Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಭಾರತದೊಳಗಿನ ವಿಮಾನದಲ್ಲಿ ಮದ್ಯ ಕೊಂಡೊಯ್ಯಬಹುದೇ? ಏನೆಲ್ಲಾ ನಿಯಮವಿದೆ ಗೊತ್ತಾ
ನೀವು ಭಾರತದೊಳಗೆ ಹಲವು ಬಾರಿ ವಿಮಾನಯಾನ ಮಾಡಿರಬಹುದು. ಹಾಗೆ ಅಂತಾರಾಷ್ಟ್ರೀಯ ಫ್ಲೈಟ್‌ಗಳನ್ನ ಕೂಡ ಮಾಡಿರುತ್ತೀರಿ. ಅಂತಾರಾದಷ್ಟೀಯ ವಿಮಾನಯಾನ ಹಾಗೆ ದೇಶೀಯ ವಿಮಾನಯಾನದ ನಡುವೆ ಬಹಳ ವ್ಯತ್ಯಾಸಗಳಿವೆ. ಎರಡೂ ಪ್ರಯಾಣದಲ್ಲಿನ ಹಲವು ನಿಯಮಗಳು ಬದಲಾಗುವುದು ನೋಡಬಹುದು. ಹಾಗೆ ಪ್ರತಿಯೊಂದು ವಿಮಾನಯಾನ ಸೇವೆ ನೀಡುವ ಕಂಪನಿಗಳು ಒಂದೊಂದು ರೀತಿ ನಿಯಮಗಳಿಡುವುದು ನೋಡಬಹುದು.
ಹಾಗೆ ನೀವು ವಿಮಾನದಲ್ಲಿ ಪ್ರಯಾಣಿಸುವಾಗ ಹಲವು ವಸ್ತುಗಳನ್ನು ತೆಗೆದುಕೊಂಡು ಹೋಗುವುದು ನಿಷಿದ್ಧವಾಗಿರಲಿದೆ. ಮತ್ತೆ ಕೆಲವು ವಸ್ತುಗಳನ್ನು ಅನುಮತಿ ಮೇರೆಗೆ ತೆಗೆದುಕೊಂಡು ಹೋಗಬಹುದು. ಇತ್ತ ಮದ್ಯ ಪ್ರಿಯರು ವಿಮಾನಯಾನ ಮಾಡುವಾಗ ಮದ್ಯ ತೆಗೆದುಕೊಂಡು ಹೋಗಬಹುದಾ ಅಥವಾ ಅದಕ್ಕೆ ಯಾವ ರೀತಿಯ ನಿಯಮಗಳಿವೆ ಎಂಬ ಕುರಿತು ಗೊಂದಲಕ್ಕೆ ಒಳಗಾಗುವುದು ನೋಡಬಹುದು.

ವಿಮಾನದಲ್ಲಿ ಮದ್ಯದ ಬಾಟಲಿ ತೆಗೆದುಕೊಂಡು ಹೋಗಲು ಅನುಮತಿ ಇದ್ದರೂ ಅದರು ಸಮಯದಿಂದ ಸಮಯಕ್ಕೆ, ವಿಮಾನದಿಂದ ವಿಮಾನಕ್ಕೆ ಬದಲಾಗಬಹುದು. ಇನ್ನು ಗೋವಾದಿಂದ ಮರಳುವವರು ಅವರೊಂದಿಗೆ ಮದ್ಯದ ಬಾಟಲಿ ತರುವುದು ಕೂಡ ಕಾಮನ್. ಆದ್ರೆ ವಿಮಾನದಲ್ಲಿ ಎಷ್ಟು ಮದ್ಯದ ಬಾಲಿ ತರಬಹುದು, ಅದಕ್ಕೆ ಏನೆಲ್ಲಾ ನಿಯಮವಿದೆ ಗೊತ್ತಾ?
ಭಾರತದೊಳಗೆ ಸಂಚರಿಸುವ ಡೊಮಸ್ಟಿಕ್ ವಿಮಾನಗಳಲ್ಲಿ ಮದ್ಯವನ್ನು ಕೊಂಡೊಯ್ಯಲು ಅನುಮತಿ ಇದೆ. ನೀವು ಸುಮಾರು 5 ಲೀಟರ್ ವರೆಗೆ ಮದ್ಯವನ್ನು ವಿಮಾನದಲ್ಲಿ ತೆಗೆದುಕೊಂಡು ಹೋಗಬಹುದು. ಆ ಬಾಟಲಿಯು ಶೇ.24ರಿಂದ 70ರ ವರೆಗೆ ಮಾತ್ರವೇ ಆಲ್ಕೋಹಾಲ್ ಅಂಶ ಹೊಂದಿರಬೇಕು. 100ಕ್ಕೆ 100ರಷ್ಟು ಆಲ್ಕೋಹಾಲ್ ಅಂಶ ಹೊಂದಿರುವ ಡ್ರಿಂಕ್‌ಗೆ ಅನುಮತಿ ಇಲ್ಲ.
