Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಗರುಡ ಪುರಾಣದ ಪ್ರಕಾರ ಲಕ್ಷ್ಮೀಯನ್ನು ಒಲಿಸಿಕೊಳ್ಳುವುದು ಹೇಗೆ?
ಹದಿನೆಂಟು ಪುರಾಣಗಳಲ್ಲಿ ಗರುಡ ಪುರಾಣವು ಕೂಡ ಒಂದು. ಹಿಂದೂ ಧರ್ಮದಲ್ಲಿ ಗರುಡ ಪುರಾಣಕ್ಕೆ ಮಹತ್ವದ ಸ್ಥಾನ ನೀಡಲಾಗಿದೆ. ಒರ್ವ ವ್ಯಕ್ತಿ ಸರಿ ದಾರಿಯಲ್ಲಿ ನಡೆಯೋದಕ್ಕೆ ಗರುಡ ಪುರಾಣದಲ್ಲಿ ಎಲ್ಲಾ ರೀತಿಯ ಪರಿಹಾರಗಳಿದೆ.
ಅದೇ ರೀತಿ ಪ್ರತಿಯೊಬ್ಬರು ಜೀವನದಲ್ಲಿ ಶ್ರೀಮಂತರಾಗಬೇಕು, ಉತ್ತಮ ಜೀವನ ನಡೆಸಬೇಕು ಎಂದು ಅಪೇಕ್ಷಿಸುತ್ತಾರೆ. ಇದಕ್ಕೆಲ್ಲಾ ಮುಖ್ಯ ಲಕ್ಷ್ಮೀ ಕೃಪಾಕಟಾಕ್ಷ.

ಆದರೆ ಲಕ್ಷ್ಮೀ ಕೃಪೆಗೆ ಪಾತ್ರರಾಗುವುದು ನಾವು ಅಂದುಕೊಂಡಷ್ಟು ಸುಲಭವಲ್ಲ. ಹಾಗಾದ್ರೆ ಲಕ್ಷ್ಮೀಯನ್ನ ಒಲಿಸಿಕೊಳ್ಳಬೇಕಾದರೆ ಏನು ಮಾಡಬೇಕು? ಗರುಡ ಪುರಾಣ ಈ ಬಗ್ಗೆ ಏನು ಹೇಳುತ್ತೆ ಅನ್ನೋದನ್ನ ನೋಡೋಣ.
ದೇವರಿಗೆ ನೈವೇದ್ಯ ಸಲ್ಲಿಸದೆ ತಿನ್ನಬೇಡಿ
ಗರುಡ ಪುರಾಣದ ಪ್ರಕಾರ ನಾವುದೇ ಯಾವುದೇ ಆಹಾರ ತಯಾರಿಸಿದಾಗಲೂ ಮೊದಲು ದೇವರಿಗೆ ನೈವೇದ್ಯದ ರೂಪದಲ್ಲಿ ಸಲ್ಲಿಸಬೇಕು. ಆ ನಂತರ ನಾವು ಸೇವನೆ ಮಾಡಬೇಕು. ಅದರ ಜೊತೆಗೆ ಆಹಾರಕ್ಕೆ ಅಗೌರವ ಸಲ್ಲಿಸುವುದು ಮತ್ತು ಆಹಾರದ ಬಗ್ಗೆ ಸುಳ್ಳು ಹೇಳುವುದನ್ನು ಮಾಡಬಾರದು. ಹೀಗೆ ಮಾಡಿದರೆ ಲಕ್ಷ್ಮೀ ಒಲಿಯುವುದಿಲ್ಲ. ಇನ್ನೂ ಯಾವ ಮನೆಯಲ್ಲಿ ಆಹಾರವನ್ನು ವ್ಯರ್ಥ ಮಾಡುತ್ತಾರೋ ಆ ಮನೆಯಲ್ಲಿ ಶಾಂತಿ ನೆಲೆಸುವುದಿಲ್ಲವಂತೆ.
