Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
'ಡಂಕಿ' ಮಾರ್ಗದ ಬಗ್ಗೆ ನಿಮಗೆಷ್ಟು ಗೊತ್ತು..? ಇದು ಗಡಿ ನುಸುಳುವವರ ಕಥೆ-ವ್ಯಥೆ..!
ಬಾಲಿವುಡ್ ನಟ ಶಾರುಖ್ ನಟನೆಯ ಡಂಕಿ ಇಂದು ವಿಶ್ವದಾದ್ಯಂತ ರಿಲೀಸ್ ಆಗಿದೆ. ಶಾರುಖ್ ಸಿನಿಮಾ ಅಂದಮೇಲೆ ಅದರಲ್ಲಿ ಒಂದಿಷ್ಟು ವಿಶೇಷತೆ ಇದ್ದೇ ಇರುತ್ತೆ. ಹಾಗೆ ಈ ಸಿನಿಮಾ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಈ ಮೊದಲು ಸೂಪರ್ ಹಿಟ್ ಚಿತ್ರಗಳ ನೀಡಿದ್ದಾರೆ. ಹೀಗಾಗಿ ಡಂಕಿ ಕುರಿತು ಭಾರೀ ನಿರೀಕ್ಷೆಯಂತು ಇದೆ.
ಆದ್ರೆ ನಾವು ಈ ಡಂಕಿ ಸಿನಿಮಾದ ಹಿಂದಿರುವ ಕಥೆಯ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡೋಣ. ಅನಧಿಕೃತವಾಗಿ ಬೇರೆ ದೇಶಗಳ ಗಡಿಯೊಳಗೆ ನುಸುಳುವ ಈ ತಂತ್ರಕ್ಕೆ 'ಡಾಂಕಿ ಫ್ಲೈಟ್' ಅಥವಾ 'ಡಂಕಿ' ಎಂದು ಕರೆಯಲಾಗಿದೆ. ಹಾಗಾದ್ರೆ ಏಕೆ ಅಮೆರಿಕ, ಇಂಗ್ಲೆಂಡ್, ಕೆನಡಾ ದೇಶಗಳಿಗೆ ಜನ ಈ ರೀತಿ ಹೋಗುತ್ತಾರೆ ಎಂಬುದನ್ನು ತಿಳಿದುಕೊಳ್ಳೋಣ.

ಡಾಂಕಿ ಫ್ಲೈಟ್ ವಿಧಾನ ಯಾವುದು?
ತಾವು ತೆರಳಬೇಕು ಎಂದು ಉದ್ದೇಶಿಸಿರುವ ದೇಶಕ್ಕೆ ಅನಧಿಕೃತವಾಗಿ ಯಾವುದೇ ಅನುಮತಿ ಪಡೆಯದೆ ತೆರಳುವ ಮಾರ್ಗಕ್ಕೆ ಡಾಂಕಿ ಫ್ಲೈಟ್ ಎಂದು ಕರೆಯಲಾಗಿದೆ. ಇದರಲ್ಲಿ ಭಾರತೀಯರು ಹೆಚ್ಚಾಗಿ ಅಮೆರಿಕ, ಕೆನಡಾ, ಇಂಗ್ಲೆಂಡ್‌ನಂತಹ ದೇಶಗಳಿಗೆ ಹಿಂಬಾಗಿಲ ಮೂಲಕ ತೆರಳುತ್ತಾರೆ.
ಸರಳವಾಗಿ ಹೇಳುವುದಾದರೆ, ಡಾಂಕಿ ಫ್ಲೈಟ್ ಎಂದರೆ ಬೇರೆ ದೇಶದ ಯಾವುದೇ ಜಾಗಕ್ಕೆ ಅಕ್ರಮವಾಗಿ ತೆರಳುವುದು. ಉದಾಹರಣೆ ಎಂದರೆ ಇಂಗ್ಲೆಂಡ್‌ಗೆ ಅಲ್ಲಿನ ಷೆಂಗೆನ್ ವಲಯಕ್ಕೆ ಪ್ರವಾಸಿ ವೀಸಾ ಪಡೆಯುವುದು ಬಳಿಕ ಅಲ್ಲಿಯೇ ನೆಲೆಸುವುದು.
