Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಗಳ ತಲೆಗೆ ಸಿಸಿಟಿವಿ ಕೂರಿಸಿದ ತಂದೆ..! ಏಕೆ ಗೊತ್ತಾ?
ಸಾಮಾಜಿಕ ಜಾಲತಾಣಗಳಲ್ಲಿ ಎಂತಹ ಅಸಾಮಾನ್ಯ, ವಿಚಿತ್ರ ವಿಡಿಯೋಗಳನ್ನ ನಾವು ನೋಡುತ್ತೇವೆ ಅಂದ್ರೆ ಕೆಲವೊಮ್ಮೆ ಅಂತಹ ಘಟನೆ ನಡೆದಿದೆ ಎನ್ನುವುದನ್ನು ನೋಡಿದರೂ ಸಹ ನಮಗೆ ಅಚ್ಚರಿ ಮೂಡುತ್ತದೆ. ಕೆಲವೊಂದು ವಿಚಾರಗಳು ಹೀಗೂ ನಡೆಯಲು ಸಾಧ್ಯವೇ ಎನ್ನುವಂತಹ ಪ್ರಶ್ನೆ ಮೂಡಿಸುತ್ತವೆ.
ಅದೇ ರೀತಿ ಇಲ್ಲೊಂದು ವಿಡಿಯೋ ಸಹ ಈಗ ನೀವೆಲ್ಲಾ ನೋಡಿರದ ಕೇಳಿರದ ವಿಚಾರಕ್ಕೆ ವೈರಲ್ ಆಗಿದೆ. ಅದರಲ್ಲಿ ಯುವತಿಯೊಬ್ಬಳ ತಲೆ ಮೇಲೆ ಸಿಸಿಟಿವಿ ಕ್ಯಾಮರಾವfನು ಅಳವಡಿಸಿರುವುದು. ಹೌದು ಕೆಳಲು ಎಷ್ಟು ವಿಚಿತ್ರ ಎನಿಸುತ್ತಿದೆಯೋ ಈ ಘಟನೆ ನಡೆದಿರುವುದು ಸಹ ಅಷ್ಟೇ ವಿಚಿತ್ರ.

ಯುವತಿಯ ತಲೆ ಮೇಲೆ ಸಿಸಿಟಿವಿ ಇರುವ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ಇದು ಪಾಕಿಸ್ತಾನದ ವಿಡಿಯೋ ಎಂದು ಹೇಳಲಾಗಿದೆ. ವಿಚಿತ್ರ ಏನೆಂದರೆ ಈ ಸಿಸಿಟಿವಿಯನ್ನು ಖುದ್ದು ಯುವತಿಯ ತಂದೆಯೇ ಆಕೆಗೆ ಹಾಕಿದ್ದಾರಂತೆ. ಆಕೆ ನಿತ್ಯ ಏನೇನು ಮಾಡುತ್ತಾಳೆ, ಯಾರ ಜೊತೆ ಮಾಡುತ್ತಾಳೆ ಎಂಬುದನ್ನು ಪತ್ತೆ ಮಾಡುವ ಉದ್ದೇಶದಿಂದ ಆಕೆಯ ತಂದೆ ಈ ರೀತಿ ಮಾಡಿರುವುದಾಗಿ ಆಕೆ ಒಪ್ಪಿಕೊಳ್ಳುತ್ತಾಳೆ.
ಈ ವಿಡಿಯೋ ನೋಡಿದ ಮಂದಿ ನಿಜಕ್ಕೂ ಅಚ್ಚರಿಗೆ ಒಳಗಾಗಿದ್ದಾರೆ. ಏಕೆಂದರೆ ಪಾಕಿಸ್ತಾನದಲ್ಲಿ ಅದರಲ್ಲೂ ಮುಸ್ಲಿಂ ಮಹಿಳೆಯರ ಮೇಲಿನ ನಿರಂತರ ದಬ್ಬಾಳಿಕೆ ಕುರಿತಂತೆ ಹಲವು ವಿಡಿಯೋಗಳು ಈವರೆಗೆ ಹರಿದಾಡಿದ್ದರೂ ಕೂಡ ಇಂತಹ ವಿಚಿತ್ರ ವಿಡಿಯೋಗಳು ಘಟನೆಗಳು ವರದಿಯಾಗಿರಲಿಲ್ಲ.
ಸದ್ಯ ಈ ವಿಡಿಯೋ ಎಕ್ಸ್ ಖಾತೆಯಲ್ಲಿ ವ್ಯಕ್ತಿಯೊಬ್ಬರು ಹಂಚಿಕೊಂಡಿದ್ದು ಮೊದಲಿಗೆ ಇದನ್ನು ಎಲ್ಲರೂ ಪೂರ್ವ ನಿಯೋಜಿತ ವಿಡಿಯೋ ಎಂದೇ ಭಾವಿಸಿದ್ದಾರೆ. ಆದರೆ ವಿಡಿಯೋದಲ್ಲಿ ಆಕೆ ಈ ರೀತಿ ಮಾಡಿದ್ದೇಕೆ ಎಂಬುದನ್ನು ವಿವರಿಸುತ್ತಿದ್ದಾಳೆ. ಬದಲಿಗೆ ಪಾಕಿಸ್ತಾನದ ಕರಾಚಿಯಲ್ಲಿ ಅಪರಾಧಗಳ ಹೆಚ್ಚಳಕ್ಕೆ ಗಂಭೀರ ಪ್ರತಿಕ್ರಿಯೆಯಾಗಿದೆ ಎಂದು ವಿವರಿಸಲಾಗುತ್ತಿದೆ. ಅಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡುವ ಉದ್ದೇಶದಿಂದ ಈ ರೀತಿಯ ಕ್ರಮಕ್ಕೆ ಮುಂದಾಗಿರಬಹುದು ಎಂದು ಸಹ ಹೇಳಲಾಗುತ್ತಿದೆ.
