Latest Updates
-
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ!
ಈ ಊರಲ್ಲಿ ಅದೃಷ್ಟಕ್ಕಾಗಿ ಅಪರಿಚಿತರೊಂದಿಗೆ ಲೈಂಗಿಕ ಕ್ರಿಯೆ..! ವಿಚಿತ್ರ ಆಚರಣೆ ಬಗ್ಗೆ ಗೊತ್ತಾ?
ಪ್ರಪಂಚದಾದ್ಯಂತದ ಅನೇಕ ಸಂಸ್ಕೃತಿಗಳು ಅನೇಕ ವಿಚಿತ್ರ ಮತ್ತು ನಂಬಲಾಗದ ಆಚರಣೆಗಳು ಕೆಲವೊಮ್ಮೆ ದಿಗ್ಭ್ರಮೆಗೊಳಿಸುತ್ತೆ. ಅದ್ರಲ್ಲೂ ಈ ದ್ವೀಪ ರಾಷ್ಟ್ರಗಳು ಹೊರ ಜಗತ್ತಿನಿಂದ ದೂರ ಉಳಿದ ಕಾರಣ ಇನ್ನೂ ಕೆಲ ಆಚರಣೆಗಳನ್ನ ತನ್ನೊಳಗೆ ಇಟ್ಟುಕೊಂಡಿವೆ. ಇಂತಹ ಆಚರಣೆಗಳಲ್ಲಿ ಈ ಸಣ್ಣ ಊರಿನಲ್ಲಿ ವಿಚಿತ್ರ ಆಚರಣೆಯೊಂದಿದೆ.
ಆ ಸಣ್ಣ ಊರು ಇಂಡೋನೇಷ್ಯಾ.. ಬಹು ಸಂಸ್ಕೃತಿಯ ನಾಡು ಎಂದು ಹೆಸರಾಗಿರುವ ಇಲ್ಲಿ ವಿಚಿತ್ರ ಆಚರಣೆಯೊಂದಿದೆ. ಅಲ್ಲಿ ಎಲ್ಲಾ ಸಂಸ್ಕೃತಿ ಜನರು ವಾಸವಿದ್ದಾರೆ. ಇಂಡೋನೇಷ್ಯಾ ಶ್ರೀಮಂತ ಸಂಸ್ಕೃತಿ ಮತ್ತು ರೋಮಾಂಚಕಾರಿ ರಾತ್ರಿಯ ಜೀವನಕ್ಕೆ ಹೆಸರುವಾಸಿಯಾಗಿದೆ. ಅಲ್ಲಿನ ಈ ವಿಚಿತ್ರ ಆಚರಣೆ ಕೇಳಿದರೆ ನೀವು ಸಹ ಅಚ್ಚರಿ ಪಡುತ್ತೀರಾ.

ಈ ಚಿಕ್ಕ ದ್ವೀಪಸಮೂಹದಲ್ಲಿ, ಪರ್ವತದ ತುದಿಯಲ್ಲಿ ಧಾರ್ಮಿಕ ಆಚರಣೆಯ ಭಾಗವಾಗಿ ಸಾವಿರಾರು ಯಾತ್ರಿಕರು ಅಪರಿಚಿತರೊಂದಿಗೆ ಲೈಂಗಿಕತೆಯನ್ನು ಹೊಂದುವ ಆಚರಣೆ ಇಂದಿಗೂ ನಡೆದುಕೊಂಡು ಬಂದಿದೆ. ಈ ಆಚರಣೆಯಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಪುರುಷರು, ಮಹಿಳೆಯರು, ವಿವಾಹಿತರು, ಅವಿವಾಹಿತರು, ವೇಶ್ಯೆಯರು, ವಿಧವೆಯರು ಹೀಗೆ ಎಲ್ಲರೂ ಭಾಗವಹಿಸಬಹುದು.
