Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ರಧಾನಿ ಮೋದಿ ಎದುರು ಮೌತ್ ಆರ್ಗನ್ ನುಡಿಸಿದ ಆನೆ..!! ಅಚ್ಚರಿಯ ವಿಡಿಯೋ..!
ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಹಿನ್ನೆಲೆ ಧಾರ್ಮಿಕ ವಿಧಿ ವಿಧಾನಗಳು ಆರಂಭಗೊಂಡಿವೆ. ಜನವರಿ 22ರಂದು ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆ ಭೇಟಿ ಬಳಿಕ ಈ ಕಾರ್ಯಕ್ರಮಗಳು ಅಂತ್ಯವಾಗುತ್ತಿವೆ. ಈ ನಡುವೆ ಪ್ರಧಾನಿ ಮೋದಿ ದಕ್ಷಿಣ ಭಾರತದ ಪ್ರವಾಸದಲ್ಲಿದ್ದು, ತಮಿಳುನಾಡು, ಕರ್ನಾಟಕ, ಆಂಧ್ರಪ್ರದೇಶದ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿದ್ದಾರೆ.
ಈ ಭೇಟಿಯ ಅಂಗವಾಗಿ ಅವರು ತಮಿಳುನಾಡಿನ ತಿರುಚಿರಾಪಳ್ಳಿಯಲ್ಲಿರುವ ಶ್ರೀರಂಗನಾಥಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದರು. ಅಚ್ಚರಿ ಎಂದರೆ ಈ ದೇವಸ್ಥಾನದ ಪ್ರಮುಖ ಆಕರ್ಷಣೆಯಾದ ಆನೆ ಪ್ರಧಾನಿ ಮೋದಿ ಅವರಿಗೆ ಆಶೀರ್ವಾದ ಮಾಡಿದ್ದಲ್ಲದೆ ಮೌತ್ ಆರ್ಗನ್ ಸಹ ನುಡಿಸುತ್ತದೆ. ಹೌದು ತಮಿಳುನಾಡಿನ ಈ ಪ್ರಸಿದ್ಧ ದೇವಾಲಯದಲ್ಲಿ ಈ ಆನೆ ಸಂಗೀತ ನುಡಿಸುವುದನ್ನು ಕಲಿತಿದೆ.

ಮಹಾಕಾವ್ಯ ರಾಮಾಯಣದಲ್ಲಿ ಉಲ್ಲೇಖಿಸಲಾದ ಸ್ಥಳಗಳಿಗೆ ಸಂಪರ್ಕ ಹೊಂದಿದ ಪ್ರಮುಖ ದೇವಾಲಯಗಳಿಗೆ ಪ್ರಧಾನಿ ಮೋದಿ ಯಾತ್ರೆ ನಡೆಸುತ್ತಿದ್ದಾರೆ. ಈ ಯಾತ್ರೆಯ ಅಂಗವಾಗಿ ಅವರು ಶ್ರೀರಂಗನಾಥಸ್ವಾಮಿ ದೇವಾಲಯಕ್ಕೂ ಭೇಟಿ ನೀಡಿದರು. ಈ ವೇಳೆ ದೇವಸ್ಥಾನದ ಆನೆಯಾದ ಆಂಡಾಲ್ ಎಂದು ಕರೆಯಲ್ಪಡುವ ಆನೆಯು ಪ್ರಧಾನಿ ಮೋದಿ ಅವರಿಗೆ ಆರ್ಶಿವದಿಸಿದೆ. ಜೊತೆಗೆ ಮೌತ್ ಆರ್ಗನ್ ನುಡಿಸುವ ಮೂಲಕ ಪ್ರಧಾನಿ ಮೋದಿ ಅವರ ಅಚ್ಚರಿಗೂ ಕಾರಣವಾಗಿದೆ.
ಮೌತ್ ಆರ್ಗನ್ ಬಾಯಲ್ಲಿ ಹಿಡಿದು ನುಡಿಸುತ್ತಿದ್ದರೆ ಪ್ರಧಾನಿ ಮೋದಿ ಅದರ ಸೊಂಡಿಲ ಹಿಡಿದು ಒಂದಿಷ್ಟು ಸಮಯ ಅದರ ಜೊತೆ ಕಳೆದಿದ್ದಾರೆ. ಬಳಿಕ ಆನೆಗೆ ಆಹಾರ ನೀಡಿದ ಮೋದಿ ಅಲ್ಲಿಂದ ಮರಳಿದ್ದಾರೆ.