ಆದರೆ ಈ ವಿಡಿಯೋ ನಕಲಿ ಎಂದು ಭಾವಿಸುತ್ತದೆ. ಆದರೆ ಇದು ಎಷ್ಟರ ಮಟ್ಟಿಗೆ ಅಸಲಿ ಎಂಬುದು ಸಾಬೀತಾಗಬೇಕಿದೆ. ಕರಾಚಿಯಲ್ಲಿ ಅಪರಾಧ ಕೃತ್ಯ ಹೆಚ್ಚಾಗಿದೆ. ಹಗಲಿನಲ್ಲೂ ಅಲ್ಲಿ ಕೊಲೆ, ಅಪಹರಣದಂತಹ ಘಟನೆ ನಡೆಯುತ್ತಿರುವ ಹಿನ್ನೆಲೆ ತಂದೆಯೊಬ್ಬರು ಈ ರೀತಿ ಮಾಡಿದ್ದಾರೆ ಎಂಬುದು ಅಲ್ಲಿನ ಮಾಧ್ಯಮಗಳಲ್ಲಿ ವರದಿಯಾಗಿದೆ.
ಅಲ್ಲದೆ ನನಗೆ ಯಾರಾದರು ಹೊಡೆದರೆ, ದಾಳಿ ಮಾಡಿದರೆ ಪೊಲೀಸರ ಬಳಿ ತೆರಳಲು ನನಗೆ ಸಾಕ್ಷಿ ಸಹ ಇದರಲ್ಲಿ ಸಿಗುತ್ತದೆ ಎಂಬುದನ್ನು ಆಕೆ ಹೇಳಿಕೊಳ್ಳುತ್ತಿದ್ದಾಳೆ. ಆದರೆ ಈ ವಿಡಿಯೋ ನೋಡಿದ ಮಂದಿ ಮಾತ್ರ ಶಾಕ್‌ಗೆ ಒಳಗಾಗಿದ್ದಾರೆ, ಇದರ ಅರ್ಥ ಆಕೆಗೆ ಯಾವುದೇ ಸ್ವಾತಂತ್ರ್ಯ ಇಲ್ಲದ ಯಾಂತ್ರಿಕ ಬದುಕು ನಡೆಸುತ್ತಿದ್ದಾಳೆ. ಇದರಲ್ಲಿ ಸ್ವಾರ್ಥ ಇದೆಯೇ ಹೊರತು, ಕಿರುಕುಳ ಕಾಣುತ್ತಿದೆಯೇ ಹೊರತು ಪ್ರೀತಿ ಎಳ್ಳಷ್ಟು ಕಾಣಿಸುತ್ತಿಲ್ಲ ಎಂದು ಬಳಕೆದಾರರೊಬ್ಬರು ಬರೆದುಕೊಂಡಿದ್ದಾರೆ.
ಮತ್ತೆ ಕೆಲವರು ಇದೊಂದು ಫೇಕ್ ವಿಡಿಯೋ ಎಂದು ವಾದಿಸಿದ್ದಾರೆ. ಯಾರಾದರು ಮನೆಗೆ ಅಥವಾ ಗೇಟ್, ಕಾಂಪೌಂಡ್‌ಗೆ ಸಿಸಿಟಿವಿ ಅಳವಡಿಸುತ್ತಾರೆ, ಹೀಗೆ ತಲೆಗೆ ಯಾಕೆ ಹಾಕುತ್ತಾರೆ. ತೆಲೆಗೆ ಹಾಕಿದರೆ ಸಿಸಿಟಿವಿಯನ್ನು ನಾಶ ಮಾಡುವುದು ಇನ್ನೂ ಸುಲಭವಾಗುವುದಿಲ್ಲವೇ ಎಂಬ ಪ್ರಶ್ನೆ ಸಹ ಮಾಡಿದ್ದಾರೆ. ಆನ್‌ಲೈನ್‌ನಲ್ಲಿ ವೈರಲ್ ಆಗುವ ಉದ್ದೇಶದಿಂದ ಈ ರೀತಿಯ ವಿಡಿಯೋ ಮಾಡಿ ಹರಿಬಟ್ಟಿದ್ದಾರೆ ಎಂದು ಹಲವರು ಶಂಕೆ ಹೊರಹಾಕಿದ್ದಾರೆ.
ಆದ್ರೆ ಒಂದು ವೇಳೆ ಈ ವಿಡಿಯೋ ನಿಜವೇ ಆಗಿದ್ದರೇ ಮುಂದೊಂದು ದಿನ ಎಲ್ಲರು ಇಂತಹ ಕ್ಯಾಮರಾವನ್ನು ತೆಲೆಗೆ ಹಾಕಿಕೊಂಡು ಓಡಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಹುದು.



Click it and Unblock the Notifications
