Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ಟೀ ಮಾರುತ್ತಲೇ ದುಬೈ ಬುರ್ಜ್ ಖಲೀಫಾ ತಲುಪಿದ ಡಾಲಿ ಚಾಯ್‌ವಾಲ
ನೀವು ಸಾಮಾಜಿಕ ಜಾಲತಾಣ ಅಥವಾ ರೀಲ್ಸ್ ನೋಡುವ ಅಭ್ಯಾಸ ಇಟ್ಟುಕೊಂಡಿದ್ದರೆ ಡಾಲಿ ಚಾಯ್‌ವಾಲ ನಿಮಗೂ ಚಿರಪರಿಚಿತ. ತನ್ನ ಚಿತ್ರ ವಿಚಿತ್ರ ಶೈಲಿಯಲ್ಲಿ ಟೀ ಮಾಡುವುದರಿಂದಲೇ ಆತ ಫೇಮಸ್, ಡಾಲಿ ಚಾಯ್‌ವಾಲ ಅಂತಾನೇ ಜಾಲತಾಣಗಳಲ್ಲಿ ಫೇಮಸ್ ಆಗಿರುವ ಆತ ವಿಚಿತ್ರ ಮ್ಯಾನರಿಸಂ ಚಹಾ ಮಾಡುವುದಿಂದ ಹೆಸರಾಗಿದ್ದಾನೆ. ನಾಗ್ಪುರದಲ್ಲಿ ಈತನ ಅಂಗಡಿ ಇದ್ದು, ಡಾಲಿ ಚಹಾ ಕುಡಿಯಲು ಜನ ಸಾಲಿನಲ್ಲಿ ನಿಲ್ಲುತ್ತಾರೆ.
ದಿನವೊಂದಕ್ಕೆ ಆತ ಸಾವಿರಕ್ಕೂ ಹೆಚ್ಚು ಟೀ ಮಾರಾಟ ಮಾಡುತ್ತಾನೆ. ಆದರೆ ಆತ ಫೇಮಸ್ ಆಗಿದ್ದು ಟೀ ರುಚಿಯಿಂದಲ್ಲ. ಬದಲಿಗೆ ಆತ ಟೀ ಮಾಡಿ ಕೊಡುವ ಸ್ಟೈಲ್‌ನಿಂದ. ಹೌದು ಆತ ಎಲ್ಲರು ಮಾಡುವಂತೆ ಟೀ ಮಾಡುವುದಿಲ್ಲ. ಹಾಲಿನ ಪಾಕೆಟ್ ಹರಿಯುವುದರಿಂದ ಹಿಡಿದು ಟೀ ಹಾಕಿ ಕೊಡುವವರೆಗೂ ಆತ ವಿಚಿತ್ರವಾಗಿ ವರ್ತಿಸುತ್ತಾನೆ.

ಕೆಲವರಿಗೆ ಆತ ಅಸಹ್ಯ ತರಿಸಬಹುದು. ಏಕೆಂದರೆ ಹಾವಿನ ರೀತಿ ನಾಲಿಗೆ ಹೊರಹಾಕುವುದು ರಜಿನಿಕಾಂತ್ ರೀತಿಯಲ್ಲಿ ಸಿಗರೇಟ್‌ಗೆ ಬೆಂಕಿ ಹಚ್ಚುವುದು ಸೇರಿ ಚಿತ್ರ ವಿಚಿತ್ರವಾಗಿ ಆತ ನಡೆದುಕೊಳ್ಳುವುದನ್ನು ಆತನ ವಿಡಿಯೋದಲ್ಲಿ ನೋಡಬಹುದು.
