Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಅಬ್ಬಾ..! ಒಂದು ಮಸಾಲಾ ದೋಸೆ ಬೆಲೆ ಬರೋಬ್ಬರಿ ₹600..! ಗ್ರಾಹಕನ ವಿಡಿಯೋ ವೈರಲ್
ನೀವು ದೋಸೆ ಪ್ರಿಯರಾಗಿದ್ರೆ ಅಬ್ಬಬ್ಬಾ ಅಂದ್ರೆ 100 ರೂಪಾಯಿ ಕೊಟ್ಟು ಎಲ್ಲಾದ್ರು ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಮಸಾಲಾ ದೋಸೆ ತಿಂದಿರುತ್ತೀರ. ಮಸಾಲಾ ದೋಸೆಗೆ ಸಾಮಾನ್ಯವಾಗಿ ಬೇರೆ ದೋಸೆಗಿಂತ ಬೇಡಿಕೆಯು ಹೆಚ್ಚು ದರವೂ ಹೆಚ್ಚು. ಆದ್ರೆ ಮಸಾಲಾ ದೋಸೆ ತಿನ್ನೋರ ಸಂಖ್ಯೆ ಏನು ಕಡಿಮೆಯಾಗಿಲ್ಲ. ಯಾವ ಹೋಟೆಲ್‌ನಲ್ಲಿ ನೋಡಿದ್ರು, ಮಸಾಲಾ ದೋಸೆ ತಿನ್ನೋರು ಸಿಕ್ಕೆ ಸಿಗ್ತಾರೆ.
ಆದ್ರೆ ಮಸಾಲಾ ದೋಸೆಗೆ ಚಿನ್ನದಂತ ರೇಟ್ ಬಂದ್ರೆ ಹೇಗೆ. ಹೌದು ಮುಂಬೈನ ಏರ್‌ಪೋರ್ಟ್‌ನಲ್ಲಿ ಮಸಾಲಾ ದೋಸೆ ದರ ಕೇಳಿದ್ರವ್ರು ಬಾಯಿ ಮೇಲೆ ಬೆರಳಿಟ್ಟಿದ್ದಾರೆ. ಮುಂಬೈ ಮಹಾನಗರಿಯಲ್ಲಿ ದರಗಳು ತುಸು ಹೆಚ್ಚಾಗಿಯೇ ಇವೆ ಆದರೆ ಒಂದು ಮಸಾಲಾ ದೋಸೆಗೆ ಬರೋಬ್ಬರಿ 600 ರಿಂದ 630 ರೂಪಾಯಿ ಅಂದರೆ ನೀವು ನಂಬಲೆಬೇಕು.

ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದೋಸೆ ಸವಿಯಲು ತೆರಳಿದ್ದ ಪ್ರಯಾಣಿಕರೊಬ್ಬರಿಗೆ ದೋಸೆ ದರ ಕಂಡು ತಲೆತಿರುಗಿದೆ. ಈ ಕುರಿತು ಅವರು ವಿಡಿಯೋ ಹಂಚಿಕೊಂಡಿದ್ದು, ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಪ್ರತಿ ಗ್ರಾಮ್ ಬೆಳ್ಳಿ ದರ ಹಾಗೂ ಈ ಮಸಾಲಾ ದೋಸೆ ದರ ಎರಡೂ ಒಂದೇ ಆಗಿದೆ ಎಂದು ಆತ ವಿಡಿಯೋದಲ್ಲಿ ವಿವರಿಸಿದ್ದಾನೆ.
ಆತ ದೋಸೆ ಅಂಗಡಿಯಲ್ಲಿ ನಿಂತು ದೋಸೆ ಮಾಡುತ್ತಿರುವುದನ್ನು ಮೊಬೈಲ್‌ನಲ್ಲಿ ಚಿತ್ರಿಸಿದ್ದಾರೆ. ಬಳಿಕ ಡಿಜಿಟಲ್ ಬೋರ್ಡ್‌ನಲ್ಲಿ ಹಾಕಿರುವ ದರಗಳ ಪಟ್ಟಿಯತ್ತ ನೋಡಿದ್ದಾರೆ. ಅದರಲ್ಲಿ ಮಸಾಲಾ ದೋಸೆಗೆ 600 ರೂಪಾಯಿ ಹಾಗೂ ಖಾಲಿ ಬೆಣ್ಣೆ ದೋಸೆಗೆ 620 ರೂಪಾಯಿ ಎಂದು ಬರೆಯಲಾಗಿದೆ.
