Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಶಾಕಿಂಗ್..! ಕರುಳಿನಲ್ಲಿದ್ದ ಜೀವಂತ ಈಲ್ ಹೊರತೆಗೆದ ವೈದ್ಯರು..!
ಕೆಲವು ಬಾರಿ ಎಷ್ಟು ವಿಚಿತ್ರ ಘಟನೆಗಳು ನಮ್ಮ ನಡುವೆ ನಡೆಯುತ್ತವೆ ಅಂದ್ರೆ ನಾವದನ್ನು ನಂಬಲು ಸಾಧ್ಯವಾಗುವುದಿಲ್ಲ. ನಮ್ಮ ದೇಹದಲ್ಲಿ ವಿಚಿತ್ರ ವಸ್ತುಗಳು ಸಿಗುವುದು. ವೈದ್ಯರು ಎಕ್ಸ್‌ರೇ ಮೂಲಕ ತಿಳಿದು ಅದನ್ನು ಹೊರತೆಗೆಯುವುದು ನಡೆಯುತ್ತಲೇ ಇದೆ. ಈಗಲೂ ಇಂತಹ ವಿಚಿತ್ರ ಘಟನೆಯೊಂದು ನಡೆದಿದೆ.
ವಿಯೆಟ್ನಾಂ ದೇಶದ ಉತ್ತರದ ಕ್ವಾಂಗ್ ನಿನ್ಹ್ ಪ್ರಾಂತ್ಯದಲ್ಲಿ 34 ವರ್ಷದ ವ್ಯಕ್ತಿಯೊಬ್ಬರು ತೀವ್ರವಾದ ಹೊಟ್ಟೆ ನೋವು ಎದುರಿಸಿದ್ದರು. ಆಸ್ಪತ್ರೆಯ ವೈದ್ಯರು ಆತನನ್ನು ಪರೀಕ್ಷೆಗೊಳಪಡಿಸಿದಾಗ ಅಚ್ಚರಿಗೊಳಗಾದರು. ಹೈ ಹಾ ಜಿಲ್ಲೆಯ ವೈದ್ಯಕೀಯ ಕೇಂದ್ರದ ವೈದಯರು ಎಕ್‌ರೇ ಮೂಲಕ ಪರೀಕ್ಷೆ ನಡೆಸಿದಾಗ ಆತನ ದೇಹದೊಳಗೆ 30 ಸೆಂ.ಮೀಟರ್ ಉದ್ದದ ಜೀವಂತ ಈಲ್ (ನೀರಿನಲ್ಲಿ ವಾಸಿಸುವ ಒಂದು ಜಾತಿಯ ಮೀನು) ಕಂಡುಬಂದಿತು.

ಹೌದು ನೀವು ನಂಬಲು ಸಾಧ್ಯವಿಲ್ಲದ ಘಟನೆ ಇದು. ಈಲ್ ಜಾತಿ ಮೀನುಗಳು ಮನುಷ್ಯರಿಗೆ ಸಾವು ಸಹ ತರಬಹುದು. ಇವು ಪೆರಿಟೋನಿಟಿಸ್ ಎಂಬ ಮಾರಣಾಂತಿಕ ಸ್ಥಿತಿಯನ್ನು ಉಂಟುಮಾಡುತ್ತವೆ. ಹೀಗಾಗಿ ಆತನಿಗೆ ಶಸ್ತ್ರಚಿಕಿತ್ಸೆ ನೆರವೇರಿಸುವುದು ಅನಿವಾರ್ಯವಾಗಿತ್ತು.
