Latest Updates
-
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು!
ರಾಮಾಯಣದ ಈ ಒಂದು ಶ್ಲೋಕ ಪಠಿಸೋದ್ರಿಂದ ಇಷ್ಟೆಲ್ಲಾ ಲಾಭಗಳಿದ್ಯಾ?
ರಾಮಯಣ ಹಿಂದೂ ಧರ್ಮದಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ರಾಮಾಯಣದಲ್ಲಿರುವ ಅನೇಕ ವಿಚಾರಗಳು ನಮಗೆ ಜೀವನ ಪಾಠಗಳನ್ನು ಕಲಿಸುತ್ತದೆ. ನಮ್ಮಲ್ಲಿ ಕೆಲವೇ ಕೆಲವು ಜನ ಮಾತ್ರ ರಾಮಾಯಣವನ್ನು ಓದಿ ತಿಳಿದುಕೊಂಡಿದ್ದಾರೆ. ಆದರೆ ಅನೇಕ ಜನರಿಗೆ ಇನ್ನೂ ರಾಮಾಯಣದ ಮಹತ್ವದ ಬಗ್ಗೆ ಗೊತ್ತಿಲ್ಲ. ಹೀಗಾಗಿ ಇವತ್ತು ನಾವು ನಿಮಗೆ ರಾಮಯಣಕ್ಕೆ ಸಂಬಂಧಪಟ್ಟ ಒಂದು ಶ್ಲೋಕದ ಬಗ್ಗೆ ತಿಳಿಸಿ ಕೊಡ್ತೀವಿ.

ಹಿಂದೂ ಧರ್ಮದಲ್ಲಿ ರಾಮಾಯಣ ಪಠಣದಿಂದ ಎಷ್ಟೆಲ್ಲಾ ಪ್ರಯೋಜನಗಳು ಇದೆ ಅನ್ನೋದನ್ನು ಹೇಳಲಾಗಿದೆ. ಯಾರು ರಾಮಾಯಣವನ್ನು ಪಠಿಸುತ್ತಾರೋ ಅವರು ಜೀವನದಲ್ಲಿ ಎಂದಿಗೂ ತಪ್ಪು ದಾರಿಯಲ್ಲಿ ನಡೆಯುವುದಿಲ್ಲ ಎಂದು ಹೇಳಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಯು ಧರ್ಮದ ಪ್ರಕಾರ ಹೇಗೆ ನಡೆದುಕೊಳ್ಳಬೇಕು ಎಂದು ರಾಮಾಯಣದಲ್ಲಿ ಹೇಳಲಾಗಿದೆ. ಏಕೆಂದರೆ ಅಧರ್ಮದ ಮಾರ್ಗವನ್ನು ಅನುಸರಿಸುವವನು ಎಂದಿಗೂ ಗೆಲ್ಲುವುದಿಲ್ಲ ಇಲ್ಲಿ ತಿಳಿಸಲಾಗಿದೆ.
ಯಾರು ನ್ಯಾಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಾರೆಯೋ? ಅನೀತಿಯನ್ನೇ ಅನುಸರಿಸುತ್ತಾರೆಯೋ ಅವರಿಗೆ ಒಂದಲ್ಲ ಒಂದು ದಿನ ಅವನತಿಯ ಕಾಲ ಬಂದೇ ಬರುತ್ತದೆ. ಅನ್ಯಾಯದ ಮಾರ್ಗದಲ್ಲೇ ನಡೆದ ರಾವಣನ ಅವನತಿ ಹೇಗಾಯ್ತು ಅನ್ನೋದು ನಮಗೆಲ್ಲಾ ಗೊತ್ತೇ ಇದೆ. ರಾಮಾಯಣವನ್ನು ಪಾರಾಯಣ ಮಾಡುವುದರಿಂದ ಜೀವನದಲ್ಲಿ ಸಕಾರಾತ್ಮಕತೆ ಹೆಚ್ಚಾಗುತ್ತದೆ. ಮತ್ತು ನಕಾರಾತ್ಮಕತೆ ದೂರವಾಗುತ್ತದೆ. ಹಾಗೂ ನಿಮ್ಮಲ್ಲಿ ಆತ್ಮಸ್ಥೈರ್ಯ ಬರುತ್ತದೆ. ನಿಮ್ಮ ಜೀವನದಲ್ಲಿ ಎಷ್ಟೇ ದೊಡ್ಡ ಬಿಕ್ಕಟ್ಟು ಎದುರಾದರೂ ಕೂಡ ಅದರಿಂದ ಪಾರಾಗಲು ಸಾಧ್ಯವಾಗುತ್ತದೆ.
ರಾಮಾಯಣದ ಈ ಒಂದು ಶ್ಲೋಕವನ್ನು ಪಠಿಸಿ!
ರಾಮಾಯಣದಲ್ಲಿ ಬಹಳಷ್ಟು ಶ್ಲೋಕಗಳಿದೆ. ಆದರೆ ಅವುಗಳು ಎಲ್ಲವನ್ನೂ ಸುಲಭವಾಗಿ ಕಲಿಯೋದಕ್ಕೆ ನಮ್ಮಿಂದ ಸಾಧ್ಯವಾಗೋದಿಲ್ಲ. ಆದರೆ ಈ ಒಂದು ಶ್ಲೋಕವನ್ನು ಸುಲಭವಾಗಿ ಪಠಣೆ ಮಾಡಬಹುದು. ಈ ಶ್ಲೋಕವನ್ನು ಪಠಣೆ ಮಾಡೋದ್ರಿಂದ ಉತ್ತಮ ಫಲಿತಾಂಶ ಪಡೆಯಬಹುದು. ಹಾಗಾದ್ರೆ ಆ ಒಂದು ಶ್ಲೋಕ ಯಾವುದು ಅನ್ನೋದನ್ನು ತಿಳಿಯೋಣ.
