ತಿರುಪತಿ ಬಾಲಾಜಿ ಕಿರೀಟದ ಕೊಡುಗೆ ಯಾರು ಗೊತ್ತಾ? ವಜ್ರ ಖಚಿತ ಆಭರಣ ನೀಡಿದ್ಯಾರು?

ತಿರುಪತಿಯಲ್ಲಿ ನೆಲೆಸಿರುವ ವೆಂಕಟೇಶ್ವರ ಸ್ವಾಮಿ ಅಥವಾ ಬಾಲಾಜಿಯ ದೇವಾಲಯವು ಇಡೀ ವಿಶ್ವದಲ್ಲೇ ಪ್ರಸಿದ್ಧಿ. ಅಲ್ಲಿನ ಶ್ರೀಮಂತಿಗೆಯ ಕಾರಣಕ್ಕೆ ಅದು ದೇಶದ ಅತೀ ಹೆಚ್ಚು ಭಕ್ತರು ಭೇಟಿ ನೀಡುವ ದೇವಾಲಯವಾಗಿದೆ. ಹಾಗೆ ಅದರ ಶ್ರೀಮಂತಿಗೆ ಸರಿಸಾಟಿಯಾದ ಮತ್ತೊಂದು ದೇವಾಲಯ ನಿಮಗೆ ನೋಡಲು ಸಿಗೋದಿಲ್ಲ. ಹಾಗೆ ಈ ಬಾಲಾಜಿ ಮೂರ್ತಿ ಶ್ರೀಮಂತಿಕೆಯ ಪ್ರತಿರೂಪ. ಏಕೆಂದರೆ ಈ ದೇವಾಲಯದಲ್ಲಿ ಚಿನ್ನ ಬೆಳ್ಳಿ, ವಜ್ರದ ಆಭರಣಗಳೇ ತುಂಬಿಕೊಂಡಿವೆ.

ಬಾಲಾಜಿ ದೇವಾಲಯದಲ್ಲಿ ಎಲ್ಲರ ಗಮನ ಸೇಳೆಯುವುದು ವೆಂಕಟೇಶ್ವರನ ಮೂರ್ತಿ. ಈ ಮೂರ್ತಿ ನೋಡಿದ್ರೆ ಎಲ್ಲರು ಒಮ್ಮೆ ಮಂತ್ರ ಮುಗ್ಧರನ್ನಾಗಿಸುತ್ತದೆ. ವಜ್ರ ಖಚಿತ ಆಭರಣಗಳ ನೋಡಿದ್ರೆ ಎಲ್ಲರು ಮೂಗಿನ ಮೇಲೆ ಬೆರಳಿಡಬೇಕಾಗುತ್ತದೆ. ಯಾವಾಗಲು ದಿಗ್ಗಜ ಉದ್ಯಮಿಗಳು, ನಟರು, ರಾಜಕಾರಣಿಗಳು ಈ ಬಾಲಾಜಿಗೆ ಉಡುಗೊರೆಗಳ ನೀಡುವುದು ನೋಡಬಹುದು.

Do You Know Who Donated The Tirupati Balaji Crown

ಬಹುತೇಕ ಉದ್ಯಮಿಗಳು, ರಾಜಕಾರಣಿಗಳು ಈ ದೇವಾಲಯಕ್ಕೆ ಸಾವಿರಾರು ಕೋಟಿ ರೂಪಾಯಿಯ ಉಡುಗೊರೆ ನೀಡಿರುವುದು ನೋಡಬಹುದು. ಅದ್ರಲ್ಲೂ ಚಿನ್ನ, ವಜ್ರದಿಂದ ಮಾಡಿರುವ ಉಡುಗೊರೆಗಳನ್ನೇ ಅವರು ನೀಡುವುದು ಕಾಮನ್. ಹಾಗೆ ಈ ರೀತಿ ಉಡುಗೊರೆಗಳು ಈ ದೇವಾಲಯದ ಆಸ್ತಿಯಾಗಿದೆ.

ಸದ್ಯ ಈ ದೇವಾಲಯಕ್ಕೆ ಭೇಟಿ ನೀಡುವ ಭಕ್ತರು ಬಾಲಾಜಿಯ ಕಿರೀಟ ನೋಡಲು ಬಯಸುತ್ತಾರೆ. ವಜ್ರದಿಂದಲೇ ನಿರ್ಮಾಣ ಆಗಿರುವ ಈ ಕಿರೀಟವು ಭಾರತದ ಆಸ್ತಿ ಎನ್ನಬಹುದು. ಈ ಕಿಟೀಟ ಬರೋಬ್ಬರಿ 500 ವರ್ಷ ಹಳೆಯದ್ದಾಗಿದೆ ಹಾಗೆ ಕರ್ನಾಟಕಕ್ಕೆ ಸಂಬಂಧ ಹೊಂದಿದೆ. ಹೌದು ಈ ಕಿರೀಟ ಮಾಡಿ ಕೊಟ್ಟಿದ್ದು ಕರ್ನಾಟಕದ ಶ್ರೇಷ್ಠ ದೊರೆ

