Latest Updates
-
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ
ಸಂಜೆ ಅಪ್ಪಿ ತಪ್ಪಿಯೂ ಈ ವಸ್ತುಗಳನ್ನು ದಾನ ಮಾಡಬೇಡಿ! ಲಕ್ಷ್ಮಿ ಮನೆ ಬಿಟ್ಟು ಹೋಗ್ತಾಳೆ
ಸಂಜೆ ಈ 5 ವಸ್ತುಗಳನ್ನು ದಾನ ಮಾಡಿದರೆ ಬಡವರಾಗುತ್ತೀರಾ! ಈ ತಪ್ಪು ಮಾಡಿದರೆ ಲಕ್ಷ್ಮಿ ದೇವಿ ಮನೆ ಬಿಟ್ಟು ಹೋಗುತ್ತಾಳೆ. ಹೌದು, ವಾಸ್ತು ಶಾಸ್ತ್ರದ ಪ್ರಕಾರ, ಸಂಜೆ (Evening) ವೇಳೆ ಕೆಲವು ವಸ್ತುಗಳನ್ನು ದಾನವಾಗಿ (donation) ಅಥವಾ ಸಾಲವಾಗಿ ನೀಡಬಾರದು. ಈ ನಿಯಮಗಳನ್ನು ಉಲ್ಲಂಘಿಸಿದರೆ ಲಕ್ಷ್ಮೀ ದೇವಿಯು ಮನೆಯಿಂದ ಹೊರಹೋಗುತ್ತಾಳೆ ಮತ್ತು ಅದೃಷ್ಟಕ್ಕೆ ಧಕ್ಕೆ ಉಂಟಾಗಬಹುದು ಎಂಬ ನಂಬಿಕೆ ಇದೆ. ಈ ಕೆಳಗಿನ ಐದು ವಸ್ತುಗಳನ್ನು ಸಂಜೆ ವೇಳೆ ದಾನ ಮಾಡುವುದರಿಂದ ಅಥವಾ ಸಾಲ ನೀಡುವುದರಿಂದ ಮನೆಯಲ್ಲಿ ಸಮಸ್ಯೆಗಳು ಎದುರಾಗಬಹುದು ಎಂದು ವಾಸ್ತು ಶಾಸ್ತ್ರ (Vastu) ಹೇಳುತ್ತದೆ.
ನಮ್ಮ ಜೀವನದಲ್ಲಿ ವಾಸ್ತು ಶಾಸ್ತ್ರಕ್ಕೆ (Vastu shastra) ಮಹತ್ವದ ಸ್ಥಾನ ಇದೆ. ಯಾವುದೇ ಕಾರ್ಯವನ್ನು ಆರಂಭಿಸುವ ಮುನ್ನ ಅಥವಾ ಆ ಕಾರ್ಯ ನಡೆಸುವಾಗ ವಾಸ್ತು ನಿಯಮಗಳನ್ನು ಪಾಲಿಸಬೇಕು ಎಂದು ಹಿರಿಯರು ಹೇಳುತ್ತಾರೆ. ಈ ನಿಯಮಗಳನ್ನು ಸರಿಯಾಗಿ ಅನುಸರಿಸಿದರೆ, ಸಕಾರಾತ್ಮಕ ಫಲಿತಾಂಶಗಳು ದೊರೆಯುತ್ತವೆ. ಆದರೆ, ನಿಯಮಗಳನ್ನು ನಿರ್ಲಕ್ಷಿಸಿದರೆ ಜೀವನದಲ್ಲಿ ತೊಂದರೆಗಳು ಎದುರಾಗಬಹುದು ಎಂದು ಹೇಳಲಾಗಿದೆ. ಹಾಗಿದ್ರೆ, ಸಂಜೆ ಯಾವ 5 ವಸ್ತುಗಳನ್ನು (Vastu Tips for Evening) ದಾನ ಮಾಡಬಾರದು ಅನ್ನೋದನ್ನು ತಿಳಿಯೋಣ ಬನ್ನಿ.

ಉಪ್ಪು, ಮೊಸರು ಮತ್ತು ಸಕ್ಕರೆ
ಸೂರ್ಯಾಸ್ತದ ನಂತರ ಅಥವಾ ಸಂಜೆ ವೇಳೆ ಮೊಸರು, ಉಪ್ಪು ಅಥವಾ ಸಕ್ಕರೆಯಂತಹ ಬಿಳಿ ವಸ್ತುಗಳನ್ನು ಯಾರಿಗೂ ದಾನವಾಗಿ ಅಥವಾ ಸಾಲವಾಗಿ ನೀಡಬಾರದು ಎಂದು ವಾಸ್ತು ತಜ್ಞರು ಹೇಳಿದ್ಧಾರೆ. ಸಂಜೆ ಸಮಯದಲ್ಲಿ ಈ ವಸ್ತುಗಳನ್ನು ದಾನ ಮಾಡಿದರೆ, ಜಾತಕದಲ್ಲಿ ಶುಕ್ರ ಗ್ರಹ ದುರ್ಬಲಗೊಳ್ಳುತ್ತದೆ. ಇದರಿಂದ ಮನೆ ಮತ್ತು ಜೀವನದಲ್ಲಿ ಸಂತೋಷ ಹಾಗೂ ಸಮೃದ್ಧಿಯ ಕೊರತೆ ಉಂಟಾಗುತ್ತದೆ. ಉಪ್ಪನ್ನು ದಾನ ಮಾಡುವುದರಿಂದ ಜೀವನದಲ್ಲಿ ಇತರ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಎಂದು ಹೇಳಲಾಗುತ್ತದೆ.
