Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಸೂರ್ಯ ಪೂಜೆ: ಭಾರತದಲ್ಲಿರುವ ಪ್ರಮುಖ ಸೂರ್ಯ ದೇವಾಲಯಗಳಿವು
ಸೂರ್ಯನನ್ನು ನಾವು ದೇವರೆಂದು ಪೂಜಿಸುತ್ತೇವೆ. ನಮ್ಮ ದಿನ ಶುರುವಾಗುವುದೇ ಸೂರ್ಯನ ನಮಸ್ಕರಿಸುವುದರ ಮೂಲಕ. ಸಕಲ ಜೀವ ಜಗತ್ತಿಗೂ ಸೂರ್ಯನ ಬೆಳಕು ತುಂಬಾನೇ ಅನಿವಾರ್ಯ. ಸೂರ್ಯನಿಗೆ ಬೆಳಗ್ಗೆ ನಮಸ್ಕರಿಸಿ, ಸೂರ್ಯನಿಗೆ ಆರ್ಘ್ಯ ಅರ್ಪಿಸಿ, ಸೂರ್ಯ ಮಂತ್ರಗಳನ್ನು ಪಠಿಸಿ ದಿನವನ್ನು ಪ್ರಾರಂಭಿಸಬೇಕು ಎಬ ನಂಬಿಕೆ.
ನಮ್ಮ ಪ್ರತಿಯೊಂದು ಹಬ್ಬ ಹರಿದಿನ, ಆಚರಣೆಗಳಲ್ಲಿ ಸೂರ್ಯ ಪ್ರಮುಖ ಪಾತ್ರವಹಿಸುತ್ತಾನೆ. ಸೂರ್ಯನ ಚಲನೆ ಅನುಸರಿಸಿ ದಕ್ಷಿಣಾಯಾಣ ಕಾಲ, ಉತ್ತರಾಯಣ ಕಾಲ ಎಂದು ಹೇಳಲಾಗುವುದು.

ಭಾರತದಲ್ಲಿ ಸೂರ್ಯನಿಗಾಗಿಯೇ ಪ್ರಮುಖ ದೇವಾಲಯಗಳಿವೆ. ಭಾರತದಲ್ಲಿರುವ ಪ್ರಸಿದ್ಧ ಸೂರ್ಯ ದೇವಾಲಯಗಳು ಹಾಗೂ ಸೂರ್ಯನನ್ನು ಆರಾಧಿಸುವುದರಿಂದ ದೊರೆಯುವ ಪ್ರಯೋಜನಗಳೇನು ಎಂದು ನೋಡೋಣ ಬನ್ನಿ:
ಭಾರತದಲ್ಲಿರುವ ಪ್ರಮುಖ ಸೂರ್ಯ ದೇವಾಲಯಗಳಿವು
* ಕೊನಾರ್ಕ್ ದೇವಾಲಯ
ಈ ದೇವಾಲಯ ಒಡಿಸ್ಸಾದಲ್ಲದೆ. ಭಾರತದ ಅದ್ಭುತಗಳಲ್ಲಿ ಈ ದೇವಾಲಯ ಕೂಡ ಒಂದಾಗಿದೆ. ಈ ದೇವಾಲಯದಲ್ಲಿ ಸೂರ್ಯ ಕಿರಣ ಮೊದಲು ಅದರ ಮುಂಬಾಗಿಲಿಗೆ ಬೀಳುತ್ತದೆ, ಅಲ್ಲದೆ ಇಲ್ಲಿರುವ ಚಕ್ರ ಸರಿಯಾದ ಸಮಯವನ್ನು ಸೂಚಿಸುವುದು ಕೂಡ ಮತ್ತೊಂದು ವಿಶೇಷವಾಗಿದೆ.
* ಮೊದೆರಾ
ಈ ಸೂರ್ಯ ದೇವಾಲಯ ಗುಜರಾತ್‌ನಲ್ಲಿದೆ. ಈ ದೇವಾಲಯ ಪುಷ್ಪಾವತಿ ದಡದಲ್ಲಿದೆ. ಇಲ್ಲಿ ಬೀಳುವ ಸೂರ್ಯ ಕಿರಣಗಳು ಸೂರ್ಯನಂತೆಯೇ ಗೋಚರಿಸುವುದು ಈ ದೇವಾಲಯದ ಮತ್ತೊಂದು ವಿಶೇಷವಾಗಿದೆ.
* ಜಮ್ಮು, ಕಾಶ್ಮೀರಾದಲ್ಲಿರುವ ಮಾರ್ತೆಂಡಾ ದೇವಾಲಯ
ಈ ದೇವಾಲಯ ನಶಿಸಿ ಹೋಗಿದೆ.
