Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಪುಟ್ಟ ಕಂದಮ್ಮನಿಗೆ ಕಣ್ಣೀರಿನಿಂದ ಬೌಲ್ ತುಂಬಿಸುವ ಶಿಕ್ಷೆ ನೀಡಿದ ತಂದೆ..! ಏಕೆ ಗೊತ್ತಾ?
ಪುಟ್ಟ ಮಕ್ಕಳು ಹಠ ಮಾಡುವು ತುಂಟಾಟ ಮಾಡುವುದು ಕಾಮನ್, ಆದ್ರೆ ಮುದ್ದು ಮಕ್ಕಳ ತುಂಟಾಟಕ್ಕೆ ಪೋಷಕರ ಕೋಪಗೊಂಡರು ಕೂಡ ಅವರನ್ನು ಮುದ್ದಿಸುತ್ತಾರೆ. ಯಾಕಂದ್ರೆ ಮಕ್ಕಳ ತುಂಟಾಟ ನೋಡೋದೆ ಚಂದ ಅನ್ನೋದು ಪೋಷಕರ ಮಾತು. ಮನೆ ತುಂಬ ಮಕ್ಕಳಿದ್ದರೆ ಅದು ಬೃಂದಾವಣ ಇದ್ದಂತೆ ಎಂದು ಹಿರಿಯರು ಸಹ ಹೇಳುವುದನ್ನು ನಾವು ಕೇಳಿದ್ದೇವೆ.
ಯಾವ ಮನೆಯಲ್ಲಿ ಮಕ್ಕಳು ತುಂಟಾಟ ಮಾಡಲ್ಲ ಹೇಳಿ. ಮಕ್ಕಳಿರುದೇ ತುಂಟಾಟ ಮಾಡೋದಕ್ಕೆ, ಮನೆಯಲ್ಲಿ ಕುಣಿದು ಕುಪ್ಪಳಿಸುವುದಕ್ಕೆ. ಆದ್ರೆ ಇಲ್ಲೊಬ್ಬ ಅಪ್ಪ ತನ್ನ ಮಗಳಿಗೆ ನೀಡಿದ ಶಿಕ್ಷೆ ಬಗ್ಗೆ ಕೇಳಿದ್ರೆ ನಿಮಗೆ ಶಾಕ್ ಆಗೋದು ಗ್ಯಾರಂಟಿ. ಇತ್ತೀಚಿಗೆ ಸಣ್ಣ ಮಕ್ಕಳಿಗೂ ಓದಿಕೊಳ್ಳುವಂತೆ ಪೋಷಕರು ಒತ್ತಡ ಹಾಕುತ್ತಲೇ ಇರುತ್ತಾರೆ.

ಮಗು ಬೇಬಿ ಸಿಟ್ಟಿಂಗ್‌ನಿಂದ ಹಿಡಿದು ಎಲ್‌ಕೆಜಿ ಯುವಕೆಗೆ ಹೋಗಲು ಆರಂಭಿಸಿದಾಗಲೆ ಅವರಿಗೆ ಓದು, ಬರಹ ಎಂದು ಪೋಷಕರು ಒತ್ತಡ ಹಾಕಲು ಮುಂದಾಗುತ್ತಾರೆ. ಇದು ಎಲ್ಲರ ಮನೆಯ ಸಮಸ್ಯೆಯೂ ಹೌದು. ಆದ್ರೆ ಆಟವಾಡಬೇಕಾದ ಮಕ್ಕಳು ಈ ವಯಸ್ಸಿನಲ್ಲಿ ಓದಿ ಎಂದರೆ ಏನು ಕಣ್ಣೀರಿಡುತ್ತವೆ, ಇಲ್ಲವೆ ತಮ್ಮ ತಂದೆ ತಾಯಿ ಮೇಲೆ ಕೋಪಗೊಳ್ಳುವುದು ಮಾಡುತ್ತವೆ.
ಇಲ್ಲೊಬ್ಬ ತಂದೆ ಮಗು ಟಿವಿ ನೋಡುತ್ತಿದೆ ಎಂದು ಕೋಪಗೊಂಡು ಮಗುವಿಗೆ ಬೌಲ್‌ಗೆ ಕಣ್ಣೀರು ತುಂಬಿಸುವ ಶಿಕ್ಷೆ ನೀಡಿರುವ ವಿಚಿತ್ರ ಹಾಗೂ ಅಮಾನವೀಯ ಘಟನೆ ನಡೆದಿದೆ. ಹೌದು ಪುಟ್ಟ ಮಕ್ಕಳನ್ನು ಪೋಷಕರು ಎಷ್ಟು ಪ್ರೀತಿಸುತ್ತಾರೆ, ಆದ್ರೆ ಈ ಪಾಪಿ ತಂದೆ ಮಗುವಿಗೆ ಅಳುವ ಮೂಲಕ ಬೌಲ್‌ಗ ತನ್ನ ಕಣ್ಣೀರು ತುಂಬಿಸಬೇಕು ಎಂಬ ಶಿಕ್ಷೆ ವಿಧಿಸಿದ್ದಾನೆ.
