Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ರೈತನ ಅದೃಷ್ಟ ಬದಲಿಸಿತು ಒಂದು ಮಾವಿನ ಗಿಡ..! ಕೆ.ಜಿ ಮಾವಿಗೆ ₹3 ಲಕ್ಷ
ರೈತ ದೇಶದ ಬೆನ್ನೆಲುಬು ಎನ್ನುವ ಮಾತಿದೆ. ಎಷ್ಟೇ ಕಷ್ಟವಿದ್ದರೂ ಆತ ಭೂಮಿ ತಾಯಿಯ ನಂಬಿಕೊಂಡು ವ್ಯವಸಾಯ ಮಾಡುತ್ತಾನೆ. ಲಾಭ ನಷ್ಟದ ಲೆಕ್ಕಾಚಾರಕ್ಕಿಂತಲೂ ಆತ ವ್ಯವಸಾಯವನ್ನೇ ಹೆಚ್ಚಾಗಿ ಪ್ರೀತಿಸುತ್ತಾನೆ. ಆದರೆ ಹಲವು ಬಾರಿ ನಷ್ಟ ಅನುಭವಿಸಿದರೂ ಒಂದಲ್ಲಾ ಒಂದು ಬಾರಿ ಆತ ಲಾಭ ಪಡೆದುಕೊಳ್ಳುತ್ತಾನೆ.
ಆದ್ರೆ ಎಲ್ಲಾ ರೈತರೂ ಹೀಗೆ ಲಾಭ ಮಾಡಿಕೊಳ್ಳುತ್ತಾರೆ ಎಂದು ಹೇಳಲಾಗುವುದಿಲ್ಲ. ಮಳೆ, ಬರ, ಅತೀವೃಷ್ಟಿ ಹೀಗೆ ಒಂದಲ್ಲಾ ಒಂದು ಸಮಸ್ಯೆ ಅವರನ್ನು ಕಾಡುವ ಜೊತೆಗೆ ವ್ಯವಸಾಯ ಮಾಡದಿರುವಂತಹ ಕಷ್ಟಕ್ಕೆ ತಳ್ಳುತ್ತವೆ. ಆದ್ರೆ ಇಲ್ಲೊಬ್ಬ ರೈತ ಜಪಾನ್ ಮಾವಿನ ಹಣ್ಣು ಬೆಳೆದು ನೀವು ಊಹಿಸದಷ್ಟು ಲಾಭ ಮಾಡಿದ್ದಾರೆ.

ಉಡುಪಿಯ ಶಂಕರಪುರದ ರೈತರೊಬ್ಬರು ತಮ್ಮ ತೋಟದಲ್ಲಿ ಜಪಾನ್‌ನ ಪ್ರಸಿದ್ಧ ಮಿಯಾಜಾಕಿ ಮಾವು ಬೆಳೆದು ಅಚ್ಚರಿ ಮೂಡಿಸುವ ಜೊತೆಗೆ ಅತ್ಯಧಿಕ ಲಾಭ ಪಡೆದಿದ್ದಾರೆ. ಎಲ್ಲಾ ರೈತರು ಮಾವು ಬೆಳೆಯುತ್ತಾರೆ ಇದರಲ್ಲಿ ಅಚ್ಚರಿ ವಿಚಾರ ಏನು ಎಂದು ನೀವು ಯೋಚಿಸುತ್ತಿರಬಹುದು. ಆದರೆ ಈ ಮಾವಿನ ಹಣ್ಣಿಗೆ ಪ್ರತಿ ಕೆಜಿಗೆ ಬಂಗಾರದ ಬೆಲೆ ಇದೆ.
ಒಂದು ಕೆ.ಜಿ ಮಿಯಾಜಾಕಿ ಮಾವಿನ ಹಣ್ಣಿಗೆ ಬರೋಬ್ಬರಿ 3 ಲಕ್ಷ ರೂಪಾಯಿ ಬೆಲೆ ಇದೆ. ಹೌದು ಈ ಮಾವಿಗೆ ಬಂಗಾರದ ಬೆಲೆ ಇದ್ದು, ಇದೇ ಜಾತಿಯ ಮಾವನ್ನು ರೈತ ಜೋಸೆಫ್ ಲೋಬೋ ಬೆಳೆದು ತೋರಿಸಿದ್ದಾರೆ.
ಇವರು ಮೂರು ವರ್ಷಗಳ ಹಿಂದೆ ತಮ್ಮ ಊರಿಗೆ ಜಪಾನ್‌ನ ರುಚಿಯನ್ನು ತರುವ ಉದ್ದೇಶದಿಂದ ವಿಶ್ವದ ಅತ್ಯಂತ ದುಬಾರಿ ಮಾವು ಎಂದು ಕರೆಯಲ್ಪಡುವ ಮಿಯಾಜಾಕಿ ಮಾವಿನ ಸಸಿಯನ್ನು ತಂದು ನೆಟ್ಟಿದ್ದರಂತೆ. ಆದರೆ ಈ ಮಾವು ಬೆಳೆಯುವುದು ಅಷ್ಟೊಂದು ಸುಲಭವಲ್ಲ. ಇದರ ಹಿಂದೆ ಹಗಲು ರಾತ್ರಿ ಎನ್ನದೆ ಅವರು ಶ್ರಮ ಹಾಕಿದ್ದಾರೆ. ಗಿಡಗಳನ್ನು ಉಳಿಸಿಕೊಳ್ಳಲು ಅವರು ಕಠಿಣ ದಾರಿ ಕ್ರಮಿಸಿದ್ದಾರೆ. ನಿತ್ಯವು ಅವುಗಳ ಆರೈಕೆ, ಕೀಟನಾಶಕ, ಗೊಬ್ಬರ, ನೀರು ಹೀಗೆ ಹತ್ತಾರು ರೀತಿಯ ಆರೈಕೆಯ ಮೂಲಕ ಗಿಡಗಳನ್ನು ಕಾದಿದ್ದಾರೆ.
