Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
5ನೇ ಶ್ರಾವಣ ಸೋಮವಾರ : ಪೂಜಾ ವಿಧಿ, ಆಚರಣೆ ಹೇಗಿರಬೇಕು?
ಶ್ರಾವಣ ಹಿಂದೂಗಳಿಗೆ ಒಂದು ರೀತಿ ವಿಶೇಷವಾದ ತಿಂಗಳು. ಈ ಸಮಯದಲ್ಲಿ ಶಿವನಿಗೆ ಭಕ್ತಿಯಿಂದ ಪೂಜೆ ಮಾಡಿ, ಉಪವಾಸವನ್ನು ಕೈಗೊಂಡರೆ ಆತ ನಮ್ಮೆಲ್ಲರ ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಎಂಬ ನಂಬಿಕೆಯಿದೆ. ಅಷ್ಟಕ್ಕು ಐದನೇ ಶ್ರಾವಣ ಸೋಮವಾರ ಯಾವಾಗ? ಯಾವ ರೀತಿ ಪೂಜೆ ನೆರವೇರಿಸಬೇಕು ಅನ್ನೋದನ್ನು ತಿಳಿಯೋಣ.

5 ನೇ ಶ್ರಾವಣ ಸೋಮವಾರ 2023 ದಿನಾಂಕ :
ಐದನೇ ಶ್ರಾವಣ ಸೋಮವಾರದ ಉಪವಾಸವನ್ನು ಆಗಸ್ಟ್ 21, 2023 ರಂದು ಆಚರಿಸಲಾಗುತ್ತದೆ. ಈ ದಿನದಂದು ವಿವಾಹಿತರು ಅದೃಷ್ಟ ಮತ್ತು ಸಂಪತ್ತನ್ನು ಪಡೆಯಲು ನಿಯಮ ಮತ್ತು ನಿಬಂಧನೆಗಳನ್ನು ಪಾಲಿಸುವುದರ ಮೂಲಕ ಶಿವನ ಪೂಜೆಯನ್ನು ಮಾಡಬೇಕು. ಈ ಉಪವಾಸದ ಪರಿಣಾಮದಿಂದ ಸೂಕ್ತವಾದ ಜೀವನ ಸಂಗಾತಿಯನ್ನು ಪಡೆಯುವ ನಿಮ್ಮ ಬಯಕೆಯೂ ಈಡೇರುತ್ತದೆ.
5 ನೇ ಶ್ರಾವಣ ಸೋಮವಾರ 2023 ಮುಹೂರ್ತ :
ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ತಿಥಿಯು ಆಗಸ್ಟ್ 21, 2023 ರಂದು ಬೆಳಗ್ಗೆ 12:53 ಕ್ಕೆ ಪ್ರಾರಂಭವಾಗುತ್ತದೆ. ಮತ್ತು 21 ಆಗಸ್ಟ್ 2023 ರಂದು ಬೆಳಗ್ಗೆ 2:00 ರವರೆಗೆ ಇರುತ್ತದೆ. ನಂಬಿಕೆಗಳ ಪ್ರಕಾರ ನಾಗ ಪಂಚಮಿಯ ದಿನದಂದು ಹಾವುಗಳ ಪೂಜೆಗೆ ವಿಶೇಷ ಮಹತ್ವವಿದೆ. ಧಾರ್ಮಿಕ ನಂಬಿಕೆಯ ಪ್ರಕಾರ ಈ ದಿನದಂದು ನಾಗದೇವತೆಯನ್ನು ಪೂಜಿಸುವುದರಿಂದ ಜೀವನದಲ್ಲಿ ಸಮಸ್ಯೆಗಳು ನಾಶವಾಗುತ್ತವೆ. ಅಲ್ಲದೆ ವ್ಯಕ್ತಿಯ ಎಲ್ಲಾ ಆಸೆಗಳು ಈಡೇರುತ್ತಂತೆ.
ಶ್ರಾವಣ ಸೋಮವಾರದಂದು ಶಿವನ ಆರಾಧನೆಯ ಮಹತ್ವವೇನು?
ಶಿವನ ಅರ್ಧನಾರೀಶ್ವರ ರೂಪವು ಅರ್ಧ ಹೆಣ್ಣು ಮತ್ತು ಅರ್ಧ ಗಂಡು. ಮನುಕುಲವನ್ನು ಜಗತ್ತಿನಲ್ಲಿ ಮುನ್ನಡೆಸಲು ಶಿವನು ಅರ್ಧನಾರೀಶ್ವರನ ರೂಪವನ್ನು ಪಡೆದಿದ್ದನು. ಶ್ರಾವನ ಸೋಮವಾರದಂದು ಶಿವನ ಅರ್ಧನಾರೀಶ್ವರ ರೂಪವನ್ನು ಪೂಜಿಸುವುದರಿಂದ ಸಂತಾನ ಪ್ರಾಪ್ತಿಯಾಗುತ್ತದೆ. ಮತ್ತು ಪತಿ-ಪತ್ನಿಯರಲ್ಲಿ ಮಾಧುರ್ಯ ಹೆಚ್ಚಾಗುತ್ತಂತೆ.
ಸಾವನ ಸೋಮವಾರದಂದು ಶಿವನನ್ನು ಆರಾಧನೆ ಮಾಡುವವರು ಭಕ್ತಿಯಿಂದ ಎಲ್ಲಾ ಪೂಜಾ ವಿಧಾನಗಳನ್ನು ಕೈಗೊಳ್ಳಬೇಕು. ಬೆಳಗ್ಗೆ ಬೇಗನೆ ಎದ್ದು ಶಿವನಿಗೆ ಜಲಾಭಿಷೇಕವನ್ನು ಮಾಡಿ. ನಂತರ 'ಓಂ ಮಹಾದೇವಾಯ ಸರ್ವ ಕಾರ್ಯ ಸಿದ್ಧಿ ದೇಹಿ-ದೇಹಿ ಕಾಮೇಶ್ವರಾಯ ನಮಃ ಮಂತ್ರವನ್ನು 108 ಬಾರಿ ಜಪಿಸಿ. ಸಾಧ್ಯವಾದ್ರೆ ನೀವು ಅರ್ಧನಾರೀಶ್ವರ ಸ್ತೋತ್ರವನ್ನು ಸಹ ಪಠಿಸಬಹುದು. ಕೊನೆಯಲ್ಲಿ ಭೋಲೆನಾಥನ ಆರತಿಯನ್ನು ಮಾಡಿ ನಂತರ ಪ್ರಸಾದವನ್ನು ವಿತರಿಸಿ.



Click it and Unblock the Notifications