ಈ ದೋಸೆಗೆ ಇದು ನಿರ್ದಿಷ್ಟ ಬೆಲೆ ಅಲ್ಲ, ದೋಸೆ ಜೊತೆ ನೀವು ಕಾಫಿ, ಜ್ಯೂಸ್, ಲಸ್ಸಿ, ಟೀ, ಹಾಲು ಹೀಗೆ ಬೇರೆ ಏನಾದರೂ ಖರೀದಿಸಿದರೆ ಈ ಬೆಲೆ 650 ರೂಪಾಯಿಗಿಂತ ಹೆಚ್ಚಾಗುತ್ತದೆ. ಈ ವಿಡಿಯೋ ಹಂಚಿಕೊಂಡ ಗ್ರಾಹಕ ದೋಸೆ ದರಕ್ಕೆ ದಂಗಾಗಿದ್ದಾರೆ. ಹಾಗೆ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋ ಬರೋಬ್ಬರಿ 9 ಮಿಲಿಯನ್ ವೀಕ್ಷಣೆ ಕಂಡಿದ್ದು, ಮಸಾಲಾ ದೋಸೆ ದರ ಕಂಡು ನೆಟ್ಟಿಗರು ಶಾಕ್‌ಗೆ ಒಳಗಾಗಿದ್ದಾರೆ.
ಇಲ್ಲಿದೆ ದೋಸೆಗೆ ಇಷ್ಟು ದರ ಏಕೆ?
ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯಾವಾಗಲೂ ಪ್ರಯಾಣಿಕರಿಂದ ತುಂಬಿರುತ್ತದೆ. ಅಲ್ಲದೆ ಸುತ್ತಮುತ್ತ ಹೋಟೆಲ್ ರೆಸ್ಟೋರೆಂಟ್‌ಗಳ ಸಂಖ್ಯೆ ಕಡಿಮೆ ಇದೆ. ಅಲ್ಲದೆ ರಜಾ ದಿನದ ಸಮಯದಲ್ಲಿ ಹೋಟೆಲ್ ತಿನಿಸುಗಳ ದರ ಏರುಮುಖವಾಗಿರುತ್ತದೆ. ಆದರೆ ಈ ವಿಡಿಯೋದಲ್ಲಿರುವ ಹೋಟೆಲ್ ವಿಮಾನ ನಿಲ್ದಾಣದ ಆವರಣದೊಳಗಿದೆ. ಅಲ್ಲಿ ಯಾವಾಗಲೂ ಇಷ್ಟೇ ದರ ಇರುತ್ತದೆ.
ಭಾರತದಲ್ಲಿ ದುಬಾರಿ ಫುಡ್ ಯಾವುದು?
ಇಬ್ಬರ ಊಟಕ್ಕೆ 1.5 ಲಕ್ಷ
ಮುಂಬೈನ ತಾಜ್ ಹೋಟೆಲ್ ಬಗ್ಗೆ ನೀವು ಕೇಳುತ್ತೀರಿ. ಅಲ್ಲಿ ನೀವು ಹೇಳಿದಂತೆ, ನಿಮ್ಮದೇ ಮೆನು ತಯಾರಿಸುತ್ತಾರೆ. ರೆಡ್ ಕಾರ್ಪೆಟ್ ಹಾಕಿ ಒಂದೇ ಒಂದು ಟೇಬಲ್ ಇಟ್ಟು, ಮಧ್ಯದಲ್ಲಿ ಕ್ಯಾಂಡಲ್ ಹಚ್ಚಿರುತ್ತಾರೆ. ಆದ್ರೆ ಇಬ್ಬರ ಊಟಕ್ಕೆ ಬರೋಬ್ಬರಿ 1.5 ಲಕ್ಷ ರೂಪಾಯಿ ವ್ಯಯಿಸಬೇಕಿದೆ. ಇದು ಭಾರತದ ಅತ್ಯಂತ ದುಬಾರಿ ಫುಡ್ ಎಂದು ಹೆಗ್ಗಳಿಕೆ ಪಡೆದಿದೆ.