ಇನ್ನು ಈ ಬಾಟಲಿಯು ಸ್ಟ್ಯಾಡರ್ಟ್ ಪ್ಯಾಕೇಜಿಂಗ್‌ಗೆ ಒಳಗಾಗಿರಬೇಕು. ಪ್ಲಾಸ್ಟಿಕ್, ಟೆಟ್ರಾಪ್ಯಾಕ್ ಅಥವಾ ಅರ್ಧ ಸೇವಿಸಿದ ಬಾಟಲಿಯನ್ನು ವಿಮಾನದಲ್ಲಿ ತೆಗೆದುಕೊಂಡು ಹೋಗಲು ಅನುಮತಿ ಇಲ್ಲ. ಹಾಗೆ ಬಾಟಲಿಯ ಸುರಕ್ಷತೆಗಾಗಿ ಅದನ್ನು ಪ್ಯಾಕ್ ಮಾಡುವಾಗ ರಕ್ಷಣಾತ್ಮಕ ವಸ್ತುಗಳ ಬಳಸಬೇಕು. ಇನ್ನು ಈ ಆಲ್ಕೋಹಾಲ್ ಅನ್ನು ನೀವು ವಿಮಾನ ನಿಲ್ದಾಣದಲ್ಲಿರುವ ಸೆಕ್ಯೂರಿಟಿ ಹೋಲ್ಡ್ ಏರಿಯಾ ಅಥವಾ ಡ್ಯೂಟಿ ಫ್ರೀ ಮಳಿಗೆಯಲ್ಲಿಯೇ ಖರೀದಿಸಿರಬೇಕು. ಈ ಬಾಟಲಿಯನ್ನು ನೀವು ಸೀಲ್ ಮಾಡಲಾದ ಹಾಗೆ ನಿಲ್ದಾಣ ಸಿಬ್ಬಂದಿ ಪರಿಶೀಲಿಸಿದ ಪ್ಲಾಸ್ಟಿಕ್‌ನಲ್ಲಿಯೇ ಇಡಬೇಕು.
ಹಾಗೆ ನೀವು ತೆಗೆದುಕೊಂಡು ಹೋಗುತ್ತಿರುವ ಮದ್ಯವನ್ನು ವಿಮಾನದಲ್ಲಿ ಸೇವಿಸುವಂತಿಲ್ಲ. ವಿಮಾನದಲ್ಲಿ ನೀಡಲಾಗುವ ಮದ್ಯವನ್ನು ಮಾತ್ರವೇ ಸೇವಿಸಲು ಅವಕಾಶವಿದೆ. ಹಾಗೆ ನೀವು ತೆರಳುತ್ತಿರುವ ಪ್ರದೇಶ ಅಥವಾ ರಾಜ್ಯದ ಮದ್ಯ ನೀತಿಗಳ ಕುರಿತಾಗಿಯೂ ನಿಮಗೆ ತಿಳಿದಿರಬೇಕು. ನೀವು ಹಲವು ರಾಜ್ಯಗಳಲ್ಲಿ ಮದ್ಯ ಸೇವನೆ ಮಾಡುವಂತಿಲ್ಲ. ಹಾಗೆ ಬೇರೆ ರಾಜ್ಯದ ಮದ್ಯವನ್ನು ಮಿತಿಯ ಅನುಗುಣಕ್ಕೆ ಮೀರಿ ತರುವಂತಿರುವುದಿಲ್ಲ.
ನಿಯಮ ಮೀರಿದರೆ ಏನಾಗಲಿದೆ?
ಒಂದು ವೇಳೆ ನೀವು ಮದ್ಯದ ಬಾಟಲಿ ತೆಗೆದುಕೊಂಡು ಹೋಗಲು ನಿರ್ಧರಿಸಿದರೆ ವಿಮಾನಯಾನ ಸಂಸ್ಥೆ ವಿಧಿಸುವ ಎಲ್ಲಾ ನಿಯಮಗಳನ್ನು ಪಾಲಿಸಬೇಕಿದೆ. ಹಾಗೆ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಡೆದು ಮದ್ಯದ ಬಾಟಲಿಗೆ ಇಂದು ಅವಕಾಶವಿಲ್ಲ ಎಂದು ಕೂಡ ಘೋಷಿಸಬಹುದು. ಹಾಗೆ ನೀವು ಮದ್ಯಪಾನ ಮಾಡಿದ್ದೀರಿ ಎಂಬ ಅನುಮಾನ ಬಂದರೆ ನಿಮ್ಮನ್ನು ಕೂಡ ವಿಮಾನದಲ್ಲಿ ಪ್ರಯಾಣಿಸುವುದನ್ನು ತಡೆಯಬಹುದು.
ಒಂದು ವೇಳೆ ವಿಮಾನಯಾನದ ನಡುವೆ ನೀವು ನಿಮ್ಮ ಮದ್ಯದ ಬಾಟಲಿಯಿಂದ ಮದ್ಯ ಸೇವಿಸಿದರೆ ಅದು ಶಿಕ್ಷಾರ್ಹ ಅಪರಾಧವಾಗಲಿದೆ, ನೀವು ಜೈಲು ವಾಸ ಹಾಗೆ ವಿಮಾನಯಾನದಿಂದಲೂ ನಿಷೇಧಕ್ಕೆ ಒಳಗಾಗಬಹುದು. ಹಾಗೆ ಕೆಲವೊಂದು ಮದ್ಯವನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ತೆಗೆದುಕೊಂಡು ಹೋಗಲು ಅನುಮತಿ ನಿರಾಕರಿಸಿ ನಿಮ್ಮ ಮದ್ಯದ ಬಾಟಲಿಯನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಳ್ಳಬಹುದು.



Click it and Unblock the Notifications