Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ವೃತ್ತಿ ಹಾಗೂ ವೈವಾಹಿಕ ಜೀವನದ ಮೇಲೆ ರಾಹುವಿನ ಕೆಂಗಣ್ಣು ಬಿದ್ದಾಗ ಏನಾಗುತ್ತೆ?
ವೇದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಒಟ್ಟು ಒಂಬತ್ತು ಗ್ರಹಗಳಿದೆ. ಅದ್ರಲ್ಲಿ ರಾಹು ಕೂಡ ಒಂದು ಗ್ರಹ. ರಾಹುವಿನ ಕೆಟ್ಟ ದೃಷ್ಟಿ ನಮ್ಮ ಜಾತಕದಲ್ಲಿದ್ದರೆ ನಮಗೆ ಆಪತ್ತು ಎದುರಾಗೋದ್ರಲ್ಲಿ ಅನುಮಾನವಿಲ್ಲ. ರಾಹುವಿನ ಕೆಂಗಣ್ಣಿಗೆ ಗುರಿಯಾದರೆ ವೈವಾಹಿಕ ಸಮಸ್ಯೆ, ವೃತ್ತಿ ಜೀವನದಲ್ಲಿ ಸಮಸ್ಯೆ, ಆರ್ಥಿಕ ಸಂಕಷ್ಟ ಹೀಗೆ ಎಲ್ಲಾ ಸಂಕಷ್ಟಗಳು ಒಂದೇ ಬಾರಿ ನಮ್ಮನ್ನು ಭಾದಿಸುತ್ತದೆ. ಅಷ್ಟಕ್ಕು ರಾಹುವಿನ ಕೆಟ್ಟ ದೃಷ್ಟಿಯಿಂದ ವೃತ್ತಿ ಜೀವನ ಹಾಗೂ ವೈವಾಹಿಕ ಜೀವನದಲ್ಲಿ ಸಮಸ್ಯೆಗಳಾದಾಗ ನಾವು ಅದನ್ನು ಯಾವ ರೀತಿ ಎದುರಿಸಬೇಕು ಎಂದು ತಿಳಿಯೋಣ.
ಶನಿವಾರ ರಾಹುವನ್ನು ಪೂಜೆಸಬೇಕು!
ರಾಹು ದೋಷದಿಂದ ನಾವು ಬಳಲುತ್ತಿದ್ದರೆ ಅದಕ್ಕೆ ಪರಿಹಾರವಾಗಿ ನಾವು ಶಣಿವಾರದ ದಿನ ರಾಹುವನ್ನು ಪೂಜಿಸಬೇಕು. ನಾವು ದುರ್ಗಾ, ವಿಷ್ಣು ಸೇರಿದಂತೆ ಎಲ್ಲ ದೇವರನ್ನೂ ಪೂಜಿಸುತ್ತೇವೆ. ಆದರೆ ರಾಹುವು ನೀಲಿ ಬಣ್ಣವನ್ನು ಹೊಂದಿರುವ ನೆರಳು ಗ್ರಹವಾಗಿರುವುದರಿಂದ ದೇವರೆಂದು ಪರಿಗಣಿಸಲಾಗುವುದಿಲ್ಲ. ಹೀಗಾಗಿ ಶನಿವಾರದ ದಿನ ಪರಿಹಾರವಾಗಿ ರಾಹುವಿಗೆ ಕಪ್ಪು ಎಳ್ಳು ಮತ್ತು ತೆಂಗಿನಕಾಯಿ ಅರ್ಪಿಸಿದರೆ ಒಳ್ಳೆಯದು.

ರಾಹು ಮತ್ತು ಕೇತು ಎಂದರೆ ಯಾರು?
ರಾಹು ಮತ್ತು ಕೇತು ಶನಿಯ ಶಿಷ್ಯರು. ರಾಹು ವೃಷಭ ರಾಶಿಯಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿದ್ದು, ವೃಶ್ಚಿಕ ರಾಶಿಯಲ್ಲಿ ಕ್ಷೀಣರಾಗಿದ್ದಾರೆ. ರಾಹು ರಾಜತಾಂತ್ರಿಕ ಗ್ರಹವಾಗಿದ್ದು, ರಾಹು ಇದ್ದಲ್ಲಿ ಕಠಿಣ ಪರಿಶ್ರಮ ಪಡಬೇಕಾಗುತ್ತದೆ. ಹೀಗಾಗಿ ನಿಮ್ಮ ಜಾತಕದಲ್ಲಿ ರಾಹು ಇದ್ದಾಗ ಎಂಜಿನಿಯರಿಂಗ್, ರಾಜಕೀಯ, ಸಂಶೋಧನಾ ಕೆಲಸ, ಸ್ಟಾಕ್ ಬ್ರೋಕರ್, ವಿಮಾನಯಾನ ಮುಂತಾದ ವೃತ್ತುಗಳನ್ನು ನೀವು ಆಯ್ದುಕೊಳ್ಳಬಹುದು.
ಅದೇ ರೀತಿ ಕರ್ಕ ಮತ್ತು ಸಿಂಹ ರಾಶಿಯನ್ನು ರಾಹುವಿನ ಶತ್ರು ಎಂದು ಪರಿಗಣಿಸಲಾಗಿದೆ. ಇನ್ನೂ ರಾಹುವು ಬುಧ, ಶುಕ್ರ ಮತ್ತು ಶನಿ ಗ್ರಹಗಳೊಂದಿಗೆ ಸ್ನೇಹಪರನಾಗಿದ್ದಾನೆ. ಸೂರ್ಯ, ಚಂದ್ರ ಮತ್ತು ಮಂಗಳ ಗ್ರಹಗಳು ರಾಹುವಿನ ಶತ್ರುಗಳು. ಒರ್ವ ವ್ಯಕ್ತಿಯ ಜೀವನದಲ್ಲಿ ರಾಹುವು 42 ನೇ ವಯಸ್ಸಿನಲ್ಲಿ ಪ್ರಬುದ್ಧನಾಗುತ್ತಾನೆ.