ಯಾರಾದರೂ ಪಶ್ಚಿಮ ಯುರೋಪ್‌ಗೆ ವಲಸೆ ಹೋಗಲು ಬಯಸಿದರೆ, ಅವರು ಕಳೆದ ವರ್ಷದವರೆಗೆ ವೀಸಾ ಇಲ್ಲದೆ ಸೆರ್ಬಿಯಾಕ್ಕೆ ಪ್ರಯಾಣಿಸುತ್ತಾರೆ ಮತ್ತು 30 ದಿನಗಳವರೆಗೆ ಅಲ್ಲಿಯೇ ಇರುತ್ತಾರೆ. ಆ ಅವಧಿಯಲ್ಲಿ, ಏಜೆಂಟರು ಅಥವಾ ಮಾನವ ಕಳ್ಳಸಾಗಣೆದಾರರು ಭಾರತೀಯರಿಗಾಗಿ ಸೆರ್ಬಿಯಾದಿಂದ ಇಟಲಿಗೆ 'ಡಾಂಕಿ ರೂಟ್' ಸಮುದ್ರ ಪ್ರಯಾಣವನ್ನು ಆಯೋಜಿಸುತ್ತಾರೆ.
ಸೆರ್ಬಿಯಾ ಒಂದು ಬದಿಯಲ್ಲಿ ಆಸ್ಟ್ರಿಯಾ, ಸ್ಲೊವೇನಿಯಾ ಮತ್ತು ಕ್ರೊಯೇಷಿಯಾ ಮತ್ತು ಇನ್ನೊಂದು ಬದಿಯಲ್ಲಿ ಮ್ಯಾಸಿಡೋನಿಯಾ ಮತ್ತು ಗ್ರೀಸ್ ಹೊಂದಿದೆ. ಹೀಗಾಗಿ, ಇಲ್ಲಿಂದ, ಯುರೋಪಿಯನ್ ಯೂನಿಯನ್ (EU) ಅಥವಾ ಷೆಂಗೆನ್ ದೇಶಗಳಿಗೆ ಪ್ರವೇಶಿಸುವುದು ಸುಲಭವಾಗುತ್ತದೆ.
ಇದಲ್ಲದೆ ಅಮೆರಿಕ ಸುತ್ತಲೂ ಗಡಿಯಲ್ಲೂ ಅಕ್ರಮವಾಗಿ ದಾರಿಗಳ ಮಾಡಲಾಗಿದೆ. ಈ ದಾರಿಗಳ ಮೂಲಕ ಗಡಿಯೊಳಗೆ ನುಸುಳಬಹುದಾಗಿದೆ. ಕೆನಡಾದಿಂದ ಅಮೆರಿಕಾಕ್ಕೆ ಲಕ್ಷಾಂತರ ಮಂದಿ ಹೀಗೆಯೇ ವಲಸೆ ಹೋಗುತ್ತಾರೆ.
ಪಂಜಾಬ್‌ನಿಂದಲೇ ವಲಸೆ ಹೆಚ್ಚು
ಭಾರತದಲ್ಲಿ ಅದರಲ್ಲೂ ಪಂಜಾಬ್‌ನಿಂದಲೇ ಈ ರೀತಿಯ ವಲಸೆ ಹೆಚ್ಚಾಗುತ್ತಿದೆ. ಅಲ್ಲಿನ ಯುವ ಸಮುದಾಯ ಕೆನಡಾ, ಅಮೆರಿಕಾದಲ್ಲಿ ಹೋಗಿ ನೆಲೆಸಲು ಇಚ್ಛಿಸುತ್ತಾರೆ. ಆದರೆ ಅವರಿಗೆ ಅಲ್ಲಿನ ವೀಸಾ ಸಿಗದ ಕಾರಣ ಈ ರೀತಿ ಅಕ್ರಮವಾಗಿ ಅನ್ಯ ಮಾರ್ಗದ ಮೂಲಕ ತೆರಳಿ ನೆಲೆಸಲು ಬಯಸುತ್ತಾರೆ. ಇತ್ತೀಚಿಗೆ ಪಂಜಾಬ್ ಮಾತ್ರವಲ್ಲ ಹರಿಯಾಣ, ಉತ್ತರ ಪ್ರದೇಶ, ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಯುವ ಸಮುದಾಯ ಸಹ ಈ ರೀತಿ ವಿದೇಶಕ್ಕೆ ತೆರಳಲು ಮುಂದಾಗಿದೆ.
