Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ನೇಲ್ ಪಾಲಿಶ್ ಹೇಗೆ ತಯಾರಾಗುತ್ತೆ ಗೊತ್ತಾ? ಇಲ್ಲಿದೆ ವಿಡಿಯೋ
ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ತಮ್ಮ ಸೌಂದರ್ಯದ ಕಡೆ ಹೆಚ್ಚು ಗಮನ ಕೊಡುತ್ತಾರೆ. ಅವರ ಮೇಕಪ್ ಕಿಟ್‌ಗಳಿಗೆ ಸಾವಿರಾರು ರೂಪಾಯಿ ವ್ಯಯಿಸುತ್ತಾರೆ. ಎಲ್ಲಾ ಬ್ರಾಂಡೆಡ್ ವಸ್ತುಗಳನ್ನು ಬಳಸುತ್ತಾರೆ. ಮುಖಕ್ಕೆ ಹಚ್ಚಿಕೊಳ್ಳಲು ಹಲವು ರೀತಿಯ ಕ್ರೀಮ್ ಬಳಸುತ್ತಾರೆ. ಜೊತೆಗೆ ಕೈಗೆ ಕಾಲಿಗೆ, ಇಡೀ ದೇಹಕ್ಕೆ ಅದರದ್ದೆ ಆದ ಕ್ರೀಮ್‌ಗಳು ಇಂದು ಸಿಗುತ್ತವೆ.
ಇನ್ನು ಯುವತಿಯರ ಸೌಂದರ್ಯದಲ್ಲಿ ಕೈ ಬೆರಳ ಉಗುರುಗಳು ಸಹ ಇಂದು ಪ್ರಮುಖ ಪಾತ್ರ ವಹಿಸಿವೆ. ಮಹಿಳೆಯರಿಗೆ ಸುಂದರವಾದ ನೀಳ ಉಗುರುಗಳನ್ನು ಹೊಂದಬೇಕು ಎಂಬ ಇಚ್ಛೆ ಇರುತ್ತದೆ. ಉಗುರು ವೃತ್ತಾಕಾರವಾಗಿ ಅಥವಾ ಚೌಕಾಕಾರವಾಗಿ ಯಾವರೀತಿಯಲ್ಲಾದರೂ ಇರಲಿ ಅದನ್ನು ನೀಳವಾಗಿ ಬೆಳೆಸಿ ಸುಂದರವಾಗಿಸಬೇಕು ಎಂಬುದು ಮಹಿಳೆಯರ ಆಸೆ.

ನಿಮ್ಮ ಕೈಗಳಿಗೆ ಇನ್ನಷ್ಟು ಮೆರುಗು ನೀಡುವುದೇ ಉಗುರು ಬಣ್ಣ. ಆದರೆ ಈ ಉಗುರು ಬಣ್ಣಗಳ ಹಾಕಿಕೊಂಡ ಕೆಲವು ದಿನಗಳು ನೀಡುವ ಅಂದಕ್ಕಿಂತ ನಂತರ ಅದರ ಬಣ್ಣ ಬಿಡುವ ವೇಳೆ ಕೈಗಳ ಅಂದವನ್ನೇ ಹಾಳು ಮಾಡುತ್ತದೆ. ಉಗುರು ಬಣ್ಣಗಳು ಹೆಚ್ಚು ಕಾಲ ಉಳಿಯುವುದಿಲ್ಲ, ಸ್ವಲ್ಪ ಸ್ವಲ್ಪವೇ ಸಿಪ್ಪೆ ಏಳಲು ಆರಂಭಿಸಿದಾಗ ಒಂಥರ ಅಸಮಧಾನ, ಕೆಲವು ಸದರ್ಭಗಳಲ್ಲಿ ಮುಜುಗರ ಆಗಿವುದೂ ಉಂಟು.
ಆದ್ರೆ ನೀವು ಎಂದಾದ್ರು ಯೋಚಿಸಿದ್ದೀರಾ, ನೀವು ಉಗುರುಗಳಿಗೆ ಹಚ್ಚುವ ಈ ಬಣ್ಣ ಹೇಗೆ ತಯಾರಿಸಲಾಗುತ್ತದೆ? ನಿಮ್ಮ ಕೈಗಳ ಉಗುರು ಹೊಳೆಯುವಂತೆ ಮಾಡುವ ಈ ಬಣ್ಣಗಳು ತಯಾರಾಗುವುದು ಹೇಗೆ ಎಂಬುದನ್ನು ನೋಡಿ.
ಈ ಉಗುರು ಬಣ್ಣ ತಯಾರಿಸುತ್ತಿರುವ ಸಣ್ಣ ಕಾರ್ಖಾನೆಯೊಂದರ ವಿಡಿಯೋವನ್ನ ಇನ್ಸ್‌ಸ್ಟಾಗ್ರಾಮ್ ಖಾತೆಯೊಂದರಲ್ಲಿ ಹಂಚಿಕೊಳ್ಳಲಾಗಿದೆ. ಇದರಲ್ಲಿ ಉಗುರು ಬಣ್ಣವನ್ನು ತಯಾರಿಸಿ ಹೇಗೆ ಸಣ್ಣ ಸಣ್ಣ ಬಾಟಲಿಗಳಿಗೆ ತುಂಬಿಸಲಾಗುತ್ತದೆ ಎಂಬುದನ್ನು ವಿವರಿಸಲಾಗಿದೆ. ಈ ವಿಡಿಯೋ 18 ಮಿಲಿಯನ್‌ಗೂ ಅಧಿಕ ವೀಕ್ಷಣೆ ಕಂಡಿದೆ.
ವಿಡಿಯೋದಲ್ಲಿ ಏನಿದೆ.?