ಆತ ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಆತನದ್ದೆ ಸುದ್ದಿಯಾಗಿದೆ. ಆತ ಹೋದಲ್ಲಿ ಬಂದಲ್ಲಿ ಸುದ್ದಿಯಾಗುತ್ತಿದ್ದಾನೆ. ಮೈಕ್ರೋಸಾಫ್ಟ್ ಮುಖ್ಯಸ್ಥ ಬಿಲ್‌ಗೇಟ್ಸ್ ಭಾರತಕ್ಕೆ ಬಂದಾಗ ಟೀ ಮಾಡಿಕೊಟ್ಟು ಸುದ್ದಿಯಾಗಿದ್ದ. ಬಿಲ್‌ಗೇಟ್ ತಮ್ಮ ಇನ್ಸ್‌ಸ್ಟಾಗ್ರಾಮ್ ಖಾತೆಯಲ್ಲಿ ಈತನ ಚಾಯ್ ಮಾಡುವ ಸ್ಟೈಲ್ ಹಂಚಿಕೊಂಡಿದ್ದರು. ಹೀಗಾಗಿ ಆತ ಫುಲ್ ಫೇಮಸ್ ಆಗಿಬಿಟ್ಟಿದ್ದ.
ಆದರೆ ಈಗ ಮತ್ತೊಂದು ಫೋಟೋ ಹರಿಬಿಟ್ಟಿರುವ ಆತ ಎಲ್ಲರಿಗೂ ಶಾಕ್ ನೀಡಿದ್ದಾನೆ. ದುಬೈನ ಬುರ್ಜ್ ಖಲೀಫಾದಲ್ಲಿ ಫೋಟೊ ಕ್ಲಿಕ್ಕಿಸಿಕೊಂಡಿರುವ ಆತ ಎಲ್ಲರ ಹುಬ್ಬೇರುವಂತೆ ಮಾಡಿದ್ದಾನೆ. ಆತ ಮರ್ಸಿಡೀಸ್ ಜಿ ವ್ಯಾಗನ್‌ನಲ್ಲಿ ಎಂಟ್ರಿ ಕೊಟ್ಟಿದ್ದಲ್ಲದೆ ದುಬೈ ಪ್ರವಾಸದಲ್ಲಿರುವುದು ನೆಟ್ಟಿಗರಿಗೆ ಶಾಕ್ ನೀಡಿದೆ. ಆತ ಬೀದಿ ಬದಿ ಟೀ ಮಾರಿಕೊಂಡು ದುಬೈ ತಲುಪಿದ್ದಾನೆ.
ಡಾಲಿ ಚಾಯ್‌ವಾಲನ ಹೆಸರೇ ಯಾರಿಗೂ ಗೊತ್ತಿಲ್ಲ.!
ವಿಚಿತ್ರ ಏನೆಂದರೆ ಡಾಲಿ ಚಾಯ್‌ವಾಲ ಎಂದು ಹೆಸರಿಟ್ಟುಕೊಂಡಿರುವ ಆತ ನಿತ್ಯ ಸಾವಿರಾರು ರೂಪಾಯಿ ದುಡಿಯುತ್ತಾನೆ. ಆತನ ವಿಡಿಯೋ ನೋಡಿಯೇ ಹಲವರು ಟೀ ಕುಡಿಯಲು ಆತನ ಹುಡುಕಿಕೊಂಡು ಹೋಗುತ್ತಾರೆ. ಆದರೆ ಈವರೆಗೆ ಆತನ ನಿಜವಾದ ಹೆಸರು ಏನು ಎಂಬುದೇ ತಿಳಿದಿಲ್ಲ. ಅಂಗಡಿಗೆ ಬರುವ ಗ್ರಾಹಕರು ಕೇಳಿದರೂ ಆತ ತನ್ನ ನಿಜವಾದ ಹೆಸರು ಹೇಳಿಲ್ಲವಂತೆ. ಸಾಮಾಜಿಕ ಜಾಲತಾಣದಲ್ಲೂ ಖಾತೆ ಹೆಸರು ಡಾಲಿ ಚಾಯ್‌ವಾಲ ಎಂದಷ್ಟೇ ಇಟ್ಟುಕೊಂಡಿದ್ದಾನೆ. ಆದರೆ ಬಿಲ್‌ಗೇಟ್ಸ್ ಎಂಟ್ರಿ ಮೂಲಕ ಆತ ಮತ್ತಷ್ಟು ಫೇಮಸ್ ಆಗಿರೋದಂತು ನಿಜ.