ಡಾಂಕರ್ಸ್ ಚೈನ್‌ಲಿಂಕ್
ರಿಯಾಯಿತಿ ದರದಲ್ಲಿ ವೀಸಾ ಕೊಡಿಸುವುದಾಗಿ ಕೆಲ ಟ್ರಾವೆಲ್ ಏಜೆಂಟರು ವಿದೇಶ ತೆರಳಲುವ ಗ್ರಾಹಕರ ವಂಚಿಸುತ್ತಿದ್ದಾರೆ. ವಿದ್ಯಾರ್ಥಿ ವೀಸಾ ಹಾಗೂ ಪ್ರವಾಸಿಗರ ವೀಸಾದಡಿ ವಿದೇಶಕ್ಕೆ ತೆರಳಲು ಜನ ಕಾಯುತ್ತಿರುತ್ತಾರೆ. ಆದರೆ ಇದು ತಿರಸ್ಕೃತಗೊಂಡಾಗ ಈ ಏಜೆಂಟರ ಸಂಪರ್ಕಿಸುತ್ತಾರೆ. ಇವರನ್ನು ಡಾಂಕರ್ಸ್ ಎಂದು ಕರೆಯಲಾಗುತ್ತದೆ. ಇವರು ಹೆಚ್ಚಾಗಿ ಅನ್ಯ ಮಾರ್ಗ ಮೂಲಕ ಗಡಿಯ ವರೆಗೆ ತಂದು ಬಿಡುತ್ತಾರೆ. ಅಲ್ಲದೆ ಗಡಿ ನುಸುಳಿದ ಬಳಿಕ ಯಾರನ್ನು ಭೇಟಿಯಾಗಬೇಕು ಅವರು ಏನೆಲ್ಲಾ ಮಾಡುತ್ತಾರೆ ಎಂಬ ಮಾಹಿತಿ ನೀಡಿರುತ್ತಾರೆ.
ಹೀಗೆ ಗಡಿ ದಾಟಿದ ಬಳಿಕ ಮತ್ತೋರ್ವ ಏಜೆಂಟ್ ಜೊತೆಯಾಗುತ್ತಾನೆ. ಆತನಿಗೂ ಹಣ ನೀಡಿ ಆತ ಹೇಳಿದಂತೆ ನಡೆದುಕೊಂಡರೆ ವಿದೇಶದಲ್ಲಿ ನೆಲೆ ನಿಲ್ಲಲು ಸಾಧ್ಯವಾಗುತ್ತದೆ. ಅದ್ರಲ್ಲೂ ಹೀಗೆ ಅಕ್ರಮವಾಗಿ ಒಳ ನುಸುಳಿದವರೇ ಮುಂದೆ ಏಜೆಂಟ್‌ಗಳಾಗಿ ಬದಲಾಗುತ್ತಾರೆ. ಕೆಲವೊಮ್ಮೆ ಈ ಮಾರ್ಗದ ಪ್ರಯಾಣ ಪ್ರಾಣಕ್ಕೂ ಹಾನಿ ತಂದೊಡ್ಡುತ್ತದೆ. ಕೆಲವು ಬಾರಿ ಸರ್ಕಾರಿ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದು ಜೈಲು ವಾಸವೂ ಎದುರಾಗುತ್ತದೆ.



Click it and Unblock the Notifications