ಚೀನಾದಲ್ಲಿ ತಂದೆಯೊಬ್ಬ ತನ್ನ ಮಗು ಟವಿ ನೋಡುತ್ತಿತ್ತು ಎಂದು ಈ ರೀತಿಯ ಶಿಕ್ಷೆ ನೀಡಿರುವುದು ಈಗ ಭಾರೀ ಚರ್ಚೆಯಾಗುತ್ತಿದೆ. ಮೂರು ವರ್ಷದ ಮಗಳು ಮನೆಯಲ್ಲಿ ಟಿವಿ ನೋಡುತ್ತಿದೆ ಎಂದು ಸಿಟ್ಟಿಗೆದ್ದ ಅಪ್ಪ ಆಕೆಯ ಕೈಗೆ ಒಂದು ಬೌಲ್ ನೀಡಿ ಕಣ್ಣೀರಿನಿಂದ ಈ ಬೌಲ್ ತುಂಬಿಸುವಂತೆ ಹೇಳಿದ್ದಾನೆ. ಮಗು ಕೂಡ ಅಳುವ ಮೂಲಕ ಕಣ್ಣೀರನ್ನು ಸುರಿಸಿ ಬೌಲ್ ತುಂಬಿಸಲು ಯತ್ನಿಸುತ್ತಿರುವುದು ಕಾಣಬಹುದು. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ತಾಯಿ ಮತ್ತು ತಂದೆ ಎದುರಲ್ಲೇ ಜಿಯಾಜಿಯಾ ಎಂಬ ಮೂರು ವರ್ಷದ ಮಗು ತನ್ನ ಕೈಗೆ ನೀಡಿದ್ದ ಬೌಲ್‌ಗೆ ಕಣ್ಣೀರು ಸುರಿಸುತ್ತಿರುವುದು ನೋಡಬಹುದು. ಈ ವಿಡಿಯೋ ನೋಡಿದ ಮಂದಿ ತಂದೆಯ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ದಕ್ಷಿಣ ಚೀನಾದ ಗುವಾಂಗ್ಸಿ ಜುವಾಂಗ್ ಪ್ರದೇಶದ ಯುಲಿನ್‌ನಲ್ಲಿ ವಾಸಿಸುವ ತಂದೆ ಮಗುವನ್ನು ಊಟಕ್ಕೆಂದು ಕರೆದಿದ್ದಾನೆ. ಆದರೆ ಮಗು ಟಿವಿ ನೋಡುವುದರಲ್ಲಿ ಮಗ್ನನಾಗಿತ್ತಂತೆ. ಎಷ್ಟು ಕರೆದರು ಊಟಕ್ಕೆ ಬರಲಿಲ್ಲ, ಈ ವೇಳೆ ಎದ್ದು ಬಂದ ತಂದೆ ಟಿವಿ ಬಂದ್ ಮಾಡಿದ್ದಾರೆ. ಬಳಿಕ ಮಗು ಅಳಲು ಆರಂಭಿಸಿದೆ. ಇದರಿಂದ ಮತ್ತಷ್ಟು ಕೋಪಗೊಂಡ ತಂದೆ ಅಲ್ಲೇ ಇದ್ದ ಬೌಲ್ ಅನ್ನು ಮಗುವಿಗೆ ನೀಡಿ ನಿನ್ನ ಕಣ್ಣೀರು ಈ ಬೌಲ್‌ಗೆ ತುಂಬಿಸಬೇಕು ಎಂದಿದ್ದಾನೆ.
ಅಲ್ಲದೆ ನಿನ್ನ ಕಣ್ಣೀರು ತುಂಬಿದ ಬಳಿಕ ಮಾತ್ರ ಮತ್ತೆ ನೀನು ಈ ಟಿವಿ ನೋಡಬಹುದು ಅಲ್ಲಿಯವರೆಗೂ ಟಿವಿ ನೋಡುವಂತಿಲ್ಲ ಎಂದು ಶಿಕ್ಷೆ ವಿಧಿಸಿದ್ದಾನೆ. ಈ ವೇಳೆ ಮಗು ಕೂಡ ಬೌಲ್‌ನಲ್ಲಿ ಕಣ್ಣೀರು ಸುರಿಸಲು ಮುಂದಾಗಿದೆ. ಈ ವಿಡಿಯೋ ನೋಡಿದ ಮಂದಿ ತಂದೆ-ತಾಯಿಯನ್ನ ಕಟುವಾಗಿ ಟೀಕಿಸಿದ್ದಾರೆ. ಮಕ್ಕಳಿಗೆ ಮುದ್ದಾಗಿ ಬುದ್ದಿ ಹೇಳಬೇಕೆ ಹೊರತು ಈ ರೀತಿ ಶಿಕ್ಷೆ ವಿಧಿಸೋದು ಅವರ ಮನಸ್ಸಿನ ಮೇಲೆ ಭೀಕರ ಪರಿಣಾಮ ಉಂಟು ಮಾಡಲಿದೆ ಎಂದಿದ್ದಾರೆ.



Click it and Unblock the Notifications
