Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನಿಮ್ಮ ಮನೆಯಲ್ಲೂ ಈ ಡಿಸೈನ್ ಚಮಚ ಇದ್ಯಾ..? ಜನ ಈ ಚಮಚದ ಹಿಂದೆ ಬಿದ್ದಿರೋದ್ಯಾಕೆ..?
ಆನ್‌ಲೈನ್ ಜಗತ್ತೆ ಹಾಗೆ ಅಲ್ಲಿ ಯಾವ ವಿಚಾರದ ಬಗ್ಗೆ ಚರ್ಚೆ ನಡೆಯುತ್ತೆ. ಯಾವ ವಿಚಾರಗಳ ಮೇಲೆ ಜನ ಜಗಳ ಆಡುತ್ತಾರೆ. ಏನನ್ನೂ ಯೋಚಿಸುವಂತೆ ಮಾಡುತ್ತಾರೆ ಎಂಬುದೇ ವಿಚಿತ್ರ. ಇಲ್ಲಿ ಅನಗತ್ಯ ಚರ್ಚೆಯಿಂದ ಹಿಡಿದು ಜನರನ್ನು ಮತ್ತಷ್ಟು ಯೋಚನೆಗೆ ತಳ್ಳುವ ವಿಚಾರಗಳು ನಿತ್ಯವೂ ಜರುಗುತ್ತವೆ.
ಇಂಟರ್‌ನೆಟ್ ಲೋಕವೇ ಈಗ ಹಾಗಾಗಿದೆ, ಎಲ್ಲವನ್ನೂ ಪ್ರಶ್ನೆ ಮಾಡುವ, ಎಲ್ಲ ಚಿತ್ರ ವಿಚಿತ್ರ ವಿಚಾರಗಳು ಈ ವೇದಿಕೆಯಲ್ಲಿ ಹರಿದಾಡುತ್ತವೆ. ಲಕ್ಷ ಲಕ್ಷ ಜನರ ಮೆದುಳಿಗೆ ಕೆಲಸ ಕೊಡುವ ಕಾರ್ಯ ಮಾಡುತ್ತೆ, ಇನ್ನೂ ಕೆಲವು ಬಾರಿ ಯಾವುದಾದ್ರು ವಿಚಾರದ ಬಗ್ಗೆ ಬೆಳಕು ಚೆಲ್ಲುತ್ತದೆ. ಇದರಿಂದ ಒಂದಿಷ್ಟು ಜನರಿಗೆ ಸಹಾಯವೂ ಆಗುತ್ತೆ.
ಆದ್ರೆ ಕಳೆದ 15 ದಿನಗಳಿಂದ ಆನ್‌ಲೈನ್ ಲೋಕದಲ್ಲಿ ಸುದ್ದಿಯಾಗ್ತಿರೋದು ಇದೊಂದು ಚಮಚ. ಹೌದು ನೀವು ನಂಬಲು ಸಾಧ್ಯವಿಲ್ಲದ ರೀತಿ ಈ ಚಮಚ ಸುದ್ದಿಯಾಗ್ತಿದೆ. ಜನ ಈ ಚಮಚದ ಹಿಂದೆ ತಲೆ ಕೆಡಿಸಿಕೊಂಡಿದ್ದಾರೆ. ಯಾರ ಮನೆಯಲ್ಲಿ ಈ ರೀತಿ ಡಿಸೈನ್ ಹೊಂದಿರುವ ಚಮಚ ಇದೆ? ಯಾರ ಮನೆಯಲ್ಲಿ ಇಲ್ಲ? ಇದ್ದರೂ ಅವರ ಮನೆಯಲ್ಲಿ ಏಕಿದೆ? ನಮ್ಮ ಮನೆಯಲ್ಲಿ ಏಕಿಲ್ಲಾ? ಹೀಗೆ ತಲೆಗೆ ಹುಳ ಬಿಡುವ ಹತ್ತಾರು ಪ್ರಶ್ನೆಗಳ ಸುಳಿಯಲ್ಲಿ ಜನ ಸಿಲುಕಿ ಒದ್ದಾಡಿದ್ದಾರೆ.