ಈ ಒಂದು ಶ್ಲೋಕವನ್ನು ಪಠಿಸಿ!
ಆದೌ ರಾಮ ತಪೋವನಾದಿಗಮಾನಂ ಹತ್ವಾ ಮೃಗಂ ಕಂಚಾನಂ
ವೈದೇಹಿ ಹರಣಾಂ ಜತಾಯು ಮರಣಂ ಸುಗ್ರೀವ ಸಂಭಾಂ |
ವಾಲಿ ನಿಗ್ರಹಣಂ ಸಮುದ್ರತಾರಣಂ ಲಂಕಪುರಿದಾನಂ ಪಶ್ಚಾದ್ರವಣಕುಂಭಕರ್ಣಹಣಂ ಹ್ಯತದ್ಧಿ ರಾಮಾಯಣಂ ಇತಿ ಏಕಶ್ಲೋಕೀ ರಾಮಾಯನಾಮಂ
ಈ ಶ್ಲೋಕದ ಅರ್ಥವೇನು?
ಶ್ರೀರಾಮನು ವನವಾಸಕ್ಕೆ ಹೋದನು. ಅಲ್ಲಿ ಅವನು ಚಿನ್ನದ ಜಿಂಕೆಯನ್ನು ಕೊಂದನು. ರಾವಣನು ಸೀತಾ ಮಾತೆಯನ್ನು ಅಪಹರಿಸಿದನು. ಜಟಾಯು ರಾವಣನಿಂದ ಕೊಲ್ಲಲ್ಪಟ್ಟನು. ಶ್ರೀರಾಮ ಮತ್ತು ಸುಗ್ರೀವ ಸ್ನೇಹಿತರಾದರು. ಶ್ರೀರಾಮನು ಬಲಿಯನ್ನು ಕೊಂದನು. ಸಮುದ್ರವನ್ನು ದಾಟಿದರು ಲಂಕಾ ಸುಟ್ಟುಹೋಯಿತು. ಇದಾದ ನಂತರ ರಾವಣ ಮತ್ತು ಕುಂಭಕರ್ಣನನ್ನು ಕೊಲ್ಲಲಾಯಿತು.
ಶ್ಲೋಕ ಪಠಣೆ ಮಾಡುವಾಗ ಈ ವಿಧಾನ ಪಾಲಿಸಿ!
ಬೆಳಿಗ್ಗೆ ಎದ್ದು ಸ್ನಾನ ಮಾಡಿದ ನಂತರ ಮನೆಯ ದೇವಸ್ಥಾನದಲ್ಲಿ ದೀಪವನ್ನು ಹಚ್ಚಿ. ಆ ನಂತರವೇ ರಾಮಾಯಣದ ಈ ಶ್ಲೋಕವನ್ನು ಪಠಿಸೋದಕ್ಕೆ ಆರಂಭಿಸಿ.
ಎಷ್ಟು ಬಾರಿ ಜಪಿಸಬೇಕು?
ರಾಮಾಯಣದ ಈ ಶ್ಲೋಕವನ್ನು ನಿತ್ಯ ಪಠಿಸಿದರೆ ತುಂಬಾನೇ ಒಳ್ಳೆಯದು. ಇನ್ನೂ ನಂಬಿಕೆಗಳ ಪ್ರಕಾರ 108 ಬಾರಿ ಶ್ಲೋಕವನ್ನು ಜಪಿಸಿದ್ರೆ ಒಳ್ಳೆಯದಾಗುತ್ತೆ ಅಂತ ಹೇಳಲಾಗುತ್ತದೆ. ಒಂದು ವೇಳೆ ಅದು ಸಾಧ್ಯವಾಗದಿದ್ದರೆ ಒಂದು ಶ್ಲೋಕವನ್ನು 7, 14 ಅಥವಾ 21 ಬಾರಿ ಪಠಿಸಬಹುದು.
ಇತ್ತೀಚಿನ ದಿನಗಳಲ್ಲಿ ಯಾರು ಕೂಡ ಸರಿಯಾದ ಜೀವನ ಶೈಲಿಯನ್ನು ಅನುಸರಿಸುತ್ತಿಲ್ಲ. ಬೆಳಗ್ಗೆ ಬೇಗನೇ ಎದ್ದು, ಭಕ್ತಿಯಿಂದ ಈ ಮಂತ್ರಗಳನ್ನು ಪಠಿಸಿದ್ರೆ ಮನಸ್ಸಿಗೂ ನೆಮ್ಮದಿಗೂ ಸಿಗುತ್ತದೆ. ಜೊತೆಗೆ ನಿಮ್ಮ ಸಮಸ್ಯೆಗಳಿಗೆಲ್ಲಾ ಪರಿಹಾರ ಸಿಗುತ್ತದೆ.



Click it and Unblock the Notifications











