Latest Updates
-
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ?
ಎಲೆಕ್ಟ್ರಿಕ್ ಸ್ಮಾರ್ಟ್ ರಿಂಗ್ ಭವಿಷ್ಯದ ಆರೋಗ್ಯ ಕವಚಗಳು..! ಈ ರಿಂಗ್‌ನಲ್ಲಿ ಏನೆಲ್ಲಾ ಇದೆ ಗೊತ್ತಾ?
ಆಧುನಿಕ ಜಗತ್ತಿನಲ್ಲಿ ಎಲ್ಲವೂ ತಂತ್ರಜ್ಞಾನ ಮಯವಾಗುತ್ತಿದೆ. ನಾವು ನಿಂತರು ಕುಳಿತರು ತಂತ್ರಜ್ಞಾನ ನಮ್ಮ ಜೊತೆಗಿರುತ್ತದೆ. ನಾವು ಬಳಸುವ ಮೊಬೈಲ್ ಫೋನ್‌ಗಳಿಂದ ಹಿಡಿದು ಪ್ರತಿಯೊಂದು ಕೆಲಸಕ್ಕೂ ಈಗ ತಂತ್ರಜ್ಞಾನದ ಮೂಲಕ ಹೊಸ ಹೊಸ ಗ್ಯಾಜೆಟ್‌ಗಳು ಬಂದಿವೆ. ಈ ಗ್ಯಾಜೆಟ್‌ಗಳು ನಮ್ಮ ಜೀವನದ ಒಂದು ಭಾಗವಾಗುತ್ತಿವೆ.
ಅದರಲ್ಲೂ ಎಐ ತಂತ್ರಜ್ಞಾನ ಬೆಳವಣಿಗೆ ಹೊಂದಿದಂತೆಲ್ಲಾ ಗ್ಯಾಜೆಟ್ ಮೂಲಕವೇ ಎಲ್ಲಾ ಕೆಲಸಗಳು ನಡೆಯುತ್ತಿವೆ. ಕುಳಿತಲ್ಲೇ ಜಗತ್ತಿನ ಮೂಲೆ ಮೂಲೆಯ ವಿಚಾರ ತಿಳಿದುಕೊಳ್ಳುತ್ತಿದ್ದ ಕಾಲದಲ್ಲಿ ಈಗ ಎಲ್ಲಾ ಮಾಹಿತಿ ಕೈ ಬೆರಳ ತುದಿಯಲ್ಲಿ ಸಿಗುತ್ತಿದೆ. ಪ್ರತಿಯೊಂದು ಕೆಲಸಕ್ಕೂ ಗ್ಯಾಜೆಟ್ ಮೊರೆ ಹೋಗಬೇಕಾದ ಸ್ಥಿತಿಯೂ ಇದೆ.

ಈ ಗ್ಯಾಜೆಟ್ ಯುಗದ ಹೊಸ ಆವಿಷ್ಕಾರವಾಗಿರುವ ಎಲೆಕ್ರ್ಟಿಕ್ ಫಿಂಗರ್ ರಿಂಗ್‌ಗಳು ಈಗ ಸುದ್ದಿಯಾಗುತ್ತಿವೆ. ಕೈ ಬೆರಳಿಗೆ ನೀವು ಚಿನ್ನ, ಬೆಳ್ಳಿ, ವಜ್ರದ ಉಂಗುರ ಧರಿಸಿದಂತೆಯೇ ಎಲೆಕ್ಟ್ರಿಕ್ ಗ್ಯಾಜೆಟ್ ರಿಂಗ್ ಸಹ ಧರಿಸುವ ಟ್ರೆಂಡ್ ಹೆಚ್ಚಾಗುತ್ತಿದೆ. ಈ ರಿಂಗ್ ಗ್ಯಾಜೆಟ್ ಮಾರುಕಟ್ಟೆಗೆ ದಾಳಿ ಮಾಡಿ ವರ್ಷಗಳು ಉರುಳಿವೆ. ಆದರೆ ಇತ್ತೀಚಿನ ದಿನಗಳಲ್ಲಿ ಭಾರೀ ಸದ್ದು ಮಾಡುತ್ತಿವೆ.
ಗ್ಯಾಲಕ್ಸಿ ರಿಂಗ್ ಎಂಬ ಹೊಸ ಗ್ಯಾಜೆಟ್ ಈಗ ಯುವ ಸಮುದಾಯದ ಗಮನ ಸೆಳೆದಿದೆ. ಈ ಚಾರ್ಜ್ ಮಾಡಬಹುದಾದ ರಿಂಗ್ ಜೀವನ ಬದಲಿಸುವ ಗ್ಯಾಜೆಟ್ ಆಗಲಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಈ ರಿಂಗ್ ಮೂಲಕ ನಿಮ್ಮ ದೇಹದ ಸಂಪೂರ್ಣ ನಿಯಂತ್ರಣ ಸಾಧ್ಯವಂತೆ. ನಿಮ್ಮ ಆರೋಗ್ಯದ ಮೇಲ್ವಿಚಾರಣೆಯಲ್ಲಿ ಇದು ವೈದ್ಯರಂತೆ ಕೆಲಸ ಮಾಡಲಿದೆ ಎಂದು ತಿಳಿದುಬಂದಿದೆ.
