Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಡ್ರೋನ್ ತಂತ್ರಜ್ಞಾನ ಬಳಸಿ ನೀರಿನಲ್ಲಿ ಮುಳುಗುತ್ತಿರುವ ವ್ಯಕ್ತಿಯ ರಕ್ಷಣೆ: ಇಂಥ ಸಾಧನ ಪ್ರತಿ ತಾಲೂಕಿಗೆ ಬರಬೇಕು
ಈ ವರ್ಷದ ಮಳೆ ಉಪಕಾರಕ್ಕಿಂತ ಅನಾಹುತವನ್ನೇ ಉಂಟು ಮಾಡುತ್ತಿದೆ, ಎಲ್ಲಿ ನೋಡಿದರೂ ಪ್ರವಾಹದ ಆತಂಕ, ಬರೆಕುಸಿತದ ಆತಂಕ, ಮನೆ ಬೀಳುವ ಆತಂಕ. ರಸ್ತೆಗಳು, ನಗರಗಳು ಪ್ರವಾಹದಲ್ಲಿ ಮುಳುಗುತ್ತಿದೆ.

ರಣ ಭೀಕರ ಮಳೆಯನ್ನು ಎದುರಿಸುವ ಶಕ್ತಿ ಮನುಷ್ಯನಿಗೆ ಬಂದಿಲ್ಲ, ಹಾಗಾಗಿ ಪ್ರತಿ ಬಾರಿ ಪ್ರವಾಹ ಉಂಟಾದಾಗ ತುಂಬಾನೇ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ಜನರು ನೆರೆಯಲ್ಲಿ ಸಿಲುಕಿಗೊಂಡಾಗ ಅಲ್ಲಿಗೆ ರಕ್ಷಣೆಗೆ ಬರುವವರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರಕ್ಷಣೆ ಮಾಡುವಂಥ ಪರಿಸ್ಥಿತಿ, ಆದರೆ ಇಲ್ಲೊಂದು ಸಾಧನ ನೋಡಿ, ಇದು ಡ್ರೋನ್ ಅಂತೆ ಪ್ರವಾಹದಲ್ಲಿ ಸಿಲುಕಿ ಇರುವವರನ್ನು ರಕ್ಷಣೆ ಮಾಡಲು ತುಂಬಾನೇ ಸಹಕಾರಿಯಾಗಿದೆ, ಅಲ್ಲದೆ ರಕ್ಷಣೆ ಮಾಡುವವರಿಗೂ ಯಾವುದೇ ರಿಸ್ಕ್ ಇಲ್ಲ. ಎಲ್ಲಾ ತಾಲುಕಿನಲ್ಲಿ ಇಂಥ ಡ್ರೋನ್ ಇರಬೇಕು.
ನೀರಿನಲ್ಲಿ ಬೋಟ್ ರೀತಿ ಹೋಗಿ ರಕ್ಷಣೆ ಮಾಡುತ್ತದೆ
ಪ್ರವಾಹದ ಸಮಯದಲ್ಲಿ ಇಂಥ ಡ್ರೋನ್ ತಂತ್ರಜ್ಞಾನ ತುಂಬಾನೇ ಸಹಕಾರಿ. ಈ ಡ್ರೋನ್ ವೀಡಿಯೋ ತುಂಬಾನೇ ವೈರಲ್ ಆಗುತ್ತಿದೆ. ಎಲ್ಲಿ ವ್ಯಕ್ತಿಗಳು ಸಂಕಷ್ಟಕ್ಕೆ ಸಿಲುಕಿರುತ್ತಾರೋ ಅಲ್ಲಿಗೆ ಈ ಸಾಧನ ವೇಗವಾಗಿ ಹೋಗುತ್ತದೆ, ಡೈರೆಕ್ಷನ್ ಎಲ್ಲಾ ಡ್ರೋನ್ ಆಪರೇಟ್ ಮಾಡುವಂತೆ ಮಾಡಬಹುದು, ಅದನ್ನು ಹಿಡಿದು ವ್ಯಕ್ತಿ ಪ್ರಾಣಾಪಾಯದಿಂದ ಪಾರಾಗಬಹುದು.