ಬೆಂಗಳೂರಿನ ಚಿನ್ನ ಲೇಪಿತ ದೋಸೆ
ಈ ದೋಸೆಯು ಅಕ್ಷರಶಃ ದೋಸೆಗಳ ರಾಜ ಎನ್ನಬಹುದು. 24K ಚಿನ್ನ ಲೇಪಿತ ದೋಸೆ ಬೆಂಗಳೂರಿನಲ್ಲಿ ಸಿಗುತ್ತದೆ. ಆದರೆ ಈ ದೋಸೆ ಬೆಲೆ ಬರೋಬ್ಬರಿ 1011 ರೂಪಾಯಿಗಳು, ನೀವಂದು ಕೊಂಡಂತೆ ಇದರ ಮೇಲೆ ಚಿನ್ನ ಸುರಿಯುವುದಿಲ್ಲ, ಬದಲಿಗೆ ಚಿನ್ನ ಕೋಟಿಂಗ್‌ನ ಪ್ಲಾಸ್ಟಿಕ್ ಮೇಲೆ ಈ ದೋಸೆ ಸುತ್ತಿರುತ್ತಾರೆ.
ಕಾಗ್ನಾಕ್ ಬ್ರಾಂಡಿಗೆ ಲಕ್ಷ ಲಕ್ಷ
ದೆಹಲಿಯಲ್ಲಿರುವ ಲೀಲಾ ಪ್ಯಾಲೆಸ್‌ನಲ್ಲಿ ಕಾಗ್ನಾಕ್ ಬ್ರಾಂಡಿಯ ಒಂದು ಗ್ಲಾಸ್‌ಗೆ ಬರೋಬ್ಬರಿ 1.5 ಲಕ್ಷ ರೂಪಾಯಿ ನೀಡಬೇಕಿದೆ. ಇದು ಅತ್ಯಂತ ದುಬಾರಿ ಡ್ರಿಂಕ್ ಎಂಬ ಹೆಗ್ಗಳಿಕೆ ಪಡೆದಿದೆ. ಕೇವಲ 30 ಎಂಎಲ್‌ನ ಈ ಡ್ರಿಂಕ್ ಕುಡಿಯಬೇಕೆಂದರೆ 1.5 ಲಕ್ಷ ನೀಡಬೇಕಿದೆ.
10 ಸಾವಿರದ ಪಿಜ್ಹಾ
ದೆಹಲಿಯ ಲೀಲಾ ಪ್ಯಾಲೆಸ್ ಹೋಟೆಲ್‌ನಲ್ಲಿ ನೀವು ಊಹಿಸದ ಗಾತ್ರದ ಪಿಜ್ಹಾಕ್ಕೆ 10 ಸಾವಿರ ರೂಪಾಯಿ ಇದೆ. ಅದು ಕೇವಲ 13 ಇಂಚಿನ ಪಿಜ್ಹಾಗೆ ಬರೋಬ್ಬರಿ 9,999 ರೂಪಾಯಿ ದರ ನಿಗದಿಯಾಗಿದ್ದು, ಇದು ಅತ್ಯಂತ ದುಬಾರಿ ಪಿಜ್ಹಾ ಆಗಿದೆ.
ಬಟರ್ ಚಿಕನ್‌ನ ಒಂದು ಭಾಗಕ್ಕೆ ₹6,000
ಇಬ್ಬರು ಸಾಫ್ಟ್‌ವೇರ್ ವೃತ್ತಿಪರರು ಕಟ್ಟಿರುವ ಅನಾರ್ಕಲಿ ಹೋಟೆಲ್‌ನಲ್ಲಿ ಈ ವಿಶೇಷ ಬಟರ್ ಚಿಕನ್ ಭಾಗಕ್ಕೆ ಬರೋಬ್ಬರಿ 6 ಸಾವಿರ ರೂಪಾಯಿ ಇದೆ. ಈ ರೆಸಿಪಿ ತಯಾರಿಸಲು ಅವರು 8 ವರ್ಷಗಳನ್ನು ತೆಗೆದುಕೊಂಡರು ಎನ್ನಲಾಗಿದೆ.



Click it and Unblock the Notifications