Latest Updates
-
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ಹೀಟ್ಸ್ಟ್ರೋಕ್ ಕಟ್ಟಿಟ್ಟ ಬುತ್ತಿ, ಎಚ್ಚರವಿರಲಿ! -
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ!
ಉಸಿರುಗಟ್ಟುತ್ತಿದೆ ಎಂದವನ ಶ್ವಾಸಕೋಶದಿಂದ ಜಿರಳೆ ಹೊರತೆಗೆದ ವೈದ್ಯರು..!!
ಮನೆಯಲ್ಲಿ ಜಿರಳೆ, ಹಲ್ಲಿ ಹೀಗೆ ಹತ್ತಾರು ಕೀಟಗಳು ಜನರಿಗೆ ಸಮಸ್ಯೆ ತಂದೊಡ್ಡುತ್ತವೆ. ಈ ಕೀಟಗಳನ್ನು ಮನೆಯಿಂದ ಹೊರಗೆ ಓಡಿಸಲು ಇಲ್ಲವೆ ಸಾಯಿಸಲು ಜನ ಹತ್ತಾರು ರೀತಿಯ ಉಪಾಯ ಮಾಡುತ್ತಾರೆ. ಆದರೂ ಈ ಕೀಟಗಳು ಮನೆಯಲ್ಲಿ ಉಳಿದುಬಿಡುತ್ತವೆ. ಹೀಗೆ ಮನೆಯಲ್ಲಿರುವ ಕೀಟಗಳು ಎಷ್ಟು ಸಮಸ್ಯೆ ತಂದೊಡ್ಡುತ್ತವ ಎಂಬುದನ್ನು ಈ ಘಟನೆ ಸಾಕ್ಷಿಯಾಗಿದೆ.
ಹೌದು ಜಿರಳೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕಂಡಬರುವ ಕೀಟವಾಗಿದೆ. ಅದರಲ್ಲೂ ಅಡುಗೆ ಮನೆಯಲ್ಲಿ ಜಿರಳೆಗಳು ಸಿಕ್ಕಾಪಟ್ಟೆ ಸಮಸ್ಯೆ ತಂದೊಡ್ಡುತ್ತವೆ. ಅಳಿದುಳಿದ ಆಹಾರಗಳ ಮೇಲೆ ಓಡಾಡುವುದು, ಆಹಾರದಲ್ಲಿ ಬೀಳುವುದು, ಬಟ್ಟೆಗಳ ಕಚ್ಚಿ ಹಾಳುಗೆಡುವುದು ಸೇರಿ ಹತ್ತಾರು ಸಮಸ್ಯೆ ಇವುಗಳಿಂದ ಉಂಡಾಗುತ್ತದೆ.

ಆದರೆ ಇಲ್ಲೊಬ್ಬನ ಶ್ವಾಸಕೋಶದ ನಾಳಕ್ಕೆ ಜಿರಳೆ ಸಿಲುಕಿ ಆತ ಉಸಿರಾಟದ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಘಟನೆ ನಡೆದಿದೆ. ನಿಮಗೆ ಅಚ್ಚರಿಯಾಗಬಹುದು. ಕೇರಳದ ಕೊಚ್ಚಿಯಲ್ಲಿ ಇಂತಹದೊಂದು ವಿಚಿತ್ರ ಘಟನೆ ನಡೆದಿದೆ. ರಾತ್ರಿ ಮಲಗಿದ್ದ ವೇಳೆ ವ್ಯಕ್ತಿಯೊಬ್ಬನ ಬಾಯಿಯ ಮೂಲಕ ಜಿರಳೆಯೊಂದು ಹೋಗಿರಬಹುದು ಎಂದು ಮೊದಲು ಶಂಕಿಸಲಾಗಿತ್ತು. ಆದರೆ ಅದು ಶ್ವಾಸನಾಳದಲ್ಲಿ ಸಿಲುಕಿ ಆತನ ಉಸಿರಾಟಕ್ಕೆ ಸಮಸ್ಯೆ ತಂದೊಡಿತ್ತು.
