Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೀರಿನ ಸಮಸ್ಯೆಗೆ ಕೃತಕ ಮಳೆ ನೆರವಾಗುತ್ತಾ? ಕೃತಕ ಮಳೆ ಬರಿಸುವುದು ಹೇಗೆ.? ಈಗೇಕೆ ಸಾಧ್ಯವಿಲ್ಲ?
ರಾಜ್ಯದಲ್ಲಿ ನೀರಿನ ಸಮಸ್ಯೆ ಎದುರಾಗಿರುವುದು ನಿಮಗೆಲ್ಲ ಅದರ ಬಿಸಿ ತಟ್ಟಿರಬಹುದು. ಬೆಂಗಳೂರು ಮಹಾನಗರದಲ್ಲಿ ನೀರಿನ ಅಭಾವ ಉಂಟಾಗಿರುವುದು ಮತ್ತಷ್ಟು ತಲೆ ನೋವಿಗೆ ಕಾರಣವಾಗಿದೆ. ನೀರಿನ ಸಮಸ್ಯೆಯಿಂದಾಗಿ ಕೆಲವರು ಬೇರೆ ಕಡೆ ತೆರಳುತ್ತಿದ್ದಾರೆ. ಅವರ ಸ್ವಂತ ಊರುಗಳಿಗೂ ತೆರಳಬೇಕಾದ ಅನಿವಾರ್ಯತೆ ಬಂದೊದಗಿದೆ.
ಆದರೆ ಮಳೆಯಾದರೆ ಇದೆಲ್ಲಾ ಸಮಸ್ಯೆ ದೂರಾಗಲಿದೆ. ಆದರೆ ಬೇಸಿಗೆಯಲ್ಲಿ ಮಳೆಯಾಗುವುದು ಹೇಗೆ? ಕನಿಷ್ಠ ಏಪ್ರಿಲ್ ಕೊನೆಯ ವಾರದಲ್ಲಿ ಮಳೆಯಾಗುವ ಸಾಧ್ಯತೆ ಇರಬಹುದು. ಆದರೆ ಇದರ ಸಾಧ್ಯತೆಯೂ ಬಹಳ ವಿರಳವಾಗಿದೆ. ಆದರೆ ಕೃತಕ ಮಳೆಯಿಂದ ನೀರಿನ ಸಮಸ್ಯೆ ದೂರ ಮಾಡಬಹುದು ಎಂಬುದು ನಿಮ್ಮಲ್ಲಿ ಹಲವರ ಪ್ರಶ್ನೆಯಾಗಿರಬಹುದು.

ಹಾಗಾದರೆ ಈ ಕೃತಕ ಮಳೆ ಅಂದರೆ ಏನು? ಸರ್ಕಾರದ ವತಿಯಿಂದ ಕೃತಕ ಮಳೆ ಸುರಿಸಬಹದೇ? ಕೃತಕ ಮಳೆ ಸುರಿಸಲು ಇರುವ ವಿಧಾನವೇನು? ನಿಯಮವೇನು ಎಂಬುದನ್ನು ನಾವಿಂದು ತಿಳದುಕೊಳ್ಳೋಣ.
ಸದ್ಯ ಮಳೆಗಾಲದಲ್ಲಿ ಮಳೆ ಸಕಾಲಕ್ಕೆ ಬಾರದಿದ್ದ ಕಾಲಕ್ಕೆ ಅಂತಿಮವಾಗಿ ಕೃತಕ ಮಳೆ ಅಥವಾ ಮೋಡ ಬಿತ್ತನೆ ಎಂಬ ವಿಧಾನ ಅನುಸರಿಸಿ ಮಳೆ ತರಿಸಲಾಗುತ್ತದೆ. ಇದು ಕೊನೆಯ ಹಂತದಲ್ಲಿ ನಡೆಸುವ ವಿಧಾನವಾಗಿದೆ. ಇದನ್ನು ಮಾನ್ಸೂನ್ ಪೂರ್ವದಲ್ಲಿ ಮಾಡಲಾಗುತ್ತದೆ. ಮಾನ್ಸೂನ್ ಮಾರುತಗಳು ಬರುವುದು ತಡವಾದರೆ ಇಲ್ಲವೆ ಈ ಮಾರುತಗಳು ಬರುವಲ್ಲಿ ನೈಸರ್ಗಿಕವಾಗಿ ಸಮಸ್ಯೆ ಎದುರಾದಾಗ ಮೋಡ ಬಿತ್ತನೆ ಮಾಡಲಾಗುತ್ತದೆ.