ಡಾಲಿ ಚಾಯ್‌ವಾಲಾ ಅವರ ಖ್ಯಾತಿಯ ಆತ ಸೀಮಿತ ಶಿಕ್ಷಣ ಪಡೆದ ಹೊರತಾಗಿಯೂ ಟೀ ಮಾಡಿಕೊಂಡು ಲಕ್ಷ ಲಕ್ಷ ದುಡಿದಿದ್ದಾರೆ. ಆತನ ಒಟ್ಟು ಆಸ್ತಿ ಮೌಲ್ಯ 10 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಪ್ರತಿ ದಿನ ಆತ 2450ರಿಂದ 3,500 ರೂಪಾಯಿ ದುಡಿಯುತ್ತಾನೆ ಅಲ್ಲದೆ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಆತನಿಗೆ 2.9 ಮಿಲಿಯನ್ ಅನುಯಾಯಿಗಳಿದ್ದಾರೆ. ಹಲವು ಸೆಲೆಬ್ರಟಿಗಳಿಗೂ ಇಷ್ಟೊಂದು ಫಾಲೋವರ್ಸ್ ಇಲ್ಲ. ಆದ್ರೆ ಆತನ ಟೀ ಮಾಡೋ ಸ್ಟೈಲ್ ನೋಡಿ ಫಾಲೋವರ್ಸ್ ಹುಟ್ಟಿಕೊಂಡಿದ್ದಾರೆ.
ಸದ್ಯ ಆತ ದುಬೈ ಬುರ್ಜ್ ಖಲೀಫಾದ ವರೆಗೂ ತಲುಪಿದ್ದಾನೆ. ಇದೆಲ್ಲಾ ಸಾಧ್ಯವಾಗಿದ್ದು, ಸಾಮಾಜಿಕ ಜಾಲತಾಣದಿಂದಾಗಿ. ಇನ್ನೂ ಡಾಲಿ ಚಾಯ್‌ವಾಲಾ ಬುರ್ಜ ಖಲೀಫಾ ತಲುಪಿರುವ ಫೋಟೋಗಳು ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ತಮಷೆಯ ಕಮೆಂಟ್‌ಗಳ ಮಾಡಿದ್ದಾರೆ. ಡಾಲಿ ಚಾಯ್‌ವಾಲಾ ಬುರ್ಜ್ ಖಲೀಫಾ ಮೇಲೆಯೂ ಟೀ ಅಂಗಡಿ ತೆರೆಯಲು ಮುಂದಾಗಿದ್ದಾನೆ. ಸದ್ಯದಲ್ಲೇ ದುಬೈ ಶೇಖ್‌ಗಳಿಗೂ ಭಾರತದ ಟೀ ಸವಿಯಲು ಸಿಗುತ್ತೆ ಎಂದೆಲ್ಲಾ ತಮಾಷೆ ಮಾಡಿದ್ದಾರೆ. ಮತ್ತೆ ಕೆಲವರು ಶಿಕ್ಷಣ ಪಡೆದವರು ಕಂಪನಿಯಲ್ಲಿ ಹಗಲು ರಾತ್ರಿ ದುಡಿದು ಆಗ್ರಾದ ತಾಜ್‌ಮಹಲ್ ನೋಡಲು ಪರದಾಡುತ್ತಾರೆ. ಆದ್ರೆ ಏನು ಓದದೆ ಟೀ ಅಂಗಡಿ ಇಟ್ಟುಕೊಂಡವ ಇಂದು ದುಬೈ ತಲುಪಿದ್ದಾನೆ ಎನ್ನುತ್ತಿದ್ದಾರೆ.



Click it and Unblock the Notifications