Latest Updates
-
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ! -
ಮಳೆಗಾಲದ ರಜೆ: ವರ್ಕ್ ಫ್ರಮ್ ಹೋಮ್ ಪೋಷಕರಿಗೆ ಮಕ್ಕಳನ್ನು ನಿಭಾಯಿಸುವುದು ಹೇಗೆ? ಇಲ್ಲಿದೆ ಸರಳ ಟಿಪ್ಸ್ -
ಮಳೆಗಾಲದಲ್ಲಿ ನಿಮ್ಮ ಮನೆಯ ಗಿಡಗಳು ಸಾಯುತ್ತಿವೆಯೇ? ಈ 15 ನಿಮಿಷದ ಟಿಪ್ಸ್ ಪಾಲಿಸಿ!
ಯುವಜೋಡಿಗೆ 'ಪ್ರೇತ ಮದುವೆ' ನೆರವೇರಿಸಿದ ಕುಟುಂಬಸ್ಥರು..! ಏಕೆ ಗೊತ್ತಾ?
ನಾವು ಭಾರತದ ಸಂಪ್ರದಾಯದಲ್ಲಿ ಈ ಪ್ರೇತ ಮದುವೆ ಎನ್ನುವುದನ್ನು ಕೇಳಿರುತ್ತೇವೆ. ಅದ್ರಲ್ಲೂ ರಾಜ್ಯದ ಕರಾವಳಿ ಹಾಗೂ ಮಲೆನಾಡುಭಾಗದಲ್ಲಿ ಇಂದಿಗೂ ಈ ಪ್ರೇತ ಮದುವೆ ಎನ್ನುವುದು ಚಾಲ್ತಿಯಲ್ಲಿದೆ. ಇತ್ತೀಚಿಗೆ ಇಂತಹ ಪ್ರೇತ ಮದುವೆಯ ಪ್ರಕರಣ ಸಹ ನಾವು ಕೇಳಿದ್ದೇವೆ.
ಪ್ರೇತ ಮದುವೆ ಎಂದರೆ ಮದುವೆಯಾಗದೆ ಆಕಸ್ಮಿಕವಾಗಿ ಮೃತಪಟ್ಟ ಯುವಕ ಅಥವಾ ಯುವತಿಗೆ ಸೂಕ್ತ ವಯಸ್ಸಿನಲ್ಲಿ ಮದುವೆ ಮಾಡುವುದಾಗಿದೆ. ಎರಡು ಆತ್ಮಗಳಿಗೆ ಮದುವೆ ಮಾಡಿಸುವ ಸಂಪ್ರದಾಯ ಎಂದು ನಂಬಲಾಗಿದೆ. ಇದರಿಂದ ಆತ್ಮಗಳಿಗೆ ಮುಕ್ತಿ ಸಿಗುತ್ತದೆ ಎಂಬುದು ಇದರ ನಂಬಿಕೆಯಾಗಿದೆ.

ಆದರೆ ಈ ಪ್ರೇತ ಮದುವೆ ಎಂಬುದು ಕೇವಲ ನಮ್ಮ ರಾಜ್ಯದ ದೇಶದ ಸಂಸ್ಕೃತಿಯಾಗಿ ಉಳಿದಿಲ್ಲ. ಬದಲಾಗಿ ಈಗ ಮಲೇಷಿಯಾದಲ್ಲೂ ಜೋಡಿಗೆ ಪ್ರೇತ ಮದುವೆ ನೆರವೇರಿದೆ. ಇದು ಅಚ್ಚರಿಯ ಬೆಳವಣಿಗೆಯಾಗಿದ್ದು, ಅಲ್ಲಿ ಮದುವೆಯಾಗದೆ ಮೃತಪಟ್ಟಿದ್ದ ಜೋಡಿಗೆ ಕುಟುಂಬಸ್ಥರು ಸೇರಿ ಅದ್ದೂರಿಯಾಗಿ ಪ್ರೇತ ಮದುವೆ ಮಾಡಿಸಿದ್ದಾರೆ.
