Latest Updates
-
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ
ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
ಮಾರ್ಚ್ 31ಕ್ಕೆ ಹಣಕಾಸು ವರ್ಷ ಅಂತ್ಯವಾಗುತ್ತಿದೆ. ಇದರ ಜೊತೆ ಏಪ್ರಿಲ್‌ನಿಂದ ಹೊಸ ದರಗಳು ಅನ್ವಯವಾಗುತ್ತವೆ. ಅದರಲ್ಲೂ ಏಪ್ರಿಲ್ ತಿಂಗಳಿಂದ ಕೆಲವು ವಸ್ತುಗಳು, ಉತ್ಪನ್ನಗಳ ಮೇಲಿನ ದರದಲ್ಲಿ ಏರಿಕೆಯಾಗುವ ಸಂಭವವಿದೆ. ಇನ್ನು ಜನರ ಜೀವನದಲ್ಲಿ ಪ್ರಮುಖ ಅಂಶದಂತೆ ಬೆರೆತು ಹೋಗಿರುವ ಔಷಧ ಉತ್ಪನ್ನಗಳ ಬೆಲೆಯಲ್ಲೂ ಏರಿಕೆಯಾಗಲಿದೆ.
ಏಪ್ರಿಲ್ 1, 2024 ರಿಂದ ಹಲವು ಔಷಧಿಗಳು, ಮಾತ್ರೆಗಳು, ವೈದ್ಯಕೀಯ ಉತ್ಪನ್ನಗಳು, ಆರೈಕೆಗಳ ದರದಲ್ಲಿ ಏರಿಕೆ ಕಾಣಬಹುದು. ಅದರಲ್ಲೂ ಪ್ರಮುಖವಾಗಿ ಜನರು ಹೆಚ್ಚು ಬಳಸುವ ಮಾತ್ರೆಗಳು ಹಾಗೂ ಇಂಜಕ್ಷನ್‌ಗಳು ಸೇರಿ ಕೆಲ ಉತ್ಪನ್ನದ ಮೇಲಿನ ದರ ಏರಿಕೆಯಾಗುತ್ತಿದೆ.

ಹಾಗಾದರೆ ಯಾವೆಲ್ಲಾ ಪ್ರಮುಖ ಔಷಧಿಗಳ ಬೆಲೆಯಲ್ಲಿ ಏರಿಕೆಯಾಗುತ್ತಿದೆ. ನೀವು ಬಳಸುವ ಯಾವ ಮಾತ್ರೆಯ ದರ ಏರಿಕೆಯಾಗುತ್ತಿದೆ ಎಂಬುದನ್ನು ಇಲ್ಲಿ ತಿಳಿಸಿದ್ದೇವೆ ನೋಡಿ.
ಏಪ್ರಿಲ್ 1ರಿಂದ ಕೆಲವು ಆ್ಯಂಟಿಬಯೋಟಿಕ್‌ಗಳು, ಸೋಂಕು ನಿವಾರಕಗಳು ಮತ್ತು ನೋವು ನಿವಾರಕಗಳಂತಹ ಅಗತ್ಯ ಔಷಧಿಗಳ ಬೆಲೆಯು ಸ್ವಲ್ಪ ಹೆಚ್ಚಾಗುವ ನಿರೀಕ್ಷೆಯಿರುವುದರಿಂದ, ನೀವು ಬಜೆಟ್ ನೋಡಿ ಕೊಂಡು ವೈದ್ಯಕೀಯ ಖರ್ಚು ಸರಿದೂಗಿಸುತ್ತಿದ್ದರೆ ಇನ್ನು ಮುಂದೆ ಸ್ವಲ್ಪ ಹೆಚ್ಚು ಈ ಖರ್ಚಿಗೆ ಹಣ ಮೀಸಲಿಡಿ.
ಸಗಟು ಬೆಲೆ ಸೂಚ್ಯಂಕದಲ್ಲಿನ ವಾರ್ಷಿಕ ಬದಲಾವಣೆಗೆ ಅನುಗುಣವಾಗಿ, ಔಷಧ ಬೆಲೆ ನಿಯಂತ್ರಕವು ರಾಷ್ಟ್ರೀಯ ಅಗತ್ಯ ಔಷಧಿಗಳ ಪಟ್ಟಿ (NLEM) ನಲ್ಲಿ ಸೇರಿಸಲಾದ ಔಷಧಿಗಳ ಬೆಲೆಗಳಲ್ಲಿ ವಾರ್ಷಿಕ ಶೇ 0.0055 ರಷ್ಟು ದರ ಹೆಚ್ಚಳವನ್ನು ಘೋಷಿಸಿದೆ. ಏಪ್ರಿಲ್ 1 ರಿಂದ ಜಾರಿಗೆ ಬರುವಂತೆ ಔಷಧ ಉದ್ಯಮವು ಇದು ಹೆಚ್ಚುತ್ತಿರುವ ಇನ್ಪುಟ್ ವೆಚ್ಚವನ್ನು ಎದುರಿಸುತ್ತಿರುವ ಕಾರಣ ಬೆಲೆಗಳನ್ನು ಹೆಚ್ಚಿಸುವಂತೆ ಒತ್ತಾಯಿಸುತ್ತದೆ.