ಇದನ್ನು ಇಂಡೋನೇಷ್ಯಾದ ಸೆಕ್ಸ್ ಮೌಂಟೇನ್ ಎಂದು ಕರೆಯಲಾಗುತ್ತದೆ. SBS ಡೇಟ್‌ಲೈನ್ ಪತ್ರಕರ್ತ ಪ್ಯಾಟ್ರಿಕ್ ಅಬಾಟ್ ಪ್ರಾಚೀನ ಪರ್ವತ ಮತ್ತು ಅದರ ಧಾರ್ಮಿಕ ಲೈಂಗಿಕ ಆಚರಣೆಗಳಿಗೆ ಭೇಟಿ ನೀಡಲು ಅಪರೂಪದ ಪ್ರವೇಶವನ್ನು ಪಡೆದಿದ್ದರು. ಅವರ ವರದಿಯ ಪ್ರಕಾರ, ಸಾವಿರಾರು ಇಂಡೋನೇಷಿಯಾದ ಯಾತ್ರಿಕರು ಪರ್ವತದ ತುದಿಯಲ್ಲಿ ಧಾರ್ಮಿಕ ಸಮಾರಂಭದಲ್ಲಿ ಭಾಗವಹಿಸಲು ಗುನುಂಗ್ ಕೆಮುಗುಸ್‌ಗೆ ದ್ವೀಪಸಮೂಹದಾದ್ಯಂತ ಪ್ರಯಾಣಿಸುತ್ತಾರೆ.
ಈ ಸ್ಥಳವು ಅವರಿಗೆ ಪವಿತ್ರವಾಗಿದ್ದು, ವಿವಾಹೇತರ ಸಂಭೋಗದಲ್ಲಿ ತೊಡಗುವುದರಿಂದ ಅವರಿಗೆ ಅದೃಷ್ಟ ಮತ್ತು ಒಳ್ಳೆಯ ಸಮಯ ಬರುತ್ತದೆ ಎಂದು ನಂಬಲಾಗಿದೆ. ಈ ಆಚರಣೆಯು ಅವರಿಗೆ ಅದೃಷ್ಟವನ್ನು ತರುತ್ತದೆ ಎಂದು ಭಾಗವಹಿಸುವವರು ನಂಬುತ್ತಾರೆ.
ಯುವರಾಜನಿಂದ ಹುಟ್ಟಿದ ಆಚರಣೆ
ಈ ಪುರಾತನ ಆಚರಣೆಯು 16ನೇ ಶತಮಾನದಷ್ಟು ಹಿಂದಿನದು ಮತ್ತು ಇಸ್ಲಾಮಿಕ್ ಕಾನೂನಿಗೆ ವಿರುದ್ಧವಾಗಿದೆ ಎಂದು ಅಬುದ್ ತಿಳಿಸಿದ್ದಾರೆ, ವಿಶೇಷವಾಗಿ ಇದು ಅವಿವಾಹಿತರ ನಡುವೆ ಲೈಂಗಿಕತೆಯನ್ನು ಪ್ರಚೋದಿಸುತ್ತದೆ ಮತ್ತು ಜನರು ಅದರ ಬಗ್ಗೆ ಮಾತನಾಡಲು ಹಿಂಜರಿದರೂ ಈ ಪರ್ವತದಲ್ಲಿ ನಡೆದುಕೊಂಡು ಬರುತ್ತಿದೆ. ಹಿಂದೆ ಇಂಡೋನೇಷ್ಯಾದ ಯುವ ರಾಜಕುಮಾರ ಬಂಗೇರನ್ ಸಮೋದ್ರೊ ತನ್ನ ಮಲತಾಯಿಯೊಂದಿಗೆ ಸಂಬಂಧ ಹೊಂದಿದ್ದಾಗ ಈ ವಿಚಿತ್ರ ಆಚರಣೆಯು ಪ್ರಾರಂಭವಾಯಿತು ಎಂದು ಇತಿಹಾಸ ತಿಳಿಸುತ್ತದೆ.