ಭಗವಾನ್ ವಿಷ್ಣುವಿಗೆ ಸಂಬಂಧಿಸಿದ ದೇವಾಲಯದಲ್ಲಿ, ರಾಮಾಯಣದ ಅತ್ಯಂತ ಹಳೆಯ ಆವೃತ್ತಿಗಳಲ್ಲಿ ಒಂದಾದ 'ಕಂಬರಾಮಾಯಣ'ದ ಪದ್ಯಗಳನ್ನು ಪಠಿಸುವ ಒಬ್ಬ ವಿದ್ವಾಂಸರನ್ನು ಪ್ರಧಾನಿ ಮೋದಿ ಮಾತನಾಡಿಸಿದರು. ಕವಿ ಕಂಬಾರರು ತಮ್ಮ ರಾಮಾಯಣವನ್ನು ಮೊದಲು ಶ್ರೀ ರಂಗನಾಥಸ್ವಾಮಿ ದೇವಸ್ಥಾನದಲ್ಲಿ ಪ್ರಸ್ತುತಪಡಿಸಿದರು ಎಂದು ನಂಬಲಾಗಿದೆ.
"ನಮ್ಮ ಪ್ರಧಾನಿ ಶ್ರೀರಂಗಕ್ಕೆ ಭೇಟಿ ನೀಡುತ್ತಿರುವುದಕ್ಕೆ ಭಾರತದ ಎಲ್ಲಾ ಭಕ್ತರು ತುಂಬಾ ಸಂತೋಷಪಟ್ಟಿದ್ದಾರೆ. ಪ್ರಧಾನಮಂತ್ರಿಯವರ ಭೇಟಿಯ ಬಗ್ಗೆ ಶ್ರೀರಂಗನಾಥರು ಸಹ ಸಂತೋಷಪಟ್ಟಿದ್ದಾರೆ. ನಮ್ಮ ಪ್ರಧಾನಿ ಎಲ್ಲರ ಕಲ್ಯಾಣಕ್ಕಾಗಿ ಕಾಳಜಿ ವಹಿಸುತ್ತಾರೆ, ಆದ್ದರಿಂದ ರಂಗನಾಥರು ಶ್ರೀರಂಗಕ್ಕೆ ಇದು ಪುಣ್ಯ ಸಂದರ್ಭವಾಗಿದೆ. ಇದಕ್ಕೂ ಮೊದಲು ಯಾವುದೇ ಪ್ರಧಾನಿ ಈ ದೇವಾಲಯ ಭೇಟಿ ಮಾಡಿಲ್ಲ. ಪ್ರಧಾನಿಯೊಬ್ಬರು ಇಲ್ಲಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲು. ಅವರ ಭೇಟಿಯ ಬಗ್ಗೆ ನಮಗೆಲ್ಲರಿಗೂ ಹೆಮ್ಮೆಯಿದೆ ಎಂದು ದೇವಸ್ಥಾನದ ಪ್ರಧಾನ ಅರ್ಚಕ ಸುಂದರ ಭಟ್ ತಿಳಿಸಿದ್ದಾರೆ.
ಈ ದೇವಾಲಯದ ವಿಶೇಷವೇನು?
ಈ ದೇವಾಲಯವು 5000 ವರ್ಷಗಳಿಗಿಂತಲೂ ಹಳೆಯದಾಗಿದೆ ಮತ್ತು ಹಲವಾರು ವಿಶೇಷತೆಗಳನ್ನು ಹೊಂದಿದೆ. ಈ ದೇವಾಲಯವನ್ನು "ಚೋಳರು, ಪಾಂಡ್ಯರು, ಹೊಯ್ಸಳರು, ವಿಜಯನಗರ ಸಾಮ್ರಾಜ್ಯದ ರಾಜರು ಮುಂತಾದ ಅನೇಕ ರಾಜ ಮನೆತನಗಳು ದುರಸ್ತಿ ಮಾಡಿ ನಿರ್ಮಿಸಿದ್ದಾರೆ. ಈ ರಂಗನಾಥ ದೇವಾಲಯವನ್ನು 14 ನೇ ಶತಮಾನದಲ್ಲಿ ದೆಹಲಿ ಸುಲ್ತಾನರು ಲೂಟಿ ಮಾಡಿದರು. ಶ್ರೀರಂಗಂ ರಂಗನಾಥ ದೇವಾಲಯವು ವಿಸ್ತೀರ್ಣದಲ್ಲಿ ಭಾರತದ ಅತಿದೊಡ್ಡ ದೇವಾಲಯವಾಗಿದೆ. ನಿಮ್ಮಲ್ಲಿ ಎರಡನೇ ಅತಿ ದೊಡ್ಡ ವಿಷ್ಣು ದೇವಾಲಯ ಎನಿಸಿದೆ.