55 ವರ್ಷದ ವ್ಯಕ್ತಿ ತೀವ್ರ ಉಸಿರಾಟ ಸಮಸ್ಯೆ ಎದುರಿಸಿದಾಗ ಆತ ಹತ್ತಿರದ ಆಸ್ಪತ್ರೆಗೆ ಬಂದಿದ್ದಾನೆ. ಈ ವೇಳೆ ವೈದ್ಯರು ಪರೀಕ್ಷೆಗೊಳಪಡಿಸಿದಾಗ ಆತ ಶ್ವಾಸನಾಳದಲ್ಲಿ ಜಿರಳೆಯೊಂದು ಸಿಲುಕಿರುವುದು ಪತ್ತೆಯಾಗಿದೆ. ಡಾ.ಟಿಂಕು ಜೋಸೆಫ್ ಎಂಬ ವೈದ್ಯರ ತಂಡ ಆತನ ಪರೀಕ್ಷೆಗೆ ಒಳಪಡಿಸಿದಾಗ ಶಾಕ್ ಆಗಿದ್ದರು. ಬಳಿಕ ನ್ಯಾನೋ ಕ್ಯಾಮರಾವನ್ನು ಕೊಳವೆಯಲ್ಲಿ ಹಾಕಿ ಪರಿಶೀಲಿಸಿದ್ದಾರೆ. ಆತನಿಗೆ ಈ ಮೊದಲು ಕುತ್ತಿಗೆಯ ಹಿಂಬದಿಯಲ್ಲಿ ಕೊಳವೆ ಅಳವಡಿಸಲಾಗಿತ್ತು. ಇದರ ಮೂಲಕ ಜಿರಳೆ ಶ್ವಾಸನಾಳ ಪ್ರವೇಶಿಸಿರಬಹುದು ಎಂದು ಅಂದಾಜಿಸಲಾಗಿದೆ.
ಬಳಿಕ ವೈದ್ಯರ ತಂಡ ಶಸ್ತ್ರಚಿಕಿತ್ಸೆ ನಡೆಸದೆ ಜಿರಳೆ ಹೊರತೆಗೆಯಲು ಕೊಳವೆಗೆ ಕ್ಯಾಮರಾ ಬಿಟ್ಟು ಇಕ್ಕಳ ಹಾಕಿ ಜಿರಳೆಯನ್ನು ಹೊರತೆಗೆದಿದ್ದಾರೆ. ಜಿರಳೆ ಶ್ವಾಸನಾಳದಲ್ಲಿ ತಲೆಕೆಳಗಾಗಿ ಸಿಲುಕಿತ್ತು, ಜೊತೆಗೆ ಅದು ಸತ್ತು ಹೋಗಿತ್ತು ಎಂದು ವೈದ್ಯರು ತಿಳಿಸಿದ್ದಾರೆ. ಈ ರೀತಿಯ ಘಟನೆಗೆ ವ್ಯಕ್ತಿಗಳ ವೈದ್ಯಕೀಯ ಆರೈಕೆಯು ಕಾರಣವಾಗುತ್ತದೆ ಎಂದು ವೈದ್ಯರು ಒತ್ತಿ ಹೇಳಿದರು.
ಜಿರಳೆಯನ್ನು ಯಶಸ್ವಿಯಾಗಿ ಹೊರತೆಗೆದ ನಂತರ ರೋಗಿಯನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಯಿತು, ಆತ ಆರೋಗ್ಯವಾಗಿದ್ದು, ಎಂದಿನಂತೆ ಉಸಿರಾಟ ಕ್ರಿಯೆ ನಡೆಸಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ಫ್ಲೋರಿಡಾ ವ್ಯಕ್ತಿಯ ಮೂಗಿನಲ್ಲಿ ಜೀವಂತ ಹುಳುಗಳು
ಈ ಕೇರಳ ಘಟನೆಗೂ ಮುನ್ನ ಒಂದು ವಾರದ ಹಿಂದೆ ಫ್ಲೋರಿಡಾದಲ್ಲಿ ವಿಚಿತ್ರ ಘಟನೆಯೊಂದು ವರದಿಯಾಗಿತ್ತು. ಮೂಗು ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬ ಆಸ್ಪತ್ರೆಗೆ ತೆರಳಿದ್ದಾಗ ಆತನ ಮೂಗಿನಲ್ಲಿ ಹುಳುಗಳು ಪತ್ತೆಯಾಗಿದ್ದವು. ಅದು ಬರೋಬ್ಬರಿ 150 ಜೀವಂತ ಹುಳುಗಳಾಗಿದ್ದವು.
