Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಐಸ್‌ಕ್ರೀಮ್‌ನಲ್ಲಿ ಬೆರಳು, ಚಿಪ್ಸ್‌ನಲ್ಲಿ ಕಪ್ಪೆ, ಸಿರಪ್‌ನಲ್ಲಿ ಇಲಿ: ವಾರದೊಳಗೆ ಸಾಲು ಸಾಲು ಯಡವಟ್ಟು!
ಕೆಲ ದಿನಗಳಿಂದ ಆನ್‌ಲೈನ್‌ನಲ್ಲಿ ಎಲ್ಲಿ ನೋಡಿದ್ರು ಆಹಾರದಲ್ಲಿ ಹುಳುಗಳು ಪತ್ತೆಯಾಗುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. ಅದರಲ್ಲೂ ಆನ್‌ಲೈನ್‌ನಲ್ಲಿ ಆರ್ಡರ್ ಮಾಡುವ ಫುಡ್‌ನಲ್ಲಿ ಹುಳುಗಳು ಪತ್ತೆಯಾಗುತ್ತಿರುವುದು ನೋಡಬಹುದು. ಕೆಲ ದಿನಗಳ ಹಿಂದೆ ಮಹಾರಾಷ್ಟ್ರದಲ್ಲಿ ಐಸ್ ಕ್ರೀಮ್‌ನಲ್ಲಿ ಮಾನವರ ಬೆರಳು ಪತ್ತೆಯಾಗಿ ಭಾರೀ ಸದ್ದು ಮಾಡಿತ್ತು. ಆ ಐಸ್ ಕ್ರೀಮ್ ಅಂಗಡಿಯ ಪರವಾನಗಿಯೇ ರದ್ದು ಮಾಡಲಾಗಿತ್ತು.
ಕಳೆದೊಂದು ವಾರದಲ್ಲಿ ಈ ರೀತಿಯ ಹತ್ತಾರು ಘಟನೆಗಳು ವರದಿಯಾಗಿವೆ. ಇದು ಗ್ರಾಹಕರ ಸುರಕ್ಷತೆ ಹಾಗೂ ಆಹಾರ ಗುಣಮಟ್ಟದ ಕುರಿತಂತೆ ದೊಡ್ಡ ಮಟ್ಟದ ಆತಂಕ ಹಾಗೂ ನೂರಾರು ಪ್ರಶ್ನೆಗಳಿಗೆ ಕಾರಣವಾಗಿದೆ. ಇದು ಕೇವಲ ವರದಿಯಾಗಿರುವ ಘಟನೆಗಳಾಗಿದ್ದರೆ ವರದಿಯಾಗದಿರುವ ಘಟನೆಗಳ ಸಂಖ್ಯೆ ದುಪ್ಪಟ್ಟ ಇರಬಹುದು.

ಐಸ್‌ಕ್ರೀಮ್‌ನಲ್ಲಿ ಮಾನವರ ಬೆರಳು
ಮುಂಬೈನ ಮಲಾಡ್‌ನಲ್ಲಿ ಐಸ್ ಕ್ರೀಂ ಕೋನ್‌ನಲ್ಲಿ ತುಂಡಾದ ಮಾನವನ ಬೆರಳು ಪತ್ತೆಯಾಗಿತ್ತು. ಆನ್‌ಲೈನ್‌ನಲ್ಲಿ ಈ ಐಸ್ ಕ್ರೀಂ ಆರ್ಡರ್ ಮಾಡಲಾಗಿತ್ತು. ಐಸ್ ಕ್ರೀಂ ತಿನ್ನುವಾಗ ಅದರಲ್ಲಿ ಮಾನವನ ಬೆರಳಿನ ತುಂಡು ಕಂಡು ಬಂದಿತ್ತು. ಐಸ್ ಕ್ರೀಂ ಆರ್ಡರ್ ಮಾಡಿದ್ದ ಬ್ರಾಂಡನ್ ಫೆರಾ ಎಂಬುವವರಿಗೆ ಕತ್ತರಿಸಿದ ಬೆರಳು ಸಿಕ್ಕಿದೆ. ಈ ಘಟನೆಯ ಬಳಿಕ ಅವರಿಗೆ ಭಯವಾಗಿದ್ದು ಏನೂ ಕೂಡ ತಿನ್ನಲು ಆಗುತ್ತಿಲ್ಲ ಎಂದು ಹೇಳಿಕೊಂಡಿದ್ದರು.
