Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ವರಮಹಾಲಕ್ಷ್ಮಿ ಪೂಜೆಯ ವೇಳೆ ಅಪ್ಪಿ ತಪ್ಪಿಯೂ ಈ ತಪ್ಪುಗಳ ಮಾಡಬೇಡಿ!
ವರ ಮಹಾಲಕ್ಷ್ಮಿ ಹಬ್ಬಕ್ಕೆ ಗೃಹಿಣಿಯರ ಸಿದ್ಧತೆ ಭರದಿಂದ ಸಾಗಿದೆ. ಶ್ರಾವಣ ಮಾಸದ ಮೊದಲ ಹಬ್ಬವೆಂದು ಇದನ್ನು ಆಚರಿಸಲಾಗುತ್ತೆ. ಸಿರಿ-ಸಂಪತ್ತು, ಧನ ಲಾಭಕ್ಕಾಗಿ, ಆರೋಗ್ಯ ವೃದ್ಧಿಗಾಗಿ ವಿಷ್ಣುವಿನ ಪ್ರತಿರೂಪವಾದ ವರಮಹಾಲಕ್ಷ್ಮಿಯನ್ನ ಪೂಜಿಸಲಾಗುತ್ತೆ. ಈ ಶುಕ್ರವಾರದಂದು ವರಮಹಾಲಕ್ಷ್ಮಿ ಪೂಜೆ ನೆರವೇರಲಿದೆ.
ಪೂಜೆಗಾಗಿ ಒಂದು ದಿನ ಮುಂಚಿತವಾಗಿಯೇ ತಯಾರಿ ಆರಂಭವಾಗಿರುತ್ತದೆ. ಶುಭ ದಿನದಂದು ಬೆಳಗ್ಗೆ ವರ ಮಹಾಲಕ್ಷ್ಮಿಗೆ ಪೂಜೆ ಸಲ್ಲಿಸಲಾಗುತ್ತದೆ. ಇದರಿಂದ ಸಕಲ ಐಶ್ವರ್ಯ, ಆರೋಗ್ಯ, ಸಿರಿ-ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆ. ಆದರೆ ಪೂಜೆಯನ್ನ ಯಾವ ಕ್ರಮದಲ್ಲಿ ಮಾಡಬೇಕು ಎಂಬುದಕ್ಕೆ ವರಮಹಾಲಕ್ಷ್ಮಿ ವ್ರತದ ಪುಸ್ತಕವೇ ಸಿಗುತ್ತದೆ. ನೀವು ಮಾರುಕಟ್ಟೆಯಲ್ಲಿ ಈ ಪುಸ್ತಕ ಖರೀದಿಸಿ ಅದರಲ್ಲಿರುವ ನಿಯಮ ಪಾಲಿಸಿ ಪೂಜೆ ಮಾಡಬಹುದು.

ಇನ್ನು ಈ ದಿನ ಯಾವ ರೀತಿಯ ತಪ್ಪುಗಳನ್ನು ಮಾಡಬಾರದು? ಏನು ಮಾಡಿದರೆ ಆರ್ಶೀವಾದ ಸಿಗುವುದಿಲ್ಲ, ಆ ಪೂಜೆಯ ಫಲ ನಮ್ಮದಾಗುವುದಿಲ್ಲ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ವರಮಹಾಲಕ್ಷ್ಮಿ ಪೂಜೆಯನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ನಿಯಮಾನುಸಾರವಾಗಿ ಮಾಡಬೇಕು. ಆದರೆ ಇತ್ತೀಚಿಗೆ ಯಾರು ಸಹ ವ್ರತಾನುಸಾರವಾಗಿ ಮಾಡುವುದಿಲ್ಲ. ಮನೆಯಲ್ಲಿ ಪೂಜೆ ಮಾಡುವವರಾದರು ವ್ರತದ ಕೆಲವು ನಿಯಮವನ್ನಾದರೂ ಪಾಲಿಸಬೇಕು. ಕನಿಷ್ಟ ಮೂರು ದಿನಗಳಿಂದ ಮಾಂಸಹಾರ ಬಿಡುವುದು, ಮೂರು ದಿನ ಬರಿ ಚಾಪೆಯಲ್ಲಿ ಮಲಗುವ ವ್ರತ ಮಾಡಬೇಕು. ಆದರೆ ಇದ್ಯಾವುದನ್ನು ಕೆಲವರು ಮಾಡುವುದಿಲ್ಲ ನೇರವಾಗಿ ಶುಕ್ರವಾರವೇ ಪೂಜೆ ಮಾಡುತ್ತಾರೆ. ಹೀಗಾಗಿ ಈ ತಪ್ಪುಗಳ ಮಾಡಬಾರದು.
