Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
6 ತಿಂಗಳು ಉಳಿತಾರೆ ಎಂದಿದ್ದ ವೈದ್ಯರು..! ಆಕೆ 2 ವರ್ಷ ಹೋರಾಡಿದರು!
ಕನ್ನಡದಲ್ಲಿ ನಿರೂಪಣೆ ಅಂದ ತಕ್ಷಣವೇ ನೆನಪಿಗೆ ಬರೋ ಹೆಸರು ಅಪರ್ಣ ಅವರದ್ದು, ಅಷ್ಟರ ಮಟ್ಟಿಗೆ ಅವರ ನಿರೂಪಣೆ ಹೆಸರಾಗಿತ್ತು. ಆದ್ರೆ ಕ್ಯಾನ್ಸರ್‌ನಿಂದ ಅವರು ಅಸುನೀಗಿದ್ದಾರೆ. ನಿರೂಪಣೆ, ನಟನೆ ಮೂಲಕ ಇಡೀ ರಾಜ್ಯದ ಮನೆ ಮನೆಯ ಮಾತಾಗಿದ್ದರು. ಅದರಲ್ಲೂ ಕಜಾ ಟಾಕೀಸ್ ಕಾರ್ಯಕ್ರಮದ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದರು.
ಚಿಕ್ಕಮಗಳೂರಿನ ಪಂಚನಹಳ್ಳಿಯಲ್ಲಿ ಜನಿಸಿದ್ದ ಅಪರ್ಣಾ, 1989ರಲ್ಲಿ ನಿರೂಪಕಿಯಾಗಿ ಕಿರುತೆರೆಗೆ ಕಾಲಿಟ್ಟರು. ಬಳಿಕ 1984ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ಅವರ ಮಸಣದ ಹೂವು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಮೊದಲ ಸಿನಿಮಾದಲ್ಲಿಯೇ ಅವರು ಘಟಾನುಘಟಿ ಕಲಾವಿದರ ಜೊತೆ ನಟಿಸಿ ಸೈ ಎನಿಸಿಕೊಂಡರು.

ಪತಿ ನಾಗರಾಜ್ ವಸ್ತಾರೆ ವಾಸ್ತುಶಿಲ್ಪಿಯಾಗಿದ್ದು, ಅವರಿಗೆ ಮಕ್ಕಳಿರಲಿಲ್ಲ. ಬದುಕು, ಹೆಸರು ತಂದುಕೊಟ್ಟ ಕನ್ನಡ ಭಾಷೆ ಬಗ್ಗೆ ಅಪರ್ಣಾ ಅಪಾರ ಪ್ರೀತಿ ಹೊಂದಿದ್ದರು. ಅವರಿಗೆ ನಿರೂಪಣೆ ತರಬೇತಿ ಶಾಲೆ ತೆರೆದು ಒಂದಿಷ್ಟು ಯುವಕ, ಯುವತಿಯರಿಗೆ ನಿರೂಪಣೆ ಕುರಿತು ವಿಶೇಷ ತರಬೇತಿ ನೀಡಿ ರಾಜ್ಯದ ಅತ್ಯುತ್ತಮ ನಿರೂಪಕರನ್ನಾಗಿ ಮಾಡುವ ಆಸೆ ಹೊಂದಿದ್ದರು.
ಕ್ಯಾನ್ಸರ್ ಕಾಣಿಸಿಕೊಂಡಿದ್ದು ಯಾವಾಗ?
ರಿಯಾಲಿಟಿ ಶೋ, ಸಿನಿಮಾ, ನಿರೂಪಣೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದ ಅವರು, ಎರಡು ವರ್ಷದ ಹಿಂದೆ ಜುಲೈನಲ್ಲಿ ಅವರು ವೈದ್ಯರ ಬಳಿ ಚಿಕಿತ್ಸೆಗೆಂದು ತೆರಳಿದ್ದಾಗ ಶ್ವಾಸಕೋಶದ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ಈ ವೇಳೆಗಾಗಲೆ ಅವರಿಗೆ ಕ್ಯಾನ್ಸರ್ 4ನೇ ಹಂತ ತಲುಪಿತ್ತು.
6 ತಿಂಗಳು ಉಳಿಯಬಹುದು ಎಂದಿದ್ದರಂತೆ ವೈದ್ಯರು
ಕ್ಯಾನ್ಸರ್ 4ನೇ ಹಂತ ತಲುಪಿದ್ದರಿಂದ ಆಕೆ ಕೇವಲ 6 ತಿಂಗಳು ಉಳಿಯಬಹುದು ಎಂದಿದ್ದರಂತೆ. ಆದರೆ ಪತಿಯ ಆರೈಕೆ ಹಾಗೂ ಆಕೆಯ ಹೋರಾಟದ ಮನೋಭಾವ ಆಕೆಯನ್ನು ಎರಡು ವರ್ಷಕ್ಕೂ ಹೆಚ್ಚು ಕಾಲ ಬದುಕುಳಿಯುವಂತೆ ಮಾಡಿತ್ತು. ಆದರೆ ಕಳೆದ ಫೆಬ್ರವರಿಯಿಂದ ಅವರು ಹೆಚ್ಚು ಅನಾರೋಗ್ಯಕ್ಕೆ ಒಳಗಾಗಿದ್ದರು ಎಂದು ಪತಿ ನಾಗರಾಜ್ ವಸ್ತಾರೆ ಹೇಳಿಕೊಂಡಿದ್ದಾರೆ.