ಹಾಗಾದ್ರೆ ಏನಿದು ಒಂದು ಚಮಚದ ಕಥೆ, ಆರಂಭಿಸಿದ್ದು ಯಾರು? ಈ ಚಮಚದ ಹಿಂದಿರುವ ವಿಚಿತ್ರ ಕಥೆ ಏನು? ಜನ ಏಕೆ ಇಷ್ಟು ತಲೆಕೆಡಿಸಿಕೊಂಡಿದ್ದಾರೆ ಎಂಬುದನ್ನು ನಾವು ಸಹ ತಿಳಿಯೋಣ.
ಈ ಡಿಸೈನ್ ಮಾಡಿದ ಚಮಚ ನೋಡಿದ ಕೂಡಲೆ ನಿಮಗೇನು ಅನಿಸುತ್ತಿದೆ ಯೋಚಿಸಿ. ಇದು ನಿಮ್ಮ ಮನೆಯಲ್ಲೂ ಇದೆಯೇ..? ಭಾರತದ ಬಹುಪಾಲು ಮನೆಯಲ್ಲಿ ಈ ರೀತಿ ಚಮಚ ಇದೆ. ಅಚ್ಚರಿ ಅಂದ್ರೆ ನಿಮ್ಮ ಮನೆಯಲ್ಲೂ ಇರಬಹುದು. ಆದ್ರೆ ವಿಚಿತ್ರ ಸಂಗತಿ ಅಂದ್ರೆ ನಿಮ್ಮ ಮನೆಗೆ ಈ ಚಮಚ ಹೇಗೆ ಬಂತು ಎಂಬುದು ನಿಮಗೆ ನೆನಪಿರಲು ಸಾಧ್ಯವಿಲ್ಲ. ಇದೇ ವಿಚಾರವೀಗ ಇಂಟರ್‌ನೆಟ್‌ನಲ್ಲಿ ಸುದ್ದಿಯಾಗಿದೆ.
ಈ ಚಮಚ ಯಾರ ಮನೆಯಲ್ಲಿ ಇದೆ? ತಂದವರು ಯಾರು? ಇದೇ ವಿಚಾರಕ್ಕೆ ಜನ ತಲೆಕೆಡಿಸಿಕೊಂಡಿದ್ದಾರೆ. ಇದು ನಮಗೆ ತಮಾಷೆಯ ವಿಚಾರ ಎನಿಸಿದರು. ಇದರೊಳಗೆ ಹಲವು ಅಚ್ಚರಿ ಅಡಗಿದೆ.