ನಾವು ಕೃತಕ ಮಳೆಯ ಬಗ್ಗೆ ತಿಳಿಯುವ ಮುನ್ನ ಮಳೆ ಹೇಗೆ ಬರುತ್ತದೆ ಎಂಬುದನ್ನು ತಿಳಿಯೋಣ. ಭೂಮಿ ಮೇಲಿನ ನೀರು ಆವಿಯಾಗಿ ಮೋಡವಾಗಿ ಪರಿವರ್ತನೆಗೊಳ್ಳುತ್ತದೆ ಎಂದು ನಾವು ಓದಿದ್ದೇವೆ. ಆದರೆ ಮಳೆಯಾಗುವ ಮುನ್ನ ನೀರಿನ ಸಣ್ಣ ಸಣ್ಣ ಕಣಗಳು ಗಾಳಿಯೊಂದಿಗೆ ಸೇರಿ ಮೋಡದಂತಹ ಆಕೃತಿಯಾಗುತ್ತವೆ. ಆವಿ ಮೇಲೆ ಮೇಲೆ ಹೋದಂತೆ ತಾಪಮಾನ ಕಡಿಮೆಯಾಗಿ ಘನೀಕರಣಗೊಳ್ಳುತ್ತವೆ. ಇಲ್ಲಿ ಒಂದಕ್ಕೊಂದು ಸೇರಿಕೊಂಡು ಈ ಕಣಗಳು ದೊಡ್ಡದಾಗಿತ್ತಾ ಸಾಗುತ್ತವೆ. ಈ ಕಣಗಳು ದೊಡ್ಡದಾಗಿತ್ತಿದ್ದಂತೆ ಇವುಗಳ ತೂಕವು ಹೆಚ್ಚಾಗುತ್ತವೆ. ಹೀಗೆ ತೂಕ ಹೆಚ್ಚಾಗಿ ನೀರಿನ ಸಾಂದ್ರತೆ ಹೆಚ್ಚಾದಾಗ ಭೂಮಿಯತ್ತ ಬೀಳುತ್ತವೆ.
ಭೂಮಿಗೆ ಬರುವಾಗ ಭೂಮಿಯ ಮೇಲೆ ತಾಪಮಾನ ಹೆಚ್ಚಾಗಿದ್ದರೆ ನೀರಾಗಿ ಬೀಳುತ್ತವೆ, ತಾಪಮಾನ ಕಡಿಮೆಯಾಗಿದ್ದಾಗ ಆಲಿಕಲ್ಲು ಮಳೆಯಾಗಿ ಸುರಿಯುತ್ತದೆ.
ಮೋಡ ಬಿತ್ತನೆ ಹೇಗಾಗುತ್ತದೆ?