* ಗ್ವಾಲಿಯರ್‌ನಲ್ಲಿರುವ ಸೂರ್ಯ ದೇವಾಲಯ
ಈ ದೇವಾಲಯ ಕೂಡ ಕೊನಾರ್ಕ್ ದೇವಾಲಯದ ಮಾದರಿಯಲ್ಲಿದೆ.
* ಬಾಲಾಜಿ ಸೂರ್ಯ ದೇವಾಲಯ
ಈ ಸೂರ್ಯ ದೇವಾಲಯದಲ್ಲಿ ಮಧ್ಯಪ್ರದೇಶದಲ್ಲಿದೆ.
* ರಾಂಚಿಯಲ್ಲಿರುವ ಸೂರ್ಯ ದೇವಾಲಯ
ರಾಂಚಿಯಿಂದ 39 ಕಿ. ಮೀ ದೂರದಲ್ಲಿದೆ. ಈ ದೇವಾಲಯವು ನೋಡಲು ಆಕರ್ಷಕವಾಗಿದೆ.
* ಅಸ್ಸಾಂನಲ್ಲಿರುವ ಸೂರ್ಯ ಪಹರ ದೇವಾಲಯ
* ಬೆಂಗಳೂರಿನ ದೊಮ್ಮಲೂರಿನಲ್ಲಿರುವ ಸೂರ್ಯ ದೇವಾಲಯ
* ತಮಿಳುನಾಡಿನಲ್ಲಿರುವ ಸೂರ್ಯನಾರ್ ದೇವಾಲಯ
ತಮಿಳುನಾಡಿನ ಕುಂಣಕೋಣಂನಲ್ಲಿದೆ, ತಮಿಳು ನಾಡಿನಲ್ಲಿರುವ ನವಗ್ರಹ ದೇವಾಲಯಗಳಲ್ಲಿ ಇದು ಒಂದಾಗಿದೆ.
* ಆಂಧ್ರ ಪ್ರದೇಶದಲ್ಲಿರುವ ಸೂರ್ಯ ನಾರಾಯಣ ದೇವಾಲಯ
ಸೂರ್ಯ ಆರಾಧಿಸುವುದರಿಂದ ದೊರೆಯುವ ಪ್ರಯೋಜನಗಳು
ಬೆಳಗ್ಗೆ ಸೂರ್ಯನನ್ನು ಆರಾಧಿಸುವುದರಿಂದ ಈ ಪ್ರಮುಖ ಪ್ರಯೋಜನಗಳಿವೆ. ಇದರಿಮದ ಶಕ್ತಿ ಹೆಚ್ಚಾಗುವುದು, ಆತ್ಮವಿಶ್ವಾಸ ಹೆಚ್ಚಾಗುವುದು, ಸಂವಹನದಲ್ಲಿ ದೃಢತೆ ಇರಲಿದೆ. ಸೂರ್ಯನ ಕೃಪೆಯಿಂದ ಆರೋಗ್ಯ ಚೆನ್ನಾಗಿರುತ್ತದೆ, ಸಂಪತ್ತು ವೃದ್ಧಿಸುವುದು ಎಂದು ಹೇಳಲಾಗುವುದು.
ಸೂರ್ಯನನ್ನು ಹೇಗೆ ಆರಾಧಿಸಬೇಕು?
* ಸ್ನಾನ ಮಾಡಿ ಮಡಿ ವಸ್ತ್ರ ಧರಿಸಬೇಕು, ಸೂರ್ಯನಿಗೆ ಆರ್ಘ್ಯ ಅರ್ಪಿಸುವಾಗ ಕೆಂಪು ಅಥವಾ ಖಾವಿ ವಸ್ತ್ರ ಧರಿಸಿದರೆ ಒಳ್ಳೆಯದು
* ಪೂರ್ವಕ್ಕೆ ಮುಖ ಮಾಡಿನಿಂತು ಪೂಜೆಯನ್ನು ಮಾಡಬೇಕು.
* ಸೂರ್ಯನಿಗೆ ತಾಮ್ರದ ಪಾತ್ರೆಯಲ್ಲಿ ಆರ್ಘ್ಯ ಅರ್ಪಿಸಬೇಕು.
* ಸೂರ್ಯನ ಪೂಜೆಯಲ್ಲಿ ಕಮಲದ ಹೂಗಳನ್ನು ಅರ್ಪಿಸಿ.
* ಹಣೆಗೆ ಕುಂಕುಮ ಇಟ್ಟು ಸೂರ್ಯಮಂತ್ರ ಪಠಿಸಿ



Click it and Unblock the Notifications