ಅರಿಶಿನ ದಾನ ಬೇಡ
ವಾಸ್ತು ಶಾಸ್ತ್ರದ ಪ್ರಕಾರ, ಸಂಜೆ ವೇಳೆ ಯಾರಿಗೂ ಅರಿಶಿನವನ್ನು ದಾನ ಮಾಡಬಾರದು. ಇದು ನಿಮ್ಮ ಜಾತಕದಲ್ಲಿ ಗುರುವಿನ ಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ವಾಸ್ತು ತಜ್ಞರು ಹೇಳುತ್ತಾರೆ. ಗುರು ದುರ್ಬಲಗೊಂಡರೆ, ನಿಮ್ಮ ಸುಖ-ಸಮೃದ್ಧಿ ಕಳೆದುಹೋಗುವ ಸಾಧ್ಯತೆ ಇರುತ್ತದೆ. ಸಂಜೆ ಅರಿಶಿನವನ್ನು ದಾನ ಮಾಡುವುದರಿಂದ ಆರ್ಥಿಕವಾಗಿ ದುರ್ಬಲರಾಗಬಹುದು ಎಂಬ ನಂಬಿಕೆ ಇದೆ.
ತುಳಸಿ ಗಿಡ ದಾನ
ನಮ್ಮ ಸನಾತನ ಧರ್ಮದಲ್ಲಿ ತುಳಸಿ ಗಿಡಕ್ಕೆ ಹೆಚ್ಚಿನ ಮಹತ್ವವಿದೆ. ಇದನ್ನು ಪವಿತ್ರ ಎಂದು ಪರಿಗಣಿಸಲಾಗುತ್ತದೆ. ನಮ್ಮ ಮನೆಗಳಲ್ಲಿ ಇದನ್ನು ಪೂಜಿಸಲಾಗುತ್ತದೆ. ಹೀಗಾಗಿ, ಸಂಜೆ ಸಮಯದಲ್ಲಿ ತುಳಸಿ ಗಿಡವನ್ನು ದಾನ ಮಾಡುವುದನ್ನು ನಿಷಿದ್ಧ ಎಂದು ಪರಿಗಣಿಸಲಾಗಿದೆ. ವಾಸ್ತು ತಜ್ಞರ ಪ್ರಕಾರ, ಸಂಜೆ ವೇಳೆ ತುಳಸಿ ಗಿಡವನ್ನು ದಾನ ಮಾಡಬಾರದು. ಈ ತಪ್ಪಿನಿಂದ ಹಲವು ತೊಂದರೆಗಳು ಎದುರಾಗಬಹುದು.
ಸೂಜಿ ದಾನ ತಪ್ಪಿಸಿ
ಸಂಜೆ ಸಮಯದಲ್ಲಿ ಸೂಜಿಯನ್ನು ಯಾರಿಗೂ ದಾನ ಮಾಡಬಾರದು ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಯಾರಾದರೂ ನಿಮ್ಮ ಬಳಿ ಸೂಜಿಯನ್ನು ಕೇಳಿದರೂ ಅದನ್ನು ನೀಡಬಾರದು. ಈ ಚಿಕ್ಕ ತಪ್ಪು ನಿಮ್ಮ ಜೀವನದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಇದರಿಂದ ನೀವು ಅನೇಕ ಸಮಸ್ಯೆಗಳಿಗೆ ಗುರಿಯಾಗಬಹುದು.
ದುಡ್ಡು ದಾನ
ಸಂಜೆ ವೇಳೆ ಯಾರಿಗೂ ಹಣವನ್ನು ದಾನವಾಗಿ ಅಥವಾ ಸಾಲವಾಗಿ ನೀಡಬಾರದು. ವಾಸ್ತು ತಜ್ಞರ ಪ್ರಕಾರ, ಸಂಜೆ ಹಣದ ವ್ಯವಹಾರವು ಅಶುಭ ಎಂದು ಪರಿಗಣಿಸಲಾಗುತ್ತದೆ. ಸಂಜೆ ವೇಳೆ ಲಕ್ಷ್ಮಿ ದೇವಿ ನಿಮ್ಮ ಮನೆಗೆ ಬರುತ್ತಾಳೆ ಎಂದು ವಾಸ್ತು ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹೀಗಾಗಿ, ಈ ಸಮಯದಲ್ಲಿ ನೀವು ಹಣವನ್ನು ದಾನ ಮಾಡಿದರೆ ಅಥವಾ ಸಾಲವಾಗಿ ನೀಡಿದರೆ, ಲಕ್ಷ್ಮಿ ದೇವಿ ನಿಮ್ಮ ಮನೆಯಿಂದ ಹೊರಹೋಗುತ್ತಾಳೆ. ಈ ತಪ್ಪಿನಿಂದ ಜೀವನದುದ್ದಕ್ಕೂ ಆರ್ಥಿಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು.



Click it and Unblock the Notifications











