Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಜುಲೈನಲ್ಲಿ 2 ದಿನ ಆಗಸ್ಟ್‌ನಲ್ಲಿ 1 ದಿನ ಭೂಮಿ ತಿರುಗುವಿಕೆ ವೇಗ ಹೆಚ್ಚಳ: ಯಾವಾಗ ಗೊತ್ತಾ?
ನಮ್ಮ ಸೌರಮಂಡಲದಲ್ಲಿ ಎಷ್ಟೆಲ್ಲಾ ಅಚ್ಚರಿಗಳು ನಡೆಯುತ್ತವೆ ಅನ್ನೋದನ್ನು ನಾವು ಊಹಿಸಲು ಕೂಡ ಸಾಧ್ಯವಾಗೋದಿಲ್ಲ. ಅದ್ರಲ್ಲೂ ಕೆಲವೊಂದು ವಿದ್ಯಮಾನಗಳು ವಿಜ್ಞಾನಕ್ಕೆ ಹಾಗೆ ವಿಜ್ಞಾನಿಗಳಿಗೂ ಸವಾಲಾಗಿ ಬಿಡುತ್ತವೆ. ಇನ್ನು ಭೂಮಿಯ ಉಗಮದಿಂದ ಹಿಡಿದು ಇಂದಿಗೂ ಹತ್ತು ಹಲವು ಅಚ್ಚರಿಗಳ ತನ್ನಲ್ಲಿಟ್ಟುಕೊಂಡಿದೆ. ಭೂಮಿ ತಿರುಗುವ ವೇಗ, ದಿಕ್ಕು, ಹವಾಮಾನ, ಹೀಗೆ ಪ್ರತಿಯೊಂದು ವಿಚಾರದಲ್ಲೂ ನೀಲಿ ಗ್ರಹವು ಬಹಳ ಅಚ್ಚರಿ ಹೊತ್ತುಕೊಂಡಿದೆ.
ಈಗ ಹೊಸದಾಗಿ ಭೂಮಿಯ ತಿರುಗುವ ವೇಗ ಕುರಿತಾಗಿ ಹೊರಬಿದ್ದಿರುವ ಅಚ್ಚರಿಯ ವಿಚಾರವೊಂದು ಎಲ್ಲರಲ್ಲೂ ಕುತೂಹಲಕ್ಕೆ ಕಾರಣವಾಗಿದೆ. ಹೌದು ಭೂಮಿ ತಿರುಗುವಿಕೆಯ ಆಧಾರದ ಮೇಲೆ ಹಗಲು ರಾತ್ರಿಯಿಂದ ಹಿಡಿದು ಹವಾಮಾನ ಸೇರಿ ಪ್ರಮುಖ ವಿದ್ಯಮಾನಗಳು ನಿರ್ಧರಿತವಾಗುತ್ತದೆ. ಆದ್ರೆ ಈಗ ಜುಲೈನಲ್ಲಿ 2 ದಿನ ಹಾಗೆ ಆಗಸ್ಟ್‌ನಲ್ಲಿ 1 ದಿನ ಭೂಮಿಯ ತಿರುಗುವಿಕೆಯ ವೇಗ ಹೆಚ್ಚಾಗಲಿದೆ ಎಂದು ತಿಳಿದುಬಂದಿದೆ.

ಭೂಮಿ ತಿರುಗುವ ವೇಗವು ವರ್ಷಕ್ಕೆ 365 ಅಥವಾ 366 ದಿನಗಳಿಗೆ ಕಾರಣವಾಗಿದೆ. ಆದ್ರೆ ಶತಮಾನಗಳ ಹಿಂದೆ ಇದು 490 ದಿನಕ್ಕೂ ಅಧಿಕವಾಗಿತ್ತು ಎಂದು ಹೇಳಲಾಗಿದೆ. ನಂತರ ಭೂಮಿ ವೇಗ ಕಳೆದುಕೊಂಡು ನಿಧಾನವಾಗಿ ಸುತ್ತಲು ಆರಂಭಿಸಿದೆ, ಹಾಗೆ ಒಂದು ದಿನಕ್ಕೆ 24 ಗಂಟೆಗಳೆಂದು ಪರಿಗಣಿಸಲಾಗಿದೆ.
ಭೂಮಿಯ ತಿರುಗುವಿಕೆ ಅನಿರೀಕ್ಷಿತವಾಗಿ ವೇಗಗೊಳ್ಳುತ್ತಿದೆ ಎಂದು ವಿಜ್ಞಾನಿಯೊಬ್ಬರು ಎಚ್ಚರಿಸಿದ್ದಾರೆ. ಲಂಡನ್ ವಿಶ್ವವಿದ್ಯಾಲಯದ ಖಗೋಳ ಭೌತಶಾಸ್ತ್ರಜ್ಞ ಗ್ರಹಾಂ ಜೋನ್ಸ್ ಅವರು ಹೇಳಿರುವಂತೆ ಇದೇ ಜುಲೈ 9, ಜುಲೈ 22, ಆಗಸ್ಟ್ 5ರಂದು ಭೂಮಿ ತಿರುಗುವಿಕೆಯ ವೇಗ ತುಸು ಹೆಚ್ಚಾಗಿರಲಿದೆ ಎಂದಿದ್ದಾರೆ. ಈ ವೇಗವನ್ನು ಕೇವಲ ಮಿಲಿ ಸೆಕೆಂಡುಗಳೆಂದು ಪರಿಗಣಿಸಲಾಗಿದೆ.
