Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ದೂದ್ ಕೋಲಾ: ಕಾಂಬಿನೇಷನ್ ವಿಚಿತ್ರವಾಗಿದ್ದರೂ ಈ ಪಾನೀಯಗೆ ಸಿಕ್ಕಾಪಟ್ಟೆ ಡಿಮ್ಯಾಂಡ್ ಅಂತೆ!
ಕೆಲವರು ಆಹಾರದಲ್ಲಿ ತುಂಬಾನೇ experiment ಮಾಡ್ತಾರೆ, ಅದರ್ಲಿ ಕೆಲವೊಂದು ಹಿಟ್ ಆದರೆ ಇನ್ನು ಕೆಲವು ಫುಲ್ ಫ್ಲಾಪ್. ಕೆಲವೊಂದು ಈ ವಿಚಿತ್ರ ಕಾಂಬಿನಬೇಷನ್‌ನಿಂದಲೇ ಪ್ರಸಿದ್ಧಿಯನ್ನು ಪಡೆಯುತ್ತದೆ. ಇನ್ನು ಕೆಲವು ಹೋಟೆಲ್ ರೆಸ್ಟೋರೆಂಟ್, ಡಾಬಾಗಳಿರುತ್ತದೆ, ನೀವು ಆ ರುಚಿಯ ಆಹಾರ ಅಲ್ಲಿ ಬಿಟ್ಟರೆ ಬೇರೆಲ್ಲೂ ಸವಿಯಲು ಸಾಧ್ಯವಿಲ್ಲ.
ನಮ್ಮ ಕರ್ನಾಟಕದಲ್ಲಿಯೂ ಈ ರೀತಿಯ ಹಲವು ರೀತಿಯ ಹೋಟೆಲ್ ಇರುತ್ತದೆ. ಉದಾಹರಣೆಗೆ ಕಲ್ಲಡ್ಕ ಟೀ, ಇದು ಕೆ ಟೀ ಎಂದೇ ಫೇಮಸ್, ಅಂಥ ಟೀ ಬೇರೆ ಕಡೆ ಟ್ರೈ ಮಾಡರಬಹುದು, ಆದರೆ ಆ ಟೇಸ್ಟ್ , ಸದವಾದ ಸಿಗಬೇಕೆಂದರೆ ಅಲ್ಲಿಯೇ ಸವಿಯಬೇಕು, ಹೀಗೆ ನಿಮಗೆ ಗೊತ್ತಿರುವಂತೆ ಇನ್ನೂ ಹಲವು ಹೋಟೆಗಳು, ಡಾಬಾಗಳಿರಬಹುದು.

ಇನ್ನು ಕೆಲವು ಕಡೆ ವಿಚಿತ್ರ ಕಾಂಬಿನೇಷನ್ ಟ್ರೈ ಮಾಡ್ತಾರೆ, ಉದಾಹರಣೆಗೆ ಐಸ್‌ಕ್ರಮ್ ಬೋಂಡ, ಅದೇ ರೀತಿಯದ್ದೇ ವಿಚಿತ್ರ ಪಾನೀಯದ ವೀಡಿಯೋ ಇದೀಗ ವೈರಲ್ ಆಗುತ್ತಿದೆ, ಇದರ ಹೆಸರು ದೂದ್ ಕೋಲಾ, ಕೋಕಾ ಕೋಲಾ ಗೊತ್ತಿದೆ, ಇದೇನು ದೂದ್‌ಕೋಲಾ ಎಂದನಿಸಬಹುದು, ಇಂಥ ವಿಚಿತ್ರ ಪಾನೀಯ ಟೇಸ್ಟ್ ಮಾಡಲು ನೀವು ಕೋಲ್ಕತ್ತಾಗೆ ಹೋಗಬೇಕು. ಕೋಲಾವನ್ನು ಹಾಲಿನ ಜೊತೆ ಮಿಕ್ಸ್ ಮಾಡಿ ಈ ದೂದ್ ಕೋಲಾ ತಯಾರಿಸಲಾಗಿದೆ.