ಯಾವೆಲ್ಲಾ ಔಷಧಿಗಳು ಬೆಲೆ ಏರಿಕೆ
ಸಾಮಾನ್ಯವಾಗಿ 800ಕ್ಕೂ ಹೆಚ್ಚು ಔಷಧಿಗಳ ಬೆಲೆ ಏಪ್ರಿಲ್ 1 ರಿಂದ ಏರಿಕೆಯಾಗಲಿದೆ. ಅಗತ್ಯ ಔಷಧಿಗಳ ಪಟ್ಟಿಯು ಪ್ಯಾರಸಿಟಮಾಲ್‌ನಂತಹ ಔಷಧಗಳು, ಬ್ಯಾಕ್ಟೀರಿಯಾದ ಸೋಂಕಿಗೆ ಚಿಕಿತ್ಸೆ ನೀಡಲು ಬಳಸುವ ಅಜಿಥ್ರೊಮೈಸಿನ್‌ನಂತಹ ಪ್ರತಿಜೀವಕಗಳು, ರಕ್ತಹೀನತೆ ವಿರೋಧಿ ಔಷಧಗಳು, ವಿಟಮಿನ್‌ಗಳು ಮತ್ತು ಖನಿಜಗಳನ್ನು ಒಳಗೊಂಡಿದೆ. ಕೋವಿಡ್-19 ರೋಗಿಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುವ ಕೆಲವು ಔಷಧಗಳು ಮತ್ತು ಸ್ಟೀರಾಯ್ಡ್‌ಗಳು ಸಹ ಪಟ್ಟಿಯಲ್ಲಿವೆ.
ವಿಶೇಷವಾಗಿ ಕಳೆದ ವರ್ಷ ಮತ್ತು 2022 ರಲ್ಲಿ ಶೇ. 12 ಮತ್ತು ಶೇ. 10ರಷ್ಟು ಎರಡು ಭಾರಿ ಬೆಲೆ ಏರಿಕೆಯಾಗಿತ್ತು. ಆದರೆ ಈ ಬಾರಿ ಏಪ್ರಿಲ್‌ನಲ್ಲಿ ಈ ದರದ ಮೇಲೆ ಮತ್ತಷ್ಟು ಬೆಲೆ ಏರಿಕೆಯಾಗಲಿದೆ.
ಇದಕ್ಕೂ ಮೊದಲು, 1,000 ಕ್ಕೂ ಹೆಚ್ಚು ಭಾರತೀಯ ಔಷಧ ತಯಾರಕರನ್ನು ಪ್ರತಿನಿಧಿಸುವ ಗುಂಪು ಎಲ್ಲಾ ನಿಗದಿತ ಸೂತ್ರೀಕರಣಗಳ ಬೆಲೆಗಳನ್ನು ತಕ್ಷಣವೇ ಜಾರಿಗೆ ಬರುವಂತೆ 10% ರಷ್ಟು ಹೆಚ್ಚಿಸಲು ಅನುಮತಿಸುವಂತೆ ಸರ್ಕಾರವನ್ನು ಒತ್ತಾಯಿಸಿತು. ನಿಗದಿತವಲ್ಲದ ಔಷಧಗಳ ಬೆಲೆಯಲ್ಲಿ ಶೇ.20ರಷ್ಟು ಹೆಚ್ಚಳ ಮಾಡುವಂತೆಯೂ ಕೋರಿತ್ತು.
ಉದ್ಯಮದ ತಜ್ಞರ ಪ್ರಕಾರ, ಕಳೆದ ಕೆಲವು ವರ್ಷಗಳಲ್ಲಿ, ಕೆಲವು ಪ್ರಮುಖ ಸಕ್ರಿಯ ಔಷಧೀಯ ಪದಾರ್ಥಗಳ ಬೆಲೆಗಳು 15% ಮತ್ತು 130% ರ ನಡುವೆ ಹೆಚ್ಚಾಗಿದೆ, ಪ್ಯಾರಸಿಟಮಾಲ್ ಬೆಲೆ ಶೇ.130 ರಷ್ಟು ಮತ್ತು ಎಕ್ಸಿಪೈಂಟ್ಗಳ ಬೆಲೆ ಶೇ.18 ರಿಂದ ಶೇ. 262 ರಷ್ಟು ಹೆಚ್ಚಳವಾಗಿದೆ.
ಗ್ಲಿಸರಿನ್ ಮತ್ತು ಪ್ರೊಪಿಲೀನ್ ಗ್ಲೈಕಾಲ್, ಸಿರಪ್‌ಗಳು ಮತ್ತು ಸ್ಟೆರೈಲ್ ಸಿದ್ಧತೆಗಳನ್ನು ಒಳಗೊಂಡಂತೆ ಪ್ರತಿಯೊಂದು ದ್ರವ ತಯಾರಿಕೆಯಲ್ಲಿ ಬಳಸುವ ದ್ರಾವಕಗಳು ಕ್ರಮವಾಗಿ ಶೇ. 263ರಿಂದ ಶೇ. 83 ರಷ್ಟು ದುಬಾರಿಯಾಗಿದೆ. ಮಧ್ಯವರ್ತಿಗಳ ಬೆಲೆಗಳು ಸಹ ಶೇ. 11 ಮತ್ತು ಶೇ.175 ರ ನಡುವೆ ಹೆಚ್ಚಾಗಿದೆ.



Click it and Unblock the Notifications