ಇತಿಹಾಸ
ಶ್ರೀರಂಗಂನಲ್ಲಿ ಹರಿಯುವ ಕಾವೇರಿ ನದಿಯ ಮಧ್ಯದಲ್ಲಿರುವ ದ್ವೀಪದಲ್ಲಿ ಭಗವಂತನ ದೇವಾಲಯವಿರುವುದರಿಂದ ಈ ಸ್ಥಳವನ್ನು "ತಿರುವರಂಗಂ" ಎಂದು ಕರೆಯಲಾಗುತ್ತದೆ. ಈ ದೇವಾಲಯದ ಅಧಿಪತಿ ಪೆರುಮಾಳ್ ರಂಗನಾಯಕ ಮತ್ತು ತಾಯಿಯನ್ನು ರಂಗನಾಯಕೆ ಎಂದು ಕರೆಯಲಾಗುತ್ತದೆ. ಪುರಾಣಗಳ ಪ್ರಕಾರ, ರಾವಣನ ಮರಣದ ನಂತರ, ಅಯೋಧ್ಯೆಯ ರಾಜನಾಗಿ ಶ್ರೀರಾಮನ ಪಟ್ಟಾಭಿಷೇಕ ಸಮಾರಂಭದಲ್ಲಿ ಭಾಗವಹಿಸಿದ್ದ ವಿಭೀಷಣನಿಗೆ ರಾಮನು ಶ್ರೀ ನಾರಾಯಣನ ಸಣ್ಣ ವಿಗ್ರಹವನ್ನು ಅರ್ಪಿಸಿದನು.
ಅದನ್ನು ಸ್ವೀಕರಿಸಿ ಶ್ರೀಲಂಕಾಕ್ಕೆ ಹಿಂತಿರುಗುವಾಗ ವಿಭೀಷಣನು ದೇವರನ್ನು ಪೂಜಿಸಲು ಬಯಸಿದನು ಮತ್ತು ನಾರಾಯಣನ ಮೂರ್ತಿಯನ್ನು ವಿಗ್ರಹದ ರೂಪದಲ್ಲಿ ಗಣೇಶನಿಗೆ ನೀಡಿ ಯಾವುದೇ ಕಾರಣಕ್ಕೂ ಅದನ್ನು ಕೆಳಗೆ ಇಡಬೇಡ ಎಂದು ಹೇಳಿದನು.
ವಿಭೀಷಣ ಬರುವುದು ತಡವಾಗಿದ್ದರಿಂದ ಗಣೇಶ ಮೂರ್ತಿಯನ್ನು ನೆಲದ ಮೇಲಿಟ್ಟನು. ಆದರೆ ನಾರಾಯಣನ ವಿಗ್ರಹವನ್ನು ಕೆಳಗಿನಿಂದ ಮೇಲೆ ಎತ್ತಿಕೊಳ್ಳಲು ವಿಬೀಷಣ ಪ್ರಯತ್ನಿಸಿದರು. ಆದರೆ ಅದು ಸಾಧ್ಯವಾಗಲೇ ಇಲ್ಲ. ಹೀಗಾಗಿ ರಂಗನಾಥನಿಗೆ ಅಲ್ಲಿಯೇ ದೇವಾಲಯ ಕಟ್ಟಲಾಯಿತು ಎಂದು ಪುರಾಣ ಕಥೆಗಳು ಹೇಳುತ್ತವೆ.



Click it and Unblock the Notifications