೊಳಗಾಗಿ ರುದ್ರಾಭಿಷೇಕವನ್ನು ಮಾಡಿದರೆ ಸೂಕ್ತ.
ನಾಲ್ಕನೇ ಶ್ರಾವಣ ಸೋಮವಾರದ ಪೂಜಾ ವಿಧಾನ:
- ಮುಂಜಾನೆ ಬೇಗ ಎದ್ದು ಸ್ನಾನ ಮಾಡಿ ಮತ್ತು ಶಿವನನ್ನು ಸ್ಮರಿಸಿ.
- ಶಿವನ ದೇವಸ್ಥಾನಕ್ಕೆ ಹೋಗಿ ರುದ್ರಾಭಿಷೇಕ ಮಾಡಿಸಿ
- ಶ್ರೀಗಂಧದ ಹೂವುಗಳು, ಧೂಪ, ದೀಪ, ಬಿಲ್ವಪತ್ರೆ, ಧಾತುರ, ಶಮಿ ಎಲೆಗಳು ಇತ್ಯಾದಿಗಳನ್ನು ಶಿವನಿಗೆ ಅರ್ಪಿಸಿ
- ಶಿವ ಚಾಲೀಸಾ ಪಠಿಸಿ
- ನಂತರ ಮಹಾದೇವನ ಆರತಿ ಮಾಡಿ.
ಶಿವ ತಾಂಡವ ಸ್ತೋತ್ರ :
"ಜಟಾತವಿಗಳಜ್ಜಲಾ ಪ್ರವಾಹಪವಿತಸ್ಥಲೇ
ಗಲೇವಾಲಮ್ಬ್ಯ ಲಮ್ಬಿತಂ ಭುಜಂಗತುಂಗಮಾಲಿಕಾಮ್
ದಮದ್ ದಮದ್ ದಮದ್ದಮ ನಿನಾದವಾದಮರ್ವಯಮ್
ಚಕಾರ ಚಾಂಡಾಂಡವಂ ತನೋತು ನಃ ಶಿವಃ ಶಿವಮ್ ॥
ಜಾತಾ ಕಟಾ ಹಸಮ್ಭ್ರಮಾ ಭ್ರಮನೀಲಿಮ್ಪನಿರ್ಝರೀ
ವಿಲೋಲವಿಚಿವಲರೈ ವಿರಾಜಮಾನಮೂರ್ಧನೀ
ಧಗಧಗಧಗಜ್ಜ್ವಾ ಲಲಾಲತಾ ಪಟ್ಟಪಾವಕೇ
ಕಿಶೋರ ಚನ್ದ್ರಶೇಖರೇ ರಾತಿಃ ಪ್ರತಿಕ್ಷಣಂ ಮಮ ॥
ಧರಾಧರೇನ್ದ್ರ ಂಡಿನಿವಿಲಾಸಬಂಧುಬಂಧುರಾ
ಸ್ಫುರಾದಿಗನ್ತಸನ್ತಾತಿ ಪ್ರಮೋದಮನಮಾನಸೇ
ಕೃಪಾಕಟಾಕ್ಷಧೋರಾಣಿ ನಿರುದ್ಧದುರ್ಧರಪಾದಿ
ಕ್ವಚಿದಿಗಮ್ಬರೇ ಮನೋವಿನೋದಮೇತುವಸ್ತುನಿ
ಶ್ರಾವಣದ ನಾಲ್ಕನೇ ಸೋಮವಾರ ಶಿವನಿಗೆ ಈ ರೀತಿ ಪೂಜೆ ಸಲ್ಲಿಸೋದ್ರಿಂದ ಒಳ್ಳೆಯದಾಗುತ್ತೆ ಎನ್ನುವ ನಂಬಿಕೆಯಿದೆ.
ಸೂಚನೆ : ಈ ಮಾಹಿತಿಯನ್ನು ಇಂಟರ್ನೆಟ್ ನಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿ ಬರೆಯಲಾಗಿದೆ. ಪೂಜಾ ವಿಧಿ-ವಿಧಾನಗಳನ್ನು ಆಚರಿಸುವಾಗ ತಜ್ಞರ ಸಲಹೆ ಪಡೆದುಕೊಂಡರೆ ಒಳ್ಳೆಯದು. ಇದಕ್ಕೆ ಬೋಲ್ಡ್ ಸ್ಕೈ ಕನ್ನಡ ಯಾವುದೇ ರೀತಿ ಜವಾಬ್ದಾರರಾಗಿ ಇರೋದಿಲ್ಲ.



Click it and Unblock the Notifications