ಮಲತಾಯಿಯೊಂದಿಗೆ ಯುವರಾಜ ಜನರ ಕೈಗೆ ಇದೇ ಪರ್ವತದಲ್ಲಿ ಸಿಕ್ಕಿಹಾಕಿಕೊಂಡಿದ್ದನಂತೆ. ಜನರು ಇಬ್ಬರನ್ನೂ ಸೆರೆಹಿಡಿದು ಹತ್ಯೆ ಮಾಡಿದ್ದರಂತೆ. ಬಳಿಕ ಈಗಿನ ದೇವಾಲಯವಿರುವ ಜಾಗದಲ್ಲಿ ಇಬ್ಬರನ್ನು ಹೂಳಲಾಗಿತ್ತಂತೆ. ಇದೇ ದೇವಾಲಯವಿರುವ ಬೆಟ್ಟದಲ್ಲಿ ಈಗ ಅಪರಿಚಿತರೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಆಚರಣೆ ನಡೆಯುತ್ತಿದೆ.
ಭಾಗಿಯಾಗಲು ಇದೆ ಕಠಿಣ ಸವಾಲು
ಹೀಗೆ ಈ ಪರ್ವತದಲ್ಲಿ ನಡೆಯುವ ಈ ಆಚರಣೆಗೆ ಭಾಗಿಯಾಗಬೇಕೆಂದರೆ ಅವರು 35ದಿನಗಳಿಗೊಮ್ಮೆ ಸತತವಾಗಿ 7 ಬಾರಿ ಇಡೀ ವರ್ತವನ್ನು ಪ್ರದಕ್ಷಿಣೆ ಹಾಕಿ ಬರಬೇಕಂತೆ. ಹೀಗೆ ಪರ್ವತ ಸುತ್ತು ಹೊಡೆದ ಬಳಿಕ ದೇವಾಲಯದ ಬಳಿಯ ಸಣ್ಣ ತೊರೆಯಲ್ಲಿ ಸ್ನಾನ ಮಾಡಿ ದೇವಾಲಯದೊಳಗೆ ಪೂಜೆ ಸಲ್ಲಿಸಬೇಕಂತೆ. ಈ ಎಲ್ಲಾ ಸಂಪ್ರದಾಯ ಮುಗಿಯುವ ವೇಳೆ ಕತ್ತಲಾಗಿರುತ್ತದೆ. ಬಳಿಕ ಯಾರು ಯಾರೊಂದಿಗೆ ಲೈಂಗಿಕ ಕ್ರಿಯೆ ನಡೆಸಬೇಕು ಎಂಬುದನ್ನು ಅವರೇ ನಿರ್ಧರಿಸಬೇಕಂತೆ.
ಇತ್ತೀಚಿಗೆ ಈ ಆಚರಣೆಗೆ ಸರ್ಕಾರ ಕಠಿಣ ನಿಯಮ ಜಾರಿಗೆ ಮುಂದಾಗಿದೆ. ಅಸುರಕ್ಷಿತ ಲೈಂಗಿಕ ಕ್ರಿಯೆಯಿಂದ ಅಲ್ಲಿ ಹತ್ತಾರು ಕಾಯಿಲೆಗಳಿಂದ ಜನ ಬಳಲುತ್ತಿದ್ದಾರೆ. ಜೊತೆಗೆ ಸಾವಿರಾರು ಮಂದಿ ಲೈಂಗಿಕ ಅಲ್ಪಸಂಖ್ಯಾತರಾಗಿ, ಲೈಂಗಿಕ ಕಾರ್ಯಕರ್ತೆಯರಾಗಿ ಬದಲಾಗಿದ್ದಾರೆ. ಹೀಗಾಗಿ ಕೆಲವು ಸಂಘ, ಸಂಸ್ಥೆಗಳು ಈ ಆಚರಣೆಯ ವಿರುದ್ಧ ಸರ್ಕಾರದ ಗಮನ ಸೆಳೆಯುವ ಯತ್ನ ಮಾಡಿದ್ದು, ಒಂದಿಷ್ಟು ನಿಯಮಾವಳಿಯ ರೂಪಿಸಿದ್ದಾರಂತೆ.



Click it and Unblock the Notifications