Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚುನಾವಣೆ ದಿನಾಂಕ ಪ್ರಕಟ: ಇನ್ನು ನೀತಿ ಸಂಹಿತೆ ಬಗ್ಗೆ ರಾಜಕೀಯ ಪಕ್ಷಗಳು ಭಯ ಪಡುವುದೇಕೆ?
ಇಡೀ ದೇಶ ಎದುರು ನೋಡುತ್ತಿದ್ದ ಚುನಾವಣೆ ದಿನಾಂಕ ಪ್ರಕಟವಾಗಿದೆ. ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ನಮ್ಮನ್ನು ಯಾರು ಆಡಳಿತ ಮಾಡಬೇಕು ಎಂದು ಪ್ರಜೆಗಳೇ ಆಯ್ಕೆ ಮಾಡುತ್ತಾರೆ. ಈ ಸಮಯದಲ್ಲಿ ಎಂಥ ದೊಡ್ಡ ರಾಜಕಾರಣಿಯಾದರೂ ಸಾಮಾನ್ಯ ಪ್ರಜೆಗೆ ಸಲಾಂ ಹೊಡೆದು ನಮ್ಮನ್ನು ಗೆಲ್ಲಿಸಿಕೊಡು ಮಹಾಪ್ರಭು ಎಂದು ಕೇಳಲೇಬೇಕು.
ಯಾವುದೇ ಆಸೆಗೆ ಒಳಗಾಗದೆ ದೇಶದ ಪ್ರಗತಿಗಾಗಿ, ನಮ್ಮ ಕ್ಷೇತ್ರದ ಪ್ರಗತಿಗಾಗಿ ದುಡಿಯುವವರನ್ನು ಅಯ್ಕೆ ಮಾಡುವುದು ಪ್ರಜ್ಞಾವಂತ ಪ್ರಜೆಗಳ ಕರ್ತವ್ಯವಾಗಿದೆ, ನಾವು ಒಳ್ಳೆಯ ಅಭ್ಯರ್ಥಿಯನ್ನು ಆಯ್ಕೆ ಮಾಡಿದರೆ ಮಾತ್ರ ಮುಂದೆ ಅವರಿಂದ ನಮ್ಮ ಕ್ಷೇತ್ರಕ್ಕೆ ಒಳಿತಾಗುವುದು.
ಈ ಮತದಾನದ ದಿನಾಂಕ ಹತ್ತಿರ ಬರುತ್ತಿದ್ದಂತೆ ನಾನಾ ಚುನಾವಣೆ ಪ್ರಣಾಳಿಕೆಗಳು , ಆಶೋತ್ತರಗಳು ಬರಬಹುದು, ಆದರೆ ರಾಜಕೀಯ ಪಕ್ಷಗಳು ನೀತಿ ಸಂಹಿತೆ ಪಾಲಿಸಬೇಕು, ಇದರ ಬಗ್ಗೆ ವಿವರವಾಗಿ ನೋಡುವುದಾದರೆ:

ಚುನಾವಣೆ ದಿನಾಂಕ ಪ್ರಕಟ
ಮೊದಲ ಹಂತದ ಮತದಾನ ಏಪ್ರಿಲ್ 19ರಂದು ನಡೆಯಲಿದೆ
2ನೇ ಹಂತದ ಮತದಾನ ಏಪ್ರಿಲ್ 26ಕ್ಕೆ ನಡೆಯಲಿದೆ
ಮೂರನೇ ಹಂತದ ಮತದಾನ ಮೇ 7ಕ್ಕೆ ನಡೆಯಲಿದೆ
4ನೇ ಹಂತದ ಮತದಾನ ಮೇ 13ಕ್ಕೆ ನಡೆಯಲಿದೆ
5ನೇ ಹಂತದ ಮತದಾನ ಮೇ 20ಕ್ಕೆ ನಡೆಯಲಿದೆ
6ನೇ ಹಂತದ ಮತದಾನ ಮೇ 25ಕ್ಕೆ
7ನೇ ಹಂತದ ಮತದಾನ ಜೂನ್ 1ಕ್ಕೆ ನಡೆಯಲಿದೆ.
ಕರ್ನಾಟಕದಲ್ಲಿ ನಡೆಯಲಿರುವ 2 ಹಂತದ ಚುನಾವಣೆ
2 ಮತ್ತು 3 ನೇ ಹಂತ
ಏಪ್ರಿಲ್ 26ರಂದು ನಡೆಯಲಿದೆ.