ವಿಜಯನಗರ ಸಾಮ್ರಾಜ್ಯದಿಂದ ಕಿರೀಟ ಉಡುಗೊರೆ

ಬಾಲಾಜಿ ತಲೆ ಮೇಲೆ ಇರುವ ಈ ವಜ್ರ ಖಚಿತ ಕಿರೀಟವು ವಿಜಯ ನಗರ ಸಾಮ್ರಾಜ್ಯದ ಶ್ರೀಮಂತಿಕಗೆ ಹಿಡಿದ ಕೈಗನ್ನಡಿಯಾಗಿದೆ. 1509 ಮತ್ತು 1529ರ ನಡುವೆ ಆಳ್ವಿಕೆ ನಡೆಸಿದ ಶ್ರೀ ಕೃಷ್ಣದೇವರಾಯರು ಈ ಕಿರೀಟವನ್ನು ದೇವಾಯಲಕ್ಕೆ ಉಡುಗೊರೆಯಾಗಿ ನೀಡಿದ್ದಾರೆ. ಫೆಬ್ರವರಿ 10, 1513 ರಂದು, ಅವರ ಮೊದಲ ದಾಖಲಿತ ಭೇಟಿಯ ಸಮಯದಲ್ಲಿ, ಅವರು ದೇವಾಲಯಕ್ಕೆ ಭವ್ಯವಾದ ಕಿರೀಟವನ್ನು ದಾನ ಮಾಡಿದರು. ಈ ವಿಶೇಷ ಆಭರಣವನ್ನು ರತ್ನ ಕಿರೀಟಂ ಎಂದು ಕರೆಯಲಾಯಿತು.

ಇದು ಅಪರೂಪದ ವಜ್ರಗಳಿಂದಲೇ ಮಾಡಲಾಗಿರುವ ಕಿರೀಟವಾಗಿದೆ. ತೆಲುಗು, ಕನ್ನಡ ಮತ್ತು ತಮಿಳು ಭಾಷೆಗಳಲ್ಲಿ ಶಾಸನಗಳು ಇನ್ನೂ ದೇವಾಲಯದ ಗೋಡೆಗಳ ಮೇಲೆ ಅಸ್ತಿತ್ವದಲ್ಲಿವೆ, ಇದು ಅವರ ಉಡುಗೊರೆಗಳ ಪುರಾವೆಯಾಗಿದೆ. ಈ ಶಾಸನಗಳು ದಕ್ಷಿಣ ಭಾರತದ ದೇವಾಲಯ ಇತಿಹಾಸದಲ್ಲಿ ರಾಜಮನೆತನದ ಕೊಡುಗೆಗಳನ್ನು ಎತ್ತಿ ತೋರಿಸುತ್ತಿದೆ.

ದೇವಾಲಯದ ಶಾಸನಗಳಲ್ಲಿ ಒಂದಾದ ಪ್ರತಾಪರುದ್ರ ಗಜಪತಿರಾಯನ ಮೇಲೆ ವಿಜಯದ ನಂತರ ಕೃಷ್ಣದೇವರಾಯ ತಿರುಮಲಕ್ಕೆ ಭೇಟಿ ನೀಡಿದ್ದನ್ನು ದಾಖಲಿಸುತ್ತದೆ. ಇದು ಉದಯಗಿರಿಯ ಮೇಲಿನ ಅವರ ವಿಜಯವನ್ನೂ ಸಹ ಉಲ್ಲೇಖಿಸುತ್ತದೆ. ಇಂದಿಗೂ ದೇವಾಲಯದ ಒಳಗೆ ಕೃಷ್ಣದೇವರಾಯ ಮತ್ತು ಅವರ ರಾಣಿಯರ ಸಣ್ಣ ಪ್ರತಿಮೆಗಳು ಇಂದಿಗೂ ನಿರ್ಗಮನ ದ್ವಾರದ ಬಳಿ ಇವೆ. ಇದನ್ನು ನೋಡಿದ ಭಕ್ತರು ಅಚ್ಚರಿಯಾಗಿ ಕ್ಷಣಕಾಲ ಅಲ್ಲಿಯೇ ನಿಂತುಬಿಡುವಷ್ಟು ಶ್ರೀಮಂತಿಕೆಯಿಂದ ಕೂಡಿದೆ. ಇಂದಿನ ಬೆಲೆಗೆ ಇದನ್ನು ಹೋಲಿಸುವುದು ಕೂಡ ಕಷ್ಟವಾಗುತ್ತದೆ.

ಹಾಗೆ ದೇವಸ್ಥಾನದಲ್ಲಿರುವ ಭಗವಾನ್ ವೆಂಕಟೇಶ್ವರ ಸ್ವಾಮಿಯ ವಿಗ್ರಹವನ್ನು ಒಂದೇ ಕಲ್ಲಿನಿಂದ ಕೆತ್ತನೆ ಮಾಡಲಾಗಿದೆ. ಹಾಗೆ ಈ ಏಳು ಬೆಟ್ಟಗಳು ಮಾನವ ದೇಹದಲ್ಲಿರುವ ಏಳು ಚಕ್ರಗಳನ್ನು ಪ್ರತಿನಿಧಿಸುತ್ತವೆ ಎಂದು ಹೇಳಲಾಗುತ್ತದೆ. ಈ ಬೆಟ್ಟಗಳು ಜೀವನದ ಏಳು ಸದ್ಗುಣಗಳನ್ನು ಪ್ರತಿನಿಧಿಸುತ್ತವೆ ಎಂದು ಹೇಳಲಾಗುತ್ತದೆ: ಸತ್ಯ, ಸದಾಚಾರ, ಶಾಂತಿ, ಪ್ರೀತಿ, ಅಹಿಂಸೆ, ಸ್ವಯಂ ನಿಯಂತ್ರಣ ಮತ್ತು ತ್ಯಾಗದ ಪ್ರತೀಕ ಎನ್ನಲಾಗಿದೆ.

English summary

Do You Know Who Donated The Tirupati Balaji Crown? Its Karnataka Pride

The idol of Lord Venkateswara in the Balaji temple attracts everyone's attention. Seeing this idol, everyone is enchanted by the magic. Seeing the diamond-studded jewelry, everyone has to put their finger on their nose.
Story first published: Sunday, November 16, 2025, 10:55 [IST]
X
Desktop Bottom Promotion