ಅದರಲ್ಲೂ ಬೆಳಗ್ಗಿನ ಹೊತ್ತು ಕಡಿಮೆಯಾಗಲಿದೆ, ಕ್ರಮವಾಗಿ ಈ ಮೂರು ದಿನಗಳಲ್ಲಿ 1.30, 1.38 ಅಥವಾ 1.51 ಮಿಲಿ ಸೆಕೆಂಡುಗಳ ಕಾಲ ಕಡಿಮೆಯಾಗುತ್ತದೆ. ಆದ್ರೆ ಇಷ್ಟು ಮಿಲಿ ಸೆಕೆಂಡುಗಳ ಬದಲಾವಣೆ ಉಪಗ್ರಹಗಳು, ಜಿಪಿಎಸ್ ವ್ಯವಸ್ಥೆ, ಸಮಯದ ಟ್ರ್ಯಾಕಿಂಗ್ ಮೇಲೆ ಪರಿಣಾಮ ಬೀರಲು ಸಾಕಾಗುತ್ತದೆ. ಎಂದು ತಜ್ಞರು ಹೇಳುತ್ತಾರೆ.
ಮಾಸ್ಕೋ ಸ್ಟೇಟ್ ಯೂನಿವರ್ಸಿಟಿಯ ಸಂಶೋಧಕ ಲಿಯೊನಿಡ್ ಜೊಟೊವ್ ಪ್ರಕಾರ, ಯಾರು ಕೂಡ ಇದನ್ನು ನಿರೀಕ್ಷಿಸಿರಲಿಲ್ಲವಂತೆ. ಭೂಮಿ ಈ ಮೂರು ದಿನದಲ್ಲಿ ವೇಗ ಪಡೆದುಕೊಳ್ಳಲು ನಿಖರ ಕಾರಣ ತಿಳಿದುಬಂದಿಲ್ಲ ಎಂದು ಅವರು ಹೇಳಿದ್ದಾರೆ. ಆದರೆ 2020ರಿಂದಲೂ ಭೂಮಿ ತಿರುಗುವಿಕೆಯಲ್ಲಿ ಮಿಲಿ ಸೆಕೆಂಡಗಳ ವೇಗ ಹೆಚ್ಚಾಗಿರುವುದನ್ನು ಗಮನಸಿಲಾಗಿದೆಯಂತೆ. ಆದರೆ ಈ ವಿದ್ಯಮಾನಕ್ಕೆ ಕಾರಣವೇನು ಎಂಬುದನ್ನು ಪತ್ತೆ ಮಾಡಲು ಆಗಿಲ್ಲವಂತೆ.
ಆದರೆ ಭೂಮಿ ತಿರುಗುವಿಕೆ ಹೆಚ್ಚಾದಂತೆ ಆ ಸಮಯವನ್ನು ನಿತ್ಯದ ಸಮಯದೊಂದಿಗೆ ಜೋಡಿಸಲಾಗುತ್ತಿಲ್ಲ ಬದಲಾಗಿ ಅದನ್ನು ಹೆಚ್ಚುವರಿ ಸೆಕೆಂಡ್‌ಗಳಾಗಿ ಪರಿಗಣಿಸಲಾಗುತ್ತದೆ. 2029ರಲ್ಲಿ ಈ ಅಧಿಕ ಸೆಕೆಂಡ್‌ಗಳನ್ನು ಲೆಕ್ಕದಿಂದಲೇ ಕೈ ಬಿಡಲು ನಿರ್ಧರಿಸಲಾಗಿದೆಯಂತೆ.
ಭೂಮಿ ಏಕೆ ವೇಗವಾಗಿ ತಿರುಗುತ್ತಿದೆ?
ಭೂಮಿಯ ತಿರುಗುವಿಕೆಯು ಸಂಪೂರ್ಣವಾಗಿ ಸ್ಥಿರವಾಗಿಲ್ಲ. ಬಹಳ ಸಮಯದಲ್ಲಿ ವೇಗ ಹೆಚ್ಚಾಗುವುದು ಕಡಿಮೆಯಾಗುವುದು ನಡೆಯುತ್ತದೆ. ಅದು ಕೂಡ ಕೇವಲ ಮಿಲಿ ಸೆಕೆಂಡ್‌ಗಳಲ್ಲಿ ಮಾತ್ರ. ಹೀಗಿದ್ದರೂ ಕೂಡ ಅದರ ಪರಿಣಾಮ ಮಾತ್ರ ಬಹಳವಾಗಿರಲಿದೆ. ಭೂಕಂಪನಗಳು, ಸಮುದ್ರ ಚಲನೆ, ಭೂಮಿ ಒಳಗಿನ ಕೋರ್‌ನಲ್ಲಿ ಬದಲಾವಣೆ ಸೇರಿ ಹಲವು ನೈಸರ್ಗಿಕ ವಿದ್ಯಮಾನಗಳು ಕೂಡ ಭೂಮಿ ವೇಗಕ್ಕೆ ಕಾರಣವಾಗುತ್ತವೆ.
ಇದಕ್ಕೂ ಮೊದಲು ಜುಲೈ 5 2024ರಲ್ಲಿ ಭೂಮಿಯು ನಿಗಧಿತ 1.66 ಮಿಲಿ ಸೆಕೆಂಡ್‌ಗಳಷ್ಟು ವೇಗವಾಗಿ ದಿನವನ್ನು ಮುಗಿಸಿತ್ತು, ಇದಾದ ಬಳಿಕ ಈಗ 2025ರಲ್ಲಿ 3 ದಿನಗಳಲ್ಲಿ ಭೂಮಿ ವೇಗ ಪಡೆದುಕೊಳ್ಳುತ್ತಿದೆ.



Click it and Unblock the Notifications