ವೈರಲ್ ವಿಡಿಯೋವನ್ನು Instagram ನಲ್ಲಿ @foodiehat ಎಂಬ ಖಾತೆಯಿಂದ ಪೋಸ್ಟ್ ಮಾಡಲಾಗಿದೆ. ಸಣ್ಣ ಬಾಟಲಿಯು ಉಗುರು ಬಣ್ಣದಿಂದ ಹೇಗೆ ತುಂಬಿದೆ ಎಂಬುದರಿಂದ ವಿಡಿಯೋ ಪ್ರಾರಂಭವಾಗುತ್ತದೆ. ದೊಡ್ಡ ಸಿಲಿಂಡರ್ ಆಕೃತಿಯ ಯಂತ್ರದಲ್ಲಿ ಕೆಂಪು ಬಣ್ಣದ ನೈಲ್ ಪಾಲಿಶ್ ಹಾಕುತ್ತಿರುವುದು ಕಾಣಬಬಹುದು. ನಂತರ ಅದನ್ನು ಸಣ್ಣ ಕ್ಯಾನ್‌ನಲ್ಲಿ ಹಾಕಲಾಗುತ್ತಿದೆ, ಇದಾದ ಬಳಿಕ ಮತ್ತೊಂದು ಚಿಕ್ಕ ಗಾತ್ರದ ಡಬ್ಬದಲ್ಲಿ ಈ ಬಣ್ಣವನ್ನು ತುಂಬಿಸಲಾಗುತ್ತಿದೆ.
ಆದರೆ ಈ ಬಣ್ಣವನ್ನು ಹೇಗೆ ಮಾಡಲಾಗುತ್ತಿದೆ, ಇದಕ್ಕೆ ಯಾವೆಲ್ಲಾ ವಸ್ತು, ರಾಸಾಯನಿಕ ಎಷ್ಟು ಪ್ರಮಾಣದಲ್ಲಿ ಸೇರಿಸಲಾಗುತ್ತಿದೆ ಎಂಬುದನ್ನು ಈ ವಿಡಿಯೋದಲ್ಲಿ ತೋರಿಸಲಾಗಿಲ್ಲ. ಕೊನೆಯಲ್ಲಿ ಚಿಕ್ಕ ಗಾಜಿನ ಬಾಟಲಿಗಳಿಗೆ ನಿರ್ದಿಷ್ಟ ಪ್ರಮಾಣದ ಬಣ್ಣವನ್ನು ತುಂಬಿ ಅದಕ್ಕೆ ಮುಚ್ಚಳಗಳನ್ನು ಹಾಕಲಾಗುತ್ತಿದೆ.
ಅಚ್ಚರಿ ಅಂದರೆ ಇದೇ ಕಾರ್ಖಾನೆಯಲ್ಲಿ ಎಲ್ಲಾ ಬಣ್ಣಗಳು ತಯಾರಾಗುತ್ತಿವೆ. ಒಟ್ಟು 8ರಿಂದ 10 ಬಣ್ಣದ ನೈಲ್ ಪಾಲಿಶ್ ಅಲ್ಲಿ ತಯಾರಾಗುತ್ತಿದೆ. ಈ ಚಿಕ್ಕ ಬಾಟಲಿಗೆ ತುಂಬಿಸಿದ ಬಳಿಕ ಅವು ಸಣ್ಣಪುಟ್ಟ ಮಾರುಕಟ್ಟೆಗಳಲ್ಲಿ ಮಾರಾಟಕ್ಕೆ ಲಭ್ಯವಾಗುತ್ತವೆ. ಇವುಗಳನ್ನ ದುಬಾರಿ ಬೆಲೆ ನೀಡಿ ಯುವತಿಯರು ಖರೀದಿಸುತ್ತಾರೆ.
ಕೆಂಪು ಬಣ್ಣದ ನೇಲ್ ಪಾಲಿಶ್ ಆಕರ್ಷಕವಾಗಿ ಕಾಣುತ್ತದೆ. ಆ ಕೆಂಪು ಬಣ್ಣದ ಮೇಲೆ ಬೇರೆ ಬಣ್ಣಗಳಿಂದ ವಿನ್ಯಾಸ ಮಾಡಿದರೆ ಅದು ನಿಮಗೆ ಸ್ಟೈಲಿಷ್ ಲುಕ್ ಕೊಡುತ್ತದೆ. ಕೆಂಪು ಬಣ್ಣದ ನೇಲ್ ಪಾಲಿಶ್ ಹಚ್ಚಿ ಅದರ ಮೇಲೆ ಹಲವು ರೀತಿ ವಿನ್ಯಾಸ ಬಿಡಿಸಬಹುದು. ಬಿಳಿ ಮತ್ತು ಕೆಂಪು ಬಣ್ಣ ಮಿಶ್ರಿತ ಉಗುರು ಸುಂದರವಾಗಿ ಕಾಣುತ್ತದೆ. ಈ ಬಣ್ಣಗಳ ಮಿಶ್ರಣದಿಂದ ಈ ರೀತಿ ವಿನ್ಯಾಸಗೊಳಿಸಬಹುದು.ಕೆಂಪು ಬಣ್ಣವನ್ನು ಉಗುರಿಗೆ ಹಚ್ಚಿ ಅದರ ಮೇಲೆ ಚಿಕ್ಕ 3 ಚುಕ್ಕಿ ಹಾಕಿದರೆ ಚೆನ್ನಾಗಿ ಕಾಣುತ್ತದೆ. ಅಲ್ಲದಿದ್ದರೆ ಬಿಳಿ ಬಣ್ಣದಿಂದ ಚೆಂದದ ವಿನ್ಯಾಸವನ್ನು ಬಿಡಿಸಬಹುದು.



Click it and Unblock the Notifications