ಕಾರು ಅಪಘಾತದಲ್ಲಿ ಮೃತಪಟ್ಟಿದ್ದ ಮಲೇಷಿಯಾದ ಜೋಡಿಗಳಿಗಾಗಿ ವಿಶಿಷ್ಟವಾದ 'ಪ್ರೇತ ಮದುವೆ' ಆಯೋಜಿಸಲಾಗಿದೆ. ದಂಪತಿ ಮೂರು ವರ್ಷಗಳಿಂದ ಡೇಟಿಂಗ್ ನಡೆಸುತ್ತಿದ್ದರು ಮತ್ತು ಶೀಘ್ರದಲ್ಲೇ ಮದುವೆಯಾಗಲು ಮುಂದಾಗಿದ್ದರು. ಆದರೆ ಕಾರು ಅಪಘಾತದಲ್ಲಿ ಇಬ್ಬರೂ ಮೃತಪಟ್ಟಿದ್ದರು. ಹೀಗಾಗಿ ಅವರ ಕೊನೆಯ ಆಸೆಯನ್ನು ಪೂರೈಸಲು, ಜೋಡಿಯ ಕುಟುಂಬಗಳು ಪರಸ್ಪರ ಒಪ್ಪಿಗೆಯ ಮೇರೆಗೆ ಅವರ ಪ್ರೀತಿಯನ್ನು ಜೀವಂತವಾಗಿರಿಸಲು ಪ್ರೇತ ವಿವಾಹ ನಡೆಸಲು ನಿರ್ಧರಿಸಿದರು.
ಸೌತ್ ಚೀನಾ ಮಾರ್ನಿಂಗ್ ಪೋಸ್ಟ್ ವರದಿಯ ಪ್ರಕಾರ, ಯಾಂಗ್ ಜಿಂಗ್ಶನ್ ಮತ್ತು ಲೀ ಕ್ಸುಯಿಂಗ್ ಮೂರು ವರ್ಷಗಳಿಗೂ ಹೆಚ್ಚು ಕಾಲ ಡೇಟಿಂಗ್ ನಡೆಸುತ್ತಿದ್ದರು ಮತ್ತು ಮದುವೆಯಾಗಲು ಯೋಜಿಸಿದ್ದರು. ಯಾಂಗ್ ಜಿಂಗ್‌ಶನ್ ಜೂನ್ 2, 2024 ರಂದು ಬ್ಯಾಂಕಾಕ್‌ನಲ್ಲಿ ತಮ್ಮ ಜನ್ಮದಿನವನ್ನು ಆಚರಿಸಲು ಮುಂದಾಗಿದ್ದರು. ಈ ದಿನದಂದೇ ತನ್ನ ಗೆಳಗಿಗೆ ಅವರು ಪ್ರಪೋಸ್ ಮಾಡಲಿದ್ದರು.
ಆದರೆ ಮೇ 24 ರಂದು ಇಬ್ಬರು ಒಟ್ಟಿಗೆ ಕಾರಿನಲ್ಲಿ ಪ್ರಯಾಣಿಸುವಾಗ ಅಪಘಾತದಲ್ಲಿ ಮೃತಪಟ್ಟರು. ಜೋಡಿಯ ದಿಢೀರ್ ಸಾವಿನಿಂದ ಎರಡೂ ಕುಟುಂಬಗಳು ಶಾಕ್‌ಗೆ ಒಳಗಾದರು. ಇಬ್ಬರ ನಡುವಿನ ಪ್ರೀತಿ ಎರಡು ಮನೆಯವರಿಗೂ ಗೊತ್ತಿತ್ತು. ಅಲ್ಲದೆ ಸದ್ಯದಲ್ಲೇ ಮದುವೆ ಆಗುತ್ತಿದ್ದಾರೆ ಎಂಬ ವಿಚಾರವೂ ಸಹ ತಿಳಿದಿತ್ತು. ಹೀಗಾಗಿ ಅವರ ಕೊನೆ ಆಸೆಯಂತೆ ಇಬ್ಬರಿಗೂ ಪ್ರೇತ ಮದುವೆ ಮಾಡಲು ನಿರ್ಧರಿಸಿದ್ದರು.