ಇದು ನಿದ್ರೆಯ ಮಾದರಿಗಳು, ಹೃದಯ ಬಡಿತದ ವ್ಯತ್ಯಾಸ ಮತ್ತು ಚಟುವಟಿಕೆಯ ಮಟ್ಟಗಳು ಸೇರಿದಂತೆ ಪ್ರಮುಖ ಆರೋಗ್ಯ ಮೆಟ್ರಿಕ್‌ಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ. ಆ ಡೇಟಾವನ್ನು ನಂತರ ಸ್ಯಾಮ್‌ಸಂಗ್‌ನ ಸ್ವಾಮ್ಯದ AI ಮತ್ತು ಅಲ್ಗಾರಿದಮ್‌ಗಳನ್ನು ಬಳಸಿಕೊಂಡು ಬಳಕೆದಾರರಿಗೆ ಹೊಸ ಎನರ್ಜಿ ಸ್ಕೋರ್ ಅನ್ನು ಒದಗಿಸಲು ವಿಶ್ಲೇಷಿಸಲಾಗುತ್ತದೆ. ಇದು ಬಳಕೆದಾರರ ಆರೋಗ್ಯ ಯಾವ ಮಟ್ಟದಲ್ಲಿದೆ ಎಂಬುದನ್ನು ವಿವರಿಸುತ್ತದೆ.
ಈ ರಿಂಗ್ ಮೂಲಕ ನೀವು ಫಿಟ್‌ನೆಸ್ ಟ್ರ್ಯಾಕಿಂಗ್ ಮಾಡಬಹುದು. ಈ ರಿಂಗ್ ಬಳಸಿ ನೀವು ಜಿಮ್‌ನಲ್ಲಿ ಬೆವರು ಸುರಿಸಿದರೆ ನಿಮ್ಮ ಫಿಟ್‌ನೆಸ್ ಕುರಿತ ಸಂಪೂರ್ಣ ಮಾಹಿತಿ ಲಭ್ಯವಾಗಲಿದೆ. ಜೊತೆಗೆ ಹೃದಯ ಬಡಿತ, ಉಸಿರಾಟ ಪ್ರಕ್ರಿಯೆ ಸೇರಿ ಎಲ್ಲಾ ಕ್ರಿಯೆಗಳನ್ನು ನಿಖರವಾಗಿ ಉಲ್ಲೇಖಿಸಲಿದೆ ಎಂದು ತಿಳಿದುಬಂದಿದೆ.
ಜೊತೆಗೆ ನಿಮ್ಮ ಆರೋಗ್ಯ ಸಂಬಂಧಿ ಎಲ್ಲಾ ವಿಚಾರಗಳು ನೇರವಾಗಿ ನಿಮ್ಮ ಸ್ಮಾರ್ಟ್ ಫೋನ್‌ಗೆ ಸಂದೇಶ ಬರಲಿದೆ. ಅಲ್ಲದೆ ನಿತ್ಯವೂ ಆರೋಗ್ಯ ಕುರಿತು ಟ್ರ್ಯಾಕ್ ಮಾಡಲಿದೆ. ಎಷ್ಟು ಸಮಯ ನಿದ್ರೆ ಮಾಡಬೇಕು? ಎಂಬ ಮೆಟ್ರಿಕ್‌ಗಳ ಕುರಿತು ಮಾಹಿತಿ ಹಂಚಿಕೊಳ್ಳಲಿದೆ. ಇನ್ನು ಈ ರಿಂಗ್‌ನ ದರ ಬರೋಬ್ಬರಿ $399.99 ಡಾಲರ್ ಎಂದು ತಿಳಿದುಬಂದಿದೆ. ಭಾರತೀಯ ಮಾರುಕಟ್ಟೆಯಲ್ಲಿ ಈ ರಿಂಗ್ ಲಭ್ಯವಾದರೆ ಅದರ ಬೆಲೆ ಸುಮಾರು 40 ಸಾವಿರ ರೂಪಾಯಿಗೆ ತಲುಪಬಹುದು.
ಇನ್ನು ಈ ರಿಂಗ್ ನೀರಿಗೆ ಬಿದ್ದರೂ ಏನು ಆಗುವುದಿಲ್ಲ. ಇದು 100 ಮೀಟರ್ ಆಳದವರೆಗೆ ಸುರಕ್ಷಿತವಾಗಿದೆ, ಗ್ಯಾಲಕ್ಸಿ ರಿಂಗ್ ಮತ್ತು ಔರಾ ರಿಂಗ್ ಶವರ್, ಮೇಲ್ಮೈ ಈಜು ಅಥವಾ ಸ್ನಾರ್ಕ್ಲಿಂಗ್‌ಗೆ ಸೂಕ್ತವಾಗಿದೆ. ಇವು ಸುಮಾರು 7 ಮಿ.ಮೀ ಅಗಲ ಮತ್ತು 2.6 ಮಿಮೀ ದಪ್ಪ ಹೊಂದಿದ್ದು, 3 ಗ್ರಾಮ್‌ಗಿಂತ ಕಡಿಮೆ ತೂಕ ಹೊಂದಿರಲಿದೆ. ಔರಾ ರಿಂಗ್ ಇದಕ್ಕಿಂತ ಸ್ಪಲ್ಪ ದೊಡ್ಡದಾಗಿದ್ದು 7 ಗ್ರಾಮ್‌ವರೆಗೂ ತೂಗಲಿದೆ. ಒಮ್ಮೆ ಸಂಪೂರ್ಣ ಚಾರ್ಜ್ ಮಾಡಿದರೆ 7 ದಿನಗಳವರೆಗೂ ಚಾಲನೆಯಲ್ಲಿರಲಿದೆ.



Click it and Unblock the Notifications