ಇಂಥ ವಿಚಿತ್ರ ಕೋಲಾಗೆ ಇತಿಹಾಸ ಕೂಡ ಇದೆಯಂತೆ
ಇದನ್ನು ಮೊದಲಿಗೆ ಭಾರತದಲ್ಲಿ ತಯಾರಿಸಿದ್ದು ಬಲ್ವಂತ್ ಸಿಂಗ್ ಮಗನ ಜೊತೆ ಟ್ರಾವೆಲ್ ಮಾಡುವಾಗ ಉರಿ ಬಿಸಿಲಿನ ಸಮಯದಲ್ಲಿ ತಂಪಾದ ಪಾನೀಯ ಕುಡಿಯಲು ಈ ಪಾನೀಯ ಕಂಡು ಹಿಡಿಯಲಾಯ್ತು ಎಂದು ಡಾಬಾ ಓನರ್ ಬಲ್ವಂತ್ ಸಿಂಗ್ ಹೇಳುತ್ತಾರೆ.
ಬೇಸಿಗೆಗೆ ಹೇಳಿ ಮಾಡಿಸಿದ ಪಾನೀಯವಂತೆ, ಈ ಡಾಬಾದಲ್ಲಿ ತುಂಬಾನೇ ಫೇಮಸ್
ಬಿಸಿಲಿನ ಧಗೆಗೆ ಬರುವವರೆಗೆ ಈ ಪಾನೀಯ ತುಂಬಾನೇ ಹಿತವಂತೆ, ಈ ಡಾಬಾಗೆ ಬರುವವರು ಈ ಸ್ಪೆಷಲ್ ಪಾನೀಯ ಟೇಸ್ಟ್ ಮಾಡಲು ಬಯಸುತ್ತಾರೆ. ಈ ವಿಚಿತ್ರ ಪಾನೀಯ ಅಷ್ಟು ಂಏಮಸ್ ಅಂತೆ ಇಲ್ಲಿ.
ಅತ್ಲಾಗೆ ತಂಪು ಪಾನೀಯವಲ್ಲ, ಇತ್ಲಾಗೆ ಆರೋಗ್ಯ ಪಾನೀಯವಲ್ಲ
ಹಾಲಿಗೆ ಕೋಲಾ ಬೆರೆಸಿ ಮಾಡುವ ಈ ಪಾನೀಯ ಖಂಡಿತ ಆರೋಗ್ಯಕರವಲ್ಲ, ಹಾಲಿನ ಗುಣಗಳನ್ನು ಕೋಲಾ ನಾಶ ಮಾಡಿರುತ್ತದೆ. ಇದರ ರುಚಿ ಚೆನ್ನಾಗಿರುತ್ತದೆ ಎಂದು ಡಾಬಾದವರು ಹೇಳುತ್ತಾರೆ, ಕೋಲ್ಕತ್ತಾಗೆ ಹೋದರೆ ಈ ಪಾನೀಯ ಟ್ರೈ ಮಾಡಿ.
ಈ ವಿಚಿತ್ರ ಕಾಂಬಿನೇಷನ್ ಪಾನೀಯ ವೈರಲ್ ಆಗುತ್ತಿದ್ದಂತೆ ಹಲವರು ಹಲವು ಪ್ರತಿಕ್ರಿಯೆ ನೀಡುತ್ತಿದ್ದಾರೆ, ಕೆಲವರು ವಿನಾಶ ಕಾಲಕ್ಕೆ ವಿಪರೀತ ಬುದ್ಧಿ ಎಂದು ಹೇಳಿದರೆ, ಮತ್ತೊಬ್ರು ನಾನು ಇಲ್ಲಿಗೆ ಹೋದಾಗ ಈ ಪಾನೀಯ ಟೇಸ್ಟ್ ಮಾಡಿದ್ದೇನೆ, ಬಲ್ಡಪ್‌ಗೆ ತಕ್ಕಂತೆ ಏನೂ ಇದಕ್ಕಿಂತ ಟೀ, ಲಸ್ಸಿ ಚೆನ್ನಾಗಿರುತ್ತದೆ ಎಂದು ಹೇಳಿದೆ.
ನೀವು ಟೇಸ್ಟ್ ಮಾಡಿರುವ ವಿಚಿತ್ರ ಕಾಂಬಿನೇಷನ್ ಆಹಾರವಿದ್ದರೆ ಕಮೆಂಟಿಸಿ:



Click it and Unblock the Notifications