ಈ ಈಲ್ ಅನ್ನು ತೆಗೆದುಹಾಕಲು ತುರ್ತು ಶಸ್ತ್ರಚಿಕಿತ್ಸೆ ನಡೆಸಲಾಯಿತು. ಮನುಷ್ಯನ ಹೊಟ್ಟೆಯೊಳಗೆ ಸುಮಾರು 30 ಸೆಂ.ಮೀ ಉದ್ದದ ಜೀವಂತ ಈಲ್ ಅನ್ನು ಕಂಡು ವೈದ್ಯರು ಆಶ್ಚರ್ಯಚಕಿತರಾದರು. ಈಲ್ ಆತನ ಗುದನಾಳದ ಮೂಲಕ ಪ್ರವೇಶಿಸಿರಬಹುದು ಮತ್ತು ಅವನ ಕರುಳಿನ ಮೂಲಕ ಪ್ರಯಾಣಿಸಿದೆ ಎಂದು ನಂಬಲಾಗಿದೆ, ಇದು ಕರುಳಿನಲ್ಲಿ ರಂದ್ರವನ್ನು ಉಂಟುಮಾಡಿದೆ.
ಈಲ್ ಹಾನಿ ಮಾಡಿದ್ದ ಭಾಗವನ್ನು ತೆಗೆದ ವೈದ್ಯರು
ಈಲ್ ಇರುವುರು ತಿಳಿಯುತ್ತಿದ್ದಂತೆ ಶಸ್ತ್ರಚಿಕಿತ್ಸೆ ನೆರವೇರಿಸಲಾಗಿದೆ. ಆತ ಆಸ್ಪತ್ರೆಗೆ ಬರುವ ಮುನ್ನ ಆರೋಗ್ಯದಲ್ಲಾದ ಬದಲಾವಣೆ ಗುರುತಿಸಿದ್ದಾನೆ. ಉದರದಲ್ಲಿ ಸಹಿಸಲಾಗಷ್ಟು ನೋವು ಕಂಡುಬಂದಿದೆ. ಇದು ಕರುಳಿನಲ್ಲಿ ಆಗಿರುವ ರಂಧ್ರವೂ ಕಾರಣವಾಗಿದೆ. ಹೀಗಾಗಿ ಶಸ್ತ್ರ ಚಿಕಿತ್ಸೆಯ ವೇಳೆ ಕುಳಿನಲ್ಲಾದ ಗಾಯದ ಭಾಗವನ್ನು ವೈದ್ಯರು ಕತ್ತರಿಸಿ ತೆಗೆದಿದ್ದಾರೆ. ಇದಲ್ಲದಿದ್ದರೆ ಈ ಸೋಂಕು ಇಡೀ ಕರುಳಿಗೆ ಹರಡಿ ಬಹು ಬೇಗ ಆತನಿಗೆ ಸಾವು ಸಹ ತರುವ ಸಂಭವವಿರುತ್ತದೆ.
ಈಲ್ ಆತನ ದೇಹ ಸೇರಿದ್ದು ಹೇಗೆ?
ಈಲ್‌ಗಳು ನೀರಿನಲ್ಲಿ ವಾಸಿಸುವ ಜೀವಿಗಳು, ಈ ಜಾತಿಯಲ್ಲಿ ವಿದ್ಯುತ್ ಉತ್ಪಾದಿಸುವ ಈಲ್‌ಗಳು ಸಹ ಇವೆ. ಆದರೆ ಅವು ಗಾತ್ರದಲ್ಲಿ ದೊಡ್ಡದಾಗಿರುತ್ತದೆ. ಆದರೆ ಈತನ ದೇಹದೊಳಗೆ ಈಲ್ ಹೇಗೆ ಸೇರಿಕೊಂಡಿತು ಎಂಬುದೇ ನಿಗೂಢವಾಗಿ ಉಳಿದಿದೆ. ಆತನಿಗೂ ಸಹ ಈ ಬಗ್ಗೆ ಅರಿವಿಲ್ಲ. ಆದರೆ ಗುದದ್ವಾರದ ಮೂಲಕ ಸೇರಿರುವ ಸಾಧ್ಯತೆಯೇ ಹೆಚ್ಚಾಗಿದೆ. ಇನ್ನೂ ಅಚ್ಚರಿ ಎಂದರೆ ಅದು ಆತನ ದೇಹದೊಳಗೆ ಇದ್ದರೂ ಹೊರತೆಗೆಯುವಾಗ ಜೀವಂತವಾಗಿತ್ತು.