ಸಮುದ್ರ ತೀರದಲ್ಲಿ ಈ ರೀತಿಯ ತಂತ್ರಜ್ಞಾನ ತುಂಬಾ ಸಹಕಾರಿ
ಸಮುದ್ರ ತೀರದಲ್ಲಿ ಕೋಸ್ಟಲ್ ಗಾರ್ಡ್ ಇರುತ್ತಾರೆ, ಅದರೂ ಕೆಲವೊಮ್ಮೆ ಅವಘಡ ಸಂಭವಿಸುತ್ತದೆ, ಇಂತ ತಂತ್ರಜ್ಞಾನ ಮನುಷ್ಯನ ಪ್ರಾಣ ರಕ್ಷಣೆಗೆ ಸಹಾಯ ಮಾಡುತ್ತದೆ.
ನೀರಿನ ಮಟ್ಟ ಅಪಾಯ ಮೀರುತ್ತಿದೆ ಎಂದು ಜಾಗ್ರತೆವಹಿಸಿ
ಹೌದು ಕೆಲವೊಮ್ಮೆ ನೀರಿನ ಮಟ್ಟ ಹೆಚ್ಚಾಗುತ್ತಿದ್ದರು ನನ್ನ ಮನೆ, ನನ್ನ ಆಸ್ತಿ ಅಂತ ಅಲ್ಲಿಯೇ ಉಳಿಯುತ್ತಾರೆ, ಹೀಗೆ ಮಾಡುವುದರಿಂದ ಸುಮ್ಮನೆ ಅಪಾಯಕ್ಕೆ ಸಿಲುಕಬೇಕಾಗುತ್ತದೆ, ಅಗ್ಯತವಿರುವ ಡಾಕ್ಯೂಮೆಂಟ್ ತೆಗೆದುಕೊಂಡು, ಬೆಲೆ ಬಾಳುವ ವಸ್ತುಗಳು, ಹಣವಿದ್ದರೆ ಅದನ್ನು ತೆಗೆದುಕೊಂಡು ಸುರಕ್ಷಿತ ಸ್ಥಳಕ್ಕೆ ಹೋಗುವುದರಿಂದ ಜೀವಕ್ಕೆ ಅಪಾಯ ಉಂಟಾಗುವುದನ್ನು ತಡೆಗಟ್ಟಬಹುದು. ಇಲ್ಲ ನಿರಿನ ಮಟ್ಟ ಕಡಿಮೆಯಾಗುತ್ತೆ, ಮಳೆ ಬರಲ್ಲ, ನೀರಿನ ಮಟ್ಟ ಹೆಚ್ಚಾಗಲ್ಲ ಎಂದೆಲ್ಲಾ ಲೆಕ್ಕಾಚಾರ ಹಾಕುತ್ತಾ ಕೂತರೆ ಪ್ರವಾಹದ ನಡುವೆ ಸಿಲುಕಿಕೊಳ್ಳುವಂತೆ ಮಾಡುತ್ತದೆ.
ನೀರಿನ ಜೊತೆ ಸಾಹಸ ಬೇಡ
ಮಳೆ ಹೆಚ್ಚಾದಾಗ ಕೊಳಗಳು, ಕೆರೆಗಳು, ನದಿಗಳು ತುಂಬಿ ಹರಿಯುತ್ತಿರುತ್ತದೆ, ಜಲಪಾತಗಳು ಉಕ್ಕಿ ಹರಿಯುತ್ತಿರುತ್ತದೆ, ಇದನ್ನು ನೋಡಲು ತುಂಬಾನೇ ಮನಮೋಹಕವಾಗಿರುತ್ತದೆ. ಹಾಗಾಗಿ ನಮಗೆ ಆ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳುವ ಕುತೂಹಲ ಕೂಡ ಇರುತ್ತದೆ. ಆದರೆ ಅಂಥ ಸ್ಥಳಗಳಿಗೆ ಹೋಗುವಾಗ ಮಾತ್ರ ತುಂಬಾನೇ ಜಾಗ್ರತೆವಹಿಸಬೇಕು. ರೀಲ್ಸ್ ಮಾಡುವುದು, ಸೆಲ್ಫಿ ತೆಗೆದುಕೊಳ್ಳುವುದು ಮಾಡಬೇಡಿ.
ಸಮೀಪದ ರಕ್ಷಣಾ ಟೀಂ ನಂಬರ್ ನಿಮಗೆ ಗೊತ್ತಿರಲಿ
ಎಲ್ಲಾ ಕಡೆ ರಕ್ಷಣೆಗೆ ಒಂದು ಟೀಂ ಸ್ವಯಂ ಪ್ರೇರಿತರಾಗಿ ಸಿದ್ಧರಾಗಿರುತ್ತಾರೆ. ಅಂಥವರ ಫೋನ್ ನಂಬರ್ ನಿಮ್ಮ ಬಳಿ ಇರಲಿ.



Click it and Unblock the Notifications