ಅವರ ಒಂದು ಗಿಡದಲ್ಲಿ ಈಗ 7 ಮಾವಿನ ಹಣ್ಣುಗಳು ಬಿಟ್ಟಿವೆ. ಇದು ವರ್ಷಕ್ಕೂ ಹೆಚ್ಚು ಕಾಲ ಅವರು ಪಟ್ಟ ಶ್ರಮದ ಫಲವಾಗಿ ಮಾವಿನ ಹಣ್ಣುಗಳು ಈಗ ಕಟಾವಿಗೆ ಬಂದಿವೆಯಂತೆ. ರಾಜ್ಯದ ಪ್ರತಿಕೂಲ ಹವಾಮಾನದ ಹೊರತಾಗಿಯೂ ಹಣ್ಣುಗಳ ಬಂದಿರುವು ಹಿಂದೆ ಅವರ ಶ್ರಮ ಎದ್ದು ಕಾಣುತ್ತಿದೆ.
ಈ ಮಾವಿನ ಜೊತೆಗೆ ಲೋಬೊ ಬಿಳಿ ಜಾವಾ ಪ್ಲಮ್, ಬ್ರೆಜಿಲಿಯನ್ ಚೆರ್ರಿಗಳು ಮತ್ತು ತೈವಾನ್ ಕಿತ್ತಳೆಗಳಂತಹ ವಿದೇಶಿ ಹಣ್ಣುಗಳನ್ನು ಸಹ ಬೆಳೆದಿದ್ದಾರೆ.
ಈ ಮಾವಿನ ಹಣ್ಣು ಏಕಿಷ್ಟು ದುಬಾರಿ?
ಮಿಯಾಜಾಕಿ ಮಾವು ಜಪಾನ್‌ನ ಕ್ಯುಶು ಪ್ರಾಂತ್ಯದಲ್ಲಿ ನೆಲೆಸಿರುವ ಮಿಯಾಜಾಕಿ ನಗರದಲ್ಲಿ ಹುಟ್ಟಿಕೊಂಡಿತು. 350 ಗ್ರಾಂ ಅಥವಾ ಅದಕ್ಕಿಂತ ಹೆಚ್ಚು ತೂಕವಿರುವ ಈ ಹಣ್ಣಿನಲ್ಲಿ 15% ಅಥವಾ ಅದಕ್ಕಿಂತ ಹೆಚ್ಚಿನ ಸಕ್ಕರೆ ಅಂಶವಿದೆ, ಇದು ರುಚಿಯ ಅರ್ಥಕ್ಕೆ ನಿಜವಾದ ಹಣ್ಣುಗಳಾಗಿವೆ.
ಈ ಮಾವುಗಳು ಎಲ್ಲಾ ಪ್ರದೇಶದಲ್ಲೂ ಬೆಳೆಯುವುದಿಲ್ಲ, ಶೀತ, ಮತ್ತು ಮಳೆಯಂತಹ ಪ್ರದೇಶ ಹಾಗೂ ಮಣ್ಣಿನ ಆರೋಗ್ಯದ ಮೇಲೆ ಇವು ಅವಲಂಭಿತವಾಗಿವೆ. ಹೀಗಾಗಿ ಜಪಾನ್‌ನಲ್ಲಿ ಮಾತ್ರ ಈ ಮಾವು ಕಂಡುಬರುತ್ತದೆ.
ಮಿಯಾಜಾಕಿ ಮಾವು ಅದರ ಗಾತ್ರ ಮತ್ತು ರುಚಿ ಮಾತ್ರವಲ್ಲದೆ ಅದರ ಪೌಷ್ಟಿಕಾಂಶದ ಮೌಲ್ಯವನ್ನು ಪ್ರತ್ಯೇಕಿಸುತ್ತದೆ. ಬೀಟಾ-ಕ್ಯಾರೋಟಿನ್, ಫೋಲಿಕ್ ಆಮ್ಲ ಮತ್ತು ಉತ್ಕರ್ಷಣ ನಿರೋಧಕಗಳ ಅಂಶಗಳಿಂದ ಈ ಮಾವು ತುಂಬಿದೆ. ಹೀಗಾಗಿ ಈ ಮಾವು ಬಹಳ ಆರೋಗ್ಯಕರ ಎಂದು ನಂಬಲಾಗಿದೆ.



Click it and Unblock the Notifications
