Latest Updates
-
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ!
ಮೊದಲ ಪತ್ನಿಗೆ ಹೆದರುತ್ತಿದ್ದ ಡಾನ್ ದಾವೂದ್..! ಇಬ್ಬರ ಪ್ರೇಮಕಥೆ ಏನು ಗೊತ್ತ..?
ದಾವೂದ್ ಇಬ್ರಾಹಿಂ ಹೆಸರು ಕೇಳಿದ್ರೆ ಇಡೀ ಜಗತ್ತು ಒಮ್ಮೆ ನಡುಗುತ್ತೆ. ಅಂತಹ ಭಯಾನಕ ಡಾನ್ ಆಗಿರುವ ಆತ ಭಾರತಕ್ಕೂ ಸೇರಿ ಹಲವು ದೇಶಗಳಿಗೆ ಬೇಕಾಗಿರುವ ಮೋಸ್ಟ್ ವಾಟೆಂಡ್ ಕ್ರಿಮಿನಲ್ ಆಗಿದ್ದಾನೆ. ಆದ್ರೆ ಯಾರಿಗೂ ಹೆದರದ ಆತ ಒಬ್ಬರಿಗೆ ಮಾತ್ರ ಹೆದರುತ್ತಾನಂತೆ. ಅವರು ಬೇರೆ ಯಾರು ಅಲ್ಲ ಆತನ ಮೊದಲ ಪತ್ನಿ ಜುಬಿನಾ ಜರೀನ್ ಅಲಿಯಾಸ್ ಮೆಹಜಬೀನ್.
ಹೌದು ಪತ್ನಿ ಕಂಡರೆ ಡಾನ್ ಕೂಡ ಭಯಪಡುತ್ತಾನಾ ಅಂತ ಆಶ್ಚರ್ಯ ಪಡಬೇಡಿ. ಏಕಂದ್ರೆ ದಾವೂದ್‌ಗೆ ಪತ್ನಿ ಅಂದರೆ ಭಯ ಎಂಬುದನ್ನು ಆತನ ಆಪ್ತ ವಲಯವೇ ಒಪ್ಪಿಕೊಂಡಿದೆ. ಆತ ಹಲವು ಮಹಿಳೆಯರ ಜೊತೆ ಸಂಬಂಧ ಹೊಂದಿದ್ದ ಅಂತಲೂ ಹೇಳಲಾಗುತ್ತದೆ. ಜೊತೆಗೆ ಒಂದಕ್ಕಿಂತ ಹೆಚ್ಚು ವಿವಾಹವನ್ನೂ ಆಗಿದ್ದ ಅಂತಲೂ ಸುದ್ದಿಗಳು ಹರಿದಾಡಿವೆ.

ಈ ಹಿಂದೆ ದಾವೂದ್ ಸುಜಾತಾ ಎಂಬ ಹಿಂದೂ ಯುವತಿಯನ್ನು ಪ್ರೀತಿಸುತ್ತಿದ್ದ, ಆದರೆ ಸುಜಾತಾ ಮನೆಯವರು ಆತನನ್ನು ಮದುವೆಯಾಗಲು ನಿರಾಕರಿಸಿದ್ದರು. ಸುಜಾತಾಳಿಂದ ಬೇರ್ಪಟ್ಟ ನಂತರ ಜುಬೀನಾ ಅಲಿಯಾಸ್ ಮೆಹಜಬೀನ್ ದಾವೂದ್ ಜೀವನದಲ್ಲಿ ಬಂದಳು. ಆದರೆ ಇಬ್ಬರ ಪ್ರೇಮಕಥೆ ಹೇಗೆ ಆರಂಭವಾಗಿದ್ದು ಗೊತ್ತಾ?
ಲವ್ ಸ್ಟೋರಿ ಶುರುವಾಗಿದ್ದು ಹೀಗೆ?
ಮೆಹಜಬೀನ್ ಅವರ ಸೋದರ ಮಾವ ಮುಮ್ತಾಜ್, ದಾವೂದ್ ಮುಂಬೈನ ಅದೇ ಪ್ರದೇಶದಲ್ಲಿ ಅಂಗಡಿಯನ್ನು ಹೊಂದಿದ್ದರು. ಜುಬಿನಾ ಜರೀನ್ ಮತ್ತು ದಾವೂದ್ ಮೊದಲ ಬಾರಿಗೆ ಮುಮ್ತಾಜ್ ಮನೆಯಲ್ಲಿ ಭೇಟಿಯಾಗಿದ್ದರಂತೆ. ಮುಮ್ತಾಜ್ ದಾವೂದ್ ನನ್ನು ತನ್ನ ಮನೆಗೆ ಊಟಕ್ಕೆ ಕರೆಯುತ್ತಿದ್ದಳು. ಆ ವೇಳೆ ಜುಬೀನಾ ಅಲಿಯಾಸ್ ಮೆಹಜಬೀನ್ ಆಕೆಯ ಮನೆಗೆ ಬಂದಿದ್ದಳಂತೆ.
ಈ ವೇಳೆ ಭವಿಷ್ಯದ ಮಡದಿಯ ಕಂಡಿದ್ದ ದಾವೂದ್ ಆಕೆಯ ಸೌಂದರ್ಯಕ್ಕೆ ಮನಸೋತಿದ್ದನಂತೆ. ಬಳಿಕ ಇಬ್ಬರೂ ಮನೆಯವರಿಗೆ ಗೊತ್ತಾಗದಂತೆ ಭೇಟಿಯಾಗುತ್ತಿದ್ದರಂತೆ ಬಳಿಕ 1990ರಲ್ಲಿ ಮನೆಯವರು ಒಪ್ಪಿಗೆಯ ಮೇರೆಗೆ ವಿವಾಹವಾದರು.