ಚಾಕೊಲೆಟ್ ಸಿರಪ್‌ನಲ್ಲಿ ಸತ್ತ ಇಲಿ
ಚಾಕೊಲೆಟ್ ಸಿರಪ್ ಅನ್ನು ಬ್ರೆಡ್, ಚಪಾತಿ ಸೇರಿ ಕೆಲವು ಖಾದ್ಯಗಳಿಗೆ ಹಾಕಿಕೊಂಡು ಸವಿಯಲಾಗುತ್ತದೆ. ಇದು ಅತ್ಯಂತ ರುಚಿ ಹಾಗೂ ಆರೋಗ್ಯಕ್ಕೆ ಉತ್ತಮ. ಆದರೆ ನೋಯ್ಡಾದಲ್ಲಿ ಮಹಿಳೆಯೊಬ್ಬರು ಖರೀದಿಸಿದ್ದ ಬಹುರಾಷ್ಟ್ರೀಯ ಕಂಒನಿಯ ಚಾಕೊಲೆಟ್ ಸಿರಪ್‌ನಲ್ಲಿ ಸತ್ತ ಇಲಿಯೊಂದು ಪತ್ತೆಯಾಗಿದೆ. ಇದನ್ನು ಕಂಡು ಅವರು ಶಾಕ್ ಆಗಿದ್ದು, ಈ ಪೋಸ್ಟ್ ಹಂಚಿಕೊಂಡಿದ್ದರು. ಬಳಿಕ ಕಂಪನಿ ಸಹ ಅವರಲ್ಲಿ ಕ್ಷಮೆಯಾಚಿಸಿದೆ.
ಬೆಂಗಳೂರು ದಂಪತಿಗೆ ಜೀವಂತ ಹಾವು
ಬೆಂಗಳೂರಿನ ಟೆಕ್ಕಿ ದಂಪತಿ ಅಮೇಜಾನ್‌ನಿಂದ Xbox ಗೇಮಿಂಗ್ ನಿಯಂತ್ರಕಗಳ ಆರ್ಡರ್ ಮಾಡಿದ್ದಾರೆ. ಅವರಿಗೆ ಬಾಕ್ಸ್‌ನಲ್ಲಿ ಜೀವಂತ ನಾಗರಹಾವು ಡೆಲಿವರಿ ಆಗಿದೆ. ಆದರೆ ಅದೃಷ್ಟದಿಂದ ಅವರ ಜೀವಕ್ಕೆ ಹಾನಿಯಾಗಿಲ್ಲ.
ಚಿಪ್ಸ್ ಪ್ಯಾಕೆಟ್‌ನಲ್ಲಿ ಕಪ್ಪೆ
ಜಾಮ್‌ನಗರದಲ್ಲಿ ಬಾಲಾಜಿ ವೇಫರ್‌ಗಳ ಪ್ಯಾಕೆಟ್‌ನಲ್ಲಿ ಸತ್ತ ಕಪ್ಪೆ ಪತ್ತೆಯಾಗಿದೆ ಮತ್ತು ಈ ಕಪ್ಪೆಯನ್ನು ಚಿಪ್ಸ್‌ನೊಂದಿಗೆ ಹುರಿದಿರುವುದು ಕಂಡುಬಂದಿದೆ. ಅದರಲ್ಲಿದ್ದ ಕಪ್ಪೆ ಚೆನ್ನಾಗಿ ರೋಸ್ಟ್ ಆಗಿದೆ. ಈ ಸಂಬಂಧ ವ್ಯಕ್ತಿಯೊಬ್ಬರು ದೂರು ಸಹ ನೀಡಿದ್ದಾರೆ.