ಪೂಜೆಗೆ ಮುಳಿನ ಗಿಡದ ಹೂವು, ಆರ್ಟಿಫಿಷಿಯಲ್ ಹೂವು ಬೆಳಸಬೇಡಿ
ವರಮಹಾಲಕ್ಷ್ಮಿ ದಿನದಂದು ಪೂಜೆ ಮಾಡುವ ಮುಳ್ಳಿನ ಗಿಡದಲ್ಲಿ ಬಿಡುವ ಹೂವು ಬಳಸಬಾರದಂತೆ. ಜೊತೆಗೆ ಆರ್ಟಿಫಿಷಿಯಲ್ ಹೂವುಗಳು, ಪ್ಲಾಸ್ಟಿಕ್ ಹೂವುಗಳನ್ನು ಸಹ ಬಳಬಾರದು. ಇದರ ಜೊತೆಗೆ ನೀವು ಮಾರುಕಟ್ಟೆಯಿಂದ ತಂದಿರುವ ಹೂವುಗಳನ್ನ ನೇರವಾಗಿ ಪೂಜೆಗೆ ಬಳಸಬೇಡಿ, ಅದನ್ನು ಗಂಗಾ ಜಲ ಅಥವಾ ಗೋಮೂತ್ರ ಪ್ರೋಕ್ಷಣೆ ಮಾಡಿ ಶುದ್ಧೀಕರಿಸಿದ ಬಳಿಕವೇ ಬಳಸಬೇಕು.
ಪೂಜೆ ಬಳಸಿದ ಹಣ ಹೀಗೆ ಬಳಸಬೇಡಿ
ಹಲವರು ವರಮಹಾಲಕ್ಷ್ಮಿ ಪೂಜೆಯಲ್ಲಿ ಹಣವನ್ನು ಇಟ್ಟು ಪೂಜಿಸುತ್ತಾರೆ, ಲಕ್ಷ್ಮಿ ಸಂಪತ್ತಿನ ದೇವತೆಯಾಗಿರೋದ್ರಿಂದ ಧನ ಇಟ್ಟು ಪೂಜಿಸುವುದು ಉತ್ತಮ ಕಾರ್ಯ. ಆದರೆ ಈ ಹಣವನ್ನು ನೀವು ಎಲ್ಲೆಂದರಲ್ಲಿ ಖರ್ಚು ಮಾಡಬಾರದು. ಈ ಹಣದಿಂದ ಮದ್ಯ ಖರೀದಿಸುವುದು, ಮಾಂಸಹಾರ ಖರೀದಿಸಲು ಬಳಸುವುದು, ಇಲ್ಲವೆ ಈ ಹಣವನ್ನ ತಂಬಾಕು, ಗುಟ್ಕ ಖರೀದಿಗೆ ಬಳದಿರುವುದು ಉತ್ತಮ. ನೀವು ಈ ಹಣದಿಂದ ತರಕಾರಿ, ಹಣ್ಣು, ಅಕ್ಕಿ ಖರೀದಿಸಬಹುದು.
ಪೂಜೆಗೆ ಕಬ್ಬಿಣದ ವಸ್ತು ಬಳಸಬಾರದು
ವರಮಹಾಲಕ್ಷ್ಮಿ ಪೂಜೆಯ ವಿಧಿ ವಿಧಾನದ ವೇಳೆ ಯಾವುದೇ ಕಾರಣಕ್ಕೂ ಕಬ್ಬಿಣದ ವಸ್ತುಗಳ ಬಳಸಬಾರದು. ನೀವು ಕಾಯಿ ಒಡೆಯಲು ಬಳಸುವ ಕತ್ತಿಯೂ ಸಹ ಕಬ್ಬಿಣದ್ದೇ ಆಗಿರುತ್ತೆ, ಆದ್ರೆ ಇದನ್ನು ಬಳಸಬಾರದು. ಬೇರೆ ಯಾವುದೇ ವಸ್ತುವಿನಿಂದ ಕಾಯಿ ಒಡೆಯಿರಿ.
ಮನೆಯ ಅಡುಗೆ ಮನೆ ಶುದ್ಧವಾಗಿರಲಿ
ಪೂಜೆಯ ದಿನ ಅಡುಗೆ ಮನೆ ಶುದ್ಧವಾಗಿರಲಿ, ಹಳೆಯ ಎಂಜಲು ಪಾತ್ರೆಗಳ ಹಾಗೆಯೇ ಇಟ್ಟು ಮನೆಯಲ್ಲಿ ಪೂಜೆ ಮಾಡಬಾರದು. ಹಾಗೆ ಮನೆಯೊಳಗೆ ಯಾವುದೇ ರೀತಿಯ ಗಾಜಿನ ಪಾತ್ರೆಯಾಗಲಿ, ವಸ್ತುವಾಗಲಿ ಒಡೆಯದಂತೆ ನೋಡಿಕೊಳ್ಳಬೇಕು. ಜೊತೆಗೆ ಈ ದಿನ ಮನೆಯೊಳಗೆ ಗಲಾಟೆ, ಕೆಟ್ಟ ಪದ ಬಳಕೆ ಮಾಡುವುದು, ಕಣ್ಣೀರು ಹಾಕುವುದು ಮಾಡಬಾರದು. ಜೊತೆಗೆ ಬೆಳಗ್ಗೆ 10 ಗಂಟೆಯ ಒಳಗೆ ಪೂಜೆ ಮುಗಿಸಿದರೆ ಉತ್ತಮ. ಆದರೆ ಎಂದಿಗೂ 12 ಗಂಟೆಯ ಬಳಿಕ ಪೂಜೆ ಮಾಡುವುದು ಉತ್ತಮವಲ್ಲ.



Click it and Unblock the Notifications
