Latest Updates
-
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ!
ಫುಡ್ ಡೆಲಿವರಿ ಬಾಯ್‌ಗೆ ಖುಲಾಯಿಸಿತು ಅದೃಷ್ಟ..! ರಾತ್ರೋರಾತ್ರಿ ಗೆದ್ದ ₹5 ಕೋಟಿ
ರಾತ್ರೋರಾತ್ರಿ ಶ್ರೀಮಂತರಾಗೋದು ಹೇಗಪ್ಪ ಅಂದ್ರೆ ಅವರಿಗೆ ಕೋಟಿ ಕೋಟಿ ರೂಪಾಯಿ ಲಾಟರಿ ಹೊಡಿಬೇಕು ಅಷ್ಟೆ. ಅದರಲ್ಲೂ ಅದೃಷ್ಟ ಇದ್ದವರಿಗೆ ಲಾಟರಿ ಹೊಡಿಯುತ್ತೆ. ನಾವು ಈ ರೀತಿ ಲಾಟರಿ ಹೊಡೆದು ಲಾತ್ರೋರಾತ್ರಿ ಕೋಟ್ಯಧಿಪತಿಯಾದ ಜನರನ್ನು ನೋಡಿದ್ದೇವೆ, ಅವರ ಬಗ್ಗೆ ಕೇಳಿದ್ದೇವೆ. ಹೀಗೆ ಇಲ್ಲೊಬ್ಬ ಸಹ ರಾತ್ರೋರಾತ್ರಿ ಶ್ರೀಮಂತನಾಗಿದ್ದಾನೆ.
ಹೌದು ದಿನ ಕೆಲಸ ಮಾಡಿ ಊಟ ಮಾಡುತ್ತಿದ್ದ ಆತ ಏಕಾಏಕಿ ಈಗ ಕೋಟ್ಯಧಿಪತಿಯಾಗಿದ್ದಾನೆ. ಇಂಗ್ಲೆಂಡ್‌ನಲ್ಲಿ ನೆಲೆಸಿದ್ದ ಫುಡ್ ಡೆಲಿವರಿ ಬಾಯ್ ಒಬ್ಬ ಈಗ ಲಾಟರಿ ಗೆದ್ದು ಎಲ್ಲರ ಗಮನ ತನ್ನತ್ತ ಸೆಳೆದಿದ್ದಾನೆ. ಇಲ್ಲಿನ ಸ್ಟಾಫರ್ಡ್‌ಶೈರ್‌ನ ಟಾಮ್‌ವರ್ತ್‌ನಲ್ಲಿ ನೆಲೆಸಿರುವ 28 ವರ್ಷದ ಪಿಜ್ಜಾ ಡೆಲಿವರಿ ಹುಡುಗ ಮಾರಿಯಸ್ ಪ್ರೆಡಾ ಎಂಬಾತ ಕೋಟಿ ಕೋಟಿ ಲಾಟರಿ ಗೆದ್ದಿದ್ದಾನೆ.

ಆತ ಸುಮಾರು 500,000 ಪೌಂಡ್‌ಗಳ ಲಾಟರಿ ಗೆದ್ದಿದ್ದಾನೆ ಎಂದು ವರದಿಯಾಗಿದೆ. ಅಂದರೆ ಭಾರತೀಯ ರೂಪಾಯಿಗೆ ಪರಿವರ್ತಿಸಿದರೆ ಸುಮಾರು 5,30,05,650 ರೂಪಾಯಿಯಾಗುತ್ತದೆ. ಈ ಲಾಟರಿ ಗೆದ್ದು ಅದೃಷ್ಟಶಾಲಿಯಾಗಿ ಆತ ಹೊರಹೊಮ್ಮಿದ್ದಾನೆ. ಇದು ಆತ ತನ್ನ ಜೀವಮಾನವಿಡಿ ಕೆಲಸ ಮಾಡಿ ಗಳಿಸಬಹುದಾದ ಹಣವಾಗಿದೆ.
ಲಾಟರಿ ಗೆದ್ದ ಪ್ರೆಡಾ ಎಂಬಾತನ ಖುಷಿ ಮುಗಿಲು ಬಿಟ್ಟಿತ್ತು, ಮೊದಲು ಈ ಹಣದಿಂದ ವಾಸಕ್ಕೆ ಮನೆ ಖರೀದಿ ಮಾಡುವುದಾಗಿ ಆತ ಹೇಳಿಕೊಂಡಿದ್ದಾನೆ. ಜೊತೆಗೆ ಬಂದ ಹಣದಲ್ಲಿ ಒಂದಿಷ್ಟು ಪ್ರವಾಸ ಮಾಡುವ ಯೋಜನೆ ಇದೆಯಂತೆ. ಆದರೆ ಫುಡ್ ಡೆಲಿವರಿ ಮಾಡುವ ಈ ಕೆಲಸವನ್ನು ಆತ ಬಿಡುವುದಿಲ್ಲವಂತೆ ಅದನ್ನು ಮುಂದುವರೆಸುವುದಾಗಿ ಹೇಳಿಕೊಂಡಿದ್ದಾನೆ. ಅಲ್ಲದೆ ಈ ಲಾಟರಿ ಹಣದಿಂದ ನನ್ನ ಜೀವನವೇ ಬದಲಾಗಲಿದೆ ಎಂದಿದ್ದಾನೆ.