ಐಸ್ ಕ್ರೀಮ್‌ನಲ್ಲಿ ಶತಪದಿ ಹುಳು
ಮಹಿಳೆಯೊಬ್ಬರು ಮಕ್ಕಳಿಗಾಗಿ ತರಿಸಿದ್ದ ಅಮುಲ್ ಐಸ್‌ಕ್ರಿಮ್ ಡಬ್ಬದಲ್ಲಿ ಸತ್ತಿರುವ ಶತಪದಿ ಹುಳು ಪತ್ತೆಯಾಗಿತ್ತು. ಶತಪದಿಗಳೆಂದರೆ 10ಕ್ಕಿಂತ ಹೆಚ್ಚ ಕಾಲುಗಳಿರುವ ಚೇಳಿನಂತನ ಹುಳು ಆಗಿದೆ. ಇದು ವಿಷಕಾರಿಯಾಗಿರುತ್ತದೆ. ಎಚ್ಚರಿಕೆ ವಹಿಸದೆ ಅವರು ಐಸ್ ಕ್ರೀಮ್ ಸವಿದಿದ್ದರೆ ಜೀವಕ್ಕೆ ಹಾನಿಯಾಗುವ ಸಂಭವವಿತ್ತು.
ಏರ್ ಇಂಡಿಯಾ ಫುಡ್‌ನಲ್ಲಿ ಬ್ಲೇಡ್!
ಇತ್ತ ಅತ್ಯಂತ ಸುರಕ್ಷಿತ ಹಾಗೂ ಶುಚಿಯಾದ ಆಹಾರ ನೀಡಬೇಕಾದ ಏರ್ ಇಂಡಿಯಾದಲ್ಲಿ ನೀಡಲಾಗಿದ್ದ ಫುಡ್‌ನಲ್ಲಿ ಬ್ಲೇಡ್ ರೀತಿಯ ವಸ್ತು ಪತ್ತೆಯಾದ ಘಟನೆ ನಡೆದಿದೆ. ಬೆಂಗಳೂರಿನಿಂದ ಸ್ಯಾನ್‌ಫ್ರಾಂನ್ಸಿಕ್ಸೋಗೆ ತೆರಳುತ್ತಿದ್ದ ವಿಮಾನದಲ್ಲಿ ನೀಡಲಾಗಿದ್ದ ಆಹಾರದಲ್ಲಿ ಈ ರೀತಿಯ ಬ್ಲೇಡ್ ಪತ್ತೆಯಾಗಿದೆ. ಈ ಸಂಬಂಧ ಪ್ರಯಾಣಿಕರು ಪೋಸ್ಟ್ ಹಂಚಿಕೊಂಡು ಅಸಮಾಧಾನ ಹೊರಹಾಕಿದ್ದ ಬಳಿಕ ಸಂಸ್ಥೆ ತನಿಖೆಗೆ ಆಗ್ರಹಿಸಿದೆ.
ಇದಿಷ್ಟೇ ಅಲ್ಲದೆ ಬಿಹಾರದ ಇಂಜಿನಿಯರಿಂಗ್ ಕಾಲೇಜು ಕ್ಯಾಂಟೀನ್‌ನ ಊಟದಲ್ಲಿ ಸತ್ತಿರುವ ಹಾವು ಪತ್ತೆಯಾಗಿತ್ತು. ಅಲ್ಲದೆ ಕೆಲವು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದರು. ಈ ಸುದ್ದಿಯಿಂದ ಜನರು ಆತಂಕಕ್ಕೆ ಒಳಗಾಗಿದ್ದರು. ಈ ರೀತಿಯ ಘಟನೆಗಳು ಒಂದರ ಹಿಂದೆ ಒಂದರಂತೆ ನಡೆಯುತ್ತಲೇ ಇದೆ. ಕಳೆದೊಂದು ವಾರದಲ್ಲಿ ಇಷ್ಟೊಂದು ಘಟನೆಗಳು ವರದಿಯಾಗಿವೆ.



Click it and Unblock the Notifications