ಸದ್ಯ ಆತ ಶಸ್ತ್ರ ಚಿಕಿತ್ಸೆಯ ಬಳಿಕ ಚೇತರಿಸಿಕೊಳ್ಳುತ್ತಿದ್ದಾನೆ. ಇದೊಂದು ಅಸಾಧಾರಣ ಪ್ರಕರಣವಾಗಿದೆ ಎಂದು ಸ್ಥಳೀಯ ಮಾಧ್ಯಮಗಳಿಗೆ ಡಾ. ಫಾಮ್ ಮಾನ್ ಹಂಗ್ ಹೇಳಿದ್ದಾರೆ. "ಗುದನಾಳವು ಹೆಚ್ಚು ಸೂಕ್ಷ್ಮ ಅಂಗವಾಗಿದೆ. ಈ ಬಗ್ಗೆ ನಾವು ಹೆಚ್ಚು ಕಾಳಜಿ ವಹಿಸಬೇಕಿದೆ. ಆತನಿಗೆ ಮಾಡಿರುವ ಶಸ್ತ್ರ ಚಿಕಿತ್ಸೆ ಯಶಸ್ವಿಯಾಗಿದೆ ಎಂದಿದ್ದಾರೆ.
ಶ್ವಾಸಕೋಶದಿಂದ ಜಿರಳೆ ಹೊರತೆಗೆದಿದ್ದ ವೈದ್ಯರು
ಇದೇ ರೀತಿಯ ಮತ್ತೊಂದು ಪ್ರಕರಣದಲ್ಲಿ ಕೇರಳದ ಕೊಚ್ಚಿಯ ವ್ಯಕ್ತಿಯ ಶ್ವಾಸಕೋಶದಿಂದ ಜೀರಳೆಯನ್ನು ವೈದ್ಯರು ಹೊರತೆಗೆದಿದ್ದರು. 55 ವರ್ಷದ ವ್ಯಕ್ತಿ ತೀವ್ರ ಉಸಿರಾಟ ಸಮಸ್ಯೆ ಎದುರಿಸಿದಾಗ ಆತ ಹತ್ತಿರದ ಆಸ್ಪತ್ರೆಗೆ ಬಂದಿದ್ದಾನೆ. ಈ ವೇಳೆ ವೈದ್ಯರು ಪರೀಕ್ಷೆಗೊಳಪಡಿಸಿದಾಗ ಆತ ಶ್ವಾಸನಾಳದಲ್ಲಿ ಜಿರಳೆಯೊಂದು ಸಿಲುಕಿರುವುದು ಪತ್ತೆಯಾಗಿದೆ. ಡಾ.ಟಿಂಕು ಜೋಸೆಫ್ ಎಂಬ ವೈದ್ಯರ ತಂಡ ಆತನ ಪರೀಕ್ಷೆಗೆ ಒಳಪಡಿಸಿದಾಗ ಶಾಕ್ ಆಗಿದ್ದರು. ಬಳಿಕ ನ್ಯಾನೋ ಕ್ಯಾಮರಾವನ್ನು ಕೊಳವೆಯಲ್ಲಿ ಹಾಕಿ ಪರಿಶೀಲಿಸಿದ್ದಾರೆ. ಆತನಿಗೆ ಈ ಮೊದಲು ಕುತ್ತಿಗೆಯ ಹಿಂಬದಿಯಲ್ಲಿ ಕೊಳವೆ ಅಳವಡಿಸಲಾಗಿತ್ತು. ಇದರ ಮೂಲಕ ಜಿರಳೆ ಶ್ವಾಸನಾಳ ಪ್ರವೇಶಿಸಿರಬಹುದು ಎಂದು ಅಂದಾಜಿಸಲಾಗಿತ್ತು.



Click it and Unblock the Notifications