ರಾಹುವಿನಿಂದ ಉಂಟಾಗುವ ಸಮಸ್ಯೆಗಳು ಯಾವುದು?
ಧೂಮಪಾನದ ಅಭ್ಯಾಸ
ಹಿಂದಿನ ಜೀವನದ ಕರ್ಮ ಕಾಡುತ್ತದೆ
ವಿವಾದಾತ್ಮಕ ಸಮಸ್ಯೆಗಳು ಹೆಚ್ಚಾಗುತ್ತದೆ
ಆಕ್ರಮಣಕಾರಿ
ವಿಲಕ್ಷಣ
ಕಾಯಿಲೆಗಳು
ಚರ್ಮದ ಸೋಂಕು
ವೃದ್ಧಾಪ್ಯ ರೋಗಗಳು
ಪ್ರಾಮಾಣಿಕತೆ
ಮದ್ಯಪಾನ
ಹಠಮಾರಿ
ರಾಹುವಿನಿಂದಾಗುವ ಧನಾತ್ಮಕ ಪರಿಣಾಮಗಳೇನು?
1. ರಾಹುವು ನಮ್ಮ ಜನ್ಮ ಕುಂಡಲಿಯಲ್ಲಿ 5, 9, 7 ಅಥವಾ 10 ನೇ ಮನೆಯಲ್ಲಿದ್ದರೆ ನಮ್ಮ ಜೀವನದಲ್ಲಿ ಯಾವುದೇ ಸಮಸ್ಯೆಯಾಗೋದಿಲ್ಲ. ಎಲ್ಲವೂ ನಾವು ಅಂದುಕೊಂಡಂತೆ ನೆರವೇರುತ್ತದೆ.
2. ರಾಹುವು ನಮ್ಮ ಜನ್ಮ ಕುಂಡಲಿಯಲ್ಲಿ 12 ನೇ ಮನೆಯಲ್ಲಿದ್ದರೆ ನಮಗೆ ವಿದೇಶಕ್ಕೆ ಹೋಗುವ ಅವಕಾಶಗಳು ಇರುತ್ತದೆ.
3. ರಾಹು ನಮ್ಮ ಜನ್ಮ ಕುಂಡಲಿಯಲ್ಲಿ 1, 3, 6 ಮತ್ತು 11 ನೇ ಮನೆಯಲ್ಲಿದ್ದರೆ ನಮ್ಮ ಲಗ್ನ ರೇಖೆ ಉತ್ತಮವಾಗುತ್ತದೆ.
4. ರಾಹುವು ಒಂದು ರಾಶಿಯಿಂದ ಇನ್ನೊಂದು ರಾಶಿಗೆ ಪ್ರಯಾಣಿಸಲು 18 ತಿಂಗಳು ತೆಗೆದುಕೊಳ್ಳುತ್ತಾನೆ.
ರಾಹುವಿನಿಂದ ಆಗುವ ದುಷ್ಪರಿಣಾಮಗಳೇನು?
1. ರಾಹುವು ನಮ್ಮ ಜಾತಕದಲ್ಲಿ ಬಲವಾದ ಸ್ಥಾನದಲ್ಲಿರದಿದ್ದರೆ ನಾವು ದುಷ್ಪರಿಣಾಮವನ್ನು ಎದುರಿಸಬೇಕಾಗುತ್ತದೆ.
2. ರಾಹುವು ನಿಮ್ಮ ಜಾತಕದಲ್ಲಿ 2 ನೇ, 5 ನೇ, 9 ನೇ, 12 ನೇ ಮನೆಯಲ್ಲಿ ಇದ್ದರೆ ಅದನ್ನು ಪಿತ್ರ ದೋಷ ಎಂದು ಪರಿಗಣಿಸಲಾಗುತ್ತದೆ.
3. ರಾಹುವು ನಿಮ್ಮ ಜಾತಕದಲ್ಲಿ 4 ನೇ ಮನೆಯಲ್ಲಿ ಇದ್ದರೆ ಅದನ್ನು ಮಾತೃ ದೋಷ ಎಂದು ಪರಿಗಣಿಸಲಾಗುತ್ತದೆ.
4. ರಾಹುವು ನಿಮ್ಮ ಜಾತಕದಲ್ಲಿ 4 ನೇ ಮನೆಯಲ್ಲಿ ಇದ್ದರೆ ಅದನ್ನು ವಾಸ್ತು ದೋಷವೆಂದು ಪರಿಗಣಿಸಲಾಗುತ್ತದೆ.
ಸಾಧಾರಣವಾಗಿ ಎಲ್ಲರ ಜಾತಕದಲ್ಲಿ ರಾಹು ದೋಷ ಇದ್ದೇ ಇರುತ್ತದೆ. ನಾವು ಆಗಾಗ್ಗೆ ನಮ್ಮ ಜಾತಕವನ್ನು ಓದಿಸುತ್ತಿದ್ದರೆ ದೋಷದ ಬಗ್ಗೆ ತಿಳಿಯಬಹುದು. ಹಾಗೂ ಅದಕ್ಕೆ ತಕ್ಕ ಪರಿಹಾರ ಮಾಡಿಸಬಹುದು.



Click it and Unblock the Notifications