1 ನೇ ಹಂತದಲ್ಲಿ
ಉಡುಪಿ , ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಚಿತ್ರದುರ್ಗ (ಎಸ್‌ಸಿ), ತುಮಕೂರು, ಮಂಡ್ಯ, ಮೈಸೂರು, ಚಾಮರಾಜನಗರ (22), ಬೆಂಗಳೂರು ಗ್ರಾಮಾಂತರ, ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ, ಕೋಲಾರದಲ್ಲಿ ನಡೆಯಲಿದೆ.
ಮೇ 7 ರಂದು 2ನೇ ಹಂತದ ಚುನಾವಣೆ ನಡೆಯಲಿದೆ
2 ನೇ ಹಂತದಲ್ಲಿ
ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ (ಎಸ್‌ಸಿ), ಗುಲ್ಬರ್ಗಾ (ಎಸ್‌ಸಿ), ರಾಯಚೂರು (ಎಸ್‌ಟಿ), ಬೀದರ್, ಕೊಪ್ಪಳ, ಬಳ್ಳಾರಿ (ಎಸ್‌ಟಿ), ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆಯಲ್ಲಿ ನಡೆಯಲಿದೆ.
ಚುನಾವಣೆ ಸಂದರ್ಭದಲ್ಲಿ ಪಾಲಿಸಬೇಕು, ಈ ನೀತಿ ಸಂಹಿತೆ ಎಂದರೇನು?
ಚುನಾವಣೆ ಆಯೋಗವೂ ಚುನಾವಣೆ ಪಾರದರ್ಶಕವಾಗಿ ಹಾಗೂ ನ್ಯಾಯಯುತವಾಗಿ ನಡೆಯಲು ಹಾಗೂ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಸಮಾನ ಅವಕಾಶ ಕಲ್ಪಿಸುವ ಉದ್ದೇಶದಿಂದ ಕೆಲವೊಂದು ನಿಯಮಗಳನ್ನು ರೂಪಿಸಿದೆ, ಅದನ್ನು ಪ್ರತಿಯೊಬ್ಬರು ಪಾಲಿಸಬೇಕು.
ಚುನಾವಣೆ ಆಯೋಗವೂ ರಾಜಕಾರಣಿಗಳು ಹಾಗೂ ರಾಜಕೀಯ ಪಕ್ಷದ ಮೇಲೆ ಹದ್ದಿನ ಕಣ್ಣಿಟ್ಟಿರುತ್ತದೆ, ಈ ಅವಧಿಯಲ್ಲಿ ಅವರ ನಡತೆಯನ್ನು ಕೂಲಂಕಷವಾಗಿ ಗಮನಿಸಲಾಗುವುದು. ಈ ಸಮಯದಲ್ಲಿ ರಾಜಕೀಯ ಪಕ್ಷಗಳು ಹಾಗೂ ರಾಜಕಾರಣಿಗಳು ಈ ಸಮಯದಲ್ಲಿ ಸರ್ಕಾರದಿಂದ ಯಾವುದೇ ಅನುದಾನದ ಆಸ್ವಾಸ ನೀಡಬಾರದು. ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮಾಡುವುದು, ಚುನಾವಣೆ ಪ್ರಚಾರಕ್ಕೆ ಸರ್ಕಾರದ ವಾಹನ ಅಥವಾ ಇತರ ಸೇವೆಗಳನ್ನು ಮಾಡಿಸುವುದು ಮಾಡಬಾರದು. ಜನರ ತೆರಿಗೆ ಹಣದಿಂದ ಜಾಹೀರಾತು ನೀಡುವುದು, ಮಾಧ್ಯಮಗಳಲ್ಲಿ ಪಕ್ಷದ ಅಥವಾ ಸರ್ಕಾರದ ಸಾಧನೆಯ ಕುರಿತ ಯಾವುದೇ ಲೇಖನ ಅಥವಾ ಸ್ಪೆಷಲ್ ಸ್ಟೋರಿ ಬರಬಾರದು.
ಇದನ್ನು ಉಲ್ಲಂಘಿಸಿದರೆ ಏನಾಗುತ್ತೆ?
ಇದನ್ನು ಯಾವುದೇ ರಾಜಕಾರಣಿ ಅಥವಾ ಪಕ್ಷದವರು ಇದನ್ನು ಉಲ್ಲಂಘನೆ ಮಾಡಿದರೆ ಪಕ್ಷವು ಮಾನ್ಯತೆ ಕೂಡ ಕಳೆದುಕೊಳ್ಳಬಹುದು, ಹಾಗಾಗಿ ಈ ಕುರಿತು ರಾಜಕಾರಣಿಗಳು ಭಯಪಡುತ್ತಾರೆ, ತಮ್ಮ ಪಕ್ಷದವರಿಗೂ ಈ ಕುಡಿತು ಸೂಚನೆ ಮಾಡುತ್ತಾರೆ.



Click it and Unblock the Notifications