"ಎರಡು ವರ್ಷದ ಹಿಂದೆ ಇದೇ ಜುಲೈನಲ್ಲಿ ಶ್ವಾಸಕೋಶದ ಕ್ಯಾನ್ಸರ್ ಅಂತ ತಪಾಸಣೆಯಲ್ಲಿ ಗೊತ್ತಾಯ್ತು. ಅದಾಗಲೇ ನಾಲ್ಕನೇಯ ಹಂತದಲ್ಲಿ ಇತ್ತು. ಅದನ್ನು ನೋಡಿದ ವೈದ್ಯರು ಇನ್ನು ಆರು ತಿಂಗಳು ಇದ್ದರೆ ಹೆಚ್ಚು ಅಂತ ಹೇಳಿದ್ರು. ಆದರೆ, ಅವಳು ಛಲಗಾತಿ. ಏನಾದರೂ ಮಾಡಿ ಗೆಲ್ತೀನಿ ಅನ್ನುವಂತಹ ಛಲವಿತ್ತು. ಅದಾದ ಮೇಲೂ ಒಂದೂವರೆ ವರ್ಷ ಅಂತ ಇಟ್ಟುಕೊಳ್ಳೋಣ ಜನವರಿಯವರೆಗೂ ಹೋರಾಡಿದಳು." ಎಂದು ಪತಿ ನಾಗರಾಜ್ ಭಾವುಕರಾದರು.
'ಕ್ಯಾನ್ಸರ್ ಅನ್ನೋದು ನೀನಲ್ಲದ ಇನ್ನೊಂದು ವ್ಯಕ್ತಿತ್ವವನ್ನು ಹೇರುವುದಕ್ಕೆ ಬಯಸುತ್ತೆ. ಅವಳು ಧೀರೆ. ಅವಳು ಇಷ್ಟು ವರ್ಷ ಮಣಿಸಿದಳು. ಆದರೆ ಆಗಲಿಲ್ಲ. ನಾವಿಬ್ಬರೂ ಜಂಟಿಯಾಗಿ ಇದರಲ್ಲಿ ಸೋತಿದ್ದೀವಿ. ಅಪರ್ಣಾಳಿಗೆ ಬರುವ ಅಕ್ಟೋಬರ್‌ಗೆ 58 ವರ್ಷ ತುಂಬುತ್ತಿತ್ತು ಎಂದಿದ್ದಾರೆ.
ನಮ್ಮ ಮೆಟ್ರೋದಲ್ಲಿ ಅವರ ಧ್ವನಿ ಮೂಡಿದ್ದು ಹೇಗೆ?
ಬೆಂಗಳೂರು ಮೆಟ್ರೋದಲ್ಲಿ ನೀವು ಕೇಳುವ ಧ್ವನಿ ಅಪರ್ಣ ಅವರದ್ದಾಗಿದೆ. ಆದರೆ ಅವರಿಗೆ ಮೆಟ್ರೋದಲ್ಲಿ ತಮ್ಮ ಧ್ವನಿ ಹೇಗೆ ಸೆಲೆಕ್ಟ್ ಮಾಡಿದ್ದರು ಎಂಬುದು ಅಚ್ಚರಿ ಮೂಡಿಸಿತ್ತಂತೆ. 10 ವರ್ಷದ ಹಿಂದೆ ಕರೆ ಬಂದು ವಾಯ್ಸ್ ಕಳುಹಿಸುವಂತೆ ಕೇಳಿದ್ದರಂತೆ. ಬಳಿಕ ಚೆನ್ನೈ ಬರಲು ಹೇಳಿ ಅಲ್ಲಿ ಅವರ ಧ್ವನಿ ರೆಕಾರ್ಡ್ ಮಾಡಲಾಗಿತ್ತಂತೆ. ಆದರೆ ಅವರ ಧ್ವನಿ ಮೆಟ್ರೋದಲ್ಲಿ ಹೇಗೆ ಕೇಳಿಸುತ್ತೆ ಎಂಬುದು ತಿಳಿದಿರಲಿಲ್ಲವಂತೆ. ಹೀಗಾಗಿ ತಮ್ಮ ಧ್ವನಿ ಕೇಳಲೆಂದೇ ಅವರು ಮೆಟ್ರೋದಲ್ಲಿ ಒಮ್ಮೆ ಪ್ರಯಾಣ ಮಾಡಿದ್ದರಂತೆ.
ಅಪರ್ಣಾ ಅವರ ಸಾವು ನಿಜಕ್ಕೂ ಕನ್ನಡ ಸಿನಿಮಾ, ಮಾಧ್ಯಮ ಮತ್ತು ನಿರೂಪಣಾ ಕ್ಷೇತ್ರಕ್ಕೆ ತುಂಬಲಾರದ ನಷ್ಟ.



Click it and Unblock the Notifications