ದಾವೂದ್ ಇಬ್ರಾಹಿಂ ತನ್ನ ಪತ್ನಿ ಮೆಹಜಬೀನ್‌ಗೆ ಹೆದರುತ್ತಿದ್ದ
ದಾವೂದ್ ತನ್ನ ಪತ್ನಿ ಮೆಹಜಬೀನ್‌ಗೆ ಹೆದರುತ್ತಾನೆ. ದಾವೂದ್ ಒಮ್ಮೆ ತನ್ನ ಇಸ್ಲಾಮಾಬಾದ್ ಮನೆಯಲ್ಲಿ ಸ್ನೇಹಿತರ ಜೊತೆ ಪಾರ್ಟಿ ಮಾಡುತ್ತಿದ್ದರು, ಆ ಪಾರ್ಟಿಗೆ ಕೆಲ ಹುಡುಗಿಯರನ್ನೂ ಆಹ್ವಾನಿಸಲಾಗಿತ್ತು. ಮೆಹಜಬೀನ್ ಇಸ್ಲಾಮಾಬಾದ್ ಗೆ ಬರುತ್ತಿದ್ದಾಳೆ ಎಂದು ತಿಳಿದ ದಾವೂದ್ ಆತಂಕಗೊಂಡಿದ್ದನಂತೆ. ತಕ್ಷಣ ಹುಡುಗಿಯರನ್ನು ವಾಹನಗಳಲ್ಲಿ ಹತ್ತಿಸಿ ಅಲ್ಲಿಂದ ಕಳುಹಿಸಿದ್ದನಂತೆ. ಬಳಿಕ ಮನೆಯನ್ನೂ ಸಂಪೂರ್ಣ ಸ್ವಚ್ಛ ಮಾಡಿ ಪಾರ್ಟಿ ಮಾಡಿರುವ ಒಂದೇ ಒಂದು ಸುಳಿವು ಸಹ ಸಿಗದಂತೆ ಮಾಡಿದ್ದನಂತೆ.
ದಂಪತಿಗೆ ನಾಲ್ಕು ಮಕ್ಕಳು
ದಾವೂದ್ ಮತ್ತು ಮೆಹಜಬೀನ್ ಅವರಿಗೆ 4 ಮಕ್ಕಳಿದ್ದರು. ಮೂವರು ಪುತ್ರಿಯರು ಮಹ್ರುಖ್ ಇಬ್ರಾಹಿಂ, ಮಹ್ರೀನ್ ಇಬ್ರಾಹಿಂ, ಮರಿಯಾ ಇಬ್ರಾಹಿಂ ಮತ್ತು ಒಬ್ಬ ಮಗ ಮೊಯಿನ್ ಇಬ್ರಾಹಿಂ. ದಾವೂದ್ ಅವರ ಹಿರಿಯ ಮಗಳು ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಅವರ ಮಗ ಜುನೈದ್ ಜೊತೆ 2014ರಲ್ಲಿ ವಿವಾಹ ಮಾಡಿಕೊಡಲಾಗಿತ್ತು. ಈ ವಿವಾಹ ಭಾರೀ ಟೀಕೆಗೂ ಕಾರಣವಾಗಿತ್ತು.
ದಾವೂದ್ ಎರಡನೇ ಪುತ್ರಿ ಮಹ್ರೀನ್ ಪಾಕಿಸ್ತಾನಿ ಮೂಲದ ಅಮೆರಿಕದ ಉದ್ಯಮಿ ಅಯೂಬ್ ಅವರನ್ನು ವಿವಾಹವಾದರು. ದಾವೂದ್‌ನ ಮಗ ಸಾನಿಯಾ ಎಂಬ ಹುಡುಗಿಯನ್ನು ಮದುವೆಯಾಗಿದ್ದರೆ, ದಾವೂದ್‌ನ ಕಿರಿಯ ಮಗಳು ಮಾರಿಯಾ 1998 ರಲ್ಲಿ ನಿಧನರಾದರು ಎಂದು ಹೇಳಲಾಗುತ್ತದೆ.
ವಿಚ್ಛೇದನವಿಲ್ಲದೆ ಎರಡನೇ ಮದುವೆ
ದಾವೂದ್ ತನ್ನ ಮೊದಲ ಪತ್ನಿ ಬದುಕಿದ್ದಾಗಲೇ ವಿಚ್ಛೇದನವನ್ನೂ ಪಡೆಯದೇ ಇನ್ನೊಂದು ಮದುವೆಯಾದರು. ಪಾಕಿಸ್ತಾನದಲ್ಲಿ ಪಠಾಣ್ ಮೂಲದ ಹುಡುಗಿಯನ್ನು ಎರಡನೇ ಮದುವೆಯಾಗಿದ್ದಾನೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಈ ಬಗ್ಗೆ ಯಾವುದೇ ಅಧಿಕೃತವಾಗಿ ಮಾಹಿತಿಗಳು ಹೊರಬರಲಿಲ್ಲ.



Click it and Unblock the Notifications