ದಾನ ಹಾಗೂ ದೇವರ ಕಾರ್ಯಗಳನ್ನು ಮಾಡಿ
ಗರುಡ ಪುರಾಣದ ಪ್ರಕಾರ ದಾನ ಹಾಗೂ ದೇವರ ಕಾರ್ಯಗಳನ್ನು ಮಾಡುವುದರಿಂದ ಲಕ್ಷ್ಮೀ ಕೃಪೆಗೆ ಪಾತ್ರವಾಗಬಹುದಂತೆ. ಯಾವ ವ್ಯಕ್ತಿ ದಾನ ಕಾರ್ಯದಲ್ಲಿ ತೊಡಗುತ್ತಾನೋ ಹಾಗೂ ಪ್ರತಿನಿತ್ಯ ದೇವರ ಕಾರ್ಯ ಮಾಡುತ್ತಾನೋ ಅಂತವರಿಗೆ ಲಕ್ಷ್ಮೀ ಕೃಪಾಕಪಟಾಕ್ಷ ಇದ್ದೇ ಇರುತ್ತಂತೆ.
ಧರ್ಮಗ್ರಂಥಗಳ ಬಗ್ಗೆ ಜ್ಞಾನ ಹೊಂದಿರಬೇಕು
ಗರುಡ ಪುರಾಣದ ಪ್ರಕಾರ ಪ್ರತಿಯೊಬ್ಬ ವ್ಯಕ್ತಿಗೂ ಆತನ ಧರ್ಮಗ್ರಂಥಗಳ ಬಗ್ಗೆ ಜ್ಞಾನ ಇರಬೇಕಂತೆ. ಧರ್ಮ ಗ್ರಂಥಗಳ ಬಗ್ಗೆ ತಿಳಿದುಕೊಂಡವರು ಮತ್ತೊಬ್ಬರಿಗೆ ತಿಳಿಸುವ ಪ್ರಯತ್ನವನ್ನು ಖಂಡಿತ ಮಾಡಬೇಕು. ಹೀಗಾದಾಗ ಮಾತ್ರ ಜೀವನದ ಮಹತ್ವ ಏನು ಅನ್ನೋದನ್ನ ತಿಳಿದುಕೊಳ್ಳೋದಕ್ಕೆ ಹಾಗೂ ಸರಿಯಾದ ದಾರಿಯಲ್ಲಿ ನಡೆಯೋದಕ್ಕೆ ಸಾಧ್ಯ.
ಕೊಳಕು ಬಟ್ಟೆಗಳನ್ನು ಧರಿಸಬೇಡಿ
ಗರುಡ ಪುರಾಣದ ಪ್ರಕಾರ ಲಕ್ಷ್ಮೀಯನ್ನು ಒಲಿಸಿಕೊಳ್ಳಬೇಕಾದರೆ ಕೊಳಕಾದ ಬಟ್ಟೆಯನ್ನು ಧರಿಸಬಾರದಂತೆ. ಶುಭ್ರವಾದ ಬಟ್ಟೆಯನ್ನು ಧರಿಸಬೇಕು. ಲಕ್ಷ್ಮೀಯು ಸಂಪತ್ತು ಮತ್ತು ಸಮೃದ್ಧಿಯ ಸಂಕೇತ. ಹೀಗಾಗಿ ತಾಯಿ ಲಕ್ಷ್ಮೀಯನ್ನು ಒಲಿಸಿಕೊಳ್ಳಲು ಶುಚಿಯಾದ ಬಟ್ಟೆಯನ್ನೇ ಧರಿಸಿರಬೇಕು. ಯಾರು ಅವರ ನೋಟದ ಬಗ್ಗೆ ನಿರ್ಲಕ್ಷ್ಯದಿಂದಿರುತ್ತಾರೋ ಅಂತವರಿಗೆ ಲಕ್ಷ್ಮೀ ಒಲಿಯುವುದಿಲ್ಲ.
ಗರುಡ ಪುರಾಣದ ಪ್ರಕಾರ ಈ ವಿಧಾನಗಳನ್ನು ಅನುಸರಿಸಿದರೆ ಖಂಡಿತ ಲಕ್ಷ್ಮೀಯನ್ನು ಒಲಿಸಿಕೊಳ್ಳಬಹುದು. ಧರ್ಮ ಮಾರ್ಗದಲ್ಲಿ ನಡೆದರೆ ಸಂಪತ್ತು ಹಾಗೂ ಯಶಸ್ಸು ಒಲಿಯದೇ ಇರೋದಿಲ್ಲ.



Click it and Unblock the Notifications