ಟ್ವಿಟರ್ (ಎಕ್ಸ್) ಬಳಕೆದಾರರೊಬ್ಬರು ಮೊದಲ ಬಾರಿಗೆ ಈ ಚಮಚದ ಚಿತ್ರ ಹಾಕಿ ಈ ಚಮಚ ನಿಮ್ಮ ಮನೆಯಲ್ಲೂ ಇದ್ಯಾ? ಎಂಬ ಪ್ರಶ್ನೆ ಮಾಡಿದ್ದಾರೆ. ಇಲ್ಲಿಂದ ಅಚ್ಚರಿಯ ಉತ್ತರಗಳು ಒಂದಿಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ. ಈ ಪೋಸ್ಟ್‌ಗೆ ಕಮೆಂಟ್ ಮಾಡಿರುವ ಬಹುಪಾಲು ಮಂದಿ ಈ ಚಮಚ ನಮ್ಮ ಮನೆಯಲ್ಲೂ ಇದೆ ಎಂದು ಉತ್ತರಿಸಿದ್ದಾರೆ. ಇದರ ಅರ್ಥ ಈ ಚಮಚವನ್ನು ತಂದವರು ಯಾರು? ಇದೇ ಚಮಚ ಎಲ್ಲರಿಗೂ ಇಷ್ಟವಾಗಿದ್ದು ಏಕೆ ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಹಲವರು ಇದು ನಮಗೆ ತಿಳಿಯದೆ ನಮ್ಮ ಮನೆ ಸೇರಿದೆ. ಯಾರು ತಂದರು ಎಂಬುದು ಮನೆಯಲ್ಲಿ ಯಾರಿಗೂ ಗೊತ್ತಿಲ್ಲಾ. ಎಲ್ಲಿಂದ ಬಂದಿದೆ ಅಂತಲೂ ತಿಳಿಯುತ್ತಿಲ್ಲ ಎಂದಿದ್ದಾರೆ. ಎಲ್ಲರ ಮನೆಯಲ್ಲೂ ಈ ಚಮಚ ಇದ್ದರೆ ಇದನ್ನು ಉತ್ಪಾದಿಸುವ ಸಂಸ್ಥೆ ಎಷ್ಟೊಂದು ಲಾಭ ಮಾಡಿದೆ. ಎಷ್ಟು ಚಮಚ ಇಂದು ಮಾರುಕಟ್ಟೆಗೆ ಬಂದಿದೆ ಎಂದು ಊಹಿಸಿ ಎಂದು ಒಬ್ಬ ಬಳಕೆದಾರ ಪ್ರಶ್ನಿಸಿದ್ದಾರೆ.
ಆದ್ರೆ ಇದಲ್ಲಕ್ಕಿಂತ ಒಬ್ಬರ ಕಮೆಂಟ್ ಗಮನ ಸೆಳೆದಿದೆ. ಆತನಿಗೆ ಈ ಚಮಚ ಟೀ ಪುಡಿ ಪ್ಯಾಕ್ ಖರೀದಿಸಿದಾಗ ಅದರ ಜೊತೆ ಉಚಿತವಾಗಿ ಬಂದಿತ್ತಂತೆ. ಅದನ್ನು ಮನೆಯಲ್ಲಿ ಈಗಲೂ ಬಳಸುತ್ತಿದ್ದಾರಂತೆ. ಈ ಉತ್ತರ ನೋಡಿದ ಹಲವರು ಈ ಚಮಚವನ್ನು ಎಲ್ಲರ ಮನೆ ತಲುಪಿಸಲು ಈ ರೀತಿ ತಂತ್ರ ಮಾಡಿದ್ದಾರೆ ಎನಿಸುತ್ತಿದೆ. ಹಾಗಾದ್ರೆ ಬಹುಪಾಲು ಮನೆಯಲ್ಲಿ ಈ ಚಮಚ ಇರಲು ಈ ರೀತಿಯ ಮಾರ್ಕೆಟಿಂಗ್ ಐಡಿಯಾ ಕೆಲಸ ಮಾಡಿರಬಹುದು ಎಂದು ಹಲವರು ಶಂಕಿಸಿದ್ದಾರೆ.
ಒಟ್ಟಾರೆ ಕೆಲಸ ಇಲ್ಲದೆ ಇದ್ದಾಗ ಹುಟ್ಟಿಕೊಂಡ ಪ್ರಶ್ನೆಯೊಂದು ನೆಟ್ಟಿಗರ ತಲೆಯಲ್ಲಿ ಹುಳ ಬಿಟ್ಟು ಒಂದಿಷ್ಟು ಯೋಚನೆಗೆ ದೂಡಿದೆ. ಜನ ಈ ಚಮಚದ ಹಿಂದೆ ಬಿದ್ದಿದ್ದು, ಅದರ ಹಿಂದೆ ತಲೆಕೆಡಿಸಿಕೊಂಡಿದ್ದಾರೆ.



Click it and Unblock the Notifications