1943ರಲ್ಲಿ ಅಮೆರಿಕದ ವಿಜ್ಞಾನಿ ಡಾ.ವಿನ್ಸಂಟ್ ಶೇಫರ್ ಎಂಬುವವರು ಮೊದಲ ಬಾರಿಗೆ ಈ ಮೋಡ ಬಿತ್ತನೆಯ ಸ್ವರೂಪವನ್ನು ಪತ್ತೆ ಮಾಡಿದರು. ಸರಳವಾಗಿ ಹೇಳುವುದಾದರೆ ಚಳಿಗಾಲದಲ್ಲಿ ನಿಮ್ಮ ಬಾಯಿಯಿಂದ ಹೊರಬರುವ ಹೊಗೆ ತಂಪಾದ ವಾತಾವರಣ ಸೇರಿದಾಗ ಸಣ್ಣ ಸಣ್ಣ ನೀರಿನ ಕಣವಾಗಿ ಬದಲಾಗುತ್ತವೆ. ಇದೇ ರೀತಿಯ ಪ್ರಕ್ರಿಯೆ ಮೋಡ ಬಿತ್ತನೆಯಲ್ಲು ನಡೆಯುತ್ತದೆ. ನೀರನ ಕಣಗಳನ್ನು ತಂಪಾದ ವಾತಾವರಣದಲ್ಲಿ ಸೇರಿಸಿದಾಗ ಅದು ಮಂಜುಗಡ್ಡೆಯಾಗಿ ಬದಲಾಗುತ್ತದೆ. ಇವುಗಳ ಬಾರ ತಡೆಯಲಾಗದೆ ನೀರಾಗಿ ಮತ್ತೆ ಭೂಮಿಗೆ ಬರುತ್ತವೆ ಎಂಬುದು ಸರಳ ನಿಯಮವಾಗಿದೆ.
ಮೋಡ ಬಿತ್ತನೆಗೆ ಮೋಡಗಳು ಅಗತ್ಯ
ಮೋಡ ಬಿತ್ತನೆ ಮಾಡಿ ಮಳೆ ತರಿಸಬೇಕು ಎಂದರೆ ಆಕಾಶದಲ್ಲಿ ಮೋಡಗಳಿರುವುದು ಅವಶ್ಯಕ. ಹೀಗಾಗಿ ಯಾವ ಕಾಲದಲ್ಲಿ ಬೇಕಾದರು ಕೃತಕ ಮಳೆ ತರಿಸಲು ಸಾಧ್ಯವಿಲ್ಲ. ಮಾನ್ಸೂನ್ ಆರಂಭದಲ್ಲಿ ಮೋಡ ಬಿತ್ತನೆ ಮಾಡಿ ಮಳೆ ತರಿಸುವುದು ಬಹಳ ಸುಲಭ. ಮೋಡ ಬಿತ್ತನೆಯಲ್ಲಿ ಸಿಲ್ವರ್ ಅಯೋಡೈಡ್, ಡ್ರೈಐಸ್, ಬಳಸಲಾಗುತ್ತದೆ. ಇವುಗಳನ್ನು ಆಕಾಶದಲ್ಲಿರುವ ಮೋಡಗಳ ಮೇಲೆ ಸುರಿದರೆ ಅಲ್ಲಿರುವ ಕಣಗಳ ಜೊತೆ ಬೆರೆತು ಭಾರವಾಗಿ ಮಳೆಯಾಗಿ ರೂಪುಗೊಂಡು ನೀರಾಗಿ ಸುರಿಯುತ್ತವೆ.
ಹೀಗಾಗಿ ಬೇಸಿಗೆಯಲ್ಲಿ ಕೃತಕ ಮಳೆ ತರಿಸಲು ಸಾಧ್ಯವೇ ಇಲ್ಲ. ಮಳೆಗಾಲದ ಆರಂಭದಲ್ಲಿ ಮಾನ್ಸೂನ್ ಮಾರುತಗಳು ತಡವಾದಾಗ ಆಶಾಶದಲ್ಲಿರುವ ಮೋಡಗಳ ಬಳಸಿಕೊಂಡು ಮಾತ್ರ ಕೃತಕ ಮಳೆ ಬರಿಸಬಹುದು. ಆದರೆ ಈಗಂತು ರಾಜ್ಯದಲ್ಲಿ ಈ ರೀತಿ ಕೃತಕ ಮಳೆ ತರಿಸುವುದು ಅಸಾಧ್ಯದ ಮಾತು.



Click it and Unblock the Notifications