ಚೀನಾದ ಇತಿಹಾಸದಲ್ಲೇ ಅತ್ಯಂತ ದುಬಾರಿ ಲಾಟರಿ ಗೆದ್ದಿದ್ದ
ಇದಕ್ಕೂ ಮೊದಲು ಹಲವು ಕಡೆ ಲಾಟರಿ ಗೆದ್ದ ಉದಾಹರಣೆಗಳು ನಮ್ಮ ಮುಂದಿವೆ. ಇನ್ನು ಚೀನಾದಲ್ಲಿ ಕಳೆದ ವರ್ಷ 28 ವರ್ದದ ಯುವಕನೊಬ್ಬ ದೇಶದ ಅತೀ ದೊಡ್ಡ ಮೊತ್ತದ ಲಾಟರಿ ಗೆದ್ದು ರಾತ್ರೋ ರಾತ್ರಿ ಶ್ರೀಮಂತನಾಗಿದ್ದಾನೆ. ಆತ ಪ್ರತಿ ಬಾರಿಯೂ 7 ಸಂಖ್ಯೆಗಳ ಒಂದೇ ಗುಂಪಿನ ಲಾಟರಿ ಮೇಲೆ ಬೆಟ್ಟಿಂಗ್ ಮಾಡಿ ಜಾಕ್‌ಪಾಟ್ ಗೆದ್ದಿದ್ದಾನೆ. ಆತ ಬರೋಬ್ಬರಿ 680 ಮಿಲಿಯನ್ ಯುವಾನ್ ಅಂದರೆ 96 ಮಿಲಿಯನ್ ಡಾಲರ್ ಮೊತ್ತ ಗೆದ್ದಿದ್ದಾನೆ. ಭಾರತೀಯ ರೂಪಾಯಿಯಲ್ಲಿ ಹೇಳುವುದಾದರೆ ಇದು ಅಂದಾಜು 750 ಕೋಟಿ ರೂಪಾಯಿಯಾಗುತ್ತದೆ.
ಈತ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದ, ಆದರೆ ಆಗಾಗ ಲಾಟರಿ ಟಿಕೆಟ್ ಖರೀದಿಸುತ್ತಿದ್ದ. ಆದರೆ ಒಂದು ಲಾಟರಿಯಿಂದ ಆತನ ಅದೃಷ್ಟವೇ ಬಸಲಾಗಿತ್ತು. ಬರೋಬ್ಬರಿ 750 ಕೋಟಿ ರೂಪಾಯಿ ಲಾಟರಿ ಗೆದ್ದು ರಾತ್ರೋರಾತ್ರಿ ಇತಿಹಾಸ ಬರೆದಿದ್ದ.
ಕ್ರಿಸ್‌ಮಸ್ ದಿನ ಮಹಿಳೆಗೆ ಲಾಟರಿ
ಕಳೆದ ವರ್ಷದ ಕ್ರಿಸ್‌ಮಸ್ ದಿನದಂದು ಜರ್ಮನಿಯ ಮಹಿಳೆಯೊಬ್ಬರಿಗೆ ಬಂಪರ್ ಲಾಟರಿ ಹೊಡೆದಿತ್ತು, ಸುಮಾರು 91 ಲಕ್ಷ ರೂಪಾಯಿ ಲಾಟರಿ ಗೆದ್ದ ಆಕೆಯ ಕ್ರಿಸ್‌ಮಸ್ ಹಬ್ಬದ ಖುಷಿ ಡಬಲ್ ಮಾಡಿತ್ತು.
ಭಾರತೀಯರಿಗೂ ಬಂಪರ್
ಯುಎಇಯಲ್ಲಿ ಕೆಲಸ ಮಾಡುತ್ತಿರುವ ಭಾರತದ ವ್ಯಕ್ತಿಯೊಬ್ಬರು ಲಾಟರಿಯಲ್ಲಿ 20 ಮಿಲಿಯನ್ ದಿರ್ಹಂ ಬಹುಮಾನವನ್ನು ಗೆದ್ದಿದ್ದರು. ಅಲ್ ಐನ್ ನಗರದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿರುವ ಮುನಾವರ್ ಫೈರೂಸ್ ಕಳೆದ ಐದು ವರ್ಷಗಳಿಂದ ಲಾಟರಿ ಟಿಕೆಟ್‌ಗಳನ್ನು ಖರೀದಿಸುತ್ತಿದ್ದರು. ಇತ್ತೀಚಿನ ಬಿಗ್ ಟಿಕೆಟ್ ಲೈವ್ ಡ್ರಾದಲ್ಲಿ, ಅವರು ಸುಮಾರು ₹44 ಕೋಟಿ ಮೊತ್ತವನ್ನು ಗೆದ್ದಿದ್ದರು.
ಮತ್ತೊಬ್ಬ ಭಾರತೀಯ ಸುತೇಶ್ ಕುಮಾರ್ ಕುಮರೇಶನ್ ಅದೇ ದಿನ 1 ಮಿಲಿಯನ್ ದಿರ್ಹಂ ಗೆದ್ದಿದ್ದರು. ಅಬುಧಾಬಿಯ ನಿವಾಸಿಯಾಗಿರುವ ಅವರು ಅಬುಧಾಬಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟಿಕೆಟ್ ಖರೀದಿಸಿದ್ದರು. ನನ್ನ ಏಳು ವರ್ಷದ ಮಗಳು ಗೆಲ್ಲುವ ಟಿಕೆಟ್ ಸಂಖ್ಯೆಗಳನ್ನು ಆಯ್ಕೆ ಮಾಡಿದ್ದಳು ಎಂದು ಅವರು ಸಂತಸ ಹಂಚಿಕೊಂಡಿದ್ದರು.



Click it and Unblock the Notifications