ಹುಳುಗಳು ಹೇಗೆ ಸೇರಿಕೊಂಡವು ಎಂಬುದು ವೈದ್ಯರಿಗೆ ದೊಡ್ಡ ಪ್ರಶ್ನೆಯಾಗಿತ್ತು. ಹೀಗಾಗಿ ಹುಳುಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಯಕ್ಕೂ ಕಳುಹಿಸಿದ್ದರು. ಆತನ ಮೂಗಿನೊಳಗೆ ಕ್ಯಾಮರಾ ಹಾಕಿ ನೋಡಿದಾಗ ಒಳಗೆ ಹುಳುಗಳು ಇರುವುದು ಪತ್ತೆಯಾಗಿತ್ತು. ಇದೊಂದು ವಿಲಕ್ಷಣ ಘಟನೆಗೆ ಸಾಕ್ಷಿಯಾಗಿತ್ತು.
ಮಗು ಗಂಟಲಲ್ಲಿ ಸಿಲುಕಿತ್ತು ಮೀನು
ಇನ್ನು ಶಿವಮೊಗ್ಗದ ಮಗುವೊಂದರ ಗಂಟಲಲ್ಲಿ ಮೀನು ಸಿಲುಕಿದ್ದ ಘಟನೆಯನ್ನೂ ನಾವು ನೆನೆಯಬಹುದು. 11 ತಿಂಗಳ ಮಗುವೊಂದು ಜೀವಂತ ಮೀನು ನುಂಗಿ ಅದು ಗಂಟಲಲ್ಲಿ ಸಿಕುಕಿದ ಘಟನೆ ಇದು.
11 ತಿಂಗಳ ಪ್ರತೀಕ್ ಎಂಬ ಮಗು ಮನೆಯಲ್ಲಿ ಕೈಗೆ ಸಿಕ್ಕ ಮೀನನ್ನು ಬಾಯಿಗೆ ಹಾಕಿಕೊಂಡು ನುಂಗಿತ್ತು. ಮೀನು ಗಾತ್ರದಲ್ಲಿ ದೊಡ್ಡದಿದ್ದ ಕಾರಣ ಗಂಟಲಲ್ಲೇ ಸಿಲುಕಿದೆ. ಪೋಷಕರು ಮೀನು ಹೊರತೆಗೆಯಲು ಎಷ್ಟೇ ಕಷ್ಟಪಟ್ಟರು ಸಾಧ್ಯವಾಗಲಿಲ್ಲ. ಬಳಿಕ ಬಾಯಿಯಿಂದ ರಕ್ತ ಬರಲು ಆರಂಭಿಸಿತ್ತು. ತಕ್ಷಣ ಎಚ್ಚೆತ್ತ ಪೋಷಕರು ಆಸ್ಪತ್ರೆಗೆ ಕರೆತಂದಿದ್ದರು. ಬಳಿಕ ವೈದ್ಯರು ಯಶಸ್ವಿ ಚಿಕಿತ್ಸೆಯ ಬಳಿಕ ಮೀನು ಹೊರತೆಗೆದಿದ್ದರು. ಮೀನು ಹೊರತೆಗೆದಾಗ ಇನ್ನೂ ಜೀವಂತವಾಗಿಯೇ ಇತ್ತು.



Click it and Unblock the Notifications