Latest Updates
-
ಆಗಸ್ಟ್ 15 ಧ್ವಜಾರೋಹಣ: ಬೆಂಗಳೂರಿನಲ್ಲಿ ಜೋಡಿಗಳು ಪಾಲಿಸಬೇಕಾದ ಪ್ರಮುಖ ನಿಯಮಗಳಿವು! -
ಆನ್ಲೈನ್ ಸೆಕ್ಸ್ಟಾರ್ಷನ್ ವಂಚನೆ: ಅಪರಿಚಿತ ವಿಡಿಯೋ ಕಾಲ್ ರಿಸೀವ್ ಮಾಡಿದ್ರೆ ಹುಷಾರ್, ಇಲ್ಲಿದೆ ಎಚ್ಚರಿಕೆ! -
ಮಳೆಗಾಲದ ಕಿರಿಕಿರಿ ಬೇಡವೇ? ₹999 ಒಳಗೆ ಸಿಗುವ ಈ ಸ್ಮಾರ್ಟ್ ವಸ್ತುಗಳು ನಿಮ್ಮ ಮನೆಗೆ ಮಸ್ಟ್! -
ಜಂಕ್ ಫುಡ್ ಪ್ಯಾಕೆಟ್ ಮೇಲೆ ಎಚ್ಚರಿಕೆ ಲೇಬಲ್ ಕಡ್ಡಾಯ: ಸುಪ್ರೀಂ ಕೋರ್ಟ್ನಿಂದ ಕಂಪನಿಗಳಿಗೆ ಖಡಕ್ ಎಚ್ಚರಿಕೆ! -
ಆಗಸ್ಟ್ 14 ಮತ್ತು 15ರ ಗೊಂದಲ ಬೇಡ: ಸೋಶಿಯಲ್ ಮೀಡಿಯಾದಲ್ಲಿ ಡಿಪಿ ಮತ್ತು ಪೋಸ್ಟ್ ಹಾಕುವಾಗ ಈ ತಪ್ಪು ಮಾಡ್ಬೇಡಿ! -
ಬಂಬಲ್ ಆಪ್ನಲ್ಲಿ ಮಹತ್ವದ ಬದಲಾವಣೆ: ಡೇಟಿಂಗ್ನಲ್ಲಿ ಸಂಭಾಷಣೆ ಶುರು ಮಾಡುವುದು ಹೇಗೆ? -
ಬೆಂಗಳೂರಿನ ಡೇಟಿಂಗ್ ಆ್ಯಪ್ಗಳಲ್ಲಿ ಹೊಸ ವಂಚನೆ: ಪಬ್ಗಳಲ್ಲಿ ಹಣ ಕಳೆದುಕೊಳ್ಳದಂತೆ ಪಾರಾಗುವುದು ಹೇಗೆ? -
ಬೆಂಗಳೂರಿನಲ್ಲಿ ಮಳೆಗಾಲ: ನಿಮ್ಮ ಅಪಾರ್ಟ್ಮೆಂಟ್ನಲ್ಲಿ ಹಾವುಗಳ ಕಾಟವೇ? ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ! -
ಇಂದು ರಾತ್ರಿ ಆಕಾಶದಲ್ಲಿ ಅದ್ಭುತ: ಪರ್ಸೀಡ್ಸ್ ಉಲ್ಕಾಪಾತ ವೀಕ್ಷಿಸಲು ಮತ್ತು ಫೋಟೋ ತೆಗೆಯಲು ಸರಳ ಟಿಪ್ಸ್ -
ಮಳೆಗಾಲದಲ್ಲಿ ಹೊರಗಿನ ಊಟ ಅಪಾಯಕಾರಿ: ಆನ್ಲೈನ್ ಫುಡ್ ಆರ್ಡರ್ ಮಾಡುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ವಿಚ್ಛೇದನ ಪಡೆದ ಮಗಳನ್ನು ಹಬ್ಬದ ಸಂಭ್ರಮದಂತೆ ಮನೆಗೆ ಕರೆತಂದ ತಂದೆ..!
ಭಾರತೀಯ ಸಂಸ್ಕೃತಿಯಲ್ಲಿ ಮದುವೆ ಅನ್ನೋದು ಒಂದು ಪ್ರತಿಷ್ಠೆಯ ಪ್ರದರ್ಶನವಾಗಿ ಬದಲಾಗುತ್ತಿದೆ. ಅದರಲ್ಲೂ ರೂಢಿ, ಆಚರಣೆಗಳು ಅದರಲ್ಲಿ ಹಾಸುಹೊಕ್ಕಾಗಿದೆ. ಮದುವೆಗೆ ತನ್ನದೇ ಆಗಿರುವ ಪ್ರಾಮುಖ್ಯತೆ ಇದೆ. ಇನ್ನು ವಿಚ್ಛೇದನ ಎಂದರೆ ಇಡೀ ಸಮಾಜ ದಿಕ್ಕರಿಸುವ ಪ್ರಕ್ರಿಯೆ. ಅದರಲ್ಲೂ ಹಿಂದೂ ಸಮಾಜದಲ್ಲಿ ವಿಚ್ಛೇದನ ಎಂಬುದ ಘೋರ ಅಪರಾಧದಂತೆ ಕಾಣಲಾಗುತ್ತದೆ.