ಅಂತ್ಯಕ್ರಿಯೆ ನಡೆದಿದ್ದ ಸಭಾಂಗಣದಲ್ಲಿಯೇ ವಿಶಿಷ್ಟ ವಿವಾಹ ಮಹೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಂಡಿದ್ದರು. ದಂಪತಿ ಒಟ್ಟಿಗೆ ಇರುವ ಫೋಟೊ ಇಟ್ಟು ಸ್ನೇಹಿತರು, ಸಂಬಂಧಿಗಳಿಗೆ ಆಹ್ವಾನ ನೀಡಲಾಗಿತ್ತು.
ಚೀನಿ ಸಂಪ್ರದಾಯದಲ್ಲಿಯೂ ಸಹ ತಮ್ಮ ಕೊನೆ ಆಸೆಗಳ ಇಡೇರಿಸಿಕೊಳ್ಳದೆ ಮರಣ ಹೊಂದಿದ್ದರೆ ಅಂತವರ ಆತ್ಮ ಮುಕ್ತಿ ಪಡೆಯುವುದಿಲ್ಲ ಎಂದು ನಂಬಲಾಗಿದೆ. ಅಲ್ಲದೆ ಅಲ್ಲಿಯೂ ಪ್ರೇತ ವಿವಾಹದಂತಹ ಸಂಪ್ರದಾಯ ನಡೆಯುತ್ತದೆ. ಆದರೆ ಸ್ವಲ್ಪ ಭಿನ್ನವಾದ ಆಚರಣೆ ಅಲ್ಲಿ ನೋಡಬಹುದಾಗಿದೆ. ಒಂದು ವೇಳೆ ಅವರ ಕೊನೆಯ ಆಸೆಗಳು ಇಡೇರದೆ ಆಯಸ್ಸಿನ ಅರ್ಧದಲ್ಲೇ ಮೃತಪಟ್ಟವರು ಪ್ರೇತಾತ್ಮಗಳಾಗಿ ಉಳಿದುಬಿಡುತ್ತಾರೆ, ಅಂತವರು ಕುಟುಂಬಸ್ಥರಿಗೆ ಕಾಡುತ್ತಾರೆ ಎಂದು ಅವರು ನಂಬುತ್ತಾರೆ.
ಚೀನೀ ಸಂಸ್ಕೃತಿಯಿಂದ ಪ್ರಭಾವಿತವಾಗಿರುವ ಮಲೇಷಿಯಾದ ಸಂಸ್ಕೃತಿಯಲ್ಲೂ ಈ ಪ್ರೇತ ವಿವಾಹ ಆಚರಣೆ ಇದೆ. ಜೊತೆಗೆ ಉತ್ತರ ಕೊರಿಯಾ ಮತ್ತು ಜಪಾನ್‌ನಂತಹ ಪೂರ್ವ ಏಷ್ಯಾದ ಹಲವು ದೇಶಗಳಲ್ಲಿ ಪ್ರೇತ ವಿವಾಹಗಳು ಸಹ ಅಸ್ತಿತ್ವದಲ್ಲಿವೆ. ಈ ಮದುವೆಗಳು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಸಂಬಂಧಿಕರ ಭಾವನಾತ್ಮಕ ಅಗತ್ಯಗಳನ್ನು ಪೂರೈಸಲು ಸಹಾಯ ಮಾಡುತ್ತದೆ. ಆದರೆ ಚೀನಾದಲ್ಲಿ ಈ ಪ್ರೇತ ವಿವಾಹ ಎಂಬುದು ಕಾನೂನು ಬಾಹಿರವಾಗಿದೆ. ಆದರೂ ಅಲ್ಲಿನ ಜನರು ಆಚರಣೆ ಮಾಡುತ್ತಾರೆ.



Click it and Unblock the Notifications