ಮಹಿಳೆ ವಿಚ್ಛೇದನ ಪಡೆದರೆ ಆಕೆಯನ್ನ ಇಡೀ ಕುಟುಂಬ ಸೇರಿ ಸಮಾಜವೇ ತಿರಸ್ಕಾರದಿಂದ ಕಾಣುವ ಸಮಾಜದಲ್ಲಿ ಭಾರತ ಸಿಲುಕಿದೆ. ಆದರೆ ಕೆಲವೊಂದು ಪ್ರಕರಣದಲ್ಲಿ ನಮ್ಮ ಈ ವಿಚಾರಗಳು ಬುಡಮೇಲಾಗುತ್ತದೆ. ಇಲ್ಲೊಂದು ಪ್ರಕರಣದಲ್ಲೂ ಸಹ ಇದೆಲ್ಲವು ಸುಳ್ಳು ಎಂಬಂತಾಗಿದೆ.

ವಿಚ್ಛೇದನ ಪಡೆದ ಮಗಳನ್ನು ತಂದೆ ಡೋಲು ಬಾರಿಸಿ ಅದ್ದೂರಿಯಾಗಿ ಮನೆಗೆ ಕರೆತಂದಿರುವ ಅಪರೂಪದ ಘಟನೆ ನಡೆದಿದೆ. ಹೌದು ವಿಚ್ಛೇದನ ಪಡೆದ ಮಗಳನ್ನು ದೂರವಿಟ್ಟು, ಆಕೆಯ ಜೊತೆ ನಿಲ್ಲಲು ಹಿಂದೇಟು ಹಾಕುವ ಮಂದಿಯ ನಡುವೆ ಈ ತಂದೆಯ ಕಾರ್ಯ ಮಾದರಿಯಾಗುತ್ತಿದೆ.
ಹೆಣ್ಣು ಮಕ್ಕಳಿಗೆ ತಂದೆ ಕೊನೆಯವರೆಗೂ ಕೈ ಬಿಡುವುದಿಲ್ಲ ಹೇಗಿದ್ದರೂ ಆಶ್ರಯದಾತನಾಗುತ್ತಾನೆ ಎಂಬ ಮಾತನ್ನು ಈ ಪ್ರಕರಣ ಮತ್ತೆ ಸಾಬೀತುಪಡಿಸಿದೆ. ಉತ್ತರ ಪ್ರದೇಶದಲ್ಲಿ ಈ ಅಚ್ಚರಿಯ ಘಟನೆ ನಡೆದಿದೆ. ಜೊತೆಗೆ ಅದರ ವಿಡಿಯೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಭಾರೀ ಮೆಚ್ಚುಗೆಗೆ ಪಾತ್ರವಾಗಿವೆ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಅನಿಲ್ ಕುಮಾರ್ ಮತ್ತು ಕುಸುಮಲತಾ ತಮ್ಮ ಮಗಳು ಉರ್ವಿಯನ್ನು ಮರಳಿ ಮನೆಗೆ ಕರೆತರಲು ಮುಂದಾಗಿರುವುದನ್ನು ನಾವು ನೋಡಬಹುದು. ನವದೆಹಲಿಯ ಪಾಲಂ ಏರ್‌ಪೋರ್ಟ್‌ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ 36 ವರ್ಷದ ಊರ್ವಿ 2016ರಲ್ಲಿ ವಿವಾಹವಾಗಿದ್ದರು.
ದಂಪತಿ ಇಬ್ಬರು ಇಂಜಿನಿಯರ್ ಆಗಿದ್ದರು. ಮದುವೆಯಾಗಿ 6 ವರ್ಷ ಕಳೆದರು ಇಬ್ಬರಲ್ಲಿ ಅನ್ಯೋನ್ಯತೆ ಇರಲಿಲ್ಲ. ಜೊತೆಗೆ ಊರ್ವಿಯ ಅತ್ತೆ ವರದಕ್ಷಿಣೆ ತರುವಂತೆ ಯಾವಗಲೂ ಪೀಡಿಸುತ್ತಿದ್ದಳಂತೆ. ಇದೇ ಕಾರಣಕ್ಕೆ ಸಂಬಂಧವೂ ಮುರಿದುಬಿದ್ದಿದೆ. ಇದಾಗಿ ಹಲವು ವರ್ಷ ಆಕೆ ಗಂಡನ ಮನೆಯಲ್ಲಿ ಹಿಂಸೆಯ ನಡುವೆಯೇ ಜೀವಿಸಿದ್ದಳು, ಆದರೆ ಅಂತಿಮವಾಗಿ ಗಮಡನಿಂದ ವಿಚ್ಛೇದನ ಪಡೆಯಲು ಆಕೆ ಅರ್ಜಿಸಲ್ಲಿಸಿದ್ದಳು.
ಆಕೆಯನ್ನು ಮದುವೆ ಮಾಡಿ ಕಳುಹಿಸಿಕೊಟ್ಟಂತೆಯೇ ಆಕೆಯನ್ನು ಮರಳಿ ಮನೆಗೆ ಕರೆತಂದಿದ್ದೇವೆ. ಆಕೆ ತನ್ನ ಜೀವನ ಮತ್ತೆ ಹೊಸದಾಗಿ ಆರಂಭಿಸಬೇಕು ಎಂಬುದಷ್ಟೇ ನಮ್ಮ ಬಯಕೆಯಾಗಿದೆ ಎಂದು ಬಿಎಸ್‌ಎನ್‌ಎಲ್ ಉದ್ಯೋಗಿ ಹುಡುಗಿಯ ತಂದೆ ಅನಿಲ್ ಕುಮಾರ್ ಹೇಳಿದ್ದಾರೆ.
ಆಕೆಯನ್ನು ಮನೆಗೆ ಕರೆತರುವಾಗ ಸುಮ್ಮನೆ ಬಂದರೆ ಯಾರಿಗೂ ಈ ವಿಚಾರ ತಿಳಿಯುವುದಿಲ್ಲ. ಈ ರೀತಿ ಸಂಭ್ರಮದ ಮೂಲಕ ಕರೆತಂದರೆ ಒಂದಿಷ್ಟು ಜನರ ಮನ ಪರಿವರ್ತನೆ ಆದರೂ ಆಗಲಿ ಎಂಬುದು ನನ್ನ ಕಳಕಳಿಯಾಗಿತ್ತು. ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಕೊಟ್ಟ ನಂತರವೂ ಅವರನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದು ಹುಡುಗಿಯ ತಂದೆ ಹೇಳಿದ್ದಾರೆ.
ವಿಡಿಯೋದಲ್ಲಿ ಆಕೆ ಮನೆಗೆ ಬರುವ ಮುನ್ನ ಗಂಡನ ಮನೆಗೆ ಗೇಟಿಗೆ ಸೇರೆಯನ್ನು ಇಟ್ಟು ಬಳಿಕ ಕಣ್ಣೀರು ಒರೆಸಿಕೊಳ್ಳುತ್ತಿರುವುದನ್ನು ನಾವು ನೋಡಬಹುದು. ಇನ್ನೊಂದು ಕಡೆ ಆಕೆಯ ತಂದೆ ಸಂಭ್ರಮದಿಂದ ಆಕೆಯನ್ನು ಬರ ಮಾಡಿಕೊಳ್ಳುತ್ತಿದ್ದಾರೆ. ಜೊತೆಗೆ ಮದುವೆ ಮನೆಯ ಸಂಭ್ರಮದಂತೆ ಡೋಲು ಬಡಿಯುತ್ತಾ ಆಕೆಯನ್ನು ತಮ್ಮ ಮನೆಯ ಕಡೆ ಕರೆದೊಯ್ಯುತ್ತಿರುವುದನ್ನು ನಾವು ನೋಡಬಹುದು.
ಪ್ರತಿಯೊಬ್ಬ ಯುವತಿಯ ಮನೆಯಲ್ಲೂ ಇಂತಹ ತಂದೆ ಇದ್ದರೆ ಯಾವ ವಿಚ್ಛೇದನದ ಬಳಿಕವೂ ಮಹಿಳೆಯರು ಒಂಟಿಯಾಗಿ ಬದುಕಬೇಕಾದ ಅನಿವಾರ್ಯತೆ ಹಾಗೂ ಅರ್ಧದಲ್ಲೇ ತಮ್ಮ ಜೀವನ ಅಂತ್ಯಗೊಳಿಸುವ ಪ್ರಕರಣಗಳೇ ಸಂಭವಿಸುತ್ತಿರಲಿಲ್ಲ ಎಂಬುದು ವಿಡಿಯೋ ನೋಡಿದವರ ಅಭಿಪ್ರಾಯವಾಗಿದೆ.



Click it and Unblock